»   » ಸ್ಟಾರ್ ನಟರ ಅಪೂರ್ವ ಮಿಲನಕ್ಕೆ, ಸಾಕ್ಷಿಯಾಗಲಿರುವ ಬಿಗ್ ವೇದಿಕೆ.!

ಸ್ಟಾರ್ ನಟರ ಅಪೂರ್ವ ಮಿಲನಕ್ಕೆ, ಸಾಕ್ಷಿಯಾಗಲಿರುವ ಬಿಗ್ ವೇದಿಕೆ.!

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ ಗಳಾದ ಶಿವಣ್ಣ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಒಂದೇ ಚಿತ್ರದಲ್ಲಿ ನಟಿಸುತ್ತಿರುವ ವಿಷಯವನ್ನು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೇ.

ಇದೀಗ ಚಂದನವನದ ಇಬ್ಬರು ಸೂಪರ್ ಸ್ಟಾರ್ ನಟರ ಅಪೂರ್ವ ಮಿಲನಕ್ಕೆ ಬಿಗ್ ಬಾಸ್ ಮನೆಯ ಕಲರ್ ಫುಲ್ ಬಿಗ್ ವೇದಿಕೆ ಸಾಕ್ಷಿಯಾಗಲಿದೆ.

ಹೌದು ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರು ಕಾಣಿಸಿಕೊಂಡು ಪ್ರೇಕ್ಷಕರನ್ನು ಮೋಡಿ ಮಾಡುವ ಮೊದಲೇ, ಬಿಗ್ ಬಾಸ್ ವೇದಿಕೆಯಲ್ಲಿ ಒಂದಾಗಿ ಕಾಣಿಸಿಕೊಂಡು ವೀಕ್ಷಕರನ್ನು ಮೋಡಿ ಮಾಡಲಿದೆ ಈ ಅಪೂರ್ವ ಜೋಡಿ.[ಕಣ್ಣೀರು ಹಾಕಿಕೊಂಡು ಮನೆಯಿಂದ ಹೊರ ನಡೆದ ಮಳೆ ಹುಡುಗಿ]

ಅಂದಹಾಗೆ ನಟ ಶಿವಣ್ಣ ಅವರು ತಮ್ಮ ಹೊಸ ಸಿನಿಮಾ 'ಶಿವಲಿಂಗ' ಚಿತ್ರದ ಪ್ರೊಮೋಷನ್ ಗಾಗಿ ಚಿತ್ರದ ನಿರ್ದೇಶಕ ಪಿ.ವಾಸು ಅವರ ಜೊತೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಬಿಗ್ ಬಾಸ್ ವೇದಿಕೆಯಲ್ಲಿ ಶಿವಣ್ಣ ಮತ್ತು ಕಿಚ್ಚ ಸುದೀಪ್ ಅವರ ಅಪರೂಪದ, ಆಲಿಂಗನದ ಎಕ್ಸ್ ಕ್ಲ್ಯೂಸಿವ್ ಚಿತ್ರಗಳನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ಬಿಗ್ ಹೌಸ್ ನಲ್ಲಿ ಹ್ಯಾಟ್ರಿಕ್ ಹೀರೋ

ಬಿಗ್ ಹೌಸ್ ನಲ್ಲಿ ಹ್ಯಾಟ್ರಿಕ್ ಹೀರೋ

ಶಿವಲಿಂಗ ಚಿತ್ರದ ಪ್ರಚಾರಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು 'ಆಪ್ತಮಿತ್ರ' ಮತ್ತು 'ಆಪ್ತರಕ್ಷಕ' ಖ್ಯಾತಿಯ ನಿರ್ದೇಶಕ ಪಿ.ವಾಸು ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ಕ್ಷಣ. ಜೊತೆಗೆ ಇಂದು ಸಂಜೆ ಶಿವಣ್ಣ ಅವರ ಜೊತೆ ಕವಿರಾಜ್ ಅವರ 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಕೂಡ ನಡೆಯಲಿದೆ.[ಕಿಚ್ಚನಿಗೆ 'ಮದುವೆಯ ಕರೆಯೋಲೆ' ನೀಡಲು ಅರಮನೆಗೆ ಬಂದ ಅಮೂಲ್ಯ]

ಬಿಗ್ ಬಾಸ್ ಮನೆಯಲ್ಲಿ ಶಿವಣ್ಣನ ಫೋಸ್

ಬಿಗ್ ಬಾಸ್ ಮನೆಯಲ್ಲಿ ಶಿವಣ್ಣನ ಫೋಸ್

ಬಿಗ್ ಬಾಸ್ ವೇದಿಕೆಗೆ ಕಾಲಿಡುವ ಮೊದಲು ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ವೇದಿಕೆಯ ಹಿಂಭಾಗದಲ್ಲಿ ಕುಳಿತು ಮನೆಯ ಸೌಂದರ್ಯವನ್ನು ಕೂಲಂಕುಷವಾಗಿ ವೀಕ್ಷಿಸುತ್ತಿರುವುದು.

ಪ್ರೀತಿಯ ಆಲಿಂಗನ

ಪ್ರೀತಿಯ ಆಲಿಂಗನ

ಶಿವಣ್ಣ ಅವರು ಬಿಗ್ ಬಾಸ್ ವೇದಿಕೆ ಕಾಲಿಡುತ್ತಿದ್ದಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅವರನ್ನು ಪ್ರೀತಿಯಿಂದ ತಬ್ಬಿಕೊಂಡು ವೇದಿಕೆಗೆ ಆತ್ಮೀಯವಾಗಿ ಸ್ವಾಗತಿಸಿದರು. ಅಪರೂಪದ ಜೋಡಿಗಳ ಅಪರೂಪದ ಈ ಆಲಿಂಗನಕ್ಕೆ ವೇದಿಕೆಯಲ್ಲಿ ಶಿಳ್ಳೆ ಚಪ್ಪಾಳೆಗಳ ಸುರಿಮಳೆ ಗ್ಯಾರಂಟಿ.

ಕೈ ಮುಗಿದ ಕರುನಾಡ ಚಕ್ರವರ್ತಿ

ಕೈ ಮುಗಿದ ಕರುನಾಡ ಚಕ್ರವರ್ತಿ

ಬಿಗ್ ಬಾಸ್ ವೇದಿಕೆಗೆ ಕಾಲಿಟ್ಟ ತಕ್ಷಣ ಕನ್ನಡದ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸಭೆಯಲ್ಲಿ ನೆರೆದಿದ್ದ ವೀಕ್ಷಕ ವರ್ಗಕ್ಕೆ ಹಾಗೂ ಪ್ರೀತಿಯ ಅಭಿಮಾನಿಗಳಿಗೆ ಕೈ ಮುಗಿದು ವಂದಿಸಿದರು.

ಅಭಿಮಾನಿಗಳನ್ನುದ್ದೇಶಿಸಿ ಮಾತು

ಅಭಿಮಾನಿಗಳನ್ನುದ್ದೇಶಿಸಿ ಮಾತು

ವೇದಿಕೆಗೆ ಭರ್ಜರಿ ಎಂಟ್ರಿ ಪಡೆದುಕೊಂಡ ಶಿವಣ್ಣ ಅವರು ತಮ್ಮ 'ಶಿವಲಿಂಗ' ಚಿತ್ರದ ಬಗ್ಗೆ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು.

ನಿರ್ದೇಶಕರ ಜೊತೆ ಸ್ಟಾರ್ ನಟರು

ನಿರ್ದೇಶಕರ ಜೊತೆ ಸ್ಟಾರ್ ನಟರು

'ಜೋಗಿ' ಚಿತ್ರದ ಹಿಟ್ ನಿರ್ದೇಶಕ 'ಜೋಗಿ' ಪ್ರೇಮ್ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್ ಹೌಸ್ ನಲ್ಲಿ ಪೋಸ್ ನೀಡಿದರು. ಅಂದಹಾಗೆ ಸುಮಾರು 100 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಲಿರುವ ಬಿಗ್ ಬಜೆಟ್ ನ ಚಿತ್ರ ಕಿಚ್ಚ ಸುದೀಪ್ ಹಾಗೂ ಶಿವಣ್ಣ ಅವರ ಜುಗಲ್ ಬಂದಿಯಲ್ಲಿ ಮೂಡಿಬರಲಿದೆ. ಚಿತ್ರಕ್ಕೆ ಪ್ರೇಮ್ ಆಕ್ಷನ್-ಕಟ್ ಹೇಳುತ್ತಿದ್ದಾರೆ.

English summary
Kannada Actor Shiva Rajkumar starrer 'Shivalinga' is all set to release this month. 'Shivalinga' team took 'Bigg Boss Kannada 3' stage to promote their movie.
Please Wait while comments are loading...

Kannada Photos

Go to : More Photos