»   » ಪ್ರಥಮ್ ಗೆ 'ಸರ್ವಾಧಿಕಾರ': 'ಬಿಗ್ ಬಾಸ್'ನ ಹೊಗಳಿ ಅಟ್ಟಕ್ಕೆ ಏರಿಸಿದ ವೀಕ್ಷಕರು.!

ಪ್ರಥಮ್ ಗೆ 'ಸರ್ವಾಧಿಕಾರ': 'ಬಿಗ್ ಬಾಸ್'ನ ಹೊಗಳಿ ಅಟ್ಟಕ್ಕೆ ಏರಿಸಿದ ವೀಕ್ಷಕರು.!

Posted by:
Subscribe to Filmibeat Kannada

''ಬಿಗ್ ಬಾಸ್' ಸ್ಕ್ರಿಪ್ಟೆಡ್ ಶೋ.. ಯಾರು ಗೆಲ್ತಾರೆ ಅನ್ನೋದು ಪೂರ್ವ ನಿರ್ಧಾರಿತ. ಕೆಲವರ ಪರ 'ಬಿಗ್ ಬಾಸ್' ಫೇವರ್ ಮಾಡ್ತಾರೆ. ಬೇಕು ಅಂತ ಪಕ್ಷಪಾತ ನಡೆಸುತ್ತಾರೆ'' ಎಂಬೆಲ್ಲ ಗಂಭೀರ ಆರೋಪಗಳು 'ಬಿಗ್ ಬಾಸ್' ವಿರುದ್ಧ ಕೇಳಿಬಂದಿತ್ತು. ಇಂತಹ ಆರೋಪಗಳನ್ನ ಮಾಡಿದವರು ಸ್ವತಃ 'ಬಿಗ್ ಬಾಸ್' ಕಾರ್ಯಕ್ರಮವನ್ನ ಬಿಟ್ಟೂಬಿಡದೆ ನೋಡುವ ವೀಕ್ಷಕರೇ.!

'ಬಿಗ್ ಬಾಸ್'ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಬಾರಿ ವೀಕ್ಷಕರೇ ಛೀಮಾರಿ ಹಾಕಿರುವ ನಿದರ್ಶನಗಳು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಅಂಥದ್ರಲ್ಲಿ, ಬಹುಶಃ ಇದೇ ಮೊದಲ ಬಾರಿಗೆ ವೀಕ್ಷಕರು 'ಬಿಗ್ ಬಾಸ್'ನ ಹೊಗಳಿ ಅಟ್ಟಕ್ಕೆ ಏರಿಸಿದ್ದಾರೆ. ಅದು 'ಒಳ್ಳೆ ಹುಡುಗ' ಪ್ರಥಮ್ ನಿಂದಾಗಿ.!

ಹೌದು, 'ಬಿಗ್ ಬಾಸ್' ಮನೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿ, ಪ್ರಥಮ್ ಗೆ ಈ ವಾರ 'ಸರ್ವಾಧಿಕಾರ' ಕೊಟ್ಟಿರುವ 'ಬಿಗ್ ಬಾಸ್' ನಡೆಗೆ ವೀಕ್ಷಕರು ಭೇಷ್ ಎನ್ನುತ್ತಿದ್ದಾರೆ. ಪ್ರಥಮ್ ರವರಿಗೆ 'ದಂಡನಾಯಕ'ನ ಪಟ್ಟ ಕೊಟ್ಟಿರುವ 'ಬಿಗ್ ಬಾಸ್' ಬಗ್ಗೆ 'ಕಲರ್ಸ್ ಕನ್ನಡ' ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿ ವೀಕ್ಷಕರು ಶಹಬ್ಬಾಸ್ ಹೇಳುತ್ತಿರುವ ಕಾಮೆಂಟ್ ಗಳ ಕಲೆಕ್ಷನ್ ಇಲ್ಲಿದೆ ನೋಡಿ....

'ಬಿಗ್ ಬಾಸ್'ಗೆ 'ಬಿಗ್ ಥ್ಯಾಂಕ್ಸ್'

'ಬಿಗ್ ಬಾಸ್'ಗೆ 'ಬಿಗ್ ಥ್ಯಾಂಕ್ಸ್'

''ಬಿಗ್ ಬಾಸ್' ಮನೆಯಲ್ಲಿರೋರು ಪ್ರಥಮ್ ನ ಕ್ಯಾಪ್ಟನ್ ಮಾಡಲ್ಲ ಅಂತ ಗೊತ್ತಿತ್ತು. ಅದಕ್ಕೆ ಅವರನ್ನ ದಂಡನಾಯಕರನ್ನಾಗಿ ಮಾಡಿದಕ್ಕೆ ಥ್ಯಾಂಕ್ಸ್ ಎ ಲಾಟ್'' ಅಂತ ವೀಕ್ಷಕರು 'ಬಿಗ್ ಬಾಸ್'ಗೆ ಧನ್ಯವಾದ ಸಲ್ಲಿಸಿದ್ದಾರೆ. ['ಪ್ರಥಮ್' ಸಾಮ್ರಾಜ್ಯದಲ್ಲಿ ಮೇಳೈಸುತ್ತಿವೆ ಘೋಷ ವಾಕ್ಯಗಳು]

ಅಸಲಿ ಆಟ ಈಗ ಶುರು ಆಗಿದೆ.!

ಅಸಲಿ ಆಟ ಈಗ ಶುರು ಆಗಿದೆ.!

ಪ್ರಥಮ್ ಗೆ ಸರ್ವಾಧಿಕಾರ ಕೊಟ್ಟಿರುವುದರಿಂದ ಅಸಲಿ ಆಟ ಈಗ ಶುರು ಆಗಿದೆ ಅಂತ ವೀಕ್ಷಕರು ಫುಲ್ ಖುಷ್ ಆಗಿದ್ದಾರೆ. [ನಿಯಮ ಮುರಿದರೆ.. ಸ್ಪರ್ಧಿಗಳಿಗೆ ಕಾದಿದೆ ಅತಿ ಘೋರ ಶಿಕ್ಷೆ.!]

ಇದು ಹವಾ ಅಂದ್ರೆ..!

ಇದು ಹವಾ ಅಂದ್ರೆ..!

''ಹುಚ್ಚ ವೆಂಕಟ್ ಅಲ್ಲ. ಇದು ಹವಾ ಅಂದ್ರೆ. ಪ್ರಥಮ್ ಕ್ಯಾಪ್ಟನ್ ಆಗ್ಲಿಲ್ಲ. ಆದ್ರೆ ಕಿಂಗ್'' ಅಂತ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. [ಪ್ರಥಮ್ ಈಗ 'ಸರ್ವಾಧಿಕಾರಿ': 'ಬಿಗ್ ಬಾಸ್' ಮನೆ ಸದಸ್ಯರಿಗೆ ಉರಿ ಉರಿ]

ಶೋ ಪ್ಲಾನ್ ಮಾಡಿರೋರಿಗೆ ಹ್ಯಾಟ್ಸ್ ಆಫ್.!

ಶೋ ಪ್ಲಾನ್ ಮಾಡಿರೋರಿಗೆ ಹ್ಯಾಟ್ಸ್ ಆಫ್.!

'ತುರ್ತು ಪರಿಸ್ಥಿತಿ' ಜಾರಿಗೆ ತಂದಿರುವ 'ಬಿಗ್ ಬಾಸ್' ಪ್ಲಾನ್ ಗೆ ವೀಕ್ಷಕರು ಹ್ಯಾಟ್ಸ್ ಆಫ್ ಎಂದಿದ್ದಾರೆ. ['ದಂಡನಾಯಕ' ಪ್ರಥಮ್: ಈ ವಾರ ಪೂರಾ 'ದಂಡಂ ದಶಗುಣಂ']

ಪಕ್ಷಪಾತ ಮಾಡುತ್ತಿಲ್ಲ.!

ಪಕ್ಷಪಾತ ಮಾಡುತ್ತಿಲ್ಲ.!

''ಪ್ರಥಮ್ ಗೆ ಅಧಿಕಾರ ಸಿಕ್ಕಿದ್ರೂ, ಎಲ್ಲರನ್ನೂ ಸಮಾನವಾಗಿ ನೋಡುತ್ತಿದ್ದಾರೆ'' ಎಂಬುದು ವೀಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ. [ಡೆಡ್ಲಿ ಡಿಕ್ಟೇಟರ್: ಎಲ್ಲೆಲ್ಲೂ 'ಪ್ರಥಮ್' ಟಾಪ್ ಟ್ರೆಂಡಿಂಗ್]

ಇಂಡಿಯಾ-ಪಾಕಿಸ್ತಾನ ಮ್ಯಾಚ್ ಇದ್ದಾಗಲೂ...

ಇಂಡಿಯಾ-ಪಾಕಿಸ್ತಾನ ಮ್ಯಾಚ್ ಇದ್ದಾಗಲೂ...

''ಇಂಡಿಯಾ-ಪಾಕಿಸ್ತಾನ ಮ್ಯಾಚ್ ಇದ್ದಾಗಲೂ ಇಷ್ಟೊಂದು ಲೈಕ್-ಕಾಮೆಂಟ್ ಬಂದಿರ್ಲಿಲ್ಲ. ಹೈ ವೋಲ್ಟೇಜ್ ಎಪಿಸೋಡ್ ಗಾಗಿ ಎಲ್ಲರೂ ಕಾಯ್ತಿದ್ದಾರೆ'' ಎಂಬ ಕಾಮೆಂಟ್ ಗಳೇ ಹೆಚ್ಚು.

ಸರಿಯಾಗಿ ಪಾಠ ಕಲಿಸಬೇಕು.!

ಸರಿಯಾಗಿ ಪಾಠ ಕಲಿಸಬೇಕು.!

''ಶಾಲನಿ, ಕೀರ್ತಿ, ನಿರಂಜನ್, ಶೀತಲ್ ಗೆ ಪ್ರಥಮ್ ಸರಿಯಾಗಿ ಪಾಠ ಕಲಿಸಬೇಕು'' ಅಂತ ಕೆಲವರು ಕಾಮೆಂಟ್ ಮಾಡಿದ್ದಾರೆ.

ಯಾಕ್ ಅರ್ಥ ಆಗ್ತಿಲ್ಲ.?

ಯಾಕ್ ಅರ್ಥ ಆಗ್ತಿಲ್ಲ.?

''ಹೊರಗಡೆ ಕೂತ್ಕೊಂಡು ಶೋ ನೋಡ್ತಾ ಇರೋರು ಪ್ರಥಮ್ ನ ಅರ್ಥ ಮಾಡಿಕೊಂಡಿದ್ದಾರೆ. ಆದ್ರೆ ಒಳಗಡೆ ಇರೋರು ಯಾಕೆ ಅವರನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ'' ಎಂಬ ಪ್ರಶ್ನೆ ಅನೇಕರನ್ನ ಕಾಡುತ್ತಿದೆ.

ಬಿಡಬೇಡ ಪ್ರಥಮ್...

ಬಿಡಬೇಡ ಪ್ರಥಮ್...

''ಪ್ರಥಮ್ ಚಿಂದಿ ಉಡಾಯ್ಸು... ಬಿಡಬೇಡ. ಬಿಲ್ಡಪ್ ತೆಗೆದುಕೊಳ್ಳುತ್ತಿರುವವರನ್ನ ಬಿಡಬೇಡ'' ಅಂತ ಕೆಲವರು ಪ್ರಥಮ್ ಗೆ ಸಲಹೆ ಕೂಡ ಕೊಟ್ಟಿದ್ದಾರೆ.

ಪ್ರಥಮ್ ರಾಕಿಂಗ್.!

ಪ್ರಥಮ್ ರಾಕಿಂಗ್.!

ಫೇಸ್ ಬುಕ್ ತುಂಬಾ ಪ್ರಥಮ್ ಹವಾ....

ಕಾಮೆಂಟ್ಸ್ ಸುರಿಮಳೆ

ಕಾಮೆಂಟ್ಸ್ ಸುರಿಮಳೆ

ಪ್ರಥಮ್ ಕಮಾಂಡರ್ ಆಗಿದ್ದಕ್ಕೆ ವೀಕ್ಷಕರಿಗೆ ಸಖತ್ ಸಂತೋಷ ಆಗಿದೆ ಎನ್ನುವುದಕ್ಕೆ ಈ ಕಾಮೆಂಟ್ ಗಳೇ ಸಾಕ್ಷಿ.

'ಫಿಟ್ಟಿಂಗ್ ಮಾಸ್ಟರ್' ಮೋಹನ್ ನ ಬಿಡಬೇಡ.!

'ಫಿಟ್ಟಿಂಗ್ ಮಾಸ್ಟರ್' ಮೋಹನ್ ನ ಬಿಡಬೇಡ.!

''ಫಿಟ್ಟಿಂಗ್ ಮಾಸ್ಟರ್, ಡಬಲ್ ಗೇಮರ್ ಮೋಹನ್ ನ ಯಾವುದೇ ಕಾರಣಕ್ಕೂ ಬಿಡಬೇಡ'' ಅಂತ ಪ್ರಥಮ್ ಗೆ ಸಲಹೆ ಕೊಡುವವರ ಸಂಖ್ಯೆ ಕಮ್ಮಿ ಏನಿಲ್ಲ.

ಪ್ರಥಮ್ ವಿನ್ನರ್.!

ಪ್ರಥಮ್ ವಿನ್ನರ್.!

''ಪ್ರಥಮ್ ಯಾರು ಅನ್ನೋದೇ ಜನಕ್ಕೆ ಗೊತ್ತಿರಲಿಲ್ಲ. ಆದ್ರೆ ಅದೇ ಜನ ಈ ತರಹ ಇಷ್ಟ ಪಡ್ತಾರೆ ಅಂದ್ರೆ ಅವರು ಆಗ್ಲೇ ವಿನ್ನರ್'' ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.

ನರಕ ದರ್ಶನ.!

ನರಕ ದರ್ಶನ.!

''ಪ್ರಥಮ್ ದಂಡನಾಯಕ ಆಗಿರೋದ್ರಿಂದ ಈ ವಾರ ಗ್ರೂಪಿಸಂ ಇರಲ್ಲ. ನರಕ ದರ್ಶನ ಗ್ಯಾರೆಂಟಿ''

ಪ್ರಥಮ್ ಚೆನ್ನಾಗಿ ನಿಭಾಯಿಸುತ್ತಿದ್ದಾರೆ.!

ಪ್ರಥಮ್ ಚೆನ್ನಾಗಿ ನಿಭಾಯಿಸುತ್ತಿದ್ದಾರೆ.!

''ಕೊಟ್ಟಿರುವ ಟಾಸ್ಕ್ ನ ಪ್ರಥಮ್ ಚೆನ್ನಾಗಿ ನಿಭಾಯಿಸಿದ್ದಾರೆ. ಭುವನ್ ನ ಸಂಜನಾ ಅಣ್ಣ ಅಂತ ಕರೆಯುವುದು ಮಜಾ ಇತ್ತು'' ಅಂತ ಕೆಲವರು ಕಾಮೆಂಟ್ ಮಾಡಿದ್ದಾರೆ.

ಪ್ರಥಮ್ ವರ್ಲ್ಡ್ ರೆಕಾರ್ಡ್ ಮಾಡ್ತಾರೆ

ಪ್ರಥಮ್ ವರ್ಲ್ಡ್ ರೆಕಾರ್ಡ್ ಮಾಡ್ತಾರೆ

''ಪ್ರಥಮ್ ಕೀರ್ತಿ ಜೊತೆ ಎಷ್ಟೇ ಜಗಳ ಆಡಿದ್ರೂ ಒಂದ್ಸಲ ನಾಮಿನೇಟ್ ಮಾಡಿಲ್ಲ. ಆದ್ರೆ ಕೀರ್ತಿ ಮತ್ತು ಇತರರು ಕಾರಣ ಇಲ್ಲದೇ ಸುಮ್ನೆ ಪ್ರಥಮ್ ನ ನಾಮಿನೇಟ್ ಮಾಡ್ತಾರೆ. ಪಕ್ಕಾ ಪ್ರಥಮ್ 14 ಬಾರಿ ನಾಮಿನೇಟ್ ಆಗಿ ಸೇಫ್ ಆಗಿ ವರ್ಲ್ಡ್ ರೆಕಾರ್ಡ್ ಕ್ರಿಯೇಟ್ ಮಾಡ್ತಾರೆ'' ಅಂತ 'ಒಳ್ಳೆ ಹುಡುಗ' ಪ್ರಥಮ್ ಒಳ್ಳೆತನಕ್ಕೆ ಕೆಲವರು ಎಕ್ಸಾಂಪಲ್ ಕೂಡ ಕೊಟ್ಟಿದ್ದಾರೆ.

English summary
Bigg Boss Kannada 4, Week 8 : 'Bigg Boss' viewers have taken 'Colors Kannada' facebook page to thank 'Bigg Boss' for making Kannada Director Pratham as 'Dictator' this week.
Please Wait while comments are loading...

Kannada Photos

Go to : More Photos