twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರರಂಗ ಮತ್ತು ಅಣ್ಣಾವ್ರ ಬಗ್ಗೆ ತಾರಾ ಹೇಳಿದ್ದೇನು?

    |

    ಕನ್ನಡ ಚಿತ್ರೋದ್ಯಮದ ತಾರೆ, ಕಾನೂನು ಹೆಗ್ಗಡತಿ ತಾರಾ ಆಲಿಯಾಸ್ 'ತಾರಾ ಅನುರಾಧ'ಕಳೆದ ವಾರಾಂತ್ಯದ (ಭಾನುವಾರ, ಅ 19) ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಆಸೀನರಾಗಿದ್ದರು.

    ಕನ್ನಡ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆಯಾಗಿ, ಹಾಲೀ ವಿಧಾನ ಪರಿಷತ್ ಸದಸ್ಯೆಯಾಗಿರುವ ತಾರಾ, ರಾಜ್ಯ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ, ಜೊತೆಗೆ ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಹಸೀನಾ' ಚಿತ್ರಕ್ಕೆ ರಾಷ್ಟ್ರಪಶಸ್ತಿ ಪಡೆದಿದ್ದವರು.

    ಧಾರವಾಡದಲ್ಲಿರುವ ದೊಡ್ಡಮ್ಮನ ಮನೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ತಾರಾ ನಂತರ ಬೆಂಗಳೂರಿಗೆ ಬಂದರು. ಕುಟುಂಬದ ಮಾಲೀಕತ್ವದ ಕಬ್ಬನ್ ಪೇಟೆಯಲ್ಲಿನ ಶಾರದಾ ಚಿತ್ರಮಂದಿರದಲ್ಲಿ ಅಂದಿನ ದಿನದ ನೆನಪನ್ನು ಮೆಲುಕು ಹಾಕಿದ ತಾರಾ, ಜೀವನದಲ್ಲಿ ಎಲ್ಲವೂ ನನಗೆ ತಡವಾಗಿ ಲಭಿಸಿತು ಎಂದು ನೋವಿನ ಮಾತನ್ನಾಡಿದ್ದಾರೆ. (ನನ್ನ ತಂದೆಗೆ ಇನ್ನೊಂದು ಸಂಬಂಧವಿತ್ತು: ಹಿರಣ್ಣಯ್ಯ)

    ನಾನು ಬದುಕು ಕಟ್ಟಿಕೊಂಡು ಸಿನಿಮಾರಂಗಕ್ಕೆ ಬಂದವಳಲ್ಲ, ನನ್ನ ತಾತ ಕಮಿಷನರ್ ಆಗಿದ್ದವರು. ಸಿನಿಮಾ ರಂಗಕ್ಕೆ ಕಳುಹಿಸಲು ಕುಟುಂಬದಲ್ಲೂ ವಿರೋಧವಿತ್ತು ಎಂದು ತಾರಾ ತನ್ನ ಸಿನಿಮಾ ಬದುಕಿನ ಆರಂಭದ ದಿನವನ್ನು ಮೆಲುಕು ಹಾಕಿದ್ದಾರೆ.

    ನನ್ನ ಮತ್ತು ವೇಣುವಿದ್ದು (ತಾರಾ ಪತಿ) ಲವ್ ಮ್ಯಾರೇಜ್. ನಮ್ಮ ಮನೆಗೆ ಫೋಟೋ ಕೊಡೋಕೆಂದು ವೇಣು ಮನೆಗೆ ಬರುತ್ತಿದ್ದ. ಆಗ ನಾವಿಬ್ಬರೂ ಇಷ್ಟ ಪಡಲಾರಂಭಿಸಿದೆವು. ನಂತರ ಮನೆಯವರ ಒತ್ತಡಕ್ಕೆ ನಾನು ಅವರಿಂದ ದೂರವಾದೆ. ಹದಿನಾರು ವರ್ಷದ ನಂತರ ವೇಣು ಜೊತೆ ಮದುವೆಗೆ ಕಾಲ ಮೂಡಿಬಂತು ಎಂದು ತಾರಾ ಮದುವೆಯ ಘಟನೆಯ ಬಗ್ಗೆ ಮಾತನ್ನಾಡಿದ್ದಾರೆ.

    ಕನ್ನಡ ಚಿತ್ರೋದ್ಯಮ ಮತ್ತು ಡಾ. ರಾಜಕುಮಾರ್ ಬಗ್ಗೆ ಕಾರ್ಯಕ್ರಮದಲ್ಲಿ ತಾರಾ ಹೇಳಿದ್ದೇನು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

    ಏಳನೇ ಕ್ಲಾಸಿನಲ್ಲಿ ನಟನೆಗೆ ಬಂದೆ

    ಏಳನೇ ಕ್ಲಾಸಿನಲ್ಲಿ ನಟನೆಗೆ ಬಂದೆ

    ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ನಿರ್ದೇಶಕ ಜಗನ್ನಾಥ್. ನಾನು ಏಳನೇ ಕ್ಲಾಸಿನಲ್ಲಿ ಓದುತ್ತಿರ ಬೇಕಾದರೆ ಚಿತ್ರದಲ್ಲಿ ನಟಿಸಲು ಆಫರ್ ಬಂತು. ನಾಯಕಿಯಾಗುವ ಮುನ್ನ ಬಹಳಷ್ಟು ಕಷ್ಟಪಟ್ಟೆ. ಆದರೆ ಇಲ್ಲೇ ಏನಾದರೂ ಸಾಧಿಸ ಬೇಕೆಂದು ಛಲದಿಂದ ಇಂದು ಈ ಮಟ್ಟಕ್ಕೆ ನಾನು ಬೆಳೆದಿದ್ದೇನೆ.

    ಬಹಳ ತಾರತಮ್ಯ ಮಾಡುತ್ತಿದ್ದರು

    ಬಹಳ ತಾರತಮ್ಯ ಮಾಡುತ್ತಿದ್ದರು

    ನಾಯಕ, ನಾಯಕಿಗೆ ಸಿಗುತ್ತಿದ್ದ ಮರ್ಯಾದೆ ಸಹ ಕಲಾವಿದರಿಗೆ ಸಿಗುತ್ತಿರಲಿಲ್ಲ. ಸಾಲಿನಲ್ಲಿ ಊಟಕ್ಕೆ ಕೂತಿದ್ದಾಗ ನಾಯಕ, ನಾಯಕಿಯರಿಗೆ ಮಾತ್ರ ಚಪಾತಿ ಕೊಡುತ್ತಿದ್ದರು. ಇವರು ಮಾಡುತ್ತಿದ್ದ ತಾರತಮ್ಯದಿಂದ ಬಹಳಷ್ಟು ಕಣ್ಣೀರು ಹಾಕಿದ ದಿನಗಳಿವೆ.

    ತಾರಾ ಬಗ್ಗೆ ಪ್ರಭುದೇವ್ ಹೇಳಿದ್ದು

    ತಾರಾ ಬಗ್ಗೆ ಪ್ರಭುದೇವ್ ಹೇಳಿದ್ದು

    ವೇಣು ಸೈಲೆಂಟ್ ಆದರೆ ತಾರಾ ವೈಲೆಂಟ್. ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಹೋಗಿದ್ದಾಗ, ಶರ್ಟ್ ಕೊಳೆಯಾಗಿತ್ತು. ವೇಣು ಬಟ್ಟೆ ಧರಿಸಿ ಪ್ರಶಸ್ತಿ ಸ್ವೀಕರಿಸಿದ್ದೆ. ನನಗೆ ತಾರಾ ಸಹೋದರಿಯ ಹಾಗೇ. ಅವರು ಮತ್ತು ವೇಣು ಇಂದಿಗೂ ನನ್ನ ಮೇಲಿಟ್ಟಿರುವ ಪ್ರೀತಿಗೆ ನಾನು ಆಭಾರಿ.

    ವರನಟ ರಾಜ್ ಬಗ್ಗೆ ತಾರಾ

    ವರನಟ ರಾಜ್ ಬಗ್ಗೆ ತಾರಾ

    ಗುರಿ ಚಿತ್ರದ ಶೂಟಿಂಗ್ ಸಮಯದಲ್ಲಿ ನಿನ್ನ ಮದುವೆಗೆ ನಾನು ಈ ಹಾಡುತ್ತೇನೆ (ವಸಂತಕಾಲ ಬಂದಾಗ, ಮಾವು ಚಿಗುರಲೇ ಬೇಕು) ಎಂದಿದ್ದರು. ಆ ಚಿತ್ರ ಬಿಡುಗಡೆಯಾದ ಸುಮಾರು 18 ವರ್ಷಗಳ ನಂತರ ನನ್ನ ಮದುವೆಯಾಯಿತು. ವೇಣು ಮತ್ತು ನನ್ನನ್ನು ರಾಜ್ ಮನೆಗೆ ಊಟಕ್ಕೆ ಕರೆದಿದ್ದರು. ಊಟ ಆದ ಮೇಲೆ ನಮ್ಮಿಬ್ಬರ ಮುಂದೆ ಈ ಹಾಡು ಹಾಡಿದರು. ನಿನ್ನ ಮದುವೆಗೆ ಹಾಡುತ್ತೇನೆ ಎಂದಿದ್ದೆ, ಆದರೆ ನೀನು ಮದುವೆಗೆ ನನ್ನನ್ನು ಕರೆಯಲಿಲ್ಲ ಎಂದರು. ರಾಜ್ ನೆನಪಿನ ಶಕ್ತಿ, ಸಿಂಪ್ಲಿಸಿಟಿ, ದೇವರ ಮೇಲಿನ ಭಯಭಕ್ತಿ ಇಂತಹ ಗುಣಗಳು ನನ್ನಂತಹ ಸಾವಿರ ಸಾವಿರ ಕಲಾವಿದರು ಕಲಿಯುವಂತದ್ದು ಎಂದು ಸಾಧಕರ ಸೀಟಿನಿಂದ ತಾರಾ ಎದ್ದು ರಾಜ್ ಗೆ ಕೈಮುಗಿದರು.

    ಸಾಹಸಸಿಂಹನ ಮತ್ತು ಅಂಬಿ ಬಗ್ಗೆ ತಾರಾ ಹೇಳಿದ್ದಿಷ್ಟು

    ಸಾಹಸಸಿಂಹನ ಮತ್ತು ಅಂಬಿ ಬಗ್ಗೆ ತಾರಾ ಹೇಳಿದ್ದಿಷ್ಟು

    ವಿಷ್ಣು ಸರ್ ಒಬ್ಬ ಅಪ್ರತಿಮ ಕಲಾವಿದ. ಸಹ ಕಲಾವಿದರನ್ನು ಪ್ರೀತಿಯಿಂದ ವಿಚಾರಿಸಿಕೊಳ್ಳುವುದು ಅವರ ದೊಡ್ಡಗುಣ. ಅವರ ಮದುವೆಯ 25ನೇ ವಾರ್ಷಿಕೋತ್ಸವಕ್ಕೆ ನಾನು, ಅವರ ಕುಟುಂಬ, ಮತ್ತು ಅವರ ಕೆಲವೇ ಕೆಲವು ಸ್ನೇಹಿತರ ಜೊತೆ ತಿರುಪತಿಗೆ ಹೋಗಿದ್ದೆ. ಅವರ ಲಿಮಿಟೆಡ್ ಸ್ನೇಹಿತರ ಪಟ್ಟಿಯಲ್ಲಿ ನಾನು ಇದ್ದದ್ದು ನನ್ನ ಸೌಭಾಗ್ಯ. ಅಂಬರೀಶ್ ಮುಗ್ದ ಮತ್ತು ಸ್ನೇಹಜೀವಿ.

    ದಿವಂಗತ ಶಂಕರ್ ನಾಗ್ ಬಗ್ಗೆ

    ದಿವಂಗತ ಶಂಕರ್ ನಾಗ್ ಬಗ್ಗೆ

    ಶಂಕರ್ ನಾಗ್ ಜೊತೆಗೆ ನಾನು ಕೆಲಸ ಮಾಡಿದ್ದೇನೆ ಎನ್ನುವುದು ನನಗೆ ಹೆಮ್ಮೆಯ ಸಂಗತಿ. ದಿನಾ ಪೇಪರ್ ಓದಬೇಕಮ್ಮಾ ಎಂದು ಶಂಕರ್ ನನಗೆ ಹೇಳುತ್ತಿದ್ದರು. ನಮ್ಮಲ್ಲೇ ಪ್ರತಿಭೆಗಳು ಇರಬೇಕಾದರೆ ಬೇರೆ ಭಾಷೆಯವರು ಯಾಕೆ ಎಂದು ಶಂಕರ್ ಹೇಳುತ್ತಿದ್ದನ್ನು ನಾನು ಮರೆಯಲಾರೆ. ಅವರು ನಮ್ಮ ಜೊತೆಗಿರಬೇಕಿತ್ತು.

    ಅನಂತ್ ನಾಗ್ ಬಗ್ಗೆ

    ಅನಂತ್ ನಾಗ್ ಬಗ್ಗೆ

    What an actor. ಒಂದು ಸಲ ಕಮಲ್ ಹಾಸನ್ ಜೊತೆಗೆ ಚಿತ್ರೀಕರಣವಿತ್ತು. ಅವರು ನನ್ನಲ್ಲಿ ಕೇಳಿದರು, ನಿನಗೆ ಯಾರು ಒಳ್ಳೆ ಆಕ್ಟರ್ ಎಂದು. ನಾನು ನೀವೇ ಸರ್ ಎಂದೆ. ಕನ್ನಡದಲ್ಲಿ ಅನಂತ್ ನಾಗ್ ನಂತಹ ಅಪ್ರತಿಮ ನಟನಿರಬೇಕಾದರೆ ನನ್ನ ಹೆಸರು ಹೇಳುತ್ತೀಯಾ ಎಂದಿದ್ದರು. ಇದು ಅನಂತ್ ನಟನಾ ಸಾಮರ್ಥ್ಯಕ್ಕೆ ಕಮಲ್ ಸರ್ ಕೊಟ್ಟ ಬಿರುದು.

    ನಿರ್ದೇಶಕ ಮಣಿರತ್ನಂ ಬಗ್ಗೆ

    ನಿರ್ದೇಶಕ ಮಣಿರತ್ನಂ ಬಗ್ಗೆ

    ನಾಯಗನ್ ಚಿತ್ರದಲ್ಲಿ ನನಗೆ ನಟಿಸುವ ಅವಕಾಶ ಸಿಕ್ಕಿತು. ಮಣಿ ಸರ್ ಮಾತಾಡುವುದು ಬಹಳ ಕಮ್ಮಿ. ಮೇಕಪ್ ಇಲ್ಲದೆಯೇ ಆ ಚಿತ್ರದ ಕೆಲವು ಸನ್ನಿವೇಶಗಳಲ್ಲಿ ನಟಿಸಿದ್ದೆ. ಇದೆಲ್ಲಾ ನನ್ನ ಜೀವನದ ಪ್ಲಸ್ ಪಾಯಿಂಟ್.

    ರಾಜಕೀಯಕ್ಕೆ ಬಂದ ಬಗ್ಗೆ

    ರಾಜಕೀಯಕ್ಕೆ ಬಂದ ಬಗ್ಗೆ

    ಕೃಷ್ಣಯ್ಯ ಶೆಟ್ಟಿಯವರ ಒತ್ತಾಯಕ್ಕೆ ನಾನು ಬಿಜೆಪಿ ಸೇರಿದೆ. ಆರಂಭದ ದಿನಗಳಲ್ಲಿ ಪಕ್ಷಕ್ಕಾಗಿ ದುಡಿದೆ, ನಂತರ ಅಕಾಡೆಮಿ ಅಧ್ಯಕ್ಷ ಸ್ಥಾನ ಸಿಕ್ಕಿತು. ನಂತರ ಪರಿಷತ್ ಸದಸ್ಯನಾದೆ. ನನಗೆ ಬಿಜೆಪಿ ಎಲ್ಲಾ ಕೊಟ್ಟಿದೆ.

    English summary
    Actress turned politician Tara in Weekend with Ramesh programme. This popular weekend TV show in Zee Kannada with Tara was aired on Sunday 19th October.
    Thursday, October 23, 2014, 10:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X