twitter
For Quick Alerts
ALLOW NOTIFICATIONS
For Daily Alerts

ಹಲವು ಸಲ ಆತ್ಮಹತ್ಯೆಗೆ ಯತ್ನಿಸಿದ್ದ ಅಕುಲ್ ಬಾಲಾಜಿ

By Rajendra

Next »

« Previous

ಮೂರು ಗಂಟೆ ಇರಬೇಕು ದಬದಬ ಬಾಗಿಲು ತಟ್ಟಿದ ಶಬ್ದ. ನಾನು ಮಲಗಿದ್ದೇನೆ ಎಂದರೆ ಸತ್ತ ಹೆಣನೇ. ಎದ್ದು ನೋಡಿದರೆ ನಮ್ಮ ಪ್ರೊಡ್ಯೂಸರ್. ಏನ್ರಣ್ಣಾ ಹಿಂಗೆ ಮಲಗಿದ್ದೀರಾ. ಪ್ರೆಸ್ ನವರೂ ಎಲ್ಲರೂ ಕಾಯ್ತಿದ್ದಾರೆ ನೀವು ಬರಬೇಕು ಎಂದರು. ನಾನು ಆಗಲ್ಲ ಎಂದೆ. ರೀ ಹಾಕೊಳ್ಳೋಕೆ ಬಟ್ಟೇನೆ ಇಲ್ಲ. ಎಲ್ಲಾ ಒಗೆದು ಒಣಹಾಕಿದ್ದೇನೆ ಎಂದೆ.

ಆಗ ಅವರು ಒಂದು ಜೊತೆ ಬಟ್ಟೆ ತೆಗೆದುಕೊಂಡು ಬಂದು ಜೊತೆಗೆ ಒಂದು ಹ್ಯಾಟ್ ಕೊಟ್ಟರು. ಅದು ಹಾಕಿಕೊಂಡು ಕಪಾಲಿ ಚಿತ್ರಮಂದಿರದ ಮುಂದೆ ಕ್ವಾಲಿಸ್ ನಿಂದ ಇಳಿಯಬೇಕಾದರೆ ಪಟಾಕಿ ಹೊಡೆದ ಸದ್ದು ಕೇಳಿಸಿತು. ಎಲ್ಲೋ ಶಿವಣ್ಣ ಬರ್ತಿರಬೇಕು ಎಂದುಕೊಂಡೆ.

Akul Balaji tragic story
ಕಾರಿನಿಂದ ಇಳಿಯುತ್ತಿದ್ದಂತೆ ಹೂವಿನ ಹಾರಗಳ ಸುರಿಮಳೆಯಾಯಿತು. ಬೆಳಗ್ಗೆ ಅಲ್ಲೇ ಪೊಲೀಸರ ಕೈಲಿ ಒದೆ ತಿಂದಿದ್ದೆ. ಈಗ ಅಲ್ಲೇ ಹೂವಿನಹಾರದ ಸನ್ಮಾನ. ಥಿಯೇಟರ್ ಒಳಗೆ ಹೋದೆ ಸ್ಕ್ರೀನ್ ಆಫ್ ಮಾಡಿದರು. ಲೈಟ್ ಆನ್ ಮಾಡಿದರು. ಎಲ್ಲಾ ಜನ ಹಿಂದೆ ತಿರುಗಿ ನೋಡಿದರು ಬಿಡ್ಡಾ ಎಂದು ಒಂದೇ ಗಲಾಟೆ. ನಿಜಕ್ಕೂ ನನಗೆ ಈಗಲೂ ನಂಬಕ್ಕೆ ಆಗುತ್ತಿಲ್ಲ ಎಂದು ತಮ್ಮ ಹಳೆಯ ದಿನಗಳನ್ನು ಆದಿ ನೆನಪಿಸಿಕೊಂಡರು.

ಬಳಿಕ ಶಕೀಲಾ ಬಳಿ ಅನಿತಾ ಮಾತನಾಡುತ್ತಾ, ನನ್ನ ಜೀವನದಲ್ಲಿ ಅತಿ ದೊಡ್ಡ ಸೀಕ್ರೆಟ್ ಇದೆ. ಆದನ್ನು ಇಲ್ಲಿ ಹೇಳಿದರೆ ನನ್ನ ಕೆರಿಯರ್ ಗೆ ಹೊಡೆತಾ ಬೀಳುತ್ತದೆ ಎಂದು ಶಕೀಲಾ ಜೊತೆ ಹೇಳಿದರು. ಅದನ್ನು ಹೇಳಬೇಕೋ ಬೇಡವೋ ನೀವೇ ಹೇಳಿ ಎಂದು ಶಕೀಲಾರನ್ನು ಕೇಳಿದರು. ಆದರೆ ಆ ಸೀಕ್ರೆಟ್ ಏನು ಎಂಬುದನ್ನು ಹೇಳಲು ಅವರಿಗೆ ಸಾಧ್ಯವಾಗಲಿಲ್ಲ.

ಅಕುಲ್ ಬಾಲಾಜಿ ತಮ್ಮ ಕಥೆಯನ್ನು ಹೇಳಿಕೊಂಡರು. ಒಬ್ಬ ನಟನಾಗಬೇಕು ಎಂದು ಚಿಕ್ಕಂದಿನಲ್ಲೇ ಕನಸು ಕಟ್ಟಿಕೊಂಡು ಬಂದವನು ನಾನು. ನಾನು ಹುಟ್ಟಿದ್ದು ಕರ್ನಾಟಕದಲ್ಲಿ ಅಲ್ಲ. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಹುಟ್ಟಿ, ಕಡಪದಲ್ಲಿ ಬೆಳೆದು ಅದಾದ ಬಳಿಕ ನೆಲ್ಲೂರಿಗೆ ವಾಪಸ್ ಆದೆ. ಬಳಿಕ ಕಡಪ ಜಿಲ್ಲೆಯ ಸಣ್ಣ ಊರು ರೈಲ್ವೇ ಕೋಡೂರುನಲ್ಲಿ ನಮ್ಮದೊಂದು ಚಿತ್ರಮಂದಿರ ಇತ್ತು.

ನನ್ನ ಜೀವನವೆಲ್ಲಾ ಕೇವಲ ಸಿನಿಮಾ ಸಿನಿಮಾ ಎಂದಾಗಿತ್ತು. ಒಳ್ಳೆಯ ಸುಸ್ಥಿತಿಯಲ್ಲಿದ್ದ ಕುಟುಂಬ. ಆದರೂ ಒಂದು ಡೌನ್ ಫಾಲ್ ನೋಡ್ದೆ. ಅದಕ್ಕಾಗಿ ನಾನು ಯಾರನ್ನು ದೂರಲೂ ಇಷ್ಟಪಡಲ್ಲ. ಕೆಲವು ಸಲ ಹಣೆಬರಹ ಸರಿ ಇಲ್ಲದಿದ್ದರೆ ಏನು ಮಾಡಕ್ಕಾಗಲ್ಲ ಎಂದು ಹೇಳಿದರು.

ಅಂತಹ ಸಮಯದಲ್ಲಿ ನಮ್ಮ ತಂದೆ ತುಂಬಿದ ಸ್ಫೂರ್ತಿ, ಕೊಟ್ಟ ಪ್ರೋತ್ಸಾಹ ನನಗೆ ದೊಡ್ಡದು. ಕೆಲವು ಸಲ ಆತ್ಮಹತ್ಯೆಗೂ ಪ್ರಯತ್ನಿಸಿದ ಸಂದರ್ಭಗಳುಂಟು. ಆಗಲೇ ಜೀವನ ಇದಲ್ಲ ಇಲ್ಲಿಂದ ಆರಂಭ ಎಂಬ ಅರಿವಾಯಿತು. ಆಗ ಬೆಂಗಳೂರಿಗೆ ಬಂದಾಗ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ನಡುವೆ ರಿಯಾಲಿಟಿ ಶೋಗಳನ್ನು ನಡೆಸಿಕೊಂಡು ಬಂದೆ.

ಇಂದು ನಾನು ಇಲ್ಲಿದ್ದೇನೆ ಎಂದರೆ ಅದಕ್ಕೆ ರಿಯಾಲಿಟಿ ಶೋಗಳೇ ಕಾರಣ. ನಾನು ಮಾಡಿರುವ ರಿಯಾಲಿಟಿ ಶೋಗಳನ್ನು ಭಾರತದಲ್ಲಿ ಯಾರೂ ಮಾಡಲು ಪ್ರಯತ್ನಿಸಿಲ್ಲ ಎಂದು ಹೆಮ್ಮೆಯಿಂದ ಅಕುಲ್ ತಮ್ಮ ಜೀವನದ ಕೆಲ ಪುಟಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು.

Next »

« Previous

English summary
Bigg Boss gives 'Who is the best' task to inmates on fifth day. According to their age, career graph Sahkeela herself occupied number 1 position. Srujan Lokesh, Shakeela, Akul Balaji, Laya Kokila and Anita Bhat disclosed some of interesting and tragic moments of life. Here is the day 5 highlights.
Saturday, July 5, 2014, 15:46
IIFA

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X