»   » ಎಲ್ಲ 'ಕಾಮಿಡಿ ಕಿಲಾಡಿ'ಗಳಿಗೆ ಸಿಕ್ತು ಬಹುದೊಡ್ಡ ಸರ್ಪ್ರೈಸ್.!

ಎಲ್ಲ 'ಕಾಮಿಡಿ ಕಿಲಾಡಿ'ಗಳಿಗೆ ಸಿಕ್ತು ಬಹುದೊಡ್ಡ ಸರ್ಪ್ರೈಸ್.!

Posted by:
Subscribe to Filmibeat Kannada

ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಟಿ.ಆರ್.ಪಿ ಹೊಂದಿರುವ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು' ಗ್ರ್ಯಾಂಡ್ ಫಿನಾಲೆ ಹಂತ ತಲುಪಿದೆ.

ಕೋಟ್ಯಾಂತರ ವೀಕ್ಷಕರ ಮನಗೆದ್ದಿರುವ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಸೆಮಿಫಿನಾಲೆ ಹಂತದಲ್ಲಿ ನಾಲ್ವರು ಎಲಿಮಿನೇಟ್ ಆಗಬೇಕಿತ್ತು. ಅದೇ ಟೆನ್ಷನ್ ನಲ್ಲಿ ಇದ್ದ ಕಾಮಿಡಿ ಕಿಲಾಡಿಗಳಿಗೆ ಬಹು ದೊಡ್ಡ ಸರ್ಪ್ರೈಸ್ ಸಿಕ್ಕಿದೆ.

ಏನು ಆ ಸರ್ಪ್ರೈಸ್.?

ಏನು ಆ ಸರ್ಪ್ರೈಸ್.?

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಸೆಮಿಫಿನಾಲೆ ಹಂತದಲ್ಲಿ ನಾಲ್ವರು ಔಟ್ ಅಗಬೇಕಿತ್ತು. ಆದ್ರೆ, ಯಾರನ್ನೂ ಔಟ್ ಮಾಡಲು ತೀರ್ಪುಗಾರರು ಇಚ್ಛಿಸಲಿಲ್ಲ. 'ಗ್ರ್ಯಾಂಡ್ ಫಿನಾಲೆ ಹಂತಕ್ಕೆ ನಾನು ತಲುಪುತ್ತೇನೋ, ಇಲ್ವೋ' ಅಂತ ಗಾಬರಿಗೊಂಡಿದ್ದ 'ಕಾಮಿಡಿ ಕಿಲಾಡಿ'ಗಳಿಗೆ ಸಿಕ್ಕ ಬಹುದೊಡ್ಡ ಸರ್ಪ್ರೈಸ್ ಅಂದ್ರೆ ಇದೇ.! ['ಕಾಮಿಡಿ ಕಿಲಾಡಿಗಳು' ಫಿನಾಲೆ ತಲುಪುವ ಆರು ಅದೃಷ್ಟಶಾಲಿಗಳು ಯಾರು.?]

ಫಿನಾಲೆಯಲ್ಲಿ ಹತ್ತು ಸ್ಪರ್ಧಿಗಳು.!

ಫಿನಾಲೆಯಲ್ಲಿ ಹತ್ತು ಸ್ಪರ್ಧಿಗಳು.!

ಸೆಮಿಫಿನಾಲೆ ಹಂತದಲ್ಲಿ ತೀರ್ಪುಗಾರರಾದ ರಕ್ಷಿತಾ, ಜಗ್ಗೇಶ್ ಮತ್ತು ಯೋಗರಾಜ್ ಭಟ್ ಯಾರನ್ನೂ ಎಲಿಮಿನೇಟ್ ಮಾಡದ ಕಾರಣ, 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಎಲ್ಲಾ ಹತ್ತು ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದಾರೆ. [ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಷ್ಟವಾದ ರಿಯಾಲಿಟಿ ಶೋ ಇದು..]

ಫಿನಾಲೆ ನಡೆಯುವುದು ಯಾವಾಗ.?

ಫಿನಾಲೆ ನಡೆಯುವುದು ಯಾವಾಗ.?

ಮಾರ್ಚ್ 5 ರಂದು ಬಾಗಲಕೋಟೆಯಲ್ಲಿ 'ಕಾಮಿಡಿ ಕಿಲಾಡಿಗಳು' ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

ಅನೇಕ ಬಾರಿ ಎಲಿಮಿನೇಷನ್ ಇರಲಿಲ್ಲ

ಅನೇಕ ಬಾರಿ ಎಲಿಮಿನೇಷನ್ ಇರಲಿಲ್ಲ

ವೀಕ್ಷಕರ ಒತ್ತಾಯದ ಮೇರೆಗೆ ಹಾಗೂ ಪರ್ಫಾಮೆನ್ಸ್ ಆಧಾರದಲ್ಲಿ ಅನೇಕ ಬಾರಿ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಎಲಿಮಿನೇಷನ್ ನಡೆಯಲಿಲ್ಲ.

ಫಿನಾಲೆ ತಲುಪಿರುವ ಹತ್ತು ಮಂದಿ ಇವರೇ...

ಫಿನಾಲೆ ತಲುಪಿರುವ ಹತ್ತು ಮಂದಿ ಇವರೇ...

ಶಿವರಾಜ್.ಕೆ.ಆರ್.ಪೇಟೆ, ನಯನ, ಲೋಕೇಶ್, ಅನೀಶ್, ದಿವ್ಯಶ್ರೀ, ಗೋವಿಂದೇ ಗೌಡ, ಸಂಜು ಬಸಯ್ಯ, ಹಿತೇಶ್, ಮುತ್ತುರಾಜ್ ಮತ್ತು ಪ್ರವೀಣ್ ಸದ್ಯ 'ಕಾಮಿಡಿ ಕಿಲಾಡಿಗಳು' ಗೆಲ್ಲುವ ರೇಸ್ ನಲ್ಲಿದ್ದಾರೆ.

ಯಾರು ಗೆಲ್ಲಬಹುದು.?

ಯಾರು ಗೆಲ್ಲಬಹುದು.?

ಫಿನಾಲೆ ತಲುಪಿರುವ ಹತ್ತು ಸ್ಪರ್ಧಿಗಳ ಪೈಕಿ ನಿಮ್ಮ ನೆಚ್ಚಿನ 'ಕಾಮಿಡಿ ಕಿಲಾಡಿ' ಯಾರು.? ನಿಮ್ಮ ಪ್ರಕಾರ ಯಾರು ಗೆಲ್ಲಬೇಕು? ಎಂಬುದನ್ನ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ....

English summary
Zee Kannada Channel's popular show 'Comedy Khiladigalu' Grand Finale is scheduled on March 5th. All 10 contestants will compete in Grand Finale.
Please Wait while comments are loading...

Kannada Photos

Go to : More Photos