»   » 'ಮೋಸ' ಮಾಡಿದ 'ಬಿಗ್ ಬಾಸ್' ವಿರುದ್ಧ ವೀಕ್ಷಕರು ಕೆಂಡಾಮಂಡಲ.!

'ಮೋಸ' ಮಾಡಿದ 'ಬಿಗ್ ಬಾಸ್' ವಿರುದ್ಧ ವೀಕ್ಷಕರು ಕೆಂಡಾಮಂಡಲ.!

Posted by:
Subscribe to Filmibeat Kannada

''ಬಿಗ್ ಬಾಸ್' ಕಾರ್ಯಕ್ರಮ ಫಿಕ್ಸ್ ಆಗಿದೆ. ಕೀರ್ತಿಯನ್ನ ಗೆಲ್ಲಿಸಲು 'ಬಿಗ್ ಬಾಸ್' ಗೇಮ್ ಪ್ಲಾನ್ ರೂಪಿಸಿದ್ದಾರೆ. 'ಬಿಗ್ ಬಾಸ್' ಚೀಟಿಂಗ್ ಮಾಡುತ್ತಿದ್ದಾರೆ. ಫಿಕ್ಸಿಂಗ್ ಶೋ 'ಬಿಗ್ ಬಾಸ್'ಗೆ ಡೌನ್ ಡೌನ್.!''

- ಇದನ್ನೆಲ್ಲ ನಾವು ಹೇಳ್ತಿಲ್ಲ...'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮವನ್ನ ಪ್ರತಿದಿನ ತಪ್ಪದೇ ವೀಕ್ಷಿಸುತ್ತಿರುವ ಜನರು ಬೇಸರದಿಂದ ಆಡಿರುವ ಮಾತುಗಳಿವು.! ['ಬಿಗ್ ಬಾಸ್' ಕಾರ್ಯಕ್ರಮದ ಎಲ್ಲಾ ಅಪ್ ಡೇಟ್ಸ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ]

ವೀಕ್ಷಕರಿಗೆ ಸಿಟ್ಟು ಯಾಕೆ: 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಏಳನೇ ವಾರ 'ಬಿಗ್ ಬಾಸ್ ಜೋಡಿ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನೀಡಲಾಗಿದೆ. ಅದರಲ್ಲಿ ಜೋಡಿಗಳ ನಡುವೆ ಇರುವ ಹೊಂದಾಣಿಕೆ ಪರೀಕ್ಷಿಸಲು ಪ್ರಶ್ನೋತ್ತರ ಚಟುವಟಿಕೆ ನಡೆಸಲಾಯಿತು. ಅದರಲ್ಲಿ, ಕೀರ್ತಿ ಮತ್ತು ಸಂಜನಾ ಜೋಡಿಗೆ ಮಾತ್ರ ಸರಳವಾದ 'ಹೌದು/ಇಲ್ಲ' ಪ್ರಶ್ನೆಗಳನ್ನ ಕೇಳಿ, ಇತರೆ ಸದಸ್ಯರಿಗೆ ಕಷ್ಟಕರ ಪ್ರಶ್ನೆಗಳನ್ನು ರೂಪಿಸಲಾಗಿತ್ತು. ಹೀಗಾಗಿ 'ಬಿಗ್ ಬಾಸ್' ಕಾರ್ಯಕ್ರಮದ ಆಯೋಜಕರ ವಿರುದ್ಧ 'ಕಲರ್ಸ್ ಕನ್ನಡ' ವಾಹಿನಿಯ ಫೇಸ್ ಬುಕ್ ಪೇಜ್ ನಲ್ಲಿ ವೀಕ್ಷಕರು ಕೆಂಡಕಾರುತ್ತಿದ್ದಾರೆ.

ಹೊಂದಾಣಿಕೆ ಚಟುವಟಿಕೆಯಲ್ಲಿ ನಡೆದ ಮೋಸದ ವಿರುದ್ಧ ವೀಕ್ಷಕರು 'ಕಲರ್ಸ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿ ಮಾಡಿರುವ ಕೆಲ ಆಯ್ದ ಕಾಮೆಂಟ್ ಗಳು ಇಲ್ಲಿದೆ ನೋಡಿ....

ಜನರು ಮೂರ್ಖರಲ್ಲ.!

ಜನರು ಮೂರ್ಖರಲ್ಲ.!

''ಕೀರ್ತಿ ರವರನ್ನ ವಿನ್ನರ್ ಆಗಿ ಮಾಡಲು ಅವರಿಗೆ ಸುಲಭವಾದ ಟಾಸ್ಕ್ ಗಳನ್ನು ಬಿಗ್ ಬಾಸ್ ನೀಡುತ್ತಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೀರ್ತಿ ಮತ್ತು ಸಂಜನಾ ರವರಿಗೆ ಕೇಳಿದ ಎಲ್ಲ ಪ್ರಶ್ನೆಗಳಿಗೆ 'ಹೌದು/ಇಲ್ಲ' ಎಂದು ಉತ್ತರಿಸಬೇಕಿತ್ತು. ಇದು ಅತಿಯಾಯ್ತು. ಜನರ ಮೂರ್ಖರು ಅಂತ ಬಿಗ್ ಬಾಸ್ ಆಯೋಜಕರು ತಿಳಿದುಕೊಂಡಿದ್ದಾರಾ.?'' ಅಂತ ವೀಕ್ಷಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೆಲ್ಲ ಗೇಮ್ ಪ್ಲಾನ್

ಇದೆಲ್ಲ ಗೇಮ್ ಪ್ಲಾನ್

''ಇದೆಲ್ಲ ಗೇಮ್ ಪ್ಲಾನ್. ಬಿಗ್ ಬಾಸ್ ಕಾರ್ಯಕ್ರಮ ಫಿಕ್ಸ್ ಆಗಿದೆ. ಸುದೀಪ್ ಕೂಡ ಕೀರ್ತಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಪ್ರಥಮ್ ರನ್ನ ಟಿ.ಆರ್.ಪಿಗಾಗಿ ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಫೇಕ್ ಶೋ'' ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.

ಚೀಟಿಂಗ್ 'ಬಿಗ್ ಬಾಸ್'

ಚೀಟಿಂಗ್ 'ಬಿಗ್ ಬಾಸ್'

ಫೇಸ್ ಬುಕ್ ನಲ್ಲಿ ವ್ಯಕ್ತವಾಗಿರುವ ಅನೇಕರ ಅಭಿಪ್ರಾಯಗಳ ಪೈಕಿ ''ಬಿಗ್ ಬಾಸ್' ಚೀಟಿಂಗ್ ಮಾಡಿದ್ದಾರೆ'' ಎನ್ನುವವರೇ ಹೆಚ್ಚು.

ಚಿಕ್ಕ ಮಕ್ಕಳೂ ಉತ್ತರ ಕೊಡ್ತಾರೆ.!

ಚಿಕ್ಕ ಮಕ್ಕಳೂ ಉತ್ತರ ಕೊಡ್ತಾರೆ.!

''ಹೌದು/ಇಲ್ಲ ಪ್ರಶ್ನೆಗಳನ್ನ ಕೇಳಿದರೆ ಚಿಕ್ಕ ಮಕ್ಕಳೂ ಕೂಡ ಉತ್ತರ ಕೊಡುತ್ತಾರೆ'' ಅಂತ ಫುಲ್ ಗರಂ ಆಗಿ ಕೆಲ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.

ಫಿಕ್ಸಿಂಗ್ ಶೋ

ಫಿಕ್ಸಿಂಗ್ ಶೋ

''ಕಳೆದ ವಾರ ಕೂಡ ಟಾರ್ಚ್ ಹುಡುಕುವ ಟಾಸ್ಕ್ ನಲ್ಲೂ ಕೀರ್ತಿಗೆ ಸುಲಭ ಆಗಿತ್ತು. ಈಗಲೂ ಹಾಗೇ ಆಗಿದೆ. ಇದು ಫಿಕ್ಸಿಂಗ್ ಶೋ'' ಎನ್ನುತ್ತಿದ್ದಾರೆ ವೀಕ್ಷಕರು.

ಉತ್ತರ ಕೊಡಿ 'ಬಿಗ್ ಬಾಸ್'

ಉತ್ತರ ಕೊಡಿ 'ಬಿಗ್ ಬಾಸ್'

''ಶಾಲಿನಿ 10ನೇ ತರಗತಿಯಲ್ಲಿ ಎಷ್ಟು ಕೆ.ಜಿ ಇದ್ದರು ಅಂತ ಅವರಿಗೇ ಗೊತ್ತಿಲ್ಲ. ಇನ್ನೂ ಪ್ರಥಮ್ ಗೆ ಹೇಗೆ ಗೊತ್ತಾಗಬೇಕು'' ಎಂಬುದು ವೀಕ್ಷಕರ ಪ್ರಶ್ನೆ. 'ಬಿಗ್ ಬಾಸ್' ಉತ್ತರ ಕೊಡಿ...

ಸೇಫ್ ಮಾಡುವ ಪ್ರಯತ್ನ!

ಸೇಫ್ ಮಾಡುವ ಪ್ರಯತ್ನ!

''ನಾಮಿನೇಟ್ ಆದರೆ ಕೀರ್ತಿ ಹೊರಗೆ ಹೋಗುತ್ತಾರೆ ಅಂತ ಗೊತ್ತು. ಅದಕ್ಕೆ ಟಾಸ್ಕ್ ಕೊಟ್ಟು ಸೇಫ್ ಮಾಡ್ತಿದ್ದಾರೆ'' ಎನ್ನುವವರೂ ಇದ್ದಾರೆ.

ಇದಕ್ಕಿಂತ ಬೇರೆ ಸಾಕ್ಷಿ ಬೇಕಾ?

ಇದಕ್ಕಿಂತ ಬೇರೆ ಸಾಕ್ಷಿ ಬೇಕಾ?

'ಬಿಗ್ ಬಾಸ್' ವಿರುದ್ಧ ವೀಕ್ಷಕರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ ಎನ್ನುವುದಕ್ಕೆ ಈ ಕಾಮೆಂಟ್ ಸಾಕ್ಷಿ.

ಕೀರ್ತಿ ಪರವಾಗಿ ನಡೆಯುತ್ತಿದೆ.!

ಕೀರ್ತಿ ಪರವಾಗಿ ನಡೆಯುತ್ತಿದೆ.!

''ಸಖತ್ ಮೋಸ ನಡೆಯುತ್ತಿದೆ. ನಿಜವಾಗ್ಲೂ ಟಾಸ್ಕ್ ಫುಲ್ ಕೀರ್ತಿ ಪರವಾಗಿಯೇ ಇದೆ'' ಎನ್ನುವ ಕಾಮೆಂಟ್ ಗಳೇ ಜಾಸ್ತಿ.

'ಬಿಗ್ ಬಾಸ್' ವಿರುದ್ಧ ಗಂಭೀರ ಆರೋಪ

'ಬಿಗ್ ಬಾಸ್' ವಿರುದ್ಧ ಗಂಭೀರ ಆರೋಪ

''ಕಲರ್ಸ್ ಕನ್ನಡ ವಾಹಿನಿಯ ಕೆಲವರು ಕೀರ್ತಿಗೆ ಗೊತ್ತು. ಹೀಗಾಗಿ ಅವರನ್ನೇ ವಿನ್ನರ್ ಮಾಡುತ್ತಿದ್ದಾರೆ'' ಎಂಬ ಗಂಭೀರ ಆರೋಪ ಕೂಡ ಮಾಡಲಾಗಿದೆ.

ಪ್ರಥಮ್-ಶಾಲಿನಿಗೆ ಪ್ರಶ್ನೆಗಳು ತುಂಬಾ ಕಷ್ಟ.!

ಪ್ರಥಮ್-ಶಾಲಿನಿಗೆ ಪ್ರಶ್ನೆಗಳು ತುಂಬಾ ಕಷ್ಟ.!

''ಪ್ರಥಮ್ ಮತ್ತು ಶಾಲಿನಿಗೆ ಪ್ರಶ್ನೆಗಳು ತುಂಬಾ ಕಷ್ಟ ಇತ್ತು. ಇದನ್ನ ಖಂಡಿಸ್ತೀನಿ ಬಿಗ್ ಬಾಸ್'' ಅಂತಾವ್ರೆ ವೀಕ್ಷಕರು.

ಪ್ರಥಮ್ ಪರ ನಿಂತಿರುವ ವೀಕ್ಷಕರು

ಪ್ರಥಮ್ ಪರ ನಿಂತಿರುವ ವೀಕ್ಷಕರು

'ಒಳ್ಳೆ ಹುಡುಗ' ಪ್ರಥಮ್ ಪರ ವೀಕ್ಷಕರ ಬೆಂಬಲ ಹೆಚ್ಚು ಎನ್ನುವುದಕ್ಕೆ ಈ ಕಾಮೆಂಟ್ ಗಳಿಗಿಂತಲೂ ಬೇರೆ ಉದಾಹರಣೆ ಬೇಕಾ.?

ಪ್ರಥಮ್ ಔಟ್ ಆಗಲ್ಲ

ಪ್ರಥಮ್ ಔಟ್ ಆಗಲ್ಲ

''ಪ್ರಥಮ್ ಗೆ ಸಾಮಾಜಿಕ ಜಾಲತಾಣದಲ್ಲಿ ಶೇ.85ಕ್ಕಿಂತಲೂ ಹೆಚ್ಚು ಬೆಂಬಲ ಇರುವುದರಿಂದ 'ಬಿಗ್ ಬಾಸ್' ಮನೆಯಿಂದ ಹೊರಗೆ ಕಳುಹಿಸಲು ಸಾಧ್ಯವೇ ಇಲ್ಲ'' ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.

ನಿಮ್ಮ ಅಭಿಪ್ರಾಯ ತಿಳಿಸಿ...

ನಿಮ್ಮ ಅಭಿಪ್ರಾಯ ತಿಳಿಸಿ...

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಏಳನೇ ವಾರ ನಡೆದ ಹೊಂದಾಣಿಕೆ ಚಟುವಟಿಕೆಯಲ್ಲಿ ನೀಡಲಾದ ಪ್ರಶ್ನೆಗಳ ಕುರಿತು ನಿಮ್ಮ ಅಭಿಪ್ರಾಯ ಏನು.? ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ ನಮಗೆ ತಿಳಿಸಿ....

English summary
Bigg Boss Kannada 4 Viewers are unhappy against 'Bigg Boss' for favouring Keerthi and Sanjana by giving Easy and Simple Questions. Check out the viewers reaction here.
Please Wait while comments are loading...

Kannada Photos

Go to : More Photos