»   » 'ಬಿಗ್ ಬಾಸ್' ಮನೆಯಿಂದ ಹೊರಬರುವ ಮುನ್ನ 3 'ವರ' ಕೇಳಿದ ಪ್ರಥಮ್.!

'ಬಿಗ್ ಬಾಸ್' ಮನೆಯಿಂದ ಹೊರಬರುವ ಮುನ್ನ 3 'ವರ' ಕೇಳಿದ ಪ್ರಥಮ್.!

Posted by:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ರಿಯಾಲಿಟಿ ಶೋನಿಂದ 'ಒಳ್ಳೆ ಹುಡುಗ' ಪ್ರಥಮ್ ಎಲಿಮಿನೇಟ್ ಆಗಿದ್ದಾರೋ, ಇಲ್ವೋ... ಇಂದಿನ (ಜನವರಿ 8) ಸಂಚಿಕೆಯಲ್ಲಿ ಕ್ಲಾರಿಟಿ ಸಿಗಲಿದೆ. ಆದ್ರೆ, ನಿನ್ನೆಯ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಂತೂ ಪ್ರಥಮ್ ರವರನ್ನ ಸುದೀಪ್ ಹೊರ ಕರೆದದ್ದು ಸತ್ಯ.

'ಬಿಗ್ ಬಾಸ್' ಮನೆಯಿಂದ ಹೊರ ಕಾಲಿಡುವ ಮುನ್ನ ಸುದೀಪ್ ಬಳಿ ಪ್ರಥಮ್ 'ಮೂರು ವರ'ಗಳನ್ನು ಕೇಳಿದರು. ಅದಕ್ಕೆ ಸುದೀಪ್ 'ತಥಾಸ್ತು' ಅಂದ್ರಾ.? ಇಲ್ವಾ.? ಅಂತ ತಿಳಿಯಲು ಈ ವರದಿ ಓದಿರಿ....

'ಬಲಿ ಸಾರ್ವಭೌಮ' ಅಂತೆ ಸುದೀಪ್.!

'ಬಲಿ ಸಾರ್ವಭೌಮ' ಅಂತೆ ಸುದೀಪ್.!

'ಬಿಗ್ ಬಾಸ್' ಮನೆಯಿಂದ ಹೊರಬರಲು ಪ್ರಥಮ್ ಗೆ ಐದು ನಿಮಿಷ ಕಾಲಾವಕಾಶ ಇದ್ದಾಗ, ''ನೀವು ನನ್ನ ಮುಂದೆ ಬಲಿ ಸಾರ್ವಭೌಮ ಆಗಿ ಕಾಣುತ್ತಿದ್ದೀರಾ. ನನ್ನ ಮೂರು ಆಸೆಯನ್ನ ನೀವು ನೆರವೇರಿಸಬೇಕು ಸರ್'' ಅಂತ ಸುದೀಪ್ ರವರನ್ನ ಪ್ರಥಮ್ ಕೇಳಿದರು. [ದೊಡ್ಮನೆಯಿಂದ ಹೊರಬಂದ ಮಾಳವಿಕಾ, ಪ್ರಥಮ್: 'ಬಿಗ್' ಟ್ವಿಸ್ಟ್ ನಿರೀಕ್ಷಿಸಿ]

ಮೊದಲನೇ ಆಸೆ ಏನು.?

ಮೊದಲನೇ ಆಸೆ ಏನು.?

''ನಾನು ನನ್ನ ಶ್ರಮದಿಂದ ಗೆದ್ದಿರುವ ಲಕ್ಷುರಿ ಬಜೆಟ್ ಸ್ವೀಟ್. ಅದನ್ನ ನಾನು ನನ್ನ ಕೈಯಾರೆ ನಿಮಗೆ ಸ್ಟೇಜ್ ಮೇಲೆ ತಿನ್ನಿಸಬೇಕು'' ಅಂತ ಪ್ರಥಮ್ ಹೇಳಿದರು. [ಮುಖಕ್ಕೆ ಮಸಿ ಬಳಿದು ಅವಮಾನ: ಭಾವುಕರಾದ ಪ್ರಥಮ್]

ಮನಃ ಪೂರ್ವಕವಾಗಿ ಒಪ್ಪಿಕೊಂಡ ಸುದೀಪ್

ಮನಃ ಪೂರ್ವಕವಾಗಿ ಒಪ್ಪಿಕೊಂಡ ಸುದೀಪ್

ಪ್ರಥಮ್ ರವರ ಮೊದಲನೇ ಆಸೆ ಕೇಳಿ ''ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದೇನೆ'' ಎಂದರು ಸುದೀಪ್. [ಪ್ರಥಮ್ ಮುಖಕ್ಕೆ ಮಸಿ: ಶಾಲಿನಿ, ಕೀರ್ತಿ, ಮಾಳವಿಕಾ ವಿರುದ್ಧ ವೀಕ್ಷಕರು ಸಿಡಿಮಿಡಿ]

ಎರಡನೇ ಆಸೆ ಏನು.?

ಎರಡನೇ ಆಸೆ ಏನು.?

''ನಿಮ್ಮನ್ನ ತಬ್ಬಿಕೊಂಡು, ಮುತ್ತು ಕೊಡಬೇಕು. ಸೆಲ್ಫಿ ತೆಗೆದುಕೊಳ್ಳಬೇಕು'' ಅಂತ ಎರಡನೇ ಬೇಡಿಕೆ ಇಟ್ಟರು.[ಬಿಗ್ ಬಾಸ್ 'ವಿನ್ನರ್-ರನ್ನರ್' ಯಾರು ಅಂತ ಭವಿಷ್ಯ ನುಡಿದ ಪ್ರಥಮ್!]

ನಗುಮೊಗದಿಂದ ಒಪ್ಪಿಕೊಂಡ ಸುದೀಪ್

ನಗುಮೊಗದಿಂದ ಒಪ್ಪಿಕೊಂಡ ಸುದೀಪ್

ಪ್ರಥಮ್ ರವರ ಎರಡನೇ ಆಸೆ ಕೇಳಿ ನಗುಮೊಗದಿಂದ ಸುದೀಪ್ 'ತಥಾಸ್ತು' ಎಂದರು.['ಬಿಗ್ ಬಾಸ್' ಹೀಗ್ಮಾಡಿದ್ರೆ, ಮೋಸ ಆಗಲ್ವಾ.? ಕ್ಲಾರಿಟಿ ಕೊಡಿ..]

ಮೂರನೇ ಆಸೆ ಏನು ಅಂದ್ರೆ....

ಮೂರನೇ ಆಸೆ ಏನು ಅಂದ್ರೆ....

''ಇಷ್ಟು ದಿನ 'ಬಿಗ್ ಬಾಸ್' ಮಾತು ಕೇಳುತ್ತಾ ಬಂದಿದ್ದೇವೆ. ಅವರ ಮುಖವನ್ನು ನಾನು ನೋಡಬೇಕು. ಇಷ್ಟು ದಿನ ಅವರ ಮುಖ ನೋಡಿಲ್ಲ'' ಅಂತ ಬಾಂಬ್ ಹಾಕಿದರು ಪ್ರಥಮ್.

ತಿರುಗುಬಾಣ ಬಿಟ್ಟ ಸುದೀಪ್

ತಿರುಗುಬಾಣ ಬಿಟ್ಟ ಸುದೀಪ್

''ನನಗೆ ದೇವರನ್ನ ನೋಡಬೇಕು ಅಂತ ಆಸೆ ಇದೆ. ಆ ದೇವರು ನನ್ನ ಮುಂದೆ ಪ್ರತ್ಯಕ್ಷ ಆದ ದಿವಸ, 'ಬಿಗ್ ಬಾಸ್' ಎಲ್ಲೇ ಇರಲಿ, ಕರ್ಕೊಂಡ್ ಬಂದು ತೋರಿಸ್ತೀನಿ. ಇದು ಕಿಚ್ಚನ ಮಾತು...ಮಾತು....ಮಾತು'' ಎಂದುಬಿಟ್ಟರು ಸುದೀಪ್. ಸುದೀಪ್ ಕೊಟ್ಟ ಉತ್ತರಕ್ಕೆ ಪ್ರಥಮ್ ಗಪ್-ಚುಪ್.

English summary
Bigg Boss Kannada 4, Week 13 : Kiccha Sudeep agreed to Fulfill 3 Demands of 'Olle Huduga' Pratham.
Please Wait while comments are loading...

Kannada Photos

Go to : More Photos