»   » 'ಸಂಜನಾ-ಭುವನ್' ಪಾಲಿಗೆ ವಿಲನ್ ಆಯ್ತು ಪ್ರಥಮ್ ಪ್ರೀತಿ.!

'ಸಂಜನಾ-ಭುವನ್' ಪಾಲಿಗೆ ವಿಲನ್ ಆಯ್ತು ಪ್ರಥಮ್ ಪ್ರೀತಿ.!

Posted by:
Subscribe to Filmibeat Kannada

'ಬಿಗ್ ಬಾಸ್' ಮನೆಯ ಆರಂಭ ದಿನಗಳಲ್ಲಿ ಕಿರಿಕ್ ಸ್ಟಾರ್ ಆಗಿದ್ದ ಪ್ರಥಮ್ ಈಗ ಕಂಪ್ಲೀಟ್ ಲವರ್ ಬಾಯ್ ಆಗಿ ಬದಲಾಗಿದ್ದಾರೆ. ಇದಕ್ಕೆ ಕಾರಣ ಸಂಜನಾ.

ಇತ್ತೀಚೀನ ದಿನಗಳಲ್ಲಿ ಸಂಜನಾ ಅವರ ಹಿಂದೆ ಪ್ರೀತಿ-ಪ್ರೇಮ ಅಂತ ತಿರುಗಾಡುತ್ತಿರುವ ಪ್ರಥಮ್, ಈಗ ಭುವನ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟೇ ಅಲ್ಲ ಸಂಜನಾ ಅವರ ಅಳುವಿಗೆ ಕಾರಣವಾಗಿದ್ದಾರೆ.[ಸಂಜನಾಗೆ 'ಪ್ರೇಮಪತ್ರ' ಬರೆದ 'ಪ್ರಥಮ್': ಎದ್ದುಬಿದ್ದು ನಕ್ಕಿದ ಸುದೀಪ್]

'ಬಿಗ್ ಬಾಸ್' ಮನೆಯಲ್ಲಿ 65ನೇ ದಿನ ಒಂದು ದೊಡ್ಡ ಡ್ರಾಮಾನೇ ನಡಿಯಿತು. ಈ ಘಟನೆಯಲ್ಲಿ ಸಂಜನಾ-ಭುವನ್ ಜಗಳವಾಡಿದ್ರೆ, ಒಬ್ಬಳೇ ಕೂತು ಅಳುತ್ತಿದ್ದ ಸಂಜನಾಗೆ ಪ್ರಥಮ್ ಕಣ್ಣೀರು ಒರೆಸಿದರು.

ಸಂಜನಾ ಬೆಡ್ ಮೇಲೆ ಮಲಗಿದ್ದಕ್ಕೆ ಮನಸ್ತಾಪ

ಸಂಜನಾ ಬೆಡ್ ಮೇಲೆ ಮಲಗಿದ್ದಕ್ಕೆ ಮನಸ್ತಾಪ

ಈ ವಾರದ ಕ್ಯಾಪ್ಟನ್ ಆಗಿರುವ ಪ್ರಥಮ್ ಗೆ 'ಬಿಗ್ ಬಾಸ್' ಮನೆಯಲ್ಲಿ ವಿಶೇಷವಾದ ಕೊಠಡಿ ಸೌಲಭ್ಯವನ್ನ ನೀಡಲಾಗಿದೆ. ಆದ್ರೆ, ಪ್ರಥಮ್ 65ನೇ ದಿನದ ರಾತ್ರಿ, ತಮ್ಮ ವಿಶೇಷ ಕೊಠಡಿಯನ್ನ ಬಿಟ್ಟು ಸಂಜನಾ ಅವರ ಬೆಡ್ ಮೇಲೆ ಮಲಗಿದ್ದರು.[ಕಿಚ್ಚನ ಎದುರು ಸಂಜನಾ-ಭುವನ್ ಲವ್ ಸ್ಟೋರಿ ! ]

ಭುವನ್ 'ಬೆಡ್'ಗೆ ಹಾರಿದ ಪ್ರಥಮ್

ಭುವನ್ 'ಬೆಡ್'ಗೆ ಹಾರಿದ ಪ್ರಥಮ್

ತಮ್ಮ ಬೆಡ್ ಮೇಲೆ ಮಲಗಿದ್ದ ಪ್ರಥಮ್ ಅವರನ್ನ ಗಮನಿಸಿದ ಸಂಜನಾ, ನನ್ನ ಬೆಡ್ ಯಿಂದ ಎದ್ದು ಹೋಗು ಎಂದು ಹೇಳಿದರು. ತದ ನಂತರ ಪ್ರಥಮ್, ಸಂಜನಾ ಅವರ ಬೆಡ್ ಬಿಟ್ಟು ಭುವನ್ ಅವರ ಬೆಡ್ ಮೇಲೆ ಮಲಗಿದರು.

ಕೋಪಗೊಂಡ ಭುವನ್

ಕೋಪಗೊಂಡ ಭುವನ್

ಭುವನ್ ಅವರ ಬೆಡ್ ಮೇಲೆ ಪ್ರಥಮ್ ಮಲಗಿದ್ದಕ್ಕೆ ಕೋಪಗೊಂಡ ಭುವನ್ ಪೊನ್ನಣ್ಣ, ಸಂಜನಾಗೆ ಫುಲ್ ಕ್ಲಾಸ್ ತೆಗೆದುಕೊಂಡರು.['ಬಿಗ್ ಬಾಸ್' ಮನೆಯಲ್ಲಿ ಸಂಜನಾ ಸ್ವಯಂವರ: ಭುವನ್ ಗದ್ದಲ.!]

ನೀನು ಕೊಟ್ಟ ಸಲಿಗೆಯೇ ಕಾರಣ!

ನೀನು ಕೊಟ್ಟ ಸಲಿಗೆಯೇ ಕಾರಣ!

''ನೀನು ಮಾಡೋ ಡಬ್ಬಾ ಕೆಲಸಗಳಿಂದ ನನಗೆ ತಲೆ ಬಿಸಿ ಆಗುತ್ತಿದೆ. ನೀನು ಕೊಟ್ಟಿರೋ ಸಲಿಗೆಯಿಂದ ಪ್ರಥಮ್ ಹೀಗೆಲ್ಲಾ ಮಾಡುತ್ತಿದ್ದಾನೆ. ಏನೇ ತಮಾಷೆಯಾಗಲಿ, ನನ್ನ ಜಾಗವನ್ನ ಆಕ್ರಮಿಸುವುದು ಯಾರಿಗೂ ಅಧಿಕಾರವಿಲ್ಲ. ಅದು ನೀನೇ ಆಗಲಿ, ಅವನೇ ಆಗಲಿ'' ಎಂದು ಭುವನ್ ಫುಲ್ ಗರಂ ಆದರು.

ಬಾತ್ ರೂಂನಲ್ಲಿ ಅತ್ತ ಸಂಜನಾ

ಬಾತ್ ರೂಂನಲ್ಲಿ ಅತ್ತ ಸಂಜನಾ

ಈ ಘಟನೆ ಬಳಿಕ ಸಂಜನಾ ಮಧ್ಯರಾತ್ರಿ ಬಾತ್ ರೂಂನಲ್ಲಿ ಒಬ್ಬರೇ ಕೂತು ಅಳತೊಡಗಿದರು. ''ನನಗೆ ಯಾರು ಇಲ್ಲ. ನಾನು ಒಬ್ಬಳೆ ಇದ್ದೀನಿ. ನನಗೆ ಯಾಕೇ ಬೇಕಿತ್ತು ಇದು. ನನಗೆ ಇದ್ಯಾವುದು ಬೇಡ'' ಎಂದು ಸಂಜನಾ ಗಂಟೆಗಟ್ಟಲೆ ಅತ್ತರು.

ಸಂಜನಾ ಕಣ್ಣೀರೊರಿಸಿದ ಪ್ರಥಮ್

ಸಂಜನಾ ಕಣ್ಣೀರೊರಿಸಿದ ಪ್ರಥಮ್

ಮಧ್ಯರಾತ್ರಿ ಬಾತ್ ರೂಂನಲ್ಲಿ ಒಬ್ಬಳೆ ಅಳುತ್ತಿದ್ದ ಸಂಜನಾ ಅವರನ್ನ ನೋಡಿದ ಪ್ರಥಮ್, ಎದ್ದು ಬಂದು ಸಮಾಧಾನ ಪಡಿಸಿದರು. ಟಿಶ್ಯೂ ಪೇಪರ್ ತಗೊಂಡು ಬಂದು ತಾವೇ ಖುದ್ದಾಗಿ ಕಣ್ಣೀರು ಒರೆಸಿದರು

ನೀನ್ ಲವ್ ಮಾಡ್ಬೇಡ, ನಾನು ಲವ್ ಮಾಡ್ತೀನಿ

ನೀನ್ ಲವ್ ಮಾಡ್ಬೇಡ, ನಾನು ಲವ್ ಮಾಡ್ತೀನಿ

''ನಿಮ್ಮ ವಿಷ್ಯಕ್ಕೆ ಬರಲ್ಲ. ನಾನು ನನ್ನ ಪಾಡಿಗೆ ಲವ್ ಮಾಡ್ಕೊಳ್ತೀನಿ. ಮೊದಲ 5 ವಾರ ಹೇಗಿದ್ವೋ ನಾವು ಹಾಗೆ ಇದ್ದು ಬಿಡೋಣ. ನೀನೇನೂ ತಲೆಕೆಡಿಸಿಕೊಳ್ಳಬೇಡ ಹೋಗಮ್ಮ'' ಎಂದು ಸಂಜನಾ ಅವರಿಗೆ ಪ್ರಥಮ್ ಸಮಾಧಾನ ಮಾಡಿದರು.

ಸಂಜನಾ ವಿಚಾರದಲ್ಲಿ ಮನೆಯವರಿಗೂ ಗೊಂದಲ!

ಸಂಜನಾ ವಿಚಾರದಲ್ಲಿ ಮನೆಯವರಿಗೂ ಗೊಂದಲ!

''ಪ್ರಥಮ್ ಪದೇ ಪದೇ ಲವ್ ಅಂತಿದ್ರೂ, ಸಂಜನಾ ಯಾಕೆ ಸುದೀಪ್ ಅವರ ಹತ್ರ ಈ ವಿಷ್ಯವನ್ನ ಹೇಳುತ್ತಿಲ್ಲ. ಇನೋಸೆಂಟ್ ತರನೇ ಯಾಕೆ ನಡೆದುಕೊಳ್ಳುತ್ತಿದ್ದಾಳೆ'' ಎಂದು ಮೋಹನ್, ರೇಖಾ, ಶಾಲಿನಿ, ಶೀತಲ್, ಕೀರ್ತಿ ಎಲ್ಲರೂ ರಾತ್ರಿ ಚರ್ಚೆ ಮಾಡುತ್ತಿದ್ದರು.

English summary
BBK4, Week 10: Day 65, Sanjana crying Alone in Bathroom at Midnight. Becuse of Pratham's Love.
Please Wait while comments are loading...

Kannada Photos

Go to : More Photos