»   » ಬಿಗ್ ಹೌಸ್ ನಲ್ಲಿ ಪುಟ್ಟ ಮಕ್ಕಳ ಕಲರವ, ಅಮ್ಮಂದಿರು ಸುಸ್ತೋ ಸುಸ್ತು.!

ಬಿಗ್ ಹೌಸ್ ನಲ್ಲಿ ಪುಟ್ಟ ಮಕ್ಕಳ ಕಲರವ, ಅಮ್ಮಂದಿರು ಸುಸ್ತೋ ಸುಸ್ತು.!

Posted by:
Subscribe to Filmibeat Kannada

ಬಿಗ್ ಮನೆಯಲ್ಲಿ ಇದೀಗ ಬಿಗ್ ಟಾಸ್ಕ್ ಗೆ ಸಖತ್ ಪೈಪೋಟಿ ನಡೆದಿದೆ. ಅರಮನೆಯ ದೊಡ್ಡಣ್ಣ ನೀಡುವ ವಿಭಿನ್ನ ಟಾಸ್ಕ್ ಗಳನ್ನು ಮಾಡಲು ಮನೆಯಲ್ಲಿರುವ ಸದಸ್ಯರೆಲ್ಲಾ ಪಣತೊಟ್ಟು ನಿಂತಿದ್ದಾರೆ.

ಅಂದಹಾಗೆ ಪ್ರಪಂಚದಲ್ಲಿ ತಾಯಿ ಮಕ್ಕಳ ಸಂಬಂಧ ಎಲ್ಲದಕ್ಕೂ ಮೀರಿದ್ದು, ಹಾಗಾಗಿ ಬಿಗ್ ಹೌಸ್ ನಲ್ಲಿ ನಿನ್ನೆ ಫುಲ್ ಪುಟ್ಟ ಮಕ್ಕಳ ಕಲರವ ತುಂಬಿತ್ತು. 33 ನೇ ದಿನ ಬಿಗ್ ಮನೆಯಲ್ಲಿ ಬಾಲ್ಯದ ಸಿಹಿ ನೆನಪುಗಳನ್ನು ಮೆಲುಕು ಹಾಕಲು 'ಅಯ್ಯೋ ಪಾಪು' ಎಂಬ ವಿಭಿನ್ನವಾದ ಬಿಗ್ ಟಾಸ್ಕ್ ಅನ್ನು ಬಿಗ್ ಬಾಸ್ ಸ್ಪರ್ಧಿಗಳಿಗೆ ನೀಡಿದ್ದರು.[ಸುನಾಮಿ ಕಿಟ್ಟಿ ಮುಖಕ್ಕೆ ಮಸಿ; ಕಣ್ಣೀರಿಟ್ಟ ನಟಿ ಶ್ರುತಿ]

ಅಂತೆಯೇ ಬಿಗ್ ಬಾಸ್ ನೀಡಿದ ಟಾಸ್ಕ್ ನಲ್ಲಿ ಮನೆಯ ಪುರುಷರು ಮಕ್ಕಳಾದರೆ, ಮಹಿಳೆಯರು ಪ್ರೀತಿಯ ಅಮ್ಮಂದಿರಾದರು. ಇವರಲ್ಲಿ ಕ್ರಮವಾಗಿ ರೆಹಮಾನ್ ಗೆ ನೇಹಾ ಅಮ್ಮನಾದರೆ, ಚಂದನ್ ಗೆ ಕೃತಿಕಾ ಅಮ್ಮ ಆದರು, ಆನಂದ್ ಗೆ ಭಾವನಾ, ಕಿಟ್ಟಿಗೆ ನೇತ್ರಾ, ಅಯ್ಯಪ್ಪ ಅವರಿಗೆ ಪೂಜಾ ಗಾಂಧಿ ಅಮ್ಮ ಆದ್ರು.[ವೀಕ್ಷಕರು ಹೇಳಿದ್ದು.! 'ಬಿಗ್ ಬಾಸ್' ಮನೆಯಲ್ಲಿ ಮಾಸ್ಟರ್ ಮೈಂಡ್ ಇವರೇ.!]

ಅಮ್ಮ-ಮಗುವಿನ ಸಂಬಂಧ ಹಾಗೂ ಬಿಗ್ ಬಾಸ್ ಮನೆಯಲ್ಲಿ ಮಕ್ಕಳ ಕಲರವ ಹೇಗಿತ್ತು ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ಅಮ್ಮಂದಿರ ಹರಸಾಹಸ

ಅಮ್ಮಂದಿರ ಹರಸಾಹಸ

ಬಿಗ್ ಹೌಸ್ ನಲ್ಲಿ ಶುರುವಾಗಿತ್ತು ಚಿಣ್ಣರ ಚಿಲಿಪಿಲಿ. ಪುಟ್ಟ ಪಾಪುಗಳಾದ ಬಿಗ್ ಸೆಲೆಬ್ರಿಟಿಗಳು ಅರಮನೆಯಲ್ಲಿ ತುಂಟಾಟ, ಚೇಷ್ಟೆ ಮಾಡಿ ತಮ್ಮ ಅಮ್ಮಂದಿರನ್ನು ಗೋಳಾಡಿಸಿದರು. ತಮ್ಮ ಪ್ರೀತಿಯ ಪಾಪುಗಳು ಮಾಡುವ ಕೀಟಲೆಯನ್ನು ಸಂಭಾಳಿಸುವಲ್ಲಿ ತಾಯಂದಿರು ಯಶಸ್ವಿಯಾದರೂ ಕೂಡ ಅವರನ್ನು ನಿರ್ವಹಿಸುವ ಹೊತ್ತಿಗೆ ಅಮ್ಮಂದಿರಿಗೆ ಸಾಕು ಸಾಕಾಗಿ ಹೋಗಿತ್ತು.

ಸ್ವಿಮ್ಮಿಂಗ್ ಫೂಲ್ ನಲ್ಲಿ ಆಟ

ಸ್ವಿಮ್ಮಿಂಗ್ ಫೂಲ್ ನಲ್ಲಿ ಆಟ

ಆಟ ಆಡ್ತಾ, ಒಬ್ಬರಿಗೊಬ್ಬರು ಕಿತ್ತಾಡ್ತಾ ಆನಂದ್, ಅಯ್ಯಪ್ಪ ಮತ್ತು ಚಂದನ್ ಸ್ವಿಮ್ಮಿಂಗ್ ಫೂಲ್ ಗೆ ಬಿದ್ದರೆ ಅವರನ್ನು ಮೇಲೆತ್ತಲು ಅಮ್ಮಂದಿರಾದ ಕೃತಿಕಾ, ಭಾವನಾ ಮತ್ತು ಪೂಜಾ ಗಾಂಧಿ ಹರಸಾಹಸ ಪಟ್ಟರು. ಇವರು ಎಷ್ಟೇ ಮೇಲೆತ್ತಿದರೂ ಮತ್ತೆ ಮತ್ತೆ ನೀರಿಗೆ ಬಿದ್ದು ಅಮ್ಮಂದಿರನ್ನು ನೀರಿಗೆ ಇಳಿಸುತ್ತಿದ್ದರು. ಒಟ್ನಲ್ಲಿ ಈ ಟಾಸ್ಕ್ ನಿಂದ ಮನೆಯ ಸದಸ್ಯರು ಸ್ವಿಮ್ಮಿಂಗ್ ಫೂಲ್ ನಲ್ಲಿ ಜಿಗಿದಾಡಿದ್ದೇ ಆಯಿತು. ಒಟ್ನಲ್ಲಿ ಸಣ್ಣ ಮಕ್ಕಳ ತುಂಟಾಟ ನೋಡಿ ಕ್ಯಾಪ್ಟನ್ ಶ್ರುತಿ ಅವರು ನಕ್ಕಿದ್ದೇ ನಕ್ಕಿದ್ದು.

ಕಿಟ್ಟಿಗೆ ವಿಶೇಷ ಅಧಿಕಾರ ನೀಡಿದ ಬಿಗ್ ಬಾಸ್

ಕಿಟ್ಟಿಗೆ ವಿಶೇಷ ಅಧಿಕಾರ ನೀಡಿದ ಬಿಗ್ ಬಾಸ್

ಮಗುವಾಗಿದ್ದ ಕಿಟ್ಟಿಗೆ ಬಿಗ್ ಬಾಸ್ ಒಂದು ವಿಶೇಷ ಅಧಿಕಾರ ನೀಡಿದ್ದರು. ಅದೇನಪ್ಪಾ ಅಂದ್ರೆ, ಮನೆಯಲ್ಲಿರುದ ಎಲ್ಲಾ ವಸ್ತುಗಳನ್ನು ಬೀಳಿಸಿ ಒಡೆದು ಹಾಕಲು ಕಿಟ್ಟಿ ಅವರಿಗೆ ವಿಶೇಷ ಅಧಿಕಾರ ಇತ್ತು. ಆದರೆ ಮನೆಯವರ ಹಿತ ಕಾಪಾಡಿದ ಕಿಟ್ಟಿ ಕೇವಲ ಮೊಟ್ಟೆ ಮಾತ್ರ ಒಡೆದು ಹಾಕಿದರು.

ತಾಳ್ಮೆ ಕಾಯ್ದುಕೊಂಡ ಆರ್ ಜೆ ನೇತ್ರಾ

ತಾಳ್ಮೆ ಕಾಯ್ದುಕೊಂಡ ಆರ್ ಜೆ ನೇತ್ರಾ

ನೇತ್ರಾ ಅವರಿಗೆ ಕಿಟ್ಟಿಯನ್ನು ಮಗುವಾಗಿ ನೇಮಿಸಲಾಗಿತ್ತು. ಕಿಟ್ಟಿಯಂತೂ ಸಖತ್ ಹಠ ಮಾಡಿ ನೇತ್ರಾ ಅವರನ್ನು ತುಂಬಾ ಕಾಡಿಸಿದರು. ಜೊತೆಗೆ ಕಿಚನ್ ಗೆ ಹೋಗಿ ಮೊಟ್ಟೆ ಬೇರೆ ಒಡೆದು ಹಾಕಿದಾಗ ನೇತ್ರಾ ಅವರು ಸಖತ್ ಗರಂ ಆಗಿ ಕಿಟ್ಟಿಗೆ ಸರಿಯಾಗಿ ಗದರಿದರು. ಬೆಟ್ಟದಷ್ಟು ಕೋಪ ಬಂದರೂ ಕೂಡ ತಾಳ್ಮೆಯಿಂದ ವರ್ತಿಸಿದ ನೇತ್ರಾ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ತಲೆ ಚಚ್ಚಿಕೊಂಡ ಟೀಚರ್ ಶ್ರುತಿ

ತಲೆ ಚಚ್ಚಿಕೊಂಡ ಟೀಚರ್ ಶ್ರುತಿ


ಕಾಲ ಚಕ್ರ ಉರುಳಿ ಮಕ್ಕಳು ದೊಡ್ಡವರಾಗಿ 5 ವರ್ಷ ಆದಾಗ ಅವರನ್ನು ಶಾಲೆಗೆ ಸೇರಿಸಲಾಯಿತು. ಅಲ್ಲಿ ಟೀಚರ್ ಆಗಿದ್ದ ಕ್ಯಾಪ್ಟನ್ ಶ್ರುತಿ ಅವರಿಗೆ ಮಕ್ಕಳು ತುಂಬಾ ತಲೆ ತಿಂದರು. ಜೊತೆಗೆ ಶ್ರುತಿ ಅವರು ಕೇಳಿದ ಪ್ರಶ್ನೆಗೆ ಮಕ್ಕಳು ಫನ್ನಿ ಉತ್ತರಕ್ಕೆ ಮತ್ತು ಮಕ್ಕಳ ಕೀಟಲೆಗೆ ಟೀಚರ್ ಶ್ರುತಿ ಅವರು ತಲೆ ಚಚ್ಚಿಕೊಂಡರು.

English summary
Bigg Boss Kannada 3 Day 33 higlights: 'Ayyo Paapu' Task, Mens are Child and Women are Mother in Bigg Boss house.
Please Wait while comments are loading...

Kannada Photos

Go to : More Photos