»   » 'ಬಿಗ್ ಬಾಸ್ ಸ್ಪರ್ಧಿಯಾಗ್ಬೇಕಾ 21ಕೋಟಿ ರು ಕೊಡಿ'

'ಬಿಗ್ ಬಾಸ್ ಸ್ಪರ್ಧಿಯಾಗ್ಬೇಕಾ 21ಕೋಟಿ ರು ಕೊಡಿ'

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 8 ರಲ್ಲಿ ಭಾಗವಹಿಸುವ ಸ್ಪರ್ಧಿಗಳ ಬಗ್ಗೆ ಕುತೂಹಲ ತೀವ್ರಗೊಳ್ಳುತ್ತಿದೆ. ನಿರೂಪಕ ಸಲ್ಮಾನ್ ಖಾನ್ ವಿಮಾನ ಏರಿ ಕಾರ್ಯಕ್ರಮದ ಟೀಸರ್ ರಿಲೀಸ್ ಮಾಡಿದ ಮೇಲೆ ಅಭಿಮಾನಿಗಳ ಕಾತುರ ಇನ್ನಷ್ಟು ಹೆಚ್ಚಿದೆ. ಈ ನಡುವೆ ಆಮ್ ಆದ್ಮಿ ಪಕ್ಷದ ಮುಖಂಡ ಡಾ. ಕುಮಾರ್ ವಿಶ್ವಾಸ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಗ್ ಬಾಸ್ 8ರ ಮನೆ ಪ್ರವೇಶಿಸುವ ಸ್ಪರ್ಧಿಗಳ ಪೈಕಿ ಕುಮಾರ್ ವಿಶ್ವಾಸ್ ಹೆಸರು ಕೇಳಿ ಬಂದಿತ್ತು. ಈ ಬಗ್ಗೆ ಗುಟ್ಟು ಉಳಿಸಿಕೊಂಡಿದ್ದ ಕುಮಾರ್ ಬುಧವಾರ ತಮ್ಮ ತುಟಿ ಬಿಚ್ಚಿದ್ದಾರೆ. ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಬಿಗ್ ಬಾಸ್ 8 ರ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ.

Kumar Vishwas

ನಾನು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಲು ಸಿದ್ಧ ಆದರೆ, ನನಗೆ ಬಿಗ್ ಬಾಸ್ ಸ್ಪರ್ಧೆ ಆಯೋಜಕರು 21 ಕೋಟಿ ರು ಸಂಭಾವನೆ ನೀಡಬೇಕು.ನಾನು ಈ ಧನವನ್ನು ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸಂತ್ರಸ್ತ ಕುಟುಂಬದವರಿಗೆ ನೀಡುತ್ತೇನೆ.[ದೆಹಲಿ ಮುಖ್ಯಮಂತ್ರಿಯಾಗು ಎಂದಿದ್ದ ಬಿಜೆಪಿ]

'ನಾನು ಇಂದು ಈ ಮಟ್ಟಕ್ಕೆ ಬೆಳೆದಿರುವುದಕ್ಕೆ ನನ್ನ ಸ್ನೇಹಿತರೇ ಕಾರಣ. ನಾನು ಬಿಗ್ ಬಾಸ್ ನಿರ್ಮಾಪಕರಿಗೆ ಬರೆದ ಪತ್ರ ಇಲ್ಲಿ ನೀಡಿದ್ದೇನೆ. ನನಗೆ ಯಾರು ಬಿಗ್ ಬಾಸ್ ಇಲ್ಲ. ನನ್ನ ದೇಶ ಭಾರತ ಬಿಟ್ಟರೆ ನನಗೆ ನಾನೇ ಬಾಸ್. ನಾನು ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಯಾವ ಸೇವೆ ಮಾಡಿದರೂ ಅದರಿಂದ ಬರುವ ಹಣವನ್ನು ದೇಶಸೇವೆ ಮಾಡಿ ಮಡಿದ ಕುಟುಂಬಗಳಿಗೆ ಅರ್ಪಿಸುತ್ತೇನೆ. ನಾನು ನನ್ನದೇ ಆದ ರೀತಿಯಲ್ಲಿ ದೇಶಸೇವೆ ಮುಂದುವರೆಸುವೆ' ಜೈ ಹಿಂದ್ ಎಂದು ಕುಮಾರ್ ವಿಶ್ವಾಸ್ ಬರೆದುಕೊಂಡಿದ್ದಾರೆ.

ಸ್ವರ್ಗ ನರಕ ಕಲ್ಪನೆ ಹೊರ ತಂದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈಗ ಮತ್ತೊಮ್ಮೆ ಕಲರ್ಸ್ ವಾಹಿನಿಯಲ್ಲೇ ಪ್ರಸಾರವಾಗಲಿದೆ. ಬಿಗ್ ಬಾಸ್ 8 ರ ಸರಣಿಯನ್ನು ಮತ್ತೊಮ್ಮೆ ಸಲ್ಮಾನ್ ಖಾನ್ ನಡೆಸಿಕೊಡಲಿದ್ದಾರೆ ಎಂದು ಕಲರ್ಸ್ ವಾಹಿನಿ ಟ್ವೀಟ್ ಮಾಡಿ ಅಧಿಕೃತವಾಗಿ ಹೇಳಿಕೆ ನೀಡಿದೆ.[ಬಿಗ್ ಬಾಸ್ ಶೋ ಮತ್ತೆ ಆರಂಭ]

ಸ್ಪರ್ಧಿಗಳ ವಿಷಯಕ್ಕೆ ಬಂದರೆ ಜನಪ್ರಿಯ ನಟ, ನಟಿ, ಮಾದಕ ತಾರೆ, ಟಿವಿ ಜಗತ್ತಿನ ಜನಪ್ರಿಯ ಸ್ಟಾರ್, ವಿವಾದಿತ ವ್ಯಕ್ತಿ, ಸಲಿಂಗಿಗಳನ್ನು ಆಯ್ಕೆ ಮಾಡುವ ಮಾದರಿ ಮುಂದುವರೆಯುವ ಸಾಧ್ಯತೆಯಿದೆ.. ಬಿಗ್ ಬಾಸ್ 8 ರ [ಸಂಭಾವ್ಯ ಸ್ಪರ್ಧಿಗಳ ವಿವರ ಇಲ್ಲಿದೆ ಓದಿ ]

English summary
AAP leader Kumar Vishwas demands Rs. 21 crore for Bigg Boss 8. Aam Aadmi Party leader Dr. Kumar Vishwas announced this on his Facebook page on Wednesday, and also added that he would donate the money to War Widows Fund.
Please Wait while comments are loading...

Kannada Photos

Go to : More Photos