»   » ಪ್ರಥಮ್ 5 ಬೇಡಿಕೆಗಳಲ್ಲಿ ಸುದೀಪ್ ಈಡೇರಿಸಿದ್ದು ಎಷ್ಟು?

ಪ್ರಥಮ್ 5 ಬೇಡಿಕೆಗಳಲ್ಲಿ ಸುದೀಪ್ ಈಡೇರಿಸಿದ್ದು ಎಷ್ಟು?

Posted by:
Subscribe to Filmibeat Kannada

ಒಳ್ಳೆ ಹುಡುಗ ಪ್ರಥಮ್, ಗ್ರ್ಯಾಂಡ್ ಫಿನಾಲೆ ವೇದಿಕೆಗೆ ಬರುವ ಮುಂಚೆ ಕಿಚ್ಚ ಸುದೀಪ್ ಅವರ ಮುಂದೆ 5 ಬೇಡಿಕೆಗಳನ್ನ ಇಟ್ಟಿದ್ದರು.

ಅವುಗಳಲ್ಲಿ ಕಿಚ್ಚ ಸುದೀಪ್ ಅವರು ಕೆಲವೊಂದನ್ನ ಫಿನಾಲೆ ವೇದಿಕೆಯಲ್ಲೇ ಈಡೇರಿಸಿದ್ದರು. ಇನ್ನೂ ಕೆಲವೊಂದನ್ನ ಬಾಕಿ ಉಳಿಸಿದ್ದಾರೆ.[ಸುದೀಪ್ ಮತ್ತು ಪ್ರಥಮ್ ಮೊದಲ ಭೇಟಿಯ ರೋಚಕ ಕಥೆ!]

ಅಷ್ಟಕ್ಕೂ, ಕಿಚ್ಚನ ಮುಂದೆ ಪ್ರಥಮ್ ಇಟ್ಟಿದ್ದ ಆ 5 ಬೇಡಿಕೆಗಳೇನು? ಅವುಗಳಲ್ಲಿ ಸುದೀಪ್ ಈಡೇರಿಸಿದ್ದೇಷ್ಟು? ಎಂಬುದು ಇಲ್ಲಿದೆ ನೋಡಿ.....

ಪ್ರಥಮ್ ಮೊದಲ ಬೇಡಿಕೆ!

ಪ್ರಥಮ್ ಮೊದಲ ಬೇಡಿಕೆ!

''ಬಿಗ್ ಬಾಸ್ ರೂಲ್ಸ್ ಬುಕ್ ನ ನಾನು ನಿಮ್ಮ ಕೈಯಿಂದ ವೇದಿಕೆ ಮೇಲೆ ಗಿಫ್ಟ್ ಆಗಿ ಪಡೆದುಕೊಳ್ಳಬೇಕು''?['ಬಿಗ್ ಬಾಸ್' ಮನೆಯಿಂದ ಹೊರಬರುವ ಮುನ್ನ 3 'ವರ' ಕೇಳಿದ ಪ್ರಥಮ್.!]

ಸುದೀಪ್ ಕೊಟ್ಟ ಗಿಫ್ಟ್!

ಸುದೀಪ್ ಕೊಟ್ಟ ಗಿಫ್ಟ್!

'ಬಿಗ್ ಬಾಸ್' ವೇದಿಕೆ ಮೇಲೆ ಪ್ರಥಮ್ ಅವರನ್ನ ಕರೆತಂದ ಸುದೀಪ್, ಅವರು ಕೇಳಿದ ಹಾಗೆ, 'ಬಿಗ್ ಬಾಸ್ ರೂಲ್ಸ್ ಬುಕ್ ನ್ನ ಉಡುಗೊರೆಯಾಗಿ ನೀಡಿದ್ರು.[ಪ್ರಥಮ್, ಮಾಳವಿಕಾ ಎಲಿಮಿನೇಷನ್ ನಾಟಕಕ್ಕೆ 'ಬಿಗ್' ಟ್ವಿಸ್ಟ್!]

ಒಳ್ಳೆ ಹುಡುಗನ ಎರಡನೇ ಬೇಡಿಕೆ!

ಒಳ್ಳೆ ಹುಡುಗನ ಎರಡನೇ ಬೇಡಿಕೆ!

ಹೊರಗಡೆ ಪ್ರಪಂಚದಲ್ಲಿ ಹೊಸ ನೋಟ್ ಬಂದಿದೆ ಅಂತ ನಮಗೆ ಹೇಳಿದವರೇ ನೀವು. ಅದು ಹೆಂಗಿದೆ ಅಂತ ನಾವು ನೋಡಿಲ್ಲ. ಪ್ರಥಮ ನೋಡುವ ಪ್ರಥಮ ನೋಟು ಸುದೀಪ್ ಜೇಬಿನಿಂದ ತೆಗೆದು ಕೊಡುವುದೇ ಆಗಿರಬೇಕು. ಇನ್ನು ಇಪ್ಪತ್ತು ವರ್ಷ ಬಿಟ್ಟು ನನಗೆ ನೀವು ಸಿಕ್ಕರೂ, ನನ್ನ ಹತ್ತಿರ ಆ ನೋಟು ಹಾಗೇ ಇರುತ್ತೆ.?

ಸುದೀಪ್ ಕೊಟ್ಟ ನೋಟು!

ಸುದೀಪ್ ಕೊಟ್ಟ ನೋಟು!

ಸುದೀಪ್ ಅವರು 2000 ರೂಪಾಯಿ ನೋಟು ಮತ್ತು 500 ರೂಪಾಯಿ ನೋಟನ್ನ ಪ್ರಥಮ್ ಗೆ ನೀಡಿದ್ರು.

ಮೂರನೇ ಆಸೆ!

ಮೂರನೇ ಆಸೆ!

''ಪ್ರತಿ ಶನಿವಾರ ಬಂದು ಹೌದು/ಇಲ್ಲ ಆಟವಾಡಿಸುತ್ತೀರಾ. ಈಗ ನಾನು ವೇದಿಕೆ ಮೇಲೆ ಬಂದು ನಿಮಗೆ ಹೌದು/ಇಲ್ಲ ಪ್ರಶ್ನೆಗಳನ್ನು ಕೇಳುತ್ತೇನೆ. ನೀವು ಬೋರ್ಡ್ ಹಿಡಿಯಬೇಕು''? ಎಂದ ಆಸೆ ವ್ಯಕ್ತಪಡಿಸಿದ್ದಾರೆ.[ಕಿಚ್ಚ ಸುದೀಪ್ ಮುಂದೆ ಅಳಲು ತೋಡಿಕೊಂಡ 'ಪ್ರಕೃತಿ ವಿಕೋಪ' ಪ್ರಥಮ್.!]

'ಲಾರ್ಡ್ ಪ್ರಥಮ್ ಸರ್' ನಾಲ್ಕನೇ ಬೇಡಿಕೆ!

'ಲಾರ್ಡ್ ಪ್ರಥಮ್ ಸರ್' ನಾಲ್ಕನೇ ಬೇಡಿಕೆ!

''ನನಗೆ ಬಂದಿರುವ ಎಲ್ಲ ಲೆಟರ್ ಗಳನ್ನೂ ಕೊಡಬೇಕು.'' ಎಂದು ಕೇಳಿಕೊಂಡಿದ್ದರು.

ಪ್ರಥಮ್ ಇಟ್ಟ ಕೊನೆಯ ಬೇಡಿಕೆ!

ಪ್ರಥಮ್ ಇಟ್ಟ ಕೊನೆಯ ಬೇಡಿಕೆ!

'' ನಾನು ನಿಮ್ಮ ಜೊತೆ ಮಾತನಾಡಬೇಕು? ಎಂಬ ಕೊನೆಯ ಬೇಡಿಕೆಯನ್ನ ಮುಂದಿಟ್ಟಿದ್ದರು.[ಖುಷಿಯಿಂದ ಪ್ರಥಮ್ ಕುಣಿದಾಡಿದ್ದಕ್ಕೆ ಗರಂ ಆದ ಕಿಚ್ಚ ಸುದೀಪ್.!]

ಈಡೇರಿದ್ದೇಷ್ಟು? ಈಡೇರಬೇಕಾಗಿರುವುದು ಎಷ್ಟು?

ಈಡೇರಿದ್ದೇಷ್ಟು? ಈಡೇರಬೇಕಾಗಿರುವುದು ಎಷ್ಟು?

ಪ್ರಥಮ್ ಕೇಳಿದ ಐದು ಬೇಡಿಕೆಗಳಲ್ಲಿ 'ಬಿಗ್ ಬಾಸ್' ವೇದಿಕೆ ಮೇಲೆ ಎರಡು ಬೇಡಿಕೆಗಳು ನೆರೆವೇರಿದವು. ಉಳಿದ ಬೇಡಿಕೆಗಳು ಹಾಗೆ ಉಳಿದುಕೊಂಡಿವೆ. ಬಹುಶಃ ಅವು ಕೂಡ ಈಡೇರುವ ಸಾಧ್ಯತೆಯಿದೆ.

English summary
Before entering Bigg Boss Kannada 4 Grand Finale stage, 'Olle Huduga' Pratham placed 5 demands in front of Kiccha Sudeep. Did Sudeep fulfill Pratham's desire.? Read the article to know the answer.
Please Wait while comments are loading...

Kannada Photos

Go to : More Photos