»   » 'ಬಿಗ್ ಬಾಸ್' ಮನೆಯಲ್ಲಿ ಸಂಜನಾ ಸ್ವಯಂವರ: ಭುವನ್ ಗದ್ದಲ.!

'ಬಿಗ್ ಬಾಸ್' ಮನೆಯಲ್ಲಿ ಸಂಜನಾ ಸ್ವಯಂವರ: ಭುವನ್ ಗದ್ದಲ.!

Posted by:
Subscribe to Filmibeat Kannada

ಪ್ರಜಾಪ್ರಭುತ್ವ ಚಾಲ್ತಿಯಲ್ಲಿರುವ ಈಗಿನ ಕಾಲದಲ್ಲಿ ರಾಜರ ಆಳ್ವಿಕೆ ಅನುಭವವನ್ನು ತಿಳಿಸುವ ಸಲುವಾಗಿ ಮನೆಯ ಸದಸ್ಯರಿಗೆ 'ಬಿಗ್ ಬಾಸ್' ಈ ವಾರ 'ರಾಣಿ ಮಹಾರಾಣಿ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನೀಡಿದ್ದಾರೆ.

'ರಾಣಿ ಮಹಾರಾಣಿ' ಟಾಸ್ಕ್ ಅನುಸಾರವಾಗಿ, 'ಮಾಳವಿ' ಸಾಮ್ರಾಜ್ಯದಲ್ಲಿ ಕಾಲ ಚಕ್ರ ಉರುಳಿದ್ದು, ಮಹಾರಾಣಿ (ಮಾಳವಿಕಾ) ಈಗ ರಾಜಕುಮಾರಿ (ಸಂಜನಾ) ಮದುವೆ ಮಾಡಲು ನಿಶ್ಚಯಿಸಿರುತ್ತಾರೆ. ಸಾಮ್ರಾಜ್ಯದಲ್ಲಿ ಇರುವ ಎಲ್ಲಾ ಪುರುಷರು (ಮಂತ್ರಿ, ಸೇನಾಧಿಪತಿ, ಅಡುಗೆಯವರು, ಪ್ರಜೆಗಳು) ರಾಜಕುಮಾರಿಯನ್ನು ಮದುವೆ ಆಗುವ ಇಚ್ಛೆಯುಳ್ಳವರಾಗಿರುತ್ತಾರೆ. ['ಬಿಗ್ ಬಾಸ್' ಮನೆಯ ಎಲ್ಲಾ ಅಪ್ ಡೇಟ್ಸ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ]

ರಾಜಕುಮಾರಿಯ ಸ್ವಯಂವರದ ಮೊದಲ ಹಂತವಾಗಿ, ಮಹಾರಾಣಿ ದರ್ಬಾರ್ ಕರೆದು, ಎಲ್ಲಾ ಪುರುಷರು ರಾಜಕುಮಾರಿಯನ್ನು ಮದುವೆ ಆಗಲು ಯಾವ ರೀತಿ ಅರ್ಹರು ಎಂಬುದನ್ನು ಪ್ರಾಮಾಣಿಕವಾಗಿ ಮನವರಿಕೆ ಮಾಡಿಕೊಳ್ಳಬೇಕು.

ಟಾಸ್ಕ್ ಪ್ರಕಾರವಾಗಿ, 'ಬಿಗ್ ಬಾಸ್' ಮನೆಯ ಎಲ್ಲಾ ಪುರುಷರು ರಾಜಕುಮಾರಿಯನ್ನು ಮದುವೆ ಆಗಲು ಏನೆಲ್ಲಾ ಪೀಠಿಕೆ ಹಾಕಿದರು? ಭುವನ್ ಗಲಾಟೆ ಮಾಡಿದ್ಯಾಕೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ಓದಿರಿ....

ಓಂ ಪ್ರಕಾಶ್ ರಾವ್ ಏನಂದರು?

ಓಂ ಪ್ರಕಾಶ್ ರಾವ್ ಏನಂದರು?

''ಹೊಟ್ಟೆ ತುಂಬಾ ಊಟ ಹಾಕುತ್ತೇನೆ. ಅಡುಗೆ ಮಾಡುತ್ತೇನೆ. ಹೀಗಾಗಿ ನನಗೆ ಮದುವೆ ಮಾಡಿಕೊಡಿ. ಕೊಟ್ಟರೆ ಕೊಡಿ, ಬಿಟ್ಟರೆ ಬಿಡಿ..ನನ್ನ ಕೈಯಲ್ಲಿ ಆಗುವುದು ಇಷ್ಟು'' ಎಂದರು 'ರಂಗಣ್ಣ' ಪಾತ್ರಧಾರಿ ಓಂ ಪ್ರಕಾಶ್ ರಾವ್.

ಭುವನ್ ಬಾಯಿಂದ ಬಂದ ಮಾತಿದು

ಭುವನ್ ಬಾಯಿಂದ ಬಂದ ಮಾತಿದು

''ಮಹಾರಾಣಿ, ನಾನು ನಿಮ್ಮ ಮಗಳನ್ನು ಮಗು ತರಹ ನೋಡಿಕೊಳ್ಳುತ್ತೇನೆ. ಹೆಂಡತಿಗಿಂತಲೂ ಮಗುವನ್ನು ತುಂಬಾ ಡಿಲೆಕೇಟ್ ಆಗಿ ನೋಡಿಕೊಳ್ಳಬೇಕು. ಆ ತರಹ ನೋಡಿಕೊಳ್ಳುತ್ತೇನೆ. ಶತ್ರುಗಳು ಬಂದರೂ ಶಕ್ತಿ-ಯುಕ್ತಿಯಿಂದ ನಾನು ತಡೆಯುತ್ತೇನೆ. ನಾನು ರಾಜಕುಮಾರ ಆದ್ಮೇಲೆ ಹಾರಿಸುವ ಪ್ರಶ್ನೆ ಬರಲ್ಲ. ನಿಮ್ಮ ಸಾಮ್ರಾಜ್ಯಕ್ಕೆ ಹಾಗೂ ನಿಮಗೆ ಗೌರವ ನೀಡುತ್ತೇನೆ'' ಅಂತ ಭುವನ್ ಹೇಳಿದರು.

ಸಂಜನಾ-ಭುವನ್ ನಡುವಿನ ಸಂಭಾಷಣೆ

ಸಂಜನಾ-ಭುವನ್ ನಡುವಿನ ಸಂಭಾಷಣೆ

ಸಂಜನಾ - ''ಮಗು ತರಹ ಅಂದ್ರೆ ಹೇಗೆ ನೋಡಿಕೊಳ್ಳುತ್ತೀರಾ?''
ಭುವನ್ - ''ಹಾಲು ಕುಡಿಸುತ್ತೇನೆ''
ಸಂಜನಾ - ''ಹಾಲು ಅಂದ್ರೆ ಅಲರ್ಜಿ ನನಗೆ''
ಭುವನ್ - ''ಜ್ಯೂಸ್ ಕುಡಿಸುತ್ತೇನೆ. ಸ್ನಾನ ಮಾಡಿಸಬೇಕು ಅಂದ್ರೆ ಮಾಡಿಸುತ್ತೇನೆ. ಮಗುವಿಗೆ ಹೇಗೆ ಕಥೆ ಹೇಳಿ ಮಲಗಿಸುತ್ತಾರೋ, ಹಾಗೇ ಮಾಡುತ್ತೇನೆ''

ನಿರಂಜನ್ ನಿವೇದನೆ

ನಿರಂಜನ್ ನಿವೇದನೆ

''ಇಲ್ಲಿರುವವರಲ್ಲಿ ಲೆಕ್ಕ ಹಾಕಿ ತೂಗಿದರೆ ನಾನೇ ವಾಸಿ. ಮಹಾರಾಣಿ ಹಾಗೂ ಯುವರಾಣಿ ರವರಿಗೆ ಏನೇನು ಬೇಕು ಅಂತ ನನಗೆ ಚೆನ್ನಾಗಿ ಗೊತ್ತು. ಎಲ್ಲವನ್ನೂ ಒದಗಿಸುವ ಕೆಲಸ ಮಾಡುತ್ತೇನೆ. ಯುವರಾಣಿಗೆ ಸಾಕು ಎನ್ನುವುಷ್ಟು ನಗಿಸುತ್ತೇನೆ. ನಾನು ಮಗುವಾಗೇ ನೋಡಿಕೊಳ್ಳುತ್ತೇನೆ. ಯಾವುದೇ ರೀತಿಯಲ್ಲಿ ದುಃಖ ಕೊಡುವುದಿಲ್ಲ. ಮನೆ ಅಳಿಯನಾಗಿ ಇರುತ್ತೇನೆ'' - ನಿರಂಜನ್ ದೇಶಪಾಂಡೆ

ಪ್ರಥಮ್ ಪೀಠಿಕೆ

ಪ್ರಥಮ್ ಪೀಠಿಕೆ

''ನಾನು ಯುವರಾಣಿಯನ್ನು ಪರಪರ ಅಂತ ಕೆರೆದುಕೊಂಡು ಪ್ರೀತಿಸುತ್ತಿದ್ದೇನೆ. ಹಿಂದೆಯವರೆಲ್ಲಾ ಹೇಳಿದರು 'ಮಗು ತರಹ' ನೋಡಿಕೊಳ್ಳುತ್ತೇನೆ ಅಂತ. ನಾನು ಹಾಗೆ ಹೇಳಲ್ಲ. ಯುವರಾಣಿಗೆ ಮಗುವನ್ನು ಕೊಡುತ್ತೇನೆ. ನಿಮ್ಮ ವಂಶವನ್ನು ಉದ್ಧಾರ ಮಾಡುತ್ತೇನೆ'' - ಪ್ರಥಮ್

ರಿಜೆಕ್ಟ್ ಆದ ಪ್ರಥಮ್

ರಿಜೆಕ್ಟ್ ಆದ ಪ್ರಥಮ್

ಪ್ರಥಮ್ ಪೀಠಿಕೆ ಕೇಳಲು ಆಗದೆ, ಅವರನ್ನ ಸ್ಪಾಟ್ ನಲ್ಲೇ ರಾಜಕುಮಾರಿ ರಿಜೆಕ್ಟ್ ಮಾಡಿಬಿಟ್ಟರು.

ಪ್ರಥಮ್ ಗೆ ಶಿಕ್ಷೆ

ಪ್ರಥಮ್ ಗೆ ಶಿಕ್ಷೆ

ಮಹಾರಾಣಿಯವರನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದಕ್ಕೆ, ಪ್ರಥಮ್ ಗೆ ಶಿಕ್ಷೆ ಕೂಡ ಸಿಕ್ತು.

ಕೀರ್ತಿ ಹೇಳಿದ್ದೇನು?

ಕೀರ್ತಿ ಹೇಳಿದ್ದೇನು?

''ನಮ್ದು ಆಲ್ರೆಡಿ ಒಂದು ಮದುವೆ ಆಗಿ, ಮಗು ಆಗಿದೆ. ಎಕ್ಸ್ ಪೀರಿಯೆನ್ಸ್ ಚೆನ್ನಾಗಿದೆ. ಅವರನ್ನ ಹೇಗೆ ಖುಷಿ ಖುಷಿ ಆಗಿ ನೋಡಿಕೊಳ್ಳುತ್ತಿದ್ದೇನೋ, ನಿಮ್ಮನ್ನೂ ಹಾಗೇ ನೋಡಿಕೊಳ್ಳುತ್ತೇನೆ. ಒಂದು ಚಾನ್ಸ್ ಕೊಟ್ಟು ನೋಡಿ'' - ಕೀರ್ತಿ ಕುಮಾರ್

ಮೋಹನ್ ಏನಂದರು?

ಮೋಹನ್ ಏನಂದರು?

''ಯುವರಾಣಿ ರವರನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ. 'ರ' ಪದ ಬರಲ್ಲ. ರಾಜ್ಯದ ಮಂತ್ರಿ ಆಗಿ ತುಂಬಾ ಬುದ್ಧಿ ಇದೆ. ಬುದ್ಧಿ ಇಂದ ಸಂಪಾದನೆ ಆಗುತ್ತೆ. ಸಂಪಾದನೆಯಿಂದ ತುಂಬಾ ಚೆನ್ನಾಗಿ ಸಾಕಬಲ್ಲೆ'' - ಮೋಹನ್

ಮೂವರು ಆಯ್ಕೆ...

ಮೂವರು ಆಯ್ಕೆ...

ಎಲ್ಲಾ ಪುರುಷರು ಮನವರಿಕೆ ಮಾಡಿಕೊಟ್ಟ ನಂತರ ಮೂವರನ್ನು ಮಹಾರಾಣಿ ಆಯ್ಕೆ ಮಾಡಿದರು. ರಾಜಕುಮಾರಿಯ ಸ್ವಯಂವರದ ಎರಡನೇ ಹಂತಕ್ಕೆ ಆಯ್ಕೆ ಆದವರು ಕೀರ್ತಿ, ಮೋಹನ್ ಮತ್ತು ನಿರಂಜನ್.

ಭುಗಿಲೆದ್ದ ಭುವನ್.!

ಭುಗಿಲೆದ್ದ ಭುವನ್.!

''ಪ್ಲೀಸ್ ಸೇವ್ ಮೀ'' ಅಂತ ರಾಜಕುಮಾರಿ ಕಳುಹಿಸಿದ ಸಂದೇಶವನ್ನು ಇಟ್ಟುಕೊಂಡು ಸ್ವಯಂವರ ನಡೆಯುತ್ತಿರುವಾಗ, ''ಯಾವ ಆಧಾರದ ಮೇಲೆ ಮದುವೆ ಆಗಿರುವವರನ್ನ ಸೆಲೆಕ್ಟ್ ಮಾಡಿದ್ದೀರಾ'' ಅಂತ ಮಹಾರಾಣಿ ರವರನ್ನ ಭುವನ್ ಪ್ರಶ್ನೆ ಮಾಡಿದರು. ಹೇಳಿ ಕೇಳಿ ಮಹಾರಾಣಿ ಸರ್ವಾಧಿಕಾರಿ ಆಗಿದ್ದರಿಂದ ಉತ್ತರ ಕೊಡಲಿಲ್ಲ. ಇನ್ನೂ ಕನ್ನಡಿಯಲ್ಲಿ ರಾಜಕುಮಾರಿ ಜೊತೆ ಐ ಕಾಂಟ್ಯಾಕ್ಟ್ ಆಗಿದ್ದಕ್ಕೆ ಭುವನ್ ಕೈ ಕಟ್ಟಲಾಗಿತ್ತು. ಸಂದೇಶ ಕಳುಹಿಸಿದ ಮೇಲೆ ಕೈ ಕಟ್ಟಿ ಕೂರಿಸಿದ್ದಕ್ಕೆ ಭುವನ್ ಗಲಾಟೆ ಮಾಡಿದರು. ಈ ವೇಳೆ ಮೋಹನ್ ನಡುವೆ ಮಾತಿನ ಚಕಮಕಿ ನಡೆಯಿತು.

English summary
Bigg Boss Kannada 4: Day 24, Full Details about Rajakumari's Swayamvara Task.
Please Wait while comments are loading...

Kannada Photos

Go to : More Photos