»   » ಬಿಗ್ ಬಾಸ್ ಸ್ಪರ್ಧಿ ಔಟ್, ಅಭಿಮಾನಿಯಿಂದ ಆತ್ಮಹತ್ಯೆ ಯತ್ನ!

ಬಿಗ್ ಬಾಸ್ ಸ್ಪರ್ಧಿ ಔಟ್, ಅಭಿಮಾನಿಯಿಂದ ಆತ್ಮಹತ್ಯೆ ಯತ್ನ!

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ಒಂದಲ್ಲ ಒಂದು ರೀತಿ ವಿವಾದಕ್ಕೆ ಈಡಾಗುತ್ತಲೇ ಇದೆ. ಕನ್ನಡದ ಬಿಗ್ ಬಾಸ್ 3ನಲ್ಲಿ ಹುಚ್ಚ ವೆಂಕಟ್ ಪ್ರಸಂಗವಾದ ಬಳಿಕ ಈಗ ಬಿಗ್ ಬಾಸ್ 9ರಿಂದ ಶಾಕಿಂಗ್ ಸುದ್ದಿ ಬಂದಿದೆ.

ನೀಳಕೇಶರಾಶಿಯುಳ್ಳ ಯುವತಿ ದಿಗಂಗನಾ ಸೂರ್ಯವಂಶಿ ಮನೆಯಿಂದ ಹೊರ ಬಂದ ಆಘಾತ ಸಹಿಸಲು ಆಗದೆ ಅವರ ಅಭಿಮಾನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.[ದುಡ್ಡಿಗಾಗಿ ಎಲ್ಲಾ! ಬಿಗ್ ಬಾಸ್ ವಿನ್ನರ್ ಮೀರಿಸಿದ ರಿಮಿ]

ಈಗಂತೂ ಬಿಗ್ ಬಾಸ್ 9ರಲ್ಲಿ ಸಲ್ಮಾನ್ ಖಾನ್ ನೋಡಬೇಕೆಂದರೆ ವಾರಂತ್ಯದ ತನಕ ಕಾಯಲೇಬೇಕಾಗಿಲ್ಲ. ವಾರದ ಮಧ್ಯದಲ್ಲೇ ಸಲ್ಮಾನ್ ಖಾನ್ ಎಂಟ್ರಿ ಕೊಟ್ಟು ಎಲಿಮಿನೇಷನ್, ವೈಲ್ಡ್ ಕಾರ್ಡ್ ಎಂಟ್ರಿ ಮಾಡಿಸುತ್ತಿದ್ದಾರೆ.

ಈ ವಾರ ಕೂಡಾ ಮನೆಯ ಅತ್ಯಂತ ಕಿರಿಯ ಸ್ಪರ್ಧಿ ಹಾಗೂ ಕೆಲ ಕಾಲದಿಂದ ಅನಾರೋಗ್ಯಕ್ಕೀಡಾಗಿದ್ದ ಎಲ್ಲರ ಮೆಚ್ಚುಗೆಯ ಸುಂದರಿ ದಿಗಂಗನಾರನ್ನು ಮನೆಯಿಂದ ಹೊರಕ್ಕೆ ಕರೆಸಿಕೊಳ್ಳಲಾಯಿತು. ಅದರಲ್ಲೂ ಟ್ವಿಸ್ಟ್ ಇಟ್ಟ ಬಿಗ್ ಬಾಸ್, ಸುಯಶ್ ಹಾಗೂ ದಿಗಂಗನಾ ನಡುವೆ ಯಾರು ಔಟ್ ಆಗಬೇಕು ಎಂಬುದನ್ನು ಬಜರ್ ಟಾಸ್ಕ್ ಮೂಲಕ ನಿರ್ವಹಿಸಿದರು.

ಆದರೆ, ದಿಗಂಗನಾ ಮನೆಯಿಂದ ಹೊರ ಬಂದಿದ್ದು, ಅವರ ಬಾಂಗ್ಲಾದೇಶದ ಅಭಿಮಾನಿ ಆಲಿಯಾ ಖಾನ್ ಅವರಿಗೆ ಭಾರಿ ಆಘಾತ ಉಂಟು ಮಾಡಿದೆ. ಇದೇ ನೋವಲ್ಲಿ ಕೈಯಲ್ಲಿ ಚಾಕು ಹಿಡಿದುಕೊಂಡು ಮಣಿಕಟ್ಟಿನ ನರಗಳನ್ನು ಕತ್ತರಿಸಿಕೊಂಡಿದ್ದಾರೆ.

ಆಲಿಯಾ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಲಿಯಾಗಾಗಿ ಪ್ರಾರ್ಥಿಸಿ ಎಂದು ದಿಗಂಗನಾ ಟ್ವೀಟ್ ಮಾಡಿದ್ದಾರೆ.

17 ವರ್ಷದ ದಿಗಂಗನಾ ಅವರು ಬಿಗ್ ಬಾಸ್ ನ ಅತ್ಯಂತ ಕಿರಿಯ ಸ್ಪರ್ಧಿಯಾಗಿದ್ದರು. ಟಿವಿ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿರುವ ದಿಗಂಗನಾಗೆ ಭಾರತವಲ್ಲದೆ, ಪಾಕಿಸ್ತಾನ, ಬಾಂಗ್ಲಾದೇಶದಲ್ಲೂ ಅಭಿಮಾನಿಗಳಿದ್ದಾರೆ.

ದಿಗಂಗನಾ ಸೂರ್ಯವಂಶಿ ಫ್ಯಾನ್ ನಿಂದ ಟ್ವೀಟ್

ದಿಗಂಗನಾ ಸೂರ್ಯವಂಶಿ ಫ್ಯಾನ್ ಅಲಿಯಾ ಅವರು ನಿರಂತರವಾಗಿ ದಿಗಂಗನಾ ಪರ ಸಂದೇಶಗಳನ್ನು ಕಳಿಸುತ್ತಿದ್ದರು. ದಿಗಂಗನಾ ಅವರ ಎಲಿಮೇಷನ್ ನಿಂದ ಬೇಸರವಾಗಿದ್ದರ ಬಗ್ಗೆ ಹೇಳಿಕೊಂಡಿದ್ದರು.

ಮಿಡ್ ವೀಕ್ ಎಲಿಮಿನೇಷನ್

ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ದಿಗಂಗನಾ ಮನೆಯಿಂದ ಹೊರಕ್ಕೆ ಹೋಗಲು ಏನು ಕಾರಣ ಎಂಬುದು ಸ್ಪಷ್ಟವಿಲ್ಲ. ಅದರೆ, ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಗ್ಲಾಮರ್ ಟಚ್ ನೀಡಲು ಬಂದಿದ್ದಾರೆ. ನೋರಾ ಫತೇಹಿ ಹಾಗೂ ಸೀಜೆಲ್ ಥಕ್ರಾಲ್ ಮನೆಯ ಇತರೆ ಸ್ಪರ್ಧಿಗಳಿಗೆ ಕಿಕ್ ನೀಡಲು ಸಜ್ಜಾಗಿದ್ದಾರೆ.

ರಿಮಿ ನಂತರ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದ ಸ್ಪರ್ಧಿ

ರಿಮಿ ನಂತರ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದ ಸ್ಪರ್ಧಿ ಎಂದರೆ ದಿಗಂಗನಾ, ದಿಗಂಗನಾ ಅವರು ಕೆಲ ದಿನಗಳಿಂದ ಯಾವುದೇ ಟಾಸ್ಕ್ ಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ದಿಗಂಗನಾ ಮನೆಯ ಇತರೆ ಸದಸ್ಯರ ಪ್ರೀತಿ ಗಳಿಸಿದ್ದರು.

ಜೋಡಿಗಳನ್ನು ಉಳಿಸಿದ ಬಿಗ್ ಬಾಸ್

ಮನೆಯಲ್ಲಿ ಜೋಡಿಗಳಾದ ಕಿಶ್ವರ್ ಹಾಗೂ ಸುಯಶ್, ರೊಶೆಲ್ ಹಾಗೂ ಕೀತ್ ರನ್ನು ಮನೆಯಲ್ಲೇ ಉಳಿಸಲಾಗಿದೆ. ಡೇಂಜರ್ ಜೋನ್ ನಲ್ಲಿದ್ದ ಸುಯಶ್ ಅವರು ಕೊನೆ ಕ್ಷಣದಲ್ಲಿ ಬಚಾವಾಗಿದ್ದಾರೆ. ದಿಗಂಗನಾ ಔಟ್ ಆಗಲು ಪ್ರೇಕ್ಷಕರ ಮತಗಳೇ ಕಾರಣ ಎಂಬುದು ನಂಬಲು ಅಭಿಮಾನಿಗಳು ಸಿದ್ಧರಿಲ್ಲ.

ನನಗೆ ಒಂದು ಒಳ್ಳೆ ಅನುಭವ ಸಿಕ್ಕಿದೆ

ಬಿಗ್ ಬಾಸ್ ಮನೆಯಲ್ಲಿ ನನಗೆ ಒಂದು ಒಳ್ಳೆ ಅನುಭವ ಸಿಕ್ಕಿದೆ ಎಂದು ಟ್ವೀಟ್ ಮಾಡಿದ ದಿಗಂಗನಾ

ಅಭಿಮಾನಿಗಳಿಗೆ ದಿಗಂಗನಾರಿಂದ ಸಂದೇಶ

ಅಭಿಮಾನಿಗಳಿಗೆ ದಿಗಂಗನಾ ಸಂದೇಶ ನೀಡಿ, ನೀವು ನನ್ನನ್ನು ಔಟ್ ಮಾಡಿಲ್ಲ. ಮನೆಯ ಇತರೆ ಸದಸ್ಯರು ಔಟ್ ಮಾಡಿದ್ದು ಎಂದಿದ್ದಾರೆ.

English summary
Digangana Suryavanshi was shocked and upset to know that one of her fans attempted suicide following her eviction from TV reality show Bigg Boss 9.
Please Wait while comments are loading...

Kannada Photos

Go to : More Photos