»   » ಇವರೆಲ್ಲ 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಬಂದಿರುವ ಉದ್ದೇಶ ಏನು ಗೊತ್ತೇ.?

ಇವರೆಲ್ಲ 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಬಂದಿರುವ ಉದ್ದೇಶ ಏನು ಗೊತ್ತೇ.?

Posted by:
Subscribe to Filmibeat Kannada

ಕಿರುತೆರೆಯಲ್ಲಿ 400ಕ್ಕೂ ಹೆಚ್ಚು ಸಂಚಿಕೆಗಳನ್ನು ನಡೆಸಿಕೊಟ್ಟಿದ್ದ ನಟಿ ಮಾಳವಿಕಾ ಅವಿನಾಶ್ 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟಿದ್ದು ಯಾಕೆ.? ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ನಟ ಮೋಹನ್ 'ಬಿಗ್ ಬಾಸ್' ಮನೆಯೊಳಗೆ ಕಾಲಿಡಲು ಕಾರಣವೇನು.? ಶೀತಲ್ ಶೆಟ್ಟಿ, ನಿರಂಜನ್ ದೇಶಪಾಂಡೆ, ಶಾಲಿನಿ ಹಾಗೂ 'ಕಿರಿಕ್' ಕೀರ್ತಿ 'ಬಿಗ್ ಬಾಸ್' ಮನೆಗೆ ಬಂದಿರುವ ಉದ್ದೇಶ ಏನು.? ['ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಎಲ್ಲಾ ಅಪ್ ಡೇಟ್ಸ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ]

ಈ ಪ್ರಶ್ನೆಗಳನ್ನ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ 'ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳ ಮುಂದಿಟ್ಟರು. ಆಗ ಸ್ಪರ್ಧಿಗಳು ಸತ್ಯ ಬಾಯ್ಬಿಟ್ಟರು. ಅದರ ಸಂಪೂರ್ಣ ವರದಿ ಇಲ್ಲಿದೆ, ಓದಿರಿ....

'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಸಂಜನಾ ಬಂದಿದ್ದು ಯಾಕೆ.?

'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಸಂಜನಾ ಬಂದಿದ್ದು ಯಾಕೆ.?

''ನಾನು ಕಿರುತೆರೆ ನಟಿ. ನನ್ನ ಪಾತ್ರದ ಹೆಸರು ಏನಿರುತ್ತೆ, ಜನರಿಗೆ ಅದೇ ಹೆಸರಿನಲ್ಲಿ ನಾನು ರಿಜಿಸ್ಟರ್ ಆಗಿರುತ್ತೇನೆ. ಎಲ್ಲೇ ಹೋದರೂ, ಆ ಕ್ಯಾರೆಕ್ಟರ್ ಹೆಸರಿನಿಂದಲೇ ಜನ ನನ್ನನ್ನ ಗುರುತಿಸುತ್ತಾರೆ. ಹೀಗಾಗಿ ಸಂಜನಾ ಆಗಿ ನಾನು ಗುರುತಿಸಿಕೊಳ್ಳಬೇಕಿತ್ತು. ಅದಕ್ಕೆ ನಾನು ಇಲ್ಲಿಗೆ ಬಂದೆ'' ಅಂತ ಉತ್ತರ ಕೊಟ್ಟರು ನಟಿ ಸಂಜನಾ

ಪ್ರಥಮ್ ಬಂದಿದ್ಯಾಕೆ ಗೊತ್ತಾ.?

ಪ್ರಥಮ್ ಬಂದಿದ್ಯಾಕೆ ಗೊತ್ತಾ.?

''ನನ್ನ ಮುಸುಡಿ ಎಂಟೈರ್ ಕರ್ನಾಟಕ ನೋಡ್ಬೇಕು ಅಂತ ತುಂಬಾ ಆಸೆ ಇಟ್ಕೊಂಡು ಬಂದಿದ್ದೇನೆ'' ಎಂದರು 'ಒಳ್ಳೆ ಹುಡುಗ' ಪ್ರಥಮ್

ಓಂ ಪ್ರಕಾಶ್ ರಾವ್ ಏನಂದರು.?

ಓಂ ಪ್ರಕಾಶ್ ರಾವ್ ಏನಂದರು.?

''ನಾನು ಇಬ್ಬರು ವ್ಯಕ್ತಿಗಳಿಗೆ ಗೌರವ ಕೊಡಬೇಕಿತ್ತು. ಅದಕ್ಕಾಗಿ ಅವರ ಮಾತಿಗೆ ಗೌರವ ಕೊಟ್ಟು ಇಲ್ಲಿಗೆ ಬಂದಿದ್ದೇನೆ'' - ಓಂ ಪ್ರಕಾಶ್ ರಾವ್, ನಿರ್ದೇಶಕ

ಸತ್ಯ ಬಾಯ್ಬಿಟ್ಟ ಮೋಹನ್

ಸತ್ಯ ಬಾಯ್ಬಿಟ್ಟ ಮೋಹನ್

''ಪ್ರ್ಯಾಕ್ಟಿಕಲ್ ಆಗಿ ಹೇಳಬೇಕು ಅಂದ್ರೆ ನಾನು ದುಡ್ಡಿಗಾಗಿ ಬಂದಿರೋದು'' ಎಂದರು ನಟ, ನಿರ್ದೇಶಕ ಮೋಹನ್

ಮಾಳವಿಕಾ ಅವಿನಾಶ್ ಕೂಡ ಅದನ್ನೇ ಹೇಳಿದರು.!

ಮಾಳವಿಕಾ ಅವಿನಾಶ್ ಕೂಡ ಅದನ್ನೇ ಹೇಳಿದರು.!

''ಫೈನಾನ್ಶಿಯಲ್ ಕಮಿಟ್ಮೆಂಟ್ ಇರುವ ಕಾರಣಕ್ಕೆ ಇಲ್ಲಿಗೆ ಬಂದಿದ್ದೇನೆ'' ಎಂದರು ನಟಿ ಮಾಳವಿಕಾ ಅವಿನಾಶ್

ಅದೃಷ್ಟದ ಹುಡುಕಾಟದಲ್ಲಿ ಕಾರುಣ್ಯ ರಾಮ್

ಅದೃಷ್ಟದ ಹುಡುಕಾಟದಲ್ಲಿ ಕಾರುಣ್ಯ ರಾಮ್

''ನನಗೆ ಲಕ್ ಇಲ್ಲ. ಏಳೆಂಟು ವರ್ಷದಿಂದ ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇನ್ನೂ ಅದೃಷ್ಟ ನನ್ನ ಕೈಹಿಡಿದಿಲ್ಲ. ಇಲ್ಲಿಂದ ನನಗೆ ಒಳ್ಳೆಯ ಅವಕಾಶ ಸಿಗಬಹುದು ಎಂಬ ನಂಬಿಕೆ ಮೇಲೆ ಬಂದಿದ್ದೇನೆ'' - ಕಾರುಣ್ಯ ರಾಮ್, ನಟಿ

ಭುವನ್ ಬಂದಿರೋದು ಯಾಕೆ?

ಭುವನ್ ಬಂದಿರೋದು ಯಾಕೆ?

''ಕರ್ನಾಟಕದ ಜನರಿಗೆ ಹತ್ತಿರ ಆಗಲು ಬಂದಿದ್ದೇನೆ'' - ಭುವನ್ ಪೊನ್ನಣ್ಣ

ರೇಖಾ ಉದ್ದೇಶ ಏನು.?

ರೇಖಾ ಉದ್ದೇಶ ಏನು.?

''ನಾನಿಲ್ಲಿ ಒಂದು ಎಕ್ಸ್ ಪೀರಿಯೆನ್ಸ್ ಗೋಸ್ಕರ ಬಂದಿದ್ದೇನೆ'' - ರೇಖಾ, ನಟಿ

ಶಾಲಿನಿ ಪ್ಲಾನ್ ಏನು.?

ಶಾಲಿನಿ ಪ್ಲಾನ್ ಏನು.?

''ನನಗೆ ರೂಲ್ಸ್ ಫಾಲೋ ಮಾಡಿ ಅಭ್ಯಾಸ ಇಲ್ಲ. ಒಂದೇ ಜಾಗದಲ್ಲಿ ಇರಲು ಇಷ್ಟ ಆಗಲ್ಲ. ಆದ್ರೆ, 'ಬಿಗ್ ಬಾಸ್' ಇಷ್ಟವಾದ ಶೋ. ಹೀಗಾಗಿ ನನ್ನನ್ನ ನಾನೇ ಟೆಸ್ಟ್ ಮಾಡಿಕೊಳ್ಳಲು ಬಂದೆ'' - ಶಾಲಿನಿ

ಶೀತಲ್ ಶೆಟ್ಟಿ ತಲೆಯಲ್ಲಿ ಏನಿದೆ.?

ಶೀತಲ್ ಶೆಟ್ಟಿ ತಲೆಯಲ್ಲಿ ಏನಿದೆ.?

''ಒಂದು ವರ್ಷದಿಂದ ನಾನು ಅಂದುಕೊಂಡಿರೋದು ಆಗ್ತಿರ್ಲಿಲ್ಲ. ಹೊಸದಾಗಿ ಏನಾದರೂ ಸ್ಟಾರ್ಟ್ ಮಾಡಲು 'ಬಿಗ್ ಬಾಸ್' ನನಗೆ ಒಂದು ವೇದಿಕೆ'' - ಶೀತಲ್ ಶೆಟ್ಟಿ

ನಿರಂಜನ್ ಗೆ ಸಿಕ್ಕಿದ್ದೇ ಚಾನ್ಸ್.!

ನಿರಂಜನ್ ಗೆ ಸಿಕ್ಕಿದ್ದೇ ಚಾನ್ಸ್.!

''ಈ ಅವಕಾಶ ನನಗೆ ತುಂಬಾ ದೊಡ್ಡದು ಅನಿಸ್ತು, ಅದಕ್ಕೆ ಹಿಂದೆ-ಮುಂದೆ ನೋಡದೆ ಒಪ್ಪಿಕೊಂಡೆ. ಹಾಗೇ ಫೈನಾನ್ಶಿಯಲ್ ಕಮಿಟ್ಮೆಂಟ್ ಇರೋದ್ರಿಂದ ಬಂದೆ'' - ನಿರಂಜನ್ ದೇಶಪಾಂಡೆ

ಕೀರ್ತಿ ಕುಮಾರ್ ಹೇಳಿದ್ದೇನು.?

ಕೀರ್ತಿ ಕುಮಾರ್ ಹೇಳಿದ್ದೇನು.?

''ಕಿರಿಕ್' ಕೀರ್ತಿ ಬರೀ ಕಿರಿಕ್ ಅಲ್ಲ ಅನ್ನೋದನ್ನ ಪ್ರೂವ್ ಮಾಡಿಕೊಳ್ಳಲು ಬಂದೆ. ಜೊತೆಗೆ ನನ್ನ ಮಗನ ಭವಿಷ್ಯ ಕಟ್ಟಬಹುದು ಅಂತ ಬಂದೆ'' - ಕೀರ್ತಿ ಕುಮಾರ್

English summary
Bigg Boss Kannada 4, Week 6: Why did all the Contestants agreed to be part of Bigg Boss.? Here is the answer for this question.
Please Wait while comments are loading...

Kannada Photos

Go to : More Photos