»   » ರಗಾಳೆ ಇಜ್ಜಿ ! ಪಡೀಲ್ ಬಿಗ್ ಬಾಸ್ ಗೆ ಎಂಟ್ರಿ? ಗ್ಯಾರಂಟಿ!

ರಗಾಳೆ ಇಜ್ಜಿ ! ಪಡೀಲ್ ಬಿಗ್ ಬಾಸ್ ಗೆ ಎಂಟ್ರಿ? ಗ್ಯಾರಂಟಿ!

Written by: ಐಸಾಕ್ ರಿಚರ್ಡ್ಸ್, ಮಂಗಳೂರು
Subscribe to Filmibeat Kannada

ತುಳು ರಂಗ ಭೂಮಿ, ಚಿತ್ರರಂಗದ ಮೇರು ಪ್ರತಿಭೆ ನಟ ನವೀನ್ ಡಿ ಪಡೀಲ್ ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಾರಾ? ಹಾಗೊಂದು ಸುದ್ದಿ ಬೆಂಗಳೂರಿನಿಂದ ಮಂಗಳೂರಿನ ತನಕ ಹರಿದಾಡುತ್ತಿದೆ.

ಈಗಾಗಲೇ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ಶೋ ನಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ತುಳು ಮಾತ್ರವಲ್ಲ ಕನ್ನಡ ಭಾಷೆ ಮಾತನಾಡುವ ಅಭಿಮಾನಿಗಳನ್ನು ಕರ್ನಾಟಕದ ಮೂಲೆ ಮೂಲೆಯಿಂದ ಸೃಷ್ಟಿಸಿಕೊಂಡಿರುವ ಪಡೀಲ್ ಗೆ ಬಿಗ್ ಬಾಸ್‌ನಿಂದ ಭಾಗವಹಿಸುವಂತೆ ಕರೆ ಬಂದಿದೆ ಎಂಬ ಮಾಹಿತಿ ಇದೆ.

ಮಜಾ ಟಾಕೀಸ್ ಮೂಲಕ ಕನ್ನಡ ನಾಡಿನ ಸಮಸ್ತ ಜನರನ್ನು ತಲುಪಿರುವ ಪಡೀಲ್ ಈಗ ಬಿಗ್ ಬಾಸ್ ರಿಯಾಲಿಟಿ ಶೋ ದಲ್ಲಿ ಸಖತ್ ಮನರಂಜನೆ ನೀಡುತ್ತಾರೆ ಎಂಬ ಖಚಿತ ನಂಬಿಕೆಯೇ ಪಡೀಲ್ ರತ್ತ ಬಿಗ್ ಬಾಸ್ ಕಣ್ಣು ಬೀಳುವಂತೆ ಮಾಡಿದೆ.[ಸುದೀಪ್ ಪ್ರೋಮೋ ನೋಡಿದ್ರಾ?]

'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದ ನಾಲ್ಕನೇ ಆವೃತ್ತಿ ಶುರು ಆಗುವುದಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಗೆ ಕಲರ್ಸ್ ವಾಹಿನಿಯವರು ಚಾಲನೆ ಕೂಡ ಕೊಟ್ಟಿದ್ದಾಗಿದೆ.

''ಬಿಗ್ ಬಾಸ್ ಕನ್ನಡ-4' ರಿಯಾಲಿಟಿ ಶೋನಲ್ಲಿ ನೀವು ಯಾರನ್ನ ನೋಡಲು ಬಯಸುತ್ತೀರಾ?'' ಅಂತ ನಾವು ನಮ್ಮ ಓದುಗರಿಗೆ ಕೇಳಿದ ಪ್ರಶ್ನೆಗೆ ಸಿಕ್ಕಿರುವ ಉತ್ತರಗಳ ಸಂಖ್ಯೆ ಲೆಕ್ಕವಿಲ್ಲ. ಓದುಗರಿಂದ ಲಭ್ಯವಾಗಿರುವ ಸಾವಿರಾರು ಕಾಮೆಂಟ್ ಗಳ ಪೈಕಿ, 'ಕೆಲವರು' ಎಲ್ಲರಿಗೂ ಹಾಟ್ ಫೇವರಿಟ್.! ವೀಕ್ಷಕರು ಸೂಚಿಸಿರುವ ಪ್ರಕಾರ 'ಬಿಗ್ ಬಾಸ್' ನಲ್ಲಿ 'ಇವರೆಲ್ಲಾ' ಇರಲೇಬೇಕು. [ಪಟ್ಟಿ ಇಲ್ಲಿದೆ ಓದಿ]

ಕನ್ನಡ, ತುಳು ಚಿತ್ರಗಳಲ್ಲಿ ನವೀನ್ ಫುಲ್ ಬ್ಯುಸಿ

ಕನ್ನಡ, ತುಳು ಚಿತ್ರಗಳಲ್ಲಿ ನವೀನ್ ಫುಲ್ ಬ್ಯುಸಿ

ಸದ್ಯ ಮಜಾ ಟಾಕೀಸ್ ಸೇರಿದಂತೆ ಕನ್ನಡ, ತುಳು ಚಿತ್ರಗಳಲ್ಲಿ ಬ್ಯುಸಿಯಾಗಿ ಹೋಗಿರುವ ಪಡೀಲ್ ಸಮಯ ಹೊಂದಿಸುವುದು ಕಷ್ಟ ಎಂಬ ಕಾರಣಕ್ಕಾಗಿಯೇ ಕೆಲ ತುಳು ಚಿತ್ರದ ಆಫರನ್ನು ನಿರಾಕರಿಸಿದ್ದರು. ಹೀಗಾಗಿ ಬಿಗ್ ಬಾಸ್ ಆಹ್ವಾನವನ್ನು ಪಡೀಲ್ ಸ್ವೀಕರಿಸುವುದು ಅನುಮಾನ ಎನ್ನುತ್ತಾರೆ ಪಡೀಲ್ ಆತ್ಮೀಯರು.

ತುಳು ಚಿತ್ರರಂಗದಲ್ಲೂ ಕಾಣಿಸಿಕೊಳ್ಳುವುದು ಕಷ್ಟ

ತುಳು ಚಿತ್ರರಂಗದಲ್ಲೂ ಕಾಣಿಸಿಕೊಳ್ಳುವುದು ಕಷ್ಟ

ಪಡೀಲ್ ಈಗಿನ ಕಾಲ್ ಶೀಟ್‌ಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಅವರು ತುಳು ಚಿತ್ರ ರಂಗದಲ್ಲೂ ಕಾಣಿಸಿಕೊಳ್ಳುವುದು ಕಷ್ಟ ಎಂಬಂತಹ ಸ್ಥಿತಿ ಇದೆ. ಸಮಯದ ಅಭಾವದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲೇ ಇರುವ ಪಡೀಲ್ ಗೆ ದೊಡ್ಡ ದೊಡ್ಡ ಬ್ಯಾನರ್‌ನ ಚಿತ್ರಗಳ ಆಫರ್ ಬರುತ್ತಿವೆ.

ಮಂಗಳೂರಿನ ಜನರಿಗೆ ಆಸೆಯೆನೋ ಇದೆ

ಮಂಗಳೂರಿನ ಜನರಿಗೆ ಆಸೆಯೆನೋ ಇದೆ

ಮೂಲತಃ ಮಂಗಳೂರಿನವರಾದ ಪಡೀಲ್ ತನ್ನ ಅಮೋಘ ನಟನೆಯ ಮೂಲಕ ತುಳು ನಾಡಿನ ಜನರ ಮನ ಸೆಳೆದಿದ್ದಾರೆ. ತುಳು ನಾಡಿನ ಜನರು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನವೀನ್ ಪಡೀಲ್ ರನ್ನು ನೋಡಲು ಬಹು ಕಾತುರದಿಂದ ಕಾಯುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಂತೂ ಓಡಾಡುತ್ತಿದೆ

ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಂತೂ ಓಡಾಡುತ್ತಿದೆ

ನವೀನ್ ಡಿ ಪಡೀಲ್ ಬಿಗ್ ಬಾಸ್ ಗೆ ಆಯ್ಕೆಯಾಗಿದ್ದಾರೆ ಎಂಬ ಸಂದೇಶವು ಸಾಮಾಜಿಕ ಜಾಲತಾಣ, ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದೆ. ಇದರ ನಡುವೆಯೇ ಬಿಗ್ ಬಾಸ್ ಮನೆಗೆ ಅತಿಥಿಯಾಗುವ ಯೋಗ ಪಡೀಲ್ ಇದನ್ನು ಒಪ್ಪಿಕೊಳ್ಳುತ್ತಾರಾ ಎನ್ನುವುದು ಕಾಲವೇ ಹೇಳಬೇಕಿದೆ.

ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿದ ನವೀನ್ ಪಡೀಲ್

ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿದ ನವೀನ್ ಪಡೀಲ್

ಒನ್ ಇಂಡಿಯಾ/ ಫಿಲ್ಮಿಬೀಟ್ ಪ್ರತಿನಿಧಿಗೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿದ ನವೀನ್ ಪಡೀಲ್ , ಬಿಗ್ ಬಾಸ್ ಗೆ ಆಯ್ಕೆ ಆದ ಮಾಹಿತಿ ಖಚಿತವಾಗಿಲ್ಲ ಆದರೆ, ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಹೋಗುವವರ ಪಟ್ಟಿಯಲ್ಲಿ ತಮ್ಮ ಹೆಸರು ಕೂಡಾ ಇದೆ ಎಂದು ತಿಳಿಸಿದ್ದಾರೆ.

English summary
Actor Naveen D Padil who is most popular in Tulu film industry hints at entry into Bigg Boss Kannada 4. Naveen D Padil's popularity increased with his appearance in Maja Talkies show.
Please Wait while comments are loading...

Kannada Photos

Go to : More Photos