»   » 'ಬಿಗ್ ಬಾಸ್' ಗೆದ್ರೆ ಕನ್ನಡಿಗರಿಗಾಗಿ ಪ್ರಥಮ್ ಏನ್ ಮಾಡ್ಬಹುದು.?

'ಬಿಗ್ ಬಾಸ್' ಗೆದ್ರೆ ಕನ್ನಡಿಗರಿಗಾಗಿ ಪ್ರಥಮ್ ಏನ್ ಮಾಡ್ಬಹುದು.?

Written by: ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ಸಿಬ್ಬಂದಿ
Subscribe to Filmibeat Kannada

ಪ್ರತಿ ಬಾರಿ ಎಲಿಮಿನೇಷನ್ ನಿಂದ ಸೇಫ್ ಆದಾಗ... ಟಾಸ್ಕ್ ನಲ್ಲಿ ಗೆದ್ದಾಗ... 'ಒಳ್ಳೆ ಹುಡುಗ' ಪ್ರಥಮ್ ಬಾಯಲ್ಲಿ ಬರುವ ಮಾತು ಒಂದೇ.. ಅದೇ... ''ಇದು ನನ್ನ ಗೆಲುವಲ್ಲ, ಕನ್ನಡಿಗರ ಗೆಲುವು!''

ಕನ್ನಡ ನಾಡು-ನುಡಿ, ಜನತೆ ಬಗ್ಗೆ ಅಪಾರ ಅಭಿಮಾನ ಹೊಂದಿರುವ 'ಒಳ್ಳೆ ಹುಡುಗ' ಪ್ರಥಮ್, ಒಂದ್ವೇಳೆ 'ಬಿಗ್ ಬಾಸ್' ಗೆದ್ದರೆ ಕನ್ನಡಿಗರಿಗೋಸ್ಕರ ಏನು ಮಾಡಬಹುದು ಎಂಬ ಪ್ರಶ್ನೆ ಅನೇಕರಿಗೆ ಕಾಡಿರಬಹುದು.[ವಿಡಿಯೋ: 'ಬಿಗ್ ಬಾಸ್' ಸ್ಪರ್ಧಿಗಳ ಮೇಲೆ ಪತ್ರಕರ್ತರು ತೂರಿದ ಪ್ರಶ್ನೆಗಳ ಬಾಣ.!]

BBK4: Pratham's service for Kannadigas after winning the show

ಇದೇ ಪ್ರಶ್ನೆಯನ್ನ ಪ್ರಜಾವಾಣಿ ವರದಿಗಾರ್ತಿ ರೋಹಿಣಿ, ಪ್ರಥಮ್ ಗೆ ನೇರವಾಗಿ ಕೇಳಿದರು. ಅದಕ್ಕೆ ಪ್ರಥಮ್ ಕೊಟ್ಟ ಉತ್ತರ - ''ಹದಿಮೂರು ವಾರ ಜನ ನನ್ನನ್ನ ಉಳಿಸಿದ್ದಾರೆ. ಹೀಗಾಗಿ ಜನರಿಗೆ ನಾನು ಕ್ರೆಡಿಟ್ ಕೊಡ್ತಾಯಿದ್ದೇನೆ. ಟಾಸ್ಕ್ ಗೆದ್ದಾಗ ಕೂಡ ಕನ್ನಡಿಗರಿಗೆ ಕ್ರೆಡಿಟ್ ಕೊಟ್ಟಿದ್ದೇನೆ. ನಾನು ಟಿ.ನರಿಸೀಪುರ, ಕೊಳ್ಳೇಗಾಲದಲ್ಲಿ ಓದಿದ್ದು. ಈಗಲೂ ನಮ್ಮ ಕಡೆ ಎಷ್ಟೋ ಮನೆಗಳಲ್ಲಿ ಟಿವಿ ಇಲ್ಲ. ಅಷ್ಟೂ ಕುಗ್ರಾಮ ನಮ್ಮದು. ಈಗಲೂ ನಮ್ಮ ಕಡೆ ಮಳೆ-ಬೆಳೆ ನಂಬಿಕೊಂಡು ಬದುಕುತ್ತಿದ್ದೇವೆ. ಬೀದಿ ದೀಪ ಕೂಡ ಇಲ್ಲ. ಇದನ್ನೆಲ್ಲ ಬದಲಾಯಿಸುವುದಕ್ಕೆ ಈ ವೇದಿಕೆ ನನಗೆ ದನಿ ಆಗಬಹುದು ಎಂಬ ಮಹತ್ತರ ಆಸೆ ಇಟ್ಟುಕೊಂಡಿದ್ದೇನೆ.''

English summary
Bigg Boss Kannada 4: Day 105, Kannada Director Pratham is ready to serve for Kannadigas after Winning Bigg Boss Kannada reality show.
Please Wait while comments are loading...

Kannada Photos

Go to : More Photos