»   » ಡ್ಯಾಮೇಜ್ ಕಂಟ್ರೋಲ್ ಶುರು: ಪ್ರಥಮ್ ಗಾಗಿ ಮಾಳವಿಕಾ 'ಸ್ಪೆಷಲ್ ಕ್ಲಾಸ್'

ಡ್ಯಾಮೇಜ್ ಕಂಟ್ರೋಲ್ ಶುರು: ಪ್ರಥಮ್ ಗಾಗಿ ಮಾಳವಿಕಾ 'ಸ್ಪೆಷಲ್ ಕ್ಲಾಸ್'

Written by: ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ಸಿಬ್ಬಂದಿ
Subscribe to Filmibeat Kannada

'ಬಿಗ್ ಬಾಸ್' ಮನೆಯೊಳಗೆ ಪತ್ರಕರ್ತರು ಎಂಟ್ರಿಕೊಟ್ಟು, ಎಲ್ಲರಿಗೂ ನೇರ ಪ್ರಶ್ನೆಗಳನ್ನು ಕೇಳಿದ್ಮೇಲೆ ಸ್ಪರ್ಧಿಗಳ ತಲೆಯಲ್ಲಿ ಹೊಸ ಲೆಕ್ಕಾಚಾರ ಆರಂಭವಾಗಿದೆ. 'ಡ್ಯಾಮೇಜ್ ಕಂಟ್ರೋಲ್' ಮಾಡಲು ನಟಿ ಮಾಳವಿಕಾ ಅವಿನಾಶ್ ಮತ್ತು 'ಕಿರಿಕ್' ಕೀರ್ತಿ ಮುಂದಾಗಿದ್ದಾರೆ.

ಪ್ರಥಮ್ ರವರ 'ಮೆಂಟಲ್ ಸ್ಟೆಬಿಲಿಟಿ' ಬಗ್ಗೆ ಮೋಹನ್ ಮತ್ತು ಮಾಳವಿಕಾ ಕಾಮೆಂಟ್ ಮಾಡಿರುವುದು ಎಷ್ಟು ಸರಿ ಅಂತ ಪತ್ರಕರ್ತರು ತರಾಟೆಗೆ ತೆಗೆದುಕೊಂಡ ಬಳಿಕ ನಟಿ ಮಾಳವಿಕಾ ಅವಿನಾಶ್ ಎಚ್ಚೆತ್ತುಕೊಂಡಂತಿದೆ.

ಪ್ರೆಸ್ ಮೀಟ್ ಮುಗಿದ ಬಳಿಕ...

ಪ್ರೆಸ್ ಮೀಟ್ ಮುಗಿದ ಬಳಿಕ...

'ಬಿಗ್ ಬಾಸ್' ಮನೆಯೊಳಗೆ ಆಯೋಜಿಸಿದ್ದ ದಿಢೀರ್ ಪ್ರೆಸ್ ಮೀಟ್ ಮುಗಿದ ಬಳಿಕ, ''ಪತ್ರಕರ್ತರು ಆಡಿಯನ್ಸ್ ನ ಪ್ರತಿನಿಧಿಸುತ್ತಾರೆ. ಪ್ರಶ್ನೆಗಳನ್ನ ಕೇಳುವ ಹಕ್ಕು ಅವರಿಗೆ ಇರುತ್ತೆ. ಉತ್ತರ ಕೊಡಬೇಕೋ, ಬೇಡವೋ ಎಂಬ ಹಕ್ಕು ನಮಗೆ ಇರುತ್ತೆ'' ಅಂತ ಮಾಳವಿಕಾ ಅವಿನಾಶ್ ಹೇಳಿದರು.[ಪ್ರಥಮ್ ಗೆ 'ಹುಚ್ಚು': ಮೋಹನ್, ಮಾಳವಿಕಾ ಕೊಟ್ಟ ಸಬೂಬು.!]

ಪ್ರಥಮ್ ಜೊತೆ ಮಾತಾಡ್ತಾರಂತೆ ಮಾಳವಿಕಾ.!

ಪ್ರಥಮ್ ಜೊತೆ ಮಾತಾಡ್ತಾರಂತೆ ಮಾಳವಿಕಾ.!

''ನಾನು ನಿನ್ನ ಹತ್ತರ ಮಾತನಾಡಬೇಕು. ನಾಳೆ ಮಾತನಾಡುತ್ತೇನೆ. ಅದರಿಂದ ಕಾರ್ಯಕ್ರಮಕ್ಕೆ ಆಗುತ್ತೋ, ಇಲ್ವೋ.. ನಿನ್ನ ಬದುಕಿಗಂತೂ ಉಪಯೋಗ ಆಗುತ್ತೆ'' ಅಂತ ಹೇಳ್ತಾ ಪ್ರಥಮ್ ಬಳಿ ಮಾಳವಿಕಾ ಅವಿನಾಶ್ ಮಾತು ಆರಂಭಿಸಿದರು.

ನಿಮ್ಮಿಂದ ಇಂತಹ ಮಾತು ನಿರೀಕ್ಷೆ ಮಾಡಿರಲಿಲ್ಲ

ನಿಮ್ಮಿಂದ ಇಂತಹ ಮಾತು ನಿರೀಕ್ಷೆ ಮಾಡಿರಲಿಲ್ಲ

''ಮೆಂಟಲಿ ಇಮ್ ಬ್ಯಾಲೆನ್ಸ್ ಅಂತ ನೀವು ಹೇಳ್ತೀರಾ ಅಂತ ನಾನು ನಿರೀಕ್ಷೆ ಮಾಡಿರಲಿಲ್ಲ'' ಅಂತ ಪ್ರಥಮ್ ಬೇಸರದಿಂದ ಮಾತನಾಡಿದರು.

ಮಾಳವಿಕಾ ಯಾಕೆ ಮಾತನಾಡಲ್ಲ ಗೊತ್ತಾ?

ಮಾಳವಿಕಾ ಯಾಕೆ ಮಾತನಾಡಲ್ಲ ಗೊತ್ತಾ?

''ಹಾಗಂತ ನಾನು ಹೇಳಿಲ್ಲ. ನೀನು ಸ್ಟೇಬಲ್ ಆಗಿರಲ್ಲ. ಅದನ್ನ ನೀನು ಒಪ್ಪಿಕೊಳ್ಳಬೇಕು. ಮಾಳವಿಕಾ ಯಾಕೆ ಮಾತಾಡಲ್ಲ ಅಂದ್ರೆ ಕೇಳುವ ಕಿವಿಗಳಿಲ್ಲ ಈ ಮನೆಯಲ್ಲಿ. ಅದಕ್ಕೆ ನಾನು ಮಾತಾಡಲ್ಲ. ನಾವೆಲ್ಲರೂ Contestants, ನಾವು ಯಾಕೆ ಅವರ ಮಾತು ಕೇಳಬೇಕು ಅಂದ್ರೆ ಕಷ್ಟ. ಆದರೂ ನಾನು ನಿನ್ನ ಬದುಕಿಗೋಸ್ಕರ ನಿನ್ನ ಜೊತೆ ಮಾತನಾಡುತ್ತೇನೆ. ಯಾಕಂದ್ರೆ ನನಗೆ ಮಾತನಾಡಬೇಕು ಅನಿಸುತ್ತಿದೆ. ಯಾಕಂದ್ರೆ ನಿನಗೆ ಅಪಾರವಾದ ಬುದ್ಧಿವಂತಿಕೆ ಇದೆ. ಅದು ಸಮಾಜಕ್ಕೆ ಒಳ್ಳೆಯದಕ್ಕೆ ಸದುಪಯೋಗ ಆಗಬೇಕು'' ಎಂದರು ಮಾಳವಿಕಾ

ಮಾಳವಿಕಾ ಮಾತನಾಡಲು ನಿರ್ಧರಿಸಿದ್ದು ಯಾಕೆ.?

ಮಾಳವಿಕಾ ಮಾತನಾಡಲು ನಿರ್ಧರಿಸಿದ್ದು ಯಾಕೆ.?

ಪ್ರೆಸ್ ಮೀಟ್ ನಡೆಯುವಾಗ, ''ಮಾಳವಿಕಾ ಮತ್ತು ಮೋಹನ್... ನೀವು ಇಬ್ಬರೂ ತುಂಬಾ ಹಿರಿಯರು. ತುಂಬಾ ಅನುಭವ ಇದೆ. ಹೊರಗಡೆ ತುಂಬಾ ಜನರನ್ನ ನೋಡಿರ್ತೀರಾ. ಪ್ರಥಮ್ ಗೆ ಆ ತರಹ ಏನೋ ಸಮಸ್ಯೆ ಇದೆ ಅಂತಿದ್ದರೆ.. ನೀವೇ ಯಾಕೆ ಒಂದು ಹೆಜ್ಜೆ ಮುಂದಕ್ಕೆ ಹೋಗಿ ನೇರವಾಗಿ ಮಾತನಾಡಬಾರದು'' ಎಂಬ ಪ್ರಶ್ನೆ ಪತ್ರಕರ್ತರಿಂದಲೇ ತೂರಿಬಂದಿತ್ತು. ಹೀಗಾಗಿ, ಪ್ರಥಮ್ ಗಾಗಿ ಮಾಳವಿಕಾ 'ಸ್ಪೆಷಲ್ ಕ್ಲಾಸ್' ತೆಗೆದುಕೊಳ್ಳಲು ನಿರ್ಧರಿಸಿದರೇನೋ..?!

ಮಾರನೇ ದಿನ 'ಸ್ಪೆಷಲ್ ಕ್ಲಾಸ್'

ಮಾರನೇ ದಿನ 'ಸ್ಪೆಷಲ್ ಕ್ಲಾಸ್'

ತಾವು ಕೊಟ್ಟ ಹೇಳಿಕೆಯಿಂದಾದ ಡ್ಯಾಮೇಜ್ ಕಂಟ್ರೋಲ್ ಗಾಗಿ ಮಾರನೇ ದಿನ ಪ್ರಥಮ್ ರವರನ್ನ ಕೂರಿಸಿಕೊಂಡು, ''ಕ್ರಿಯಾಶೀಲತೆ ಬರುವುದು ಸಂಬಂಧಗಳಿಂದ. ನಾವು ಸೂಕ್ಷ್ಮ ಜೀವಿಗಳು. ಸೂಕ್ಷ್ಮತನ ಬೆಳೆಸಿಕೊಳ್ಳಬೇಕು. ನಿನ್ನಲ್ಲಿ ಅದು ಸ್ವಲ್ಪ ಕಡಿಮೆ ಇದೆ. ನಿಮ್ಮ ಅಪ್ಪ-ಅಮ್ಮ ಕೂಡ ಈಗ ಬಂದಿದ್ದಾರೆ. ಈಗ ಅವರೊಂದಿಗೆ ಸಂಬಂಧ ಕಟ್ಟು. ಗೌರವ ಅನ್ನೋದು ನಮ್ಮ ನಡವಳಿಕೆಯಲ್ಲಿ ಕಾಣಿಸಬೇಕು. ಕ್ರೋಧ ಇದ್ದಾಗ ಎಂಥವರೂ ಸ್ಟೆಬಿಲಿಟಿ ಕಳೆದುಕೊಳ್ಳುತ್ತಾರೆ. ಅಂತಹ ಕ್ರೋಧ ಬೇಕೇ.? ನೀನು ಹುಚ್ಚಾಟಗಳನ್ನು ನಿಲ್ಲಿಸಿದರೆ, ನೀವು ಸಮಾಜಕ್ಕೆ ಮಾದರಿ ಆಗ್ತೀಯಾ.?'' ಮಾಳವಿಕಾ ಮಾತನಾಡಲು ಆರಂಭಿಸಿದರು.

ಪ್ರಥಮ್ ಕೊಟ್ಟ ಪ್ರತಿಕ್ರಿಯೆ

ಪ್ರಥಮ್ ಕೊಟ್ಟ ಪ್ರತಿಕ್ರಿಯೆ

''ನಿಜ ನೀವು ಹೇಳಿದ್ದು ನನಗೆ ಅರ್ಥ ಆಯ್ತು. ಇನ್ನು ಯಾವ ತಪ್ಪು ಕೂಡ ನನ್ನ ಕಡೆಯಿಂದ ಆಗಲ್ಲ'' ಎಂದರು ಪ್ರಥಮ್.

ಪ್ರಥಮ್ ಗೆ ಬೇಸರ

ಪ್ರಥಮ್ ಗೆ ಬೇಸರ

''ಮೆಂಟಲಿ ಇಮ್ ಬ್ಯಾಲೆನ್ಸ್ ಎಂಬ ಹೇಳಿಕೆ ಜನರಿಗೆ ಬೇರೆ ತರಹ ಅಭಿಪ್ರಾಯ ಬರುತ್ತೆ. ನಾನು ಅಷ್ಟೊಂದು ಕೆಟ್ಟವನಾ?'' ಅಂತ ಪ್ರಥಮ್ ತುಂಬ ಬೇಜಾರು ಮಾಡಿಕೊಂಡಿದ್ದರು.

English summary
Bigg Boss Kannada 4: Day 106, Kannada Actress Malavika Avinash tries to explain her stance regarding her comments on Pratham's Mental Stability.
Please Wait while comments are loading...

Kannada Photos

Go to : More Photos