twitter
    For Quick Alerts
    ALLOW NOTIFICATIONS  
    For Daily Alerts

    ಹುಚ್ಚ ವೆಂಕಟ್ ಕ್ಷಮೆ ಕೇಳಿದರು, ಕಿಚ್ಚ ಸುದೀಪ್ ವಾಪಸ್ ಬಂದರು.!

    By Harshitha
    |

    ''ಬಿಗ್ ಬಾಸ್' ಮನೆಯೊಳಗೆ ಹೋಗಿ, ಸ್ಪರ್ಧಿ ಪ್ರಥಮ್ ಮೇಲೆ ಹಲ್ಲೆ ನಡೆಸಿ ಬಂದಿರುವ ಹುಚ್ಚ ವೆಂಕಟ್ ರವರ ನಡವಳಿಕೆ ಅಕ್ಷಮ್ಯ. ಅವರಿಗೆ ಶಿಕ್ಷೆ ಆಗುವವರೆಗೂ ನಾನು 'ಬಿಗ್ ಬಾಸ್' ಶೋ ಹೋಸ್ಟ್ ಮಾಡಲ್ಲ'' ಅಂತ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ನೋಡಿ, ಇನ್ಮೇಲೆ ಸುದೀಪ್ 'ಬಿಗ್ ಬಾಸ್' ವೇದಿಕೆ ಮೇಲೆ ಕಾಣಿಸಿಕೊಳ್ಳುವುದು ಡೌಟು ಅಂತಲೇ ಅನೇಕರು ಭಾವಿಸಿದ್ದರು. ಆಗ ಎಚ್ಚೆತ್ತ 'ಫೈರಿಂಗ್ ಸ್ಟಾರ್' ಹುಚ್ಚ ವೆಂಕಟ್ ಯೂಟ್ಯೂಬ್ ವಿಡಿಯೋ ಮೂಲಕ ಸುದೀಪ್ ಹಾಗೂ ಕಲರ್ಸ್ ಕನ್ನಡ ವಾಹಿನಿಗೆ ಕ್ಷಮೆ ಕೇಳಿದರು. [ಹುಚ್ಚ ವೆಂಕಟ್ 'ಕಿರಿಕ್': ಕೆರಳಿದ 'ಹೆಬ್ಬುಲಿ' ಕಿಚ್ಚ ಸುದೀಪ್.!]

    ಸಾಲದು ಅಂತ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮ ಚಿತ್ರೀಕರಣ ನಡೆಯುವ ದಿನ, ಶೂಟಿಂಗ್ ಸ್ಪಾಟ್ ಗೆ ತೆರಳಿ ಹುಚ್ಚ ವೆಂಕಟ್ 'ಸಾರಿ' ಕೇಳಿದರು. ಇದೆಲ್ಲ ಆದ್ಮೇಲೆ ಗರಂ ಆಗಿದ್ದ ಕಿಚ್ಚ ಸುದೀಪ್ ಸ್ವಲ್ಪ ಕೂಲ್ ಆಗಿ 'ಬಿಗ್ ಬಾಸ್' ವೇದಿಕೆಗೆ ಬಂದರು. [ಸುದೀಪ್ ತಪ್ಪದೇ ಕೇಳಿಸಿಕೊಳ್ಳಿ... ಹುಚ್ಚ ವೆಂಕಟ್ 'ತಪ್ಪು ಮಾಡಿಲ್ಲ'ವಂತೆ.!]

    'ಬಿಗ್ ಬಾಸ್ ಕನ್ನಡ-4' ಶೋನ ಆರನೇ ವಾರ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮ ಶುರು ಆಗುವ ಮುನ್ನ ಹುಚ್ಚ ವೆಂಕಟ್ ಕ್ಷಮೆಯಾಚಿಸಿದ ಪರಿ, ನಂತರ ಸುದೀಪ್ ಕೊಟ್ಟ ಸ್ಪಷ್ಟನೆ ಕುರಿತಾದ ಸಂಪೂರ್ಣ ವರದಿ ಇಲ್ಲಿದೆ, ಓದಿರಿ....

    'ಬಿಗ್ ಬಾಸ್' ವೇದಿಕೆ ಮುಂದೆ ಹುಚ್ಚ ವೆಂಕಟ್.!

    'ಬಿಗ್ ಬಾಸ್' ವೇದಿಕೆ ಮುಂದೆ ಹುಚ್ಚ ವೆಂಕಟ್.!

    'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮ ಶುರುವಾಗುವ ಮುನ್ನ ಸ್ಟೇಜ್ ಮುಂದೆ ನಿಂತು, ಮೈಕ್ ಹಿಡಿದು ಹುಚ್ಚ ವೆಂಕಟ್ ಮಾತನಾಡಲು ಆರಂಭಿಸಿದರು. ''ಕರ್ನಾಟಕ ಜನತೆಗೆ.. ಎಲ್ಲರಿಗೂ ಹೇಳ್ತಾಯಿದ್ದೀನಿ.. 'ಕಲರ್ಸ್ ಕನ್ನಡ'ಗೆ ಹಾಗೂ 'ಬಿಗ್ ಬಾಸ್'ಗೆ I'm Sorry.. ಪ್ರಥಮ್ ಮೇಲೆ ಕೈ ಎತ್ತಿದ್ದಕ್ಕೆ'' ಅಂತ ಹೇಳುತ್ತಾ ಬಹಿರಂಗವಾಗಿ ಹುಚ್ಚ ವೆಂಕಟ್ ಕ್ಷಮೆ ಕೇಳಿದರು. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

    ಕೈ ಎತ್ತಿದ್ದು ನನ್ನ ತಪ್ಪು

    ಕೈ ಎತ್ತಿದ್ದು ನನ್ನ ತಪ್ಪು

    ''ಅವರು ನನ್ನನ್ನ ನಂಬಿ, ಮನೆಯೊಳಗೆ ಕರ್ಕೊಂಡ್ರು. ಯಾರ ಮೇಲೂ ಕೈ ಮಾಡಲ್ಲ ಅಂತ ಹೇಳಿದ್ದೆ. ಸೋ, ಯಾವುದೇ ಕಾರಣಕ್ಕೂ ಕಲರ್ಸ್ ಕನ್ನಡ ಹಾಗೂ 'ಬಿಗ್ ಬಾಸ್' ಮೇಲೆ ಬೇಜಾರು ಮಾಡಿಕೊಳ್ಳಬೇಡಿ. ಕಲರ್ಸ್ ಕನ್ನಡ ಅವರು ನನಗೆ ಮೊದಲೇ ಹೇಳಿದ್ದರು. ನಾನೂ ಕೂಡ ಕೈ ಎತ್ತಲ್ಲ ಅಂತ ಹೇಳಿ ಬಂದಿದ್ದೆ. ಅದಾದಮೇಲೆ ನಾನು ಕೈ ಎತ್ತಿದೆ. ಅದು ನನ್ನ ತಪ್ಪು. ಈ ಮೂಲಕ ನಾನು 'ಬಿಗ್ ಬಾಸ್' ಗೂ 'ಸಾರಿ' ಕೇಳುತ್ತೇನೆ'' - ಹುಚ್ಚ ವೆಂಕಟ್ ['ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.!]

    ಸುದೀಪ್ ವಾಪಸ್ ಬರಬೇಕು

    ಸುದೀಪ್ ವಾಪಸ್ ಬರಬೇಕು

    ''ಸುದೀಪ್ ಅವರಿಗೆ ಹೇಳ್ತೀನಿ.. ದಯವಿಟ್ಟು ಕಾರ್ಯಕ್ರಮ ನಡೆಸಿಕೊಡಬೇಕು. ಇಷ್ಟು ವರ್ಷ ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಿಕೊಂಡು ಬಂದಿದ್ದೀರಾ. ಇನ್ಮುಂದೆ ಕೂಡ ನಡೆಸಿಕೊಡಿ. ದಯವಿಟ್ಟು ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮವನ್ನ ನಡೆಸಿಕೊಡದೇ ಇರಬೇಡಿ. ಜನರ ಸಂತೋಷಕ್ಕೋಸ್ಕರ ನಡೆಸಿಕೊಡಿ. ನಾನು 'ಸಾರಿ' ಕೇಳಿದ್ದೀನಿ 'ಬಿಗ್ ಬಾಸ್' ಹಾಗೂ 'ಕಲರ್ಸ್ ಕನ್ನಡ'ದವರಿಗೆ. ಸುದೀಪ್ ಇರಬೇಕು ವೇದಿಕೆ ಮೇಲೆ... ನೀವೇ ನಡೆಸಿಕೊಡಬೇಕು..'' - ಹುಚ್ಚ ವೆಂಕಟ್ [ಅಷ್ಟಕ್ಕೂ, ಸಡನ್ನಾಗಿ ಹುಚ್ಚ ವೆಂಕಟ್ ಗೆ ಪಿತ್ತ ನೆತ್ತಿಗೇರಿದ್ದು ಯಾಕೆ.?]

    ವೇದಿಕೆ ಮೇಲೆ ಎಂಟ್ರಿ ಕೊಟ್ಟ ಸುದೀಪ್.!

    ವೇದಿಕೆ ಮೇಲೆ ಎಂಟ್ರಿ ಕೊಟ್ಟ ಸುದೀಪ್.!

    ಹುಚ್ಚ ವೆಂಕಟ್ ಬಹಿರಂಗವಾಗಿ ಕ್ಷಮೆ ಕೇಳಿದ ನಂತರ 'ಬಿಗ್ ಬಾಸ್' ವೇದಿಕೆ ಮೇಲೆ ಸುದೀಪ್ ಪ್ರತ್ಯಕ್ಷವಾದರು.

    ಸುದೀಪ್ ಏನಂದರು.?

    ಸುದೀಪ್ ಏನಂದರು.?

    ''ನ್ಯಾಯವನ್ನ ಉಳಿಸಿಕೊಳ್ಳದೇ ಇದ್ದರೆ, ನಮ್ಮನ್ನ ನ್ಯಾಯ ಉಳಿಸಿಕೊಳ್ಳುವುದು ಸಾಧ್ಯ ಇಲ್ಲ ಎಂಬ ಮಾತಿದೆ. ಒಂದು ತಪ್ಪು ಅಥವಾ ಒಂದು ಅಪರಾಧ ನಡೆದಾಗ ಒಂದೊಂದು ರೀತಿಯಲ್ಲಿ ನ್ಯಾಯ ಸಿಗಬಹುದು. ತಪ್ಪು ಮಾಡಿದವರಿಗೆ ಶಿಕ್ಷೆ ಎಂಬುದು ಒಂದು ರೀತಿಯ ನ್ಯಾಯ ಆದರೆ, ತಪ್ಪನ್ನ ಒಪ್ಪಿಕೊಂಡವರಿಗೆ ಕ್ಷಮೆ ಅನ್ನೋದು ಇನ್ನೊಂದು ನ್ಯಾಯ'' ಅಂತ ಹೇಳ್ತಾ ಸುದೀಪ್ ಮಾತು ಆರಂಭಿಸಿದರು.

    'ಬಿಗ್ ಬಾಸ್' ತೆಗೆದುಕೊಂಡ ನಿರ್ಧಾರದ ಬಗ್ಗೆ ಸುದೀಪ್ ಮಾತು

    'ಬಿಗ್ ಬಾಸ್' ತೆಗೆದುಕೊಂಡ ನಿರ್ಧಾರದ ಬಗ್ಗೆ ಸುದೀಪ್ ಮಾತು

    ''ಎಷ್ಟೊಂದು ನಿರ್ಧಾರಗಳನ್ನ ನಾವು ಒಳ್ಳೆಯ ಉದ್ದೇಶ ಇಟ್ಕೊಂಡು ತೆಗೆದುಕೊಳ್ಳುತ್ತೀವಿ. ಆದ್ರೆ, ಆ ನಿರ್ಧಾರದಿಂದ ಸರಿಯಾದ ರಿಸಲ್ಟ್ ಬಾರದೇ ಇದ್ದಾಗ.. ನೋಡುವವರ ದೃಷ್ಟಿಯಲ್ಲಿ ತೆಗೆದುಕೊಂಡ ನಿರ್ಧಾರವೇ ತಪ್ಪು... ಅನ್ನೋ ಈ ಅಭಿಪ್ರಾಯ ಹೊರಗೆ ಬರುತ್ತದೆ. ಈ ವಾರ 'ಬಿಗ್ ಬಾಸ್' ಆ ತರಹ ಒಂದು ನಿರ್ಧಾರ ತೆಗೆದುಕೊಂಡರು'' - ಕಿಚ್ಚ ಸುದೀಪ್

    ಸೆಕೆಂಡ್ ಚಾನ್ಸ್ ಕೊಟ್ಟರೂ ತಪ್ಪು ನಡೆದು ಹೋಯ್ತು.!

    ಸೆಕೆಂಡ್ ಚಾನ್ಸ್ ಕೊಟ್ಟರೂ ತಪ್ಪು ನಡೆದು ಹೋಯ್ತು.!

    ''ಕಳೆದ ಸೀಸನ್ ನಲ್ಲಿ ತಪ್ಪು ಮಾಡಿದ ವ್ಯಕ್ತಿಗೆ ಸೆಕೆಂಡ್ ಚಾನ್ಸ್ ಕೊಟ್ಟು ಮನೆ ಒಳಗೆ 'ಬಿಗ್ ಬಾಸ್' ಕಳುಹಿಸಿದರು. ಮಾಡಿರುವ ತಪ್ಪನ್ನ ಮತ್ತೆ ಮಾಡದೇ ಇರುವುದಕ್ಕೆ 'ಬಿಗ್ ಬಾಸ್' ಅವಕಾಶ ಮಾಡಿಕೊಟ್ಟರು. ಆದರೆ ಆ ಅವಕಾಶದಿಂದ ಈ ಸೀಸನ್ ನಲ್ಲಿ ಮತ್ತೊಮ್ಮೆ ತಪ್ಪು ನಡೆದು ಹೋಯ್ತು. ವೆಂಕಟ್ ಅವರು ಪ್ರಥಮ್ ರವರ ಮೇಲೆ ಹಲ್ಲೆ ಮಾಡಿರುವುದರ ಬಗ್ಗೆ ನಾನು ಮಾತನಾಡುತ್ತಿದ್ದೇನೆ'' - ಕಿಚ್ಚ ಸುದೀಪ್

    ಶಿಕ್ಷೆ ಆಗಬೇಕಾ.?

    ಶಿಕ್ಷೆ ಆಗಬೇಕಾ.?

    ''ಇದನ್ನ ಒಪ್ಪಿಕೊಳ್ಳುವುದಕ್ಕೆ ಸಾಧ್ಯ ಇಲ್ಲ ಅನ್ನೋದು ಒಂದು ಕಡೆ ಆದರೆ ಕಾನೂನಿನ ಪ್ರಕಾರ ಹೊಡೆದವರಿಗೆ ಶಿಕ್ಷೆ ಆಗಬೇಕು ಅನ್ನೋದು ಇನ್ನೊಂದು ಕಡೆ. ಶಿಕ್ಷೆ ಆಗಬೇಕು ಅಂದ್ರೆ ಹೊಡೆಸಿಕೊಂಡವರು ಕಂಪ್ಲೇಂಟ್ ಕೊಡಬೇಕು'' - ಕಿಚ್ಚ ಸುದೀಪ್

    ಕಂಪ್ಲೇಂಟ್ ಕೊಡ್ತಾರಾ ಪ್ರಥಮ್.?

    ಕಂಪ್ಲೇಂಟ್ ಕೊಡ್ತಾರಾ ಪ್ರಥಮ್.?

    ಹಲ್ಲೆ ನಡೆದ ನಾಲ್ಕನೇ ದಿನಕ್ಕೆ ಪ್ರಥಮ್ ಮನಸ್ಸಲ್ಲಿ ಏನು ನಡೆಯುತ್ತಿದೆ ಅಂತ ತಿಳಿದುಕೊಳ್ಳಲು 'ಬಿಗ್ ಬಾಸ್', ಪ್ರಥಮ್ ರವರನ್ನ ಕನ್ ಫೆಶನ್ ರೂಮ್ ಒಳಗೆ ಆಹ್ವಾನಿಸಿದರು. ''ವೆಂಕಟ್ ರವರ ಘಟನೆ ಮರೆತು ಮುಂದುವರೆಯಲು ಸಾಧ್ಯವಾಗುತ್ತಿದೆಯೇ.?'' ಅಂತ ಪ್ರಥಮ್ ಗೆ 'ಬಿಗ್ ಬಾಸ್' ಪ್ರಶ್ನೆ ಕೇಳಿದರು.

    ಪ್ರಥಮ್ ಪ್ರತಿಕ್ರಿಯೆ

    ಪ್ರಥಮ್ ಪ್ರತಿಕ್ರಿಯೆ

    ''ಖಂಡಿತ 'ಬಿಗ್ ಬಾಸ್'. ಅವತ್ತಿಗೆ ನಾನು ಆ ಘಟನೆಯನ್ನ ಮರೆತುಬಿಟ್ಟೆ'' ಅಂತ ಪ್ರಥಮ್ ಹೇಳಿದರು.

    ವೈಯುಕ್ತಿಕವಾಗಿ ಪರಿಗಣಿಸಿಲ್ಲ.!

    ವೈಯುಕ್ತಿಕವಾಗಿ ಪರಿಗಣಿಸಿಲ್ಲ.!

    ''ವೆಂಕಟ್ ಅವರು ನಿಮ್ಮ ಮೇಲೆ ದೈಹಿಕ ಹಲ್ಲೆ ಮಾಡಿದ್ದಕ್ಕೆ ನೀವು ಅವರ ಮೇಲೆ ಪೊಲೀಸ್ ದೂರು ದಾಖಲಿಸುವ ಅವಕಾಶ ಇದೆ. ದೂರು ದಾಖಲಿಸಲು ನಿಮಗೆ ಆಗುತ್ತದೆಯೇ.?'' ಅಂತ 'ಬಿಗ್ ಬಾಸ್' ಕೇಳಿದಾಗ, ''ನನಗೆ ದೂರು ದಾಖಲಿಸುವ ಉದ್ದೇಶ ಇಲ್ಲ. ಘಟನೆಯನ್ನ ನಾನು ವೈಯುಕ್ತಿಕವಾಗಿ ತೆಗೆದುಕೊಂಡಿಲ್ಲ. ಹುಚ್ಚ ವೆಂಕಟ್ ಮೇಲೆ ನನಗೆ ಯಾವುದೇ ಅಸಮಾಧಾನ ಇಲ್ಲ. ಘಟನೆ ನಡೆದ ಆ ಕ್ಷಣಕ್ಕೆ ನಾನು ಮರೆತುಬಿಟ್ಟಿದ್ದೇನೆ'' ಎಂದರು ಪ್ರಥಮ್.

    ವಿವಾದಕ್ಕೆ ಶುಭಂ.!

    ವಿವಾದಕ್ಕೆ ಶುಭಂ.!

    ''ಪ್ರಥಮ್ ಕಂಪ್ಲೇಂಟ್ ಕೊಡಲ್ಲ ಅಂದಿದ್ದಾರೆ. ವೆಂಕಟ್ ಕೂಡ ಕ್ಷಮೆ ಕೇಳಿದ್ದಾರೆ. ಕ್ಷಮೆ ಕೇಳುವುದಕ್ಕೂ ದೊಡ್ಡ ಮನಸ್ಸು ಬೇಕು. ಅವರೇ ಇಲ್ಲಿಗೆ ಬಂದು ಎಲ್ಲರಿಗೂ ಕ್ಷಮೆ ಕೇಳಿದ್ದಾರೆ. ನಿನ್ನೆ-ಮೊನ್ನೆ ಕೂಡ ಯ್ಯೂಟ್ಯೂಬ್ ನಲ್ಲೂ ವಿಡಿಯೋ ಮೂಲಕ ಕ್ಷಮೆ ಕೇಳಿದ್ದರು. ನಿಮ್ಮ ಮಾತಿಗೆ ಬೆಲೆ ಕೊಟ್ಟು 'ಬಿಗ್ ಬಾಸ್' ವೇದಿಕೆಗೆ ನಾನು ಬಂದಿದ್ದೇನೆ. ಇಟ್ ಮೀನ್ಸ್ ಎ ಲಾಟ್'' ಎನ್ನುತ್ತಾ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮ ಆರಂಭಿಸಿದರು ಕಿಚ್ಚ ಸುದೀಪ್

    English summary
    Huccha Venkat apologized Colors Kannada Channel and Kiccha Sudeep for his act of hitting Pratham in 'Bigg Boss Kannada-4'. Hence, Kiccha Sudeep gets back to Bigg Boss stage.
    Monday, November 21, 2016, 11:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X