»   » ಬಿಗ್ ಬಾಸ್ 7 : ನಿರೀಕ್ಷೆಯಂತೆ ದೈತ್ಯ ದೇಹಿ ಹೊರಕ್ಕೆ

ಬಿಗ್ ಬಾಸ್ 7 : ನಿರೀಕ್ಷೆಯಂತೆ ದೈತ್ಯ ದೇಹಿ ಹೊರಕ್ಕೆ

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 7 ರಲ್ಲಿ ಶನಿವಾರ ಎರಡನೇ ಎಲಿಮಿನೇಷನ್ ಕಾಣಲಾಗಿದೆ. ನಿರೀಕ್ಷೆಯಂತೆ ದೈತ್ಯ ಇಟ್ಟುಕೊಂಡು ಒದ್ದಾಡುತ್ತಿದ್ದ ರಜತ್ ರವೈಲ್ ನನ್ನು ಮನೆಯಿಂದ ಹೊರಕ್ಕೆ ಕಳಿಸಲಾಗಿದೆ.

ಆದರೆ, ನಾಮಿನೇಷನ್ ವೇಳೆಯಲ್ಲಿ ಬಿಗ್ ಬಾಸ್ ಸ್ವಲ್ಪ ಕುತೂಹಲ ಮೂಡಿಸಿದ ಘಟನೆ ನಡೆಯಿತು. ಸ್ವರ್ಗವಾಸಿಗಳಿಗೆ ಎಂದಿನಂತೆ ಎಲಿಮಿನೇಷನ್ ಮಾಡಲು ನರಕವಾಸಿಗಳ ಹೆಸರು ನಾಮಿನೇಟ್ ಮಾಡುವಂತೆ ಕೇಳಿ ಕೊಳ್ಳಲಾಯಿತು. ಆದರೆ, ಮನೆಯಿಂದ ಹೊರಕ್ಕೆ ಕಳಿಸುವ ಸ್ಪರ್ಧಿಯ ಆಯ್ಕೆಯನ್ನು ಅಥವಾ ಸೂಪರ್ ಪವರ್ ಅನ್ನು ಕ್ಯಾಪ್ಟನ್ ತನೀಶಾ ಕೈಗೆ ಬಿಗ್ ಬಾಸ್ ನೀಡಿಬಿಟ್ಟರು.

ನಾಮಿನೇಷನ್ ಗೊಂಡವರು: ಪ್ರತ್ಯೂಷಾ ಬ್ಯಾನರ್ಜಿ, ಕಾಮ್ಯಾ ಪಂಜಾಬಿ, ಗೌಹರ್ ಖಾನ್, ಕುಶಾಲ್ ತಂಡನ್ ಹಾಗೂ ರಜತ್ ರಾವೈಲ್, ಈ ಪೈಕಿ ಕಡಿಮೆ ವೋಟ್ ಪಡೆದ ರಜತ್ ನನ್ನು ಮನೆಯಿಂದ ಹೊರಕ್ಕೆ ಹಾಕಲಾಗಿದೆ.

ರಜತ್ ತನಗಾಗಿರುವ ಅನಾರೋಗ್ಯವನ್ನು ಪ್ರಾಣಾಂತಿಕ ಎಂಬಂತೆ ಬಿಂಬಿಸಿದ್ದೇ ಆತನನ್ನು ಮನೆಯಿಂದ ಹೊರಹಾಕುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಮಿಕ್ಕವರು ಬಚಾವಾಗಲು ಏನು ಕಾರಣ ಇನ್ನಷ್ಟು ವಿವರಗಳು ಮುಂದಿದೆ ಓದಿ..

ಮಿಕ್ಕವರು ಉಳಿದಿದ್ದು ಹೇಗೆ

ಮಿಕ್ಕವರು ಉಳಿದಿದ್ದು ಹೇಗೆ

ಪ್ರತ್ಯೂಷಾಗೆ ದೊಡ್ಡ ಫ್ಯಾನ್ ಸಮೂಹವಿದೆ. ಕಾಮ್ಯಾ ಹಾಗೂ ಗೌಹರ್ ಇಬ್ಬರೂ ತಾವು ಎಂಥಾ ನಾಟಕರಾಣಿಯರು ಎಂಬುದನ್ನು ತೋರಿಸಿದ್ದಾರೆ ಇದು ಪ್ರೇಕ್ಷಕರಿಗೆ ಮನರಂಜನೆ ನೀಡಿದೆ. ಕುಶಾಲ್ ಹಾಗು ಗೌಹರ್ ಪ್ರೇಮ್ ಕಹಾನಿ ಬಗ್ಗೆ ಜನರಿಗೆ ಹೆಚ್ಚು ಕುತೂಹಲ ಮೂಡಿದೆ.

ಸಲ್ಮಾನ್ ಗೆಳೆಯ ರಜತ್

ಸಲ್ಮಾನ್ ಗೆಳೆಯ ರಜತ್

ಸಲ್ಮಾನ್ ಅವರ ಗೆಳೆಯ ಪೈಕಿ ರಜತ್ ಕೂಡಾ ಒಬ್ಬರಾಗಿದ್ದು, ಬಾಲಿವುಡ್ ಚಿತ್ರ ಬಾಡಿಗಾರ್ಡ್ ನಲ್ಲಿ ಕಾಣಿಸಿಕೊಂಡಿದ್ದರು. ಸಲ್ಮಾನ್ ಅವರ ಮಾರ್ಗದರ್ಶನದ ಮೇರೆಗೆ ಬಿಗ್ ಬಾಸ್ ಗೆ ಬಂದೆ ಎಂದು ಕೂಡಾ ಒಪ್ಪಿಕೊಂಡಿದ್ದರು.

ಅಳುಮುಂಜಿ ರಜತ್

ಅಳುಮುಂಜಿ ರಜತ್

ತನ್ನ ಮಗುವನ್ನು ನೋಡಬೇಕು ಎಂದು ಹಂಬಲಿಸಿದ ರಜತ್, ದೇಹಾರೋಗ್ಯ ಕುಸಿತದಿಂದ ತೀವ್ರವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿ ಬಿಟ್ಟ. ಆದರೆ, ಅಗತ್ಯಕ್ಕಿಂತ ಹೆಚ್ಚು ಅತ್ತಿದ್ದು ಮುಳುವಾಯಿತು.

ಹೇಳಿದ್ದು ಪಾಲಿಸಲಿಲ್ಲ

ಹೇಳಿದ್ದು ಪಾಲಿಸಲಿಲ್ಲ

ಬಿಗ್ ಬಾಸ್ ಮನೆ ಪ್ರವೇಶಿಸಿದ ಮೇಲೆ ಜಿಮ್ ಗೆ ಸೇರಿ ದೇಹ ದಂಡಿಸಿ ಸಿಕ್ಸ್ ಪ್ಯಾಕ್ ಮಾಡುತ್ತೇನೆ ಎಂದ ರಜತ್ ಎದ್ದು ಓಡಾಡುವುದೇ ಕಷ್ಟವಾಯಿತು. ಮಲಗಲು ಆಗದೆ ಒದ್ದಾಡಿಬಿಟ್ಟ

ಮನೆಯಿಂದ ಹೋಗಲು ನಿರ್ಧರಿಸಿದ್ದ

ಮನೆಯಿಂದ ಹೋಗಲು ನಿರ್ಧರಿಸಿದ್ದ

ರಜತ್ ಬಿಗ್ ಬಾಸ್ ಮನೆ ತೊರೆಯಲು ನಿರ್ಧರಿಸಿದ ಮೇಲೆ ಬಿಗ್ ಬಾಸ್ ಏನೇ ಆಶ್ವಾಸನೆ ಕೊಟ್ಟರೂ ಅದು ಕೆಲ ಗಂಟೆಗಳಲ್ಲೆ ರಜತ್ ಮರೆತು ಬಿಡುತ್ತಿದ್ದ ಮತ್ತೆ ಮತ್ತೆ ಅತ್ತು ಕರೆದು ರಂಪಾ ಮಾಡಿಬಿಟ್ಟ

 ತನೀಶಾ ಯತ್ನ ವಿಫಲ

ತನೀಶಾ ಯತ್ನ ವಿಫಲ

ರಜತ್ ಗೆ ಧೈರ್ಯ ತುಂಬಿ ಉಳಿಸಿಕೊಳ್ಳಲು ಯತ್ನಿಸಿದ ಕ್ಯಾಪ್ಟನ್ ತನೀಶಾ ಹಾಗೂ ಗೆಳೆಯ ಅರ್ಮಾನ್ ಪ್ರಯತ್ನ ವಿಫಲವಾಯಿತು. ನರಕವಾಸಿಗಳಂತೂ ರಜತ್ ಕಂಡರೆ ನಗುವಂತಾಯಿತು. ಆಂಡಿ ಕೂಡಾ ರಜತ್ ವಿರುದ್ಧ ಕತ್ತಿ ಮಸೆಯತೊಡಗಿದ

ರಜತ್ ಹ್ಯಾಪಿ

ರಜತ್ ಹ್ಯಾಪಿ

ಕುಟುಂಬದವರನ್ನು ಕಾಣದೆ ರಜತ್ ನೋವು ಅನುಭವಿಸಿದ್ದು ನಿಜ ಆದರೆ, ದೇಹಾರೋಗ್ಯ ಸಮಸ್ಯೆ ಎದುರಿಸಿದರೂ ಅತಿಯಾದ ರಂಪಾಟ ಮಾಡಿ ಶೋನಲ್ಲಿದ್ದ ಇತರೆ ಸ್ಪರ್ಧಿಗಳಿಗೆ ಕಿರಿಕಿರಿ ಉಂಟು ಮಾಡಿದ್ದು ರಜತ್ ಹೊರ ಹಾಕಲು ದಾರಿಯಾಯಿತು.

English summary
It's time for second elimination in Bigg Boss 7. The elimination was held on Saturday, 28th September 2013. Rajat Rawail is sent out of house in the second elimination. Previously, Bigg Boss has asked all the Jannat wasis to nominate Jahannum wasis for the elimination.
Please Wait while comments are loading...

Kannada Photos

Go to : More Photos