»   » ಕೆಂಪು ಸ್ಕರ್ಟ್ ತೊಟ್ಟು 'ಕನ್ನಡ ರಾಜ್ಯೋತ್ಸವ' ಆಚರಿಸಿದ 'ಪಿರಿ ಪಿರಿ' ಪ್ರಥಮ್.!

ಕೆಂಪು ಸ್ಕರ್ಟ್ ತೊಟ್ಟು 'ಕನ್ನಡ ರಾಜ್ಯೋತ್ಸವ' ಆಚರಿಸಿದ 'ಪಿರಿ ಪಿರಿ' ಪ್ರಥಮ್.!

Posted by:
Subscribe to Filmibeat Kannada

'ಕನ್ನಡ ರಾಜ್ಯೋತ್ಸವ'ವನ್ನ ಅಪ್ಪಟ ಕನ್ನಡಿಗರು ಆಚರಿಸುವ ರೀತಿ ಗಿಂತ ಸ್ವಲ್ಪ ವಿಭಿನ್ನವಾಗಿ 'ಬಿಗ್ ಬಾಸ್' ಮನೆಯಲ್ಲಿ ಆಚರಿಸಿದವರು ನಿರ್ದೇಶಕ 'ಒಳ್ಳೆ ಹುಡುಗ' ಪ್ರಥಮ್.

ಮಾತ್ತೆತ್ತಿದರೆ 'ಖಂಡಿಸ್ತೀನಿ' ಅಂತ ಹೇಳುವ, ಆದಷ್ಟು ಕನ್ನಡದಲ್ಲೇ ಸ್ಪಷ್ಟವಾಗಿ ಮಾತನಾಡುವ ಪ್ರಥಮ್, ಹಳದಿ ಶರ್ಟ್ ಮತ್ತು ಕೆಂಪು ಸ್ಕರ್ಟ್ ತೊಟ್ಟು 'ಕನ್ನಡ ರಾಜ್ಯೋತ್ಸವ'ವನ್ನ ಡಿಫರೆಂಟ್ ಆಗಿ ಆಚರಿಸಿದರು.

ಪ್ರಥಮ್ ಅವತಾರ ನೋಡಿ....

ಪ್ರಥಮ್ ಅವತಾರ ನೋಡಿ....

ಹಳದಿ ಶರ್ಟ್ ಮತ್ತು ಕೆಂಪು ಬಣ್ಣದ ಸ್ಕರ್ಟ್ ತೊಟ್ಟಿರುವ ಪ್ರಥಮ್ ರವರ ಅವತಾರ ಹೇಗಿದೆ ಅಂತ ಸ್ವಲ್ಪ ನೋಡ್ಬಿಡಿ...

[ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಚಡ್ಡಿ ಇರ್ಲಿಲ್ವಂತೆ.!

ಚಡ್ಡಿ ಇರ್ಲಿಲ್ವಂತೆ.!

ಪ್ರಥಮ್ ಬಳಿ ಕೆಂಪು ಚಡ್ಡಿ ಇರ್ಲಿಲ್ವಂತೆ. ಹೀಗಾಗಿ, ಹೆಣ್ಮಕ್ಕಳ ಕೆಂಪು ಸ್ಕರ್ಟ್ ತೊಟ್ಟಿದ್ದರು ಪ್ರಥಮ್. [BBK4: ಪ್ರಥಮ್ ಮೇಲೆ ಮನೆಯವರ ಕಂಪ್ಲೈಂಟ್, ಕ್ಲಾಸ್ ತೆಗೆದುಕೊಂಡ ಕಿಚ್ಚ]

ಪೇಂಟ್ ಗಾಗಿ ಬೇಡಿಕೆ ಇಟ್ಟ ಪ್ರಥಮ್

ಪೇಂಟ್ ಗಾಗಿ ಬೇಡಿಕೆ ಇಟ್ಟ ಪ್ರಥಮ್

''ಇಂದು ಕನ್ನಡ ರಾಜ್ಯೋತ್ಸವ. ದಯವಿಟ್ಟು ಹಳದಿ ಮತ್ತು ಕೆಂಪು ಪೇಂಟ್ ಕೊಡಿ'' ಅಂತ 'ಬಿಗ್ ಬಾಸ್' ಬಳಿ ಪ್ರಥಮ್ ಬೇಡಿಕೆ ಇಟ್ಟರು. ['ಬಿಗ್ ಬಾಸ್ ಕನ್ನಡ-4' : ಈ ವಾರ ಗೇಟ್ ಪಾಸ್ ಯಾರಿಗೆ?]

ಅರಿಶಿನ-ಕುಂಕುಮಕ್ಕೆ ಕೈ ಹಾಕಿದ ಪ್ರಥಮ್

ಅರಿಶಿನ-ಕುಂಕುಮಕ್ಕೆ ಕೈ ಹಾಕಿದ ಪ್ರಥಮ್

ಹಳದಿ ಹಾಗೂ ಕೆಂಪು ಬಣ್ಣದ ಪೇಂಟ್ ನ 'ಬಿಗ್ ಬಾಸ್' ಕಳುಹಿಸಲಿಲ್ಲ. ಹೀಗಾಗಿ, ನೀರಲ್ಲಿ ಅರಿಶಿನ ಮತ್ತು ಕುಂಕುಮ ಕಲಿಸಿ, ಮುಖಕ್ಕೆ ಹಾಗೂ ಕೈಗೆ ಮೆತ್ತಿಕೊಂಡರು ಪ್ರಥಮ್.

ಕನ್ನಡ ರಾಜ್ಯೋತ್ಸವದ ಶುಭಾಶಯಗಳು.!

ಕನ್ನಡ ರಾಜ್ಯೋತ್ಸವದ ಶುಭಾಶಯಗಳು.!

ಮುಖದ ತುಂಬಾ ಹಳದಿ-ಕೆಂಪು ಬಣ್ಣ ಬಳ್ಕೊಂಡು, ಹಳದಿ ಶರ್ಟ್ ಮತ್ತು ಕೆಂಪು ಸ್ಕರ್ಟ್ ತೊಟ್ಟು ''ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು....ಕನ್ನಡ ರಾಜ್ಯೋತ್ಸವದ ಶುಭಾಶಯಗಳು'' ಅಂತ ಕೂಗುತ್ತಾ, ಪ್ರಥಮ್ ಮನೆ ತುಂಬಾ ಓಡಾಡಿದರು.

ಕ್ಲಾಸ್ ತೆಗೆದುಕೊಂಡ ಮೋಹನ್, ರೇಖಾ

ಕ್ಲಾಸ್ ತೆಗೆದುಕೊಂಡ ಮೋಹನ್, ರೇಖಾ

ವಾಶ್ ಬೇಸಿನ್ ನಲ್ಲಿ ಕುಂಕುಮದ ಕಲರ್ ಅಂಟಿದ್ದರಿಂದ, ಚೆನ್ನಾಗಿ ಕ್ಲೀನ್ ಮಾಡುವಂತೆ ಪ್ರಥಮ್ ಗೆ ನಟಿ ರೇಖಾ ಹಾಗೂ ಮೋಹನ್ ಕ್ಲಾಸ್ ತೆಗೆದುಕೊಂಡರು.

ಪ್ರಥಮ್ ರನ್ನ ಟುಸ್ ಮಾಡುತ್ತಾರಂತೆ ಕೀರ್ತಿ.!

ಪ್ರಥಮ್ ರನ್ನ ಟುಸ್ ಮಾಡುತ್ತಾರಂತೆ ಕೀರ್ತಿ.!

''ನಿಮಗೆ ಅಂತ ಫ್ಯಾನ್ ಫಾಲೋವರ್ಸ್ ಇದ್ದಾರೆ. ನೀವು ಅದರ ಲಾಭ ತೆಗೆದುಕೊಳ್ಳಿ. ಪ್ರಥಮ್ ರವರ ಸ್ಟ್ರಾಟೆಜಿ, ಎಲ್ಲರ ಮೇಲೂ Infulence ಆಗ್ತಿದೆ'' ಅಂತ ಶೀತಲ್ ಶೆಟ್ಟಿ ಹೇಳಿದಾಗ, ''ನಾನು ಮಾತಲ್ಲಿ ಉತ್ತರ ಕೊಡಬೇಕು ಅಂದ್ರೆ, ಟುಸ್ ಮಾಡಾಕ್ಬಿಡ್ತೀನಿ'' ಅಂತ ಕೀರ್ತಿ ಕುಮಾರ್ ಪ್ರತಿಕ್ರಿಯೆ ನೀಡಿದರು.

English summary
Bigg Boss Kannada 4, Week 4 : Director Pratham celebrated Kannada Rajyotsava in a Unique style.
Please Wait while comments are loading...

Kannada Photos

Go to : More Photos