»   » ಕಿಚ್ಚನ ಎದುರು ಕಣ್ಣೀರಿಟ್ಟ ಭುವನ್: ಭಾವುಕರಾದ ಸಂಜನಾ

ಕಿಚ್ಚನ ಎದುರು ಕಣ್ಣೀರಿಟ್ಟ ಭುವನ್: ಭಾವುಕರಾದ ಸಂಜನಾ

Posted by:
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿ ಮತ್ತೆ ಕಣ್ಣೀರಿನ ಹೊಳೆ ಹರಿದಿದೆ. ಬಿಗ್ ಮನೆಯಲ್ಲಿ ಈ ವಾರ ಈ ಒಬ್ಬರ ಕಣ್ಣೀರು ನೋಡಿ ಮತ್ತೊಬ್ಬರು ಕಣ್ಣೀರು ಹಾಕಿದ ಘಟನೆ ನಡೆದಿದೆ.

ಹೌದು, ಬಿಗ್ ಮನೆಯಲ್ಲಿ ಲವರ್ ಬಾಯ್ ಇಮೇಜ್ ಹೊಂದಿರುವ ಭುವನ್, ಕಿಚ್ಚ ಸುದೀಪ್ ಎದುರು ಅತ್ತರು. ಭುವನ್ ಅಳಲನ್ನ ನೋಡಿದ ಸಂಜನಾ ಕೂಡ ಸುದೀಪ್ ಎದುರು ಕಣ್ಣೀರು ಹಾಕಿದರು.[ಪ್ರಥಮ್ 'ಔಟ್'.. ಸುದೀಪ್ ಚಮಕ್.. ಶಾಲಿನಿ-ಕೀರ್ತಿ ಗಪ್-ಚುಪ್]

ಇದು ಈ ವಾರಂತ್ಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ನಡೆದ ಕಣ್ಣೀರಿನ ಕಥೆ. ಮುಂದೆ ಓದಿ...

ಕಣ್ಣೀರಿಟ್ಟ ಭುವನ್

ಕಣ್ಣೀರಿಟ್ಟ ಭುವನ್

ಈ ವಾರ ಭುವನ್ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿದ್ದರು. ಯಶಸ್ವಿಯಾಗಿ ಕ್ಯಾಪ್ಟನ್ಸಿ ನಿರ್ವಹಿಸಿದ್ದರೂ, ''ವಾರದ ಕಥೆ ಕಿಚ್ಚನ ಜೊತೆ'' ಕಾರ್ಯಕ್ರಮದಲ್ಲಿ ಸುದೀಪ್ ಎದುರು ಕಣ್ಣೀರಿಟ್ಟರು.

ಭುವನ್ ಕಣ್ಣೀರಿಗೆ ಕಾರಣವೇನು?

ಭುವನ್ ಕಣ್ಣೀರಿಗೆ ಕಾರಣವೇನು?

49 ದಿನಗಳ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ನಗು ನಗುತ್ತಾ ಇದ್ದ ಭುವನ್, 49ನೇ ದಿನ ಬೇಸರದಿಂದ ಕಣ್ಣೀರಿಟ್ಟಿದ್ದಾರೆ. ಇದಕ್ಕೆ ಕಾರಣ ನಾಯಕತ್ವದ ಜವಾಬ್ದಾರಿ.

ನಾಯಕತ್ವಕ್ಕೆ ಸೂಕ್ತವಲ್ಲ ಎಂಬ ಆರೋಪ

ನಾಯಕತ್ವಕ್ಕೆ ಸೂಕ್ತವಲ್ಲ ಎಂಬ ಆರೋಪ

ಭುವನ್ ಈ ವಾರ ಬಿಗ್ ಬಾಸ್ ಮನೆಯಲ್ಲಿ ನಾಯಕತ್ವವನ್ನ ಸರಿಯಾಗಿ ನಿಭಾಯಿಸಿಲ್ಲ. ಅವರು ಕೆಲವರಿಗೆ ಮಾತ್ರ ಸಹಾಯ ಮಾಡಿದರು. ಅವರು ಕ್ಯಾಪ್ಟನ್ಸಿಗೆ ತಕ್ಕ ವ್ಯಕ್ತಿಯಲ್ಲ ಆರೋಪ ಬಂತು ಎಂಬ ಕಾರಣಕ್ಕೆ ಭುವನ್ ಕಣ್ಣೀರಿಟ್ಟರು.

ಭುವನ್ ಹೇಳಿದ್ದೇನು?

ಭುವನ್ ಹೇಳಿದ್ದೇನು?

''ನಾನು ಈ ವಾರ ಕ್ಯಾಪ್ಟನ್ ಆದಾಗ, ಇವನು ನಾಯಕತ್ವಕ್ಕೆ ಲಾಯಕ್ಕಿಲ್ಲ ಎಂಬ ಮಾತುಗಳು ಮನೆಯಲ್ಲಿತ್ತು. ಹೊರಗೆ ಹೆಸರು ಮಾಡಿರುವವರು ಮಾತ್ರ ಕ್ಯಾಪ್ಟನ್ಸಿ ಮಾಡೋಕೆ ಆಗುತ್ತೆ ಅಂತಿದ್ದರು. ಆದ್ರೆ, ವಾರಾಂತ್ಯಕ್ಕೆ ನನ್ನ ಮೇಲೆ ಈ ರೀತಿಯಾದ ಆರೋಪ ಬಂದಿದ್ದು ತುಂಬಾ ಬೇಜಾರಾಯ್ತು. ನಾನು ನಿರೀಕ್ಷೆ ಮಾಡಿರಲಿಲ್ಲ'' - ಎಂದು ಕಣ್ಣೀರಿಟ್ಟರು ಭುವನ್.

ಸಂಜನಾ ಕಣ್ಣಲ್ಲೂ ನೀರು

ಸಂಜನಾ ಕಣ್ಣಲ್ಲೂ ನೀರು

ಭುವನ್ ಕಣ್ಣಲ್ಲಿ ನೀರು ನೋಡಿದ ಸಂಜನಾ ಕೂಡ ಕಿಚ್ಚನ ಎದುರು ಅತ್ತರು.

ಆರೋಪ ಮಾಡಿದ್ದು ಯಾರು?

ಆರೋಪ ಮಾಡಿದ್ದು ಯಾರು?

ನಾಯಕತ್ವದಲ್ಲಿ ಪಕ್ಷಪಾತ ಆಗಿದೆ ಎಂಬ ಆರೋಪವನ್ನ ಯಾರು ಮಾಡಿಲ್ಲ. ಆದ್ರೆ, ಇದು 'ಬಿಗ್ ಬಾಸ್' ಗಮನಕ್ಕೆ ಬಂದ ಕಾರಣ, ಭುವನ್ ಅವರಿಗೆ ಶಿಕ್ಷೆ ನೀಡಲಾಗಿದೆ.

'ಬಿಗ್ ಬಾಸ್'ನಿಂದ ಶಿಕ್ಷೆ

'ಬಿಗ್ ಬಾಸ್'ನಿಂದ ಶಿಕ್ಷೆ

ನಾಯಕತ್ವದಲ್ಲಿ ತಾರತಮ್ಯ ತೋರಿದ್ದಾರೆ. ಟಾಸ್ಕ್ ವಿಚಾರದಲ್ಲಿ ಪಕ್ಷಪಾತ ಮಾಡಿದ್ದಾರೆ ಎಂಬ ಕಾರಣಕ್ಕೆ 'ಬಿಗ್ ಬಾಸ್' ಭುವನ್ ಅವರಿಗೆ ಶಿಕ್ಷೆ ನೀಡಿದ್ದಾರೆ. ಶಿಕ್ಷೆಯ ಅನುಸಾರ ಮುಂದಿನ ವಾರಕ್ಕೆ ಭುವನ್, ನೇರವಾಗಿ ನಾಮಿನೇಟ್ ಆಗಿದ್ದಾರೆ.

English summary
Bigg Boss Kannada 4: Week 7- Kannada Actor Bhuvan Ponnanna breaks down into tears during 'Varada Kathe Kicchana Jothe' show
Please Wait while comments are loading...

Kannada Photos

Go to : More Photos