»   » ದೊಡ್ಮನೆಯಿಂದ ಹೊರಬಂದ ಮಾಳವಿಕಾ, ಪ್ರಥಮ್: 'ಬಿಗ್' ಟ್ವಿಸ್ಟ್ ನಿರೀಕ್ಷಿಸಿ

ದೊಡ್ಮನೆಯಿಂದ ಹೊರಬಂದ ಮಾಳವಿಕಾ, ಪ್ರಥಮ್: 'ಬಿಗ್' ಟ್ವಿಸ್ಟ್ ನಿರೀಕ್ಷಿಸಿ

Posted by:
Subscribe to Filmibeat Kannada

''ಒಳ್ಳೆ ಹುಡುಗ' ಪ್ರಥಮ್ 'ಬಿಗ್ ಬಾಸ್ ಕನ್ನಡ-4' ರಿಯಾಲಿಟಿ ಶೋ ಗೆಲ್ಲಬೇಕು'' ಅಂತ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ವೀಕ್ಷಕರು ಅಭಿಯಾನ ಶುರು ಮಾಡಿದ್ರೆ, ದೊಡ್ಮನೆಯಿಂದ ಪ್ರಥಮ್ ಹೊರಬಂದಿದ್ದಾರೆ.

ಇನ್ನೂ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ 'ಟಫ್ ಕನ್ಟೆಂಡರ್' ಎಂಬ ಕಾರಣಕ್ಕೆ ಮೊದಲ ವಾರದಿಂದಲೂ ಟಾರ್ಗೆಟ್ ಆಗುತ್ತಿರುವ ನಟಿ ಮಾಳವಿಕಾ ಅವಿನಾಶ್ ಕೂಡ ನಿನ್ನೆ 'ಬಿಗ್ ಬಾಸ್' ಮನೆಯಿಂದ ಆಚೆ ಬಂದಿದ್ದಾರೆ.

ಹಾಗಂದ ಮಾತ್ರಕ್ಕೆ ಇಬ್ಬರು ಔಟ್ ಆಗಿದ್ದಾರೆ, ಎಲಿಮಿನೇಟ್ ಆಗಿದ್ದಾರೆ ಅಂತರ್ಥವೇ.? ಸುದೀಪ್ ಹೇಳಿದ ಮಾತುಗಳನ್ನ ಕೇಳಿದ್ರೆ... ಪ್ರಥಮ್ ಹಾಗೂ ಮಾಳವಿಕಾ ಅವಿನಾಶ್ ಔಟ್ ಆಗಿಲ್ಲ ಅಂತ ಭಾಸವಾಗುತ್ತೆ.

ಅಸಲಿಗೆ, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಏನಂತ ಹೇಳಿದರು.? ಉತ್ತರ ಇಲ್ಲಿದೆ.... ಸುದೀಪ್ ಮಾತುಗಳಲ್ಲೇ ಓದಿರಿ....

ಇಬ್ಬರನ್ನು ಸೇಫ್ ಮಾಡಿದ ಕಿಚ್ಚ ಸುದೀಪ್.!

ಇಬ್ಬರನ್ನು ಸೇಫ್ ಮಾಡಿದ ಕಿಚ್ಚ ಸುದೀಪ್.!

ಈ ವಾರ ಪ್ರಥಮ್, ಮಾಳವಿಕಾ ಅವಿನಾಶ್, ಭುವನ್ ಪೊನ್ನಣ್ಣ ಮತ್ತು ಕೀರ್ತಿ ನಾಮಿನೇಟ್ ಆಗಿದ್ದರು. ಇವರಲ್ಲಿ ಭುವನ್ ಮತ್ತು ಕೀರ್ತಿ ರವರನ್ನ ಸೇಫ್ ಮಾಡಿ ಪ್ರಥಮ್ ಹಾಗೂ ಮಾಳವಿಕಾ ಅವಿನಾಶ್ ರವರನ್ನ ಸುದೀಪ್ ಹೊರ ಕರೆದರು.[ಫೈನಲ್ ತಲುಪಲು ಮಾಳವಿಕಾ ಮತ್ತೊಂದು ಅಗ್ನಿಪರೀಕ್ಷೆ ಎದುರಿಸ್ಲೇಬೇಕು.!]

ಹೊರ ನಡೆಯುವಾಗ ವಿಶೇಷ ಅಧಿಕಾರ ನೀಡಲಿಲ್ಲ.!

ಹೊರ ನಡೆಯುವಾಗ ವಿಶೇಷ ಅಧಿಕಾರ ನೀಡಲಿಲ್ಲ.!

ಸಾಮಾನ್ಯವಾಗಿ ಎಲಿಮಿನೇಟ್ ಆದ ಸ್ಪರ್ಧಿಗಳಿಗೆ 'ಬಿಗ್ ಬಾಸ್' ವಿಶೇಷ ಅಧಿಕಾರ ನೀಡುತ್ತಾರೆ. ಆದ್ರೆ, ಈ ಬಾರಿ ಹಾಗೆ ನಡೆಯಲಿಲ್ಲ. ಮನೆಯಿಂದ ಹೊರ ಕಾಲಿಡುವ ಮುನ್ನ ಮಾಳವಿಕಾ ಅವಿನಾಶ್ ಹಾಗೂ ಪ್ರಥಮ್ ಗೆ 'ಬಿಗ್ ಬಾಸ್' ವಿಶೇಷ ಅಧಿಕಾರ ನೀಡಲಿಲ್ಲ.[ಮುಖಕ್ಕೆ ಮಸಿ ಬಳಿದು ಅವಮಾನ: ಭಾವುಕರಾದ ಪ್ರಥಮ್]

ಗಮನ ಇಟ್ಟು ಕೇಳಿ ಎಂದ ಸುದೀಪ್.!

ಗಮನ ಇಟ್ಟು ಕೇಳಿ ಎಂದ ಸುದೀಪ್.!

'ಬಿಗ್ ಬಾಸ್' ಮನೆಯಿಂದ ಮಾಳವಿಕಾ ಮತ್ತು ಪ್ರಥಮ್ ಹೊರಬಂದ ಬಳಿಕ ವೀಕ್ಷಕರನ್ನ ಉದ್ದೇಶಿಸಿ ಸುದೀಪ್ ಮಾತನಾಡಲು ಆರಂಭಿಸಿದರು. ಅವರು ಏನು ಹೇಳಿದರು ಅಂದ್ರೆ.....

'ಬಿಗ್ ಬಾಸ್' ಉದ್ದೇಶ ಏನಾಗಿತ್ತು.?

'ಬಿಗ್ ಬಾಸ್' ಉದ್ದೇಶ ಏನಾಗಿತ್ತು.?

''ಇಬ್ಬರು ಹೊರಗಡೆ ಬಂದಿದ್ದಾರೆ. ಗಮನ ಇಟ್ಟು ಕೇಳಿ.... ಒಬ್ಬರಿಗೆ ಅತಿ ಹೆಚ್ಚು ವೋಟ್ ಬಂದಿದೆ. ಇನ್ನೊಬ್ಬರಿಗೆ ಅತಿ ಕಮ್ಮಿ ವೋಟ್ ಬಂದಿದೆ. ಯಾರಿಗೆ ಹೆಚ್ಚು, ಯಾರಿಗೆ ಕಮ್ಮಿ... ನಿಮ್ಮ ನಿಮ್ಮ ಊಹೆಗೆ ಬಿಡ್ತೀವಿ ನಾವು. ಆದ್ರೆ, ಯಾರನ್ನೂ ಹೊರಗೆ ಕರ್ಕೊಂಡ್ ಬರೋದು 'ಬಿಗ್ ಬಾಸ್' ನ ಉದ್ದೇಶ ಆಗಿರಲಿಲ್ಲ. ಅದಕ್ಕೆ ಮೂರೇ ಗಂಟೆಗಳ ಕಾಲ ವೋಟಿಂಗ್ ಲೈನ್ಸ್ ಓಪನ್ ಇತ್ತು. ತಕ್ಷಣ ಕ್ಲೋಸ್ ಆಯ್ತು. ಯಾಕಂದ್ರೆ, ಬಿಗ್ ಬಾಸ್ ಗೆ ಬೇಕಾಗಿದ್ದದ್ದು ಒಂದೇ... ಅತಿ ಹೆಚ್ಚು ವೋಟ್ ಯಾರಿಗೆ.? ಅತಿ ಕಡಿಮೆ ವೋಟ್ ಯಾರಿಗೆ.? ಒಂದು ಸ್ಮಾಲ್ ಟ್ರೆಂಡ್ ಬೇಕಾಗಿತ್ತು. ಆ ಟ್ರೆಂಡ್ ಸಿಕ್ತು. ವೋಟಿಂಗ್ ಲೈನ್ಸ್ ಕ್ಲೋಸ್ ಆಯ್ತು'' - ಕಿಚ್ಚ ಸುದೀಪ್. [ಪ್ರಥಮ್ ಮುಖಕ್ಕೆ ಮಸಿ: ಶಾಲಿನಿ, ಕೀರ್ತಿ, ಮಾಳವಿಕಾ ವಿರುದ್ಧ ವೀಕ್ಷಕರು ಸಿಡಿಮಿಡಿ]

ಪ್ರತಿ ಬಾರಿ ಟಾರ್ಗೆಟ್ ಆಗಿರುವ ಇಬ್ಬರು

ಪ್ರತಿ ಬಾರಿ ಟಾರ್ಗೆಟ್ ಆಗಿರುವ ಇಬ್ಬರು

''ಯಾಕೆ ಈ ಮಾತು ಹೇಳ್ತಿದ್ದೇನೆ ಅಂದ್ರೆ.... ಮಾಳವಿಕಾ ತುಂಬಾ ಪ್ರಸಿದ್ದಿ ಪಡೆದು ಒಳಗೆ ಹೋದವರು. ಮನೆಯಲ್ಲಿ ಅವರನ್ನ ಕಾರ್ನರ್ ಮಾಡಲಾಯ್ತು. ಪ್ರಥಮ್ ಎಲ್ಲಿಂದಲೋ ಬಂದವರು. ಅಲ್ಪಸ್ವಲ್ಪ ಪರಿಚಯ ಇದ್ದರು. ಆದ್ರೆ, ಮನೆ ಒಳಗೆ ಹೋದ್ಮೇಲೆ ಪ್ರಸಿದ್ಧಿ ಪಡೆದರು. ಅವರನ್ನ ಕೂಡ ಕಾರ್ನರ್ ಮಾಡಲಾಯ್ತು. ಹೀಗೆ ಕಾರ್ನರ್ ಆಗಿರುವ ಇಬ್ಬರು ಸ್ಪರ್ಧಿಗಳು ಈಗ ಹೊರಗಡೆ ಬಂದಿದ್ದಾರೆ'' - ಕಿಚ್ಚ ಸುದೀಪ್ [ಬಿಗ್ ಬಾಸ್ 'ವಿನ್ನರ್-ರನ್ನರ್' ಯಾರು ಅಂತ ಭವಿಷ್ಯ ನುಡಿದ ಪ್ರಥಮ್!]

ವೀಕ್ಷಕರು ಸೇಫ್ ಮಾಡಿದ್ದು....

ವೀಕ್ಷಕರು ಸೇಫ್ ಮಾಡಿದ್ದು....

''ಮನೆಯಲ್ಲಿದ್ದವರಿಗೆ ಇಬ್ಬರು ಬೇಡ. ಪ್ರಥಮ್ ಹನ್ನೊಂದ್ ಸಲ, ಮಾಳವಿಕಾ ಹತ್ತು ಸಲ ನಾಮಿನೇಟೆಡ್. ಅವರಿಬ್ಬರಿಗೆ ಕ್ಯಾಪ್ಟನ್ ಶಿಪ್ ಕೊಡಬಾರದು. ಫಿನಾಲೆಗೆ ಹೋಗಬಾರದು. ಅವರವರ ತೀರ್ಮಾನ ಆಯ್ತು. ಆದರೆ ನೀವೆಲ್ಲ ವೋಟ್ ಮಾಡಿದ್ರಿ. ಸೇಫ್ ಮಾಡಿದ್ರಿ'' - ಕಿಚ್ಚ ಸುದೀಪ್ ['ಬಿಗ್ ಬಾಸ್' ಹೀಗ್ಮಾಡಿದ್ರೆ, ಮೋಸ ಆಗಲ್ವಾ.? ಕ್ಲಾರಿಟಿ ಕೊಡಿ..]

ಎರಡು ವಿಚಾರಗಳನ್ನು 'ಬಿಗ್ ಬಾಸ್' ನೋಡ್ಬೇಕು.?

ಎರಡು ವಿಚಾರಗಳನ್ನು 'ಬಿಗ್ ಬಾಸ್' ನೋಡ್ಬೇಕು.?

''ಆದರೆ ಈಗ, ಎರಡು ವಿಚಾರಗಳನ್ನು ನೋಡಲು 'ಬಿಗ್ ಬಾಸ್' ಇಷ್ಟ ಪಡ್ತಿದ್ದಾರೆ. ಇಬ್ಬರು ಇಲ್ಲದ ಮನೆಯನ್ನ ಸ್ಪರ್ಧಿಗಳು ಹೇಗೆ ಇಟ್ಕೊಳ್ತಾರೆ.? ಎಷ್ಟು ಎಂಟರ್ ಟೇನ್ ಮಾಡ್ತಾರೆ ಹಾಗೂ ಹೇಗೆ ನಡೆದುಕೊಳ್ತಾರೆ.?'' - ಕಿಚ್ಚ ಸುದೀಪ್

'ಬಿಗ್' ಟ್ವಿಸ್ಟ್ ನಿರೀಕ್ಷಿಸಿ...

'ಬಿಗ್' ಟ್ವಿಸ್ಟ್ ನಿರೀಕ್ಷಿಸಿ...

''ಕಾರ್ನರ್ ಆಗಿರುವ ಇಬ್ಬರು, ಮನೆಯಲ್ಲಿ ಎಲ್ಲರಿಗೂ ಬೇಡವಾಗಿರುವ ಇಬ್ಬರೂ ಒಂದೇ ಕಡೆ ಇದ್ದರೆ, ಯಾರು ಯಾರಿಗೆ ಬೇಡ ಆಗ್ತಾರೆ.? ಯಾರು ಯಾರನ್ನ ಕಾರ್ನರ್ ಮಾಡ್ತಾರೆ.? ಇದೇನು.? ಹೇಗೆ ಅಂತ ಅರ್ಥ ಆಗಲು ಮುಂದಿನ ಟ್ವಿಸ್ಟ್ ತನಕ ಕಾಯಬೇಕು. ಮತ್ತೆ ಒಳ್ಳೆಯ ಟ್ವಿಸ್ಟ್ ನ ಎಕ್ಸ್ ಪೆಕ್ಟ್ ಮಾಡಿ...'' - ಕಿಚ್ಚ ಸುದೀಪ್

ಅಲ್ಲಿಗೆ, ಇಂದು ಏನಾಗುವುದು.?

ಅಲ್ಲಿಗೆ, ಇಂದು ಏನಾಗುವುದು.?

ಅಲ್ಲಿಗೆ, ಮಾಳವಿಕಾ ಮತ್ತು ಪ್ರಥಮ್ ಎಲಿಮಿನೇಟ್ ಆಗಿಲ್ಲ ಎಂಬ ಭಾವನೆ ಈಗಾಗಲೇ ವೀಕ್ಷಕರಿಗೆ ಬಂದಿದೆ. ಆದ್ರೆ, 'ಬಿಗ್ ಬಾಸ್' ತಲೆಯಲ್ಲಿ ಏನಿದ್ಯೋ... ಯಾವುದಕ್ಕೂ ಇಂದಿನ ಸಂಚಿಕೆ ಮಿಸ್ ಮಾಡ್ಬೇಡಿ...

English summary
Bigg Boss Kannada 4, Week 13 : Actress Malavika Avinash and Pratham have stepped out of the house. Sudeep hints 'Expect Big Twist'. Does it mean Malavika and Pratham are still in the game?
Please Wait while comments are loading...

Kannada Photos

Go to : More Photos