twitter
    For Quick Alerts
    ALLOW NOTIFICATIONS  
    For Daily Alerts

    ನಿಯಮ ಮುರಿದರೆ.. ಸ್ಪರ್ಧಿಗಳಿಗೆ ಕಾದಿದೆ ಅತಿ ಘೋರ ಶಿಕ್ಷೆ.!

    By Harshitha
    |

    ಇದುವರೆಗೂ ಮನೆಯಲ್ಲಿ ಎಲ್ಲರೂ 'ಬಿಗ್ ಬಾಸ್' ನೀಡಿದ ಅದೇಶಗಳನ್ನ ಚಾಚೂ ತಪ್ಪದೇ ಪಾಲಿಸಬೇಕಿತ್ತು. ಆದ್ರೀಗ, 'ಒಳ್ಳೆ ಹುಡುಗ' ಪ್ರಥಮ್ ಗೆ 'ಬಿಗ್ ಬಾಸ್' ತಮ್ಮಿಷ್ಟದ ನಿಯಮಗಳನ್ನು ಜಾರಿಗೆ ತರುವ 'ಸರ್ವಾಧಿಕಾರ' ನೀಡಿದ್ದಾರೆ. ಹೀಗಾಗಿ ಈ ವಾರ 'ಬಿಗ್ ಬಾಸ್' ಮನೆಯಲ್ಲಿ ಫುಲ್ 'ಲಾರ್ಡ್ ಪ್ರಥಮ್ ಸರ್' ಹವಾ.!

    'ದಂಡನಾಯಕ'ನ ಪಟ್ಟಕ್ಕೆ ಏರುತ್ತಿದ್ದಂತೆಯೇ 'ಬಿಗ್ ಬಾಸ್' ಮನೆಯಲ್ಲಿ ಕೆಲವು ನಿಯಮಗಳನ್ನ ಪ್ರಥಮ್ ಜಾರಿಗೆ ತಂದರು. 'ನಂದೇ ರಾಜ್ಯ..ನಂದೇ ರೂಲ್ಸ್', 'ನ್ಯಾಯ ಅಂದ್ರೆ ನಾನು..ನಾನು ಅಂದ್ರೆ ನ್ಯಾಯ' ಅಂತಿರುವ ಪ್ರಥಮ್ 'ಬಿಗ್ ಬಾಸ್' ಮನೆಯಲ್ಲಿ ಜಾರಿಗೆ ತಂದಿರುವ ರೂಲ್ಸ್ ಪಟ್ಟಿ ಇಲ್ಲಿದೆ ಓದಿರಿ....

    ಎಲ್ಲರೂ ಪಾಲಿಸಬೇಕು.!

    ಎಲ್ಲರೂ ಪಾಲಿಸಬೇಕು.!

    ''ನನ್ನ ಆಳ್ವಿಕೆಯಲ್ಲಿ ಸ್ಟ್ರಿಕ್ ಕಾನೂನು ಇದ್ದೇ ಇರುತ್ತೆ. ಅದನ್ನ ಎಲ್ಲರೂ ಪಾಲಿಸಲೇಬೇಕು. ಪಾಲಿಸುತ್ತೀರಾ!'' ಅಂತ ನಿಯಮಗಳನ್ನ ಹೇಳಲು ಪ್ರಥಮ್ ಶುರು ಮಾಡಿದರು. [ಪ್ರಥಮ್ ಈಗ 'ಸರ್ವಾಧಿಕಾರಿ': 'ಬಿಗ್ ಬಾಸ್' ಮನೆ ಸದಸ್ಯರಿಗೆ ಉರಿ ಉರಿ]

    ಆಣೆ-ಪ್ರಮಾಣ ಮಾಡುವಂತಿಲ್ಲ.!

    ಆಣೆ-ಪ್ರಮಾಣ ಮಾಡುವಂತಿಲ್ಲ.!

    ಕಳೆದ ವಾರ ಆಣೆ-ಪ್ರಮಾಣ ಮಾಡಿ ನಟಿ ಶಾಲಿನಿ, ಪ್ರಥಮ್ ಬಾಯಿ ಮುಚ್ಚಿಸಿದ್ರು. ಹೀಗಾಗಿ ಈ ವಾರ 'ಮನೆಯಲ್ಲಿ ಯಾರೂ ಆಣೆ-ಪ್ರಮಾಣ ಮಾಡುವ ಹಾಗೇ ಇಲ್ಲ' ಎಂಬ ನಿಯಮ ಮಾಡಿದ್ದಾರೆ 'ಸರ್ವಾಧಿಕಾರಿ' ಪ್ರಥಮ್. [ಪ್ರಥಮ್ 'ಔಟ್'.. ಸುದೀಪ್ ಚಮಕ್.. ಶಾಲಿನಿ-ಕೀರ್ತಿ ಗಪ್-ಚುಪ್]

    ಎಲ್ಲರೂ ಹೀಗೇ ಕರೆಯಬೇಕು.!

    ಎಲ್ಲರೂ ಹೀಗೇ ಕರೆಯಬೇಕು.!

    ''ನನ್ನನ್ನ 'ಲಾರ್ಡ್ ಪ್ರಥಮ್ ಸರ್' ಎಂದೇ ಎಲ್ಲರೂ ಸಂಭೋದಿಸಬೇಕು'' [ಸತತ ಎಂಟನೇ ಬಾರಿ ಪುಟ್ಟೇಗೌಡ ಅಲಿಯಾಸ್ ಪ್ರಥಮ್ ಟಾರ್ಗೆಟ್.!]

    ಅಣ್ಣ-ತಂಗಿಯ ಬಂಧ

    ಅಣ್ಣ-ತಂಗಿಯ ಬಂಧ

    'ಬಿಗ್ ಬಾಸ್' ಮನೆಯಲ್ಲಿ ಲವ್ ಬರ್ಡ್ಸ್ ಆಗಿರುವ ಭುವನ್-ಸಂಜನಾ ಈ ವಾರ ಅಣ್ಣ-ತಂಗಿಯಂತೆ ನಡೆದುಕೊಳ್ಳಬೇಕು. ''ಭುವನ್ ರನ್ನ ಸಂಜನಾ 'ಅಣ್ಣ' ಎಂದೇ ಸಂಭೋದಿಸಬೇಕು. 'ಭುವನ್ ಅಣ್ಣ ಬನ್ನಿ' ಅಂತಲೇ ಮಾತನಾಡಬೇಕು'' ಎಂಬುದು 'ಲಾರ್ಡ್ ಪ್ರಥಮ್ ಸರ್' ಪಾಸ್ ಮಾಡಿರುವ ಆರ್ಡರ್.

    ಸುಮ್ ಸುಮ್ನೆ ನಗುವಂತಿಲ್ಲ.!

    ಸುಮ್ ಸುಮ್ನೆ ನಗುವಂತಿಲ್ಲ.!

    ಅನವಶ್ಯಕವಾಗಿ ನಕ್ಕಿದರೆ ಶಿಕ್ಷೆ ಗ್ಯಾರೆಂಟಿ.

    ಅಸಡ್ಡೆ ತೋರಿಸುವಂತಿಲ್ಲ.!

    ಅಸಡ್ಡೆ ತೋರಿಸುವಂತಿಲ್ಲ.!

    ''ಮನೆಯ ಎಲ್ಲಾ ಕೆಲಸಗಳನ್ನು ಎಲ್ಲರೂ ಅಸಡ್ಡೆ ತೋರಿಸದೇ ಮಾಡಬೇಕು. ಎದ್ದ ಕೂಡಲೆ ಬೆಡ್ ಶೀಟ್ ಮಡಿಚಿಡಬೇಕು. ಬೆಡ್ ರೂಮ್ ಕ್ಲೀನ್ ಆಗಿ ಕಾಣಬೇಕು'' ಎಂಬ ನಿಯಮ ಜಾರಿಗೆ ತಂದಿದ್ದಾರೆ 'ದಂಡನಾಯಕ'ರು.

    ಆಟ ಆಡುವ ಹಾಗಿಲ್ಲ

    ಆಟ ಆಡುವ ಹಾಗಿಲ್ಲ

    ಅಂತ್ಯಾಕ್ಷರಿ, ಚೌಕಾಬಾರಾ ಸೇರಿದಂತೆ ಯಾವುದೇ ಆಟವನ್ನು ಆಡುವ ಹಾಗಿಲ್ಲ.

    ಶಿಸ್ತು ಕಾಪಾಡಬೇಕು

    ಶಿಸ್ತು ಕಾಪಾಡಬೇಕು

    ಎಲ್ಲರೂ ಒಟ್ಟಿಗೆ ಊಟ-ತಿಂಡಿ ಮಾಡಬೇಕು. ತಿಂದ ತಟ್ಟೆಯನ್ನ ಅವರವರೇ ತೊಳೆದು ಇಡಬೇಕು. ಟಿಶ್ಯೂ ಪೇಪರ್ ಅಗತ್ಯಕ್ಕಿಂತ ಹೆಚ್ಚು ಬಳಸುವಂತಿಲ್ಲ. ಬಳಸಿ ಅಲ್ಲಿ ಇಲ್ಲಿ ಬಿಸಾಕುವಂತಿಲ್ಲ. [BBK4: ಯಾವ್ದು ಆಗ್ಬಾರ್ದು ಅಂದುಕೊಂಡ್ರೋ, ಈ ವಾರ ಅದೇ ಆಗ್ತಿದೆ.!]

    ಸಿಹಿ ಇಲ್ಲ

    ಸಿಹಿ ಇಲ್ಲ

    ಮೋಹನ್ ಹೊರತಾಗಿ ಎಲ್ಲರೂ ದಿನಕ್ಕೆ ಎರಡು ಬಾರಿ ಸಕ್ಕರೆ ರಹಿತ ಟೀ ಕುಡಿಯಬೇಕು.

    ಕೀರ್ತಿ-ನಿರಂಜನ್ ಗೆ ಕಾದಿದೆ ವಿಚಿತ್ರ ಶಿಕ್ಷೆ

    ಕೀರ್ತಿ-ನಿರಂಜನ್ ಗೆ ಕಾದಿದೆ ವಿಚಿತ್ರ ಶಿಕ್ಷೆ

    ಕೀರ್ತಿ-ನಿರಂಜನ್ ತಪ್ಪು ಮಾಡಿದರೆ ಸಂಜನಾ ಮುಖ ನೋಡಿಕೊಂಡು 51 ಸಲ 'ನಾ ನಿನ್ನ ಪ್ರೀತಿಸುವೆ ಸಂಜನಾ' ಅಂತ ನಗುನಗುತ್ತಾ ಹೇಳಬೇಕು.

    ತಲೆ ಬಗ್ಗಿಸಿ ಮಾತನಾಡಬೇಕು

    ತಲೆ ಬಗ್ಗಿಸಿ ಮಾತನಾಡಬೇಕು

    ''ಎಲ್ಲರೂ ತಲೆ ಬಗ್ಗಿಸಿಕೊಂಡು ನನ್ನ ಹತ್ತಿರ ಮಾತನಾಡಬೇಕು. ಕೊಟ್ಟಿರುವ ಶಿಕ್ಷೆಯನ್ನೂ ಎಲ್ಲರೂ ಅನುಭವಿಸಲೇಬೇಕು. ನಾನು ಹೇಳಿದ್ದೇ ಕಾನೂನು. ಅಶಿಸ್ತಿಗೆ ಅವಕಾಶ ಇಲ್ಲ. ನಾನು ತಿಂಡಿ-ಊಟ ಮಾಡಿದ ನಂತರ ಎಲ್ಲರೂ ಮಾಡಬೇಕು'' ಎಂಬ ನಿಯಮ ಜಾರಿಗೊಳಿಸಿದ್ದಾರೆ 'ಸರ್ವಾಧಿಕಾರಿ'

    ನಿರಂಜನ್ ಹೀಗೆ ಮಾತನಾಡಬೇಕು

    ನಿರಂಜನ್ ಹೀಗೆ ಮಾತನಾಡಬೇಕು

    ಕೊರೆ ಹಲ್ಲು ಕಾಣದಂತೆ ಬಾಯಿಗೆ ಕೈ ಅಡ್ಡ ಹಿಡಿದುಕೊಂಡು ನಿರಂಜನ್ ಮಾತನಾಡಬೇಕು.

    ಪದ ಪ್ರಯೋಗದಲ್ಲಿ ಜಾಣ್ಮೆ ಇರಬೇಕು

    ಪದ ಪ್ರಯೋಗದಲ್ಲಿ ಜಾಣ್ಮೆ ಇರಬೇಕು

    ಅಸಭ್ಯ, ಅಶ್ಲೀಲ ಪದಗಳನ್ನು ಮನೆಯಲ್ಲಿ ಯಾರೂ ಬಳಸುವಂತಿಲ್ಲ.

    'ಮಮ್ಮಿ' ಅಲ್ಲ.!

    'ಮಮ್ಮಿ' ಅಲ್ಲ.!

    ಮಾಳವಿಕಾ ರವರನ್ನ ಎಲ್ಲರೂ 'ಹಾನರಬಲ್ ಮೇಡಂ' ಎಂದೇ ಕರೆಯಬೇಕು. ಮಾಳವಿಕಾ ರವರನ್ನ ಶಾಲಿನಿ ಹೆಸರಿಟ್ಟು ಕರೆಯುವ ಹಾಗಿಲ್ಲ. ಹಾಗೇ, ಕೀರ್ತಿ ಮತ್ತು ನಿರಂಜನ್ ಕೂಡ ಮಾಳವಿಕಾ ರವರನ್ನ 'ಮಮ್ಮಿ' ಎನ್ನುವಂತಿಲ್ಲ. [ನಟಿ ಮಾಳವಿಕಾ ಮಾನ-ಮರ್ಯಾದೆ ಕಳೆದ ಶೀತಲ್ ಶೆಟ್ಟಿ ಗ್ಯಾಂಗ್.!]

    24 ಗಂಟೆ ನಿಯಮ.!

    24 ಗಂಟೆ ನಿಯಮ.!

    'ತುರ್ತು ಪರಿಸ್ಥಿತಿ' ಲಕ್ಷುರಿ ಬಜೆಟ್ ಟಾಸ್ಕ್ ಮುಗಿಯುವವರೆಗೂ ದಿನದ 24 ಗಂಟೆ ಈ ಎಲ್ಲ ನಿಯಮಗಳು ಚಾಲ್ತಿಯಲ್ಲಿರಬೇಕು. ಯಾರಾದರೂ ನಿಯಮ ಮುರಿದರೆ ಘೋರ ಶಿಕ್ಷೆ ಕಾದಿದೆ. ಹೇಳಿ ಕೇಳಿ ಪ್ರಥಮ್ ಸರ್ವಾಧಿಕಾರಿ.!

    English summary
    Bigg Boss Kannada 4, Week 8 : Kannada Director Pratham turns 'Dictator' and passes new rules in 'Emergency' task given by 'Bigg Boss'.
    Wednesday, November 30, 2016, 16:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X