»   » ಕಮಾಂಡೋ ಶಾಲಿನಿಗೆ 'ಲಾರ್ಡ್' ಪ್ರಥಮ್ ಕೊಟ್ಟ ಕಠೋರ ಶಿಕ್ಷೆ

ಕಮಾಂಡೋ ಶಾಲಿನಿಗೆ 'ಲಾರ್ಡ್' ಪ್ರಥಮ್ ಕೊಟ್ಟ ಕಠೋರ ಶಿಕ್ಷೆ

Posted by:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಶುರು ಆದಾಗಿನಿಂದಲೂ 'ಒಳ್ಳೆ ಹುಡುಗ' ಪ್ರಥಮ್ ಗೂ ನಟಿ ಶಾಲಿನಿಗೂ ಅಷ್ಟಕಷ್ಟೆ. ಪ್ರಥಮ್ ಬಗ್ಗೆ ಮೊದಲಿನಿಂದಲೂ ಆರೋಪ ಮಾಡುತ್ತಲೇ ಬಂದಿರುವ ಶಾಲಿನಿ ಈ ವಾರ 'ದಂಡನಾಯಕ' ಪ್ರಥಮ್ ಗೆ ಕಮಾಂಡೋ ಆಗಿದ್ದಾರೆ.

'ಲಾರ್ಡ್ ಪ್ರಥಮ್ ಸರ್' ಮಾಡಿದ ಎಲ್ಲಾ ಆಜ್ಞೆಗಳನ್ನೂ ಚಾಚೂ ತಪ್ಪದೆ ಪಾಲಿಸಿದ ಕಮಾಂಡೋ ಶಾಲಿನಿ, ಅಪಹಾಸ್ಯ ಮಾಡಿದರು ಎಂಬಕಾರಣಕ್ಕೆ ಕಠೋರ ಶಿಕ್ಷೆಗೆ ಒಳಗಾದರು.

ಶಾಲಿನಿ ಅಪಹಾಸ್ಯ ಮಾಡಿದ್ದನ್ನ ನೋಡಿದ ಪ್ರಥಮ್.!

ಶಾಲಿನಿ ಅಪಹಾಸ್ಯ ಮಾಡಿದ್ದನ್ನ ನೋಡಿದ ಪ್ರಥಮ್.!

'ಸರ್ವಾಧಿಕಾರಿ' ಆಗಿರುವ 'ಲಾರ್ಡ್ ಪ್ರಥಮ್ ಸರ್'ಗೆ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುವ 'ಲೈವ್' ವ್ಯವಸ್ಥೆಯನ್ನು 'ಬಿಗ್ ಬಾಸ್' ಮಾಡಿಕೊಟ್ಟಿದ್ದಾರೆ. ಆ ಮೂಲಕ ಮನೆಯೊಳಗೆ ನಿರಂಜನ್ ಜೊತೆ ಸೇರಿ ಶಾಲಿನಿ ತಮ್ಮ ಬಗ್ಗೆ ಅಪಹಾಸ್ಯ ಮಾಡಿದ್ದನ್ನ ಪ್ರಥಮ್ ನೋಡಿಬಿಟ್ಟರು. [ಪ್ರಥಮ್ ಗೆ 'ಸರ್ವಾಧಿಕಾರ': 'ಬಿಗ್ ಬಾಸ್'ನ ಹೊಗಳಿ ಅಟ್ಟಕ್ಕೆ ಏರಿಸಿದ ವೀಕ್ಷಕರು.!]

ಹಾಡು ಹಾಡಿದ ಶಾಲಿನಿ

ಹಾಡು ಹಾಡಿದ ಶಾಲಿನಿ

'ಲಾರ್ಡ್ ಪ್ರಥಮ್ ಸರ್' ಮುಂದೆ ಹಾಡು ಹಾಡಿದ ಬಳಿಕ ತಪ್ಪು ಹುಡುಕಿದ ಪ್ರಥಮ್ ಶಾಲಿನಿಗೆ ಶಿಕ್ಷೆ ವಿಧಿಸಿದರು. [ಪ್ರಥಮ್ ಈಗ 'ಸರ್ವಾಧಿಕಾರಿ': 'ಬಿಗ್ ಬಾಸ್' ಮನೆ ಸದಸ್ಯರಿಗೆ ಉರಿ ಉರಿ]

ಶಾಲಿನಿ ಮಾಡಿದ ತಪ್ಪೇನು.?

ಶಾಲಿನಿ ಮಾಡಿದ ತಪ್ಪೇನು.?

''ಹಾಡು ಅದ್ಭುತವಾಗಿತ್ತು. ಆದರೆ ಹಾಡಲ್ಲಿ 'ಇಷ್ಟ ಇಲ್ದೇ ಇದ್ದರೂ ಇಲ್ಲಿ ನೀನೇ ದೊರೆ'. ನನ್ನನ್ನ ಇಷ್ಟ ಪಡೆದ ಇದ್ದರೆ ನನ್ನ ರಾಜ್ಯ, ಆಡಳಿತದಲ್ಲಿ ಅವರು ನೀವು ಹೇಗೆ ಇದ್ದೀರಾ?'' ಅಂತ ಶಿಕ್ಷೆ ಘೋಷಣೆ ಮಾಡಿದರು 'ಲಾರ್ಡ್ ಪ್ರಥಮ್ ಸರ್'. ['ದಂಡನಾಯಕ' ಪ್ರಥಮ್: ಈ ವಾರ ಪೂರಾ 'ದಂಡಂ ದಶಗುಣಂ']

ಶಾಲಿನಿಗೆ ಸಿಕ್ಕ ಶಿಕ್ಷೆ ಏನು.?

ಶಾಲಿನಿಗೆ ಸಿಕ್ಕ ಶಿಕ್ಷೆ ಏನು.?

'ಸ್ವಿಮ್ಮಿಂಗ್ ಪೂಲ್ ನೀರನ್ನ ಬಾಯಲ್ಲಿ ಮುಕ್ಕಳಿಸಿ, ಬಕೆಟ್ ಗೆ ತುಂಬುವ' ಕಠಿಣ ಶಿಕ್ಷೆ ಶಾಲಿನಿಗೆ ಸಿಕ್ತು.

ನಿರಂಜನ್ ಗೂ ಶಿಕ್ಷೆ

ನಿರಂಜನ್ ಗೂ ಶಿಕ್ಷೆ

'ಲಾರ್ಡ್ ಪ್ರಥಮ್ ಸರ್' ಜೊತೆ ಮಾತನಾಡುವಾಗ ಕೋರೆ ಹಲ್ಲು ಮುಚ್ಕೊಂಡು ಮಾತನಾಡಲಿಲ್ಲ ಎಂಬ ಕಾರಣಕ್ಕೆ ಮೂರು ಬಾರಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗುವ ಶಿಕ್ಷೆ ನಿರಂಜನ್ ಗೆ ಲಭಿಸಿತು.

English summary
Bigg Boss Kannada 4, Week 8 : 'Dictator' Pratham punishes Actress Shalini and Niranjan Deshpande.
Please Wait while comments are loading...

Kannada Photos

Go to : More Photos