twitter
    For Quick Alerts
    ALLOW NOTIFICATIONS  
    For Daily Alerts

    ತನ್ನ ತಂದೆಯ ಎರಡನೇ ಮದುವೆ ಬಗ್ಗೆ ಬಾಯ್ಬಿಟ್ಟ ಗುರು

    By ಉದಯರವಿ
    |

    ಬಿಗ್ ಬಾಸ್ ಮನೆಯಲ್ಲಿ ಮುಂದುವರಿದ "ತರ್ಲೆ ನನ್ ಮಕ್ಕಳು" ಆಟಕ್ಕೆ ತತ್ತರಿಸಿದ ನೀತೂ ಹಾಗೂ ಶ್ವೇತಾ ಚೆಂಗಪ್ಪ ಉಸ್ಸಪ್ಪಾ ಎಂದಿದ್ದಾರೆ. ಈ ಲಗ್ಜುರಿ ಬಜೆಟ್ ನಲ್ಲಿ ಸಾಧ್ಯವಾದಷ್ಟು ಅಭಿನಯಿಸಿ ಅಕುಲ್, ಗುರುಪ್ರಸಾದ್ ಅವರು ಥೇಟ್ ತರ್ಲೆ ನನ್ ಮಕ್ಳು ಅನ್ನಿಸಿಕೊಂಡರು.

    ಗುರುಪ್ರಸಾದ್ ಅವರು ನೀತೂ ಟೀಚರ್ ಅವರನ್ನು ಲವ್ ಮಾಡುವುದಾಗಿ ಹೇಳಿದರು. ಬಳಿಕ ಕಪ್ಪು ಹಲಗೆ ಮೇಲೆ ತಪ್ಪು ಮಾಡೋದು ಸಹಜ ಕಣೋ ತಿದ್ದಿ ನಡೆಯೋನು ಮನುಜ ಕಣೋ ಎಂಬ ಸಾಲುಗಳನ್ನು ಬರೆದು ನೀತೂ ಟೀಚರ್ ಗೆ ಕ್ಷಮಾಪಣೆ ಕೇಳಿದರು.

    ಎಪ್ಪತ್ತ ಮೂರನೇ ದಿನ ಲಗ್ಜುರಿ ಬಜೆಟ್ ಟಾಸ್ಕ್ ಮುಗಿಯಿತು. ಎಲ್ಲರೂ ಚೆನ್ನಾಗಿಯೇ ಆಟಗಳನ್ನು ಆಡಿ ಎಂಜಾಯ್ ಮಾಡಿದರು. ಇದೇ ವಿಚಾರವಾಗಿ ಸೃಜನ್ ಲೋಕೇಶ್ ಅವರು ಗುರುಪ್ರಸಾದ್ ಬಳಿ ಹೀಗೇ ಆಟ ಆಡಿಕೊಂಡು ಇದ್ದು ಬಿಡೋಣ ಎಂದಾಗ ಇನ್ನೇನೋ ಲೆಕ್ಕಾಚಾರ ಹಾಕಿದ ಗುರುಪ್ರಸಾದ್ ಹಂಗೆಲ್ಲಾ ಆಗಲ್ಲ ಎಂದು ಹೇಳಿ ಅವರ ಆಸೆಗೆ ಚಪ್ಪಡಿ ಕಲ್ಲು ಎಳೆದರು.

    ಗುರುಪ್ರಸಾದ್ ಬಗ್ಗೆ ಸೃಜನ್ ಬೇಸರ

    ಗುರುಪ್ರಸಾದ್ ಬಗ್ಗೆ ಸೃಜನ್ ಬೇಸರ

    ಇದಕ್ಕೆ ಕೊಂಚ ಬೇಸರಿಸಿಕೊಂಡ ಸೃಜನ್ ಇದೇ ವಿಚಾರವಾಗಿ ರಾತ್ರಿ 11.30ರ ಸಮಯದಲ್ಲಿ ಶ್ವೇತಾ ಚೆಂಗಪ್ಪ ಬಳಿ ಚರ್ಚಿಸಿದರು. ನಾನೇನೋ ಕ್ಯಾಷುಯಲ್ ಆಗಿ ಅವರ ಬಳಿ ಹೇಳಿದೆ. ಆದರೆ ಅದಕ್ಕೆ ಅವರು ಇನ್ನೇನೋ ಯೋಚಿಸಿ ಹೇಳಿದ್ದು ಸರಿಯಲ್ಲ ಎಂದರು.

    ಗುರುಗೆ ಶ್ವೇತಾ ಚೆಂಗಪ್ಪ ಕೊಟ್ಟ ಕೌಂಟರ್

    ಗುರುಗೆ ಶ್ವೇತಾ ಚೆಂಗಪ್ಪ ಕೊಟ್ಟ ಕೌಂಟರ್

    ಟಾಸ್ಕ್ ನ ಭಾಗವಾಗಿ ತರ್ಲೆ ಮಕ್ಕಳು ನಿಭಾಯಿಸುವಾಗ ಶ್ವೇತಾ ಚೆಂಗಪ್ಪ ಅವರನ್ನು ನನಗೆ ನಿಮ್ಮ ಮೇಲೆ ಲವ್ ಇಲ್ಲ ಮೇಡಂ ಎಂದದ್ದಕ್ಕೆ ಅವರು, ನನ್ನನ್ನು ಲವ್ ಮಾಡಲು ಇಡೀ ಕರ್ನಾಟಕವೇ ಇದೆ ಎಂದು ಹೇಳಿ ಗುರುಗೆ ಕೌಂಟರ್ ಕೊಟ್ಟರು.

    ಗುರುಪ್ರಸಾದ್ ಪಕ್ಕಾ ಗೇಮ್ ಪ್ಲಾನರ್

    ಗುರುಪ್ರಸಾದ್ ಪಕ್ಕಾ ಗೇಮ್ ಪ್ಲಾನರ್

    ಗುರುಪ್ರಸಾದ್ ಎಲ್ಲಾ ವಿಷಯವನ್ನು ನಾಮಿನೇಷನ್, ಎಲಿಮಿನೇಷನ್ ಗೆ ಥಳುಕು ಹಾಕುತ್ತಿದ್ದಾರೆ ಎಂದು ಸೃಜನ್ ಬಳಿ ಚರ್ಚಿಸಿದರು ಶ್ವೇತಾ. ಬಳಿಕ ಗುರುಪ್ರಸಾದ್ ಗೆ ಯಾರೂ ಕೊಡದಷ್ಟು ಕೌಂಟರ್ ಗಳನ್ನು ನಾನು ಕೊಟ್ಟಿದ್ದೀನಿ ಎಂದರು.

    ತನ್ನ ತಂದೆಯ ಎರಡನೇ ಮದುವೆ ಬಾಯ್ಬಿಟ್ಟ ಗುರು

    ತನ್ನ ತಂದೆಯ ಎರಡನೇ ಮದುವೆ ಬಾಯ್ಬಿಟ್ಟ ಗುರು

    ತಪ್ಪು ಮಾಡೋದು ಸಹಜ ಕಣೋ ತಿದ್ದಿ ನಡೆಯೋದು ಮನುಜಾ ಕಣೋ ಎಂದು ನೀತೂ ಬಳಿ ಹೇಳುವಾಗ ಮತ್ತೆ ತಪ್ಪು ಮಾಡಿದರೆ ಅದನ್ನು ಚಟ ಎನ್ನುತ್ತಿದ್ದರು ನಮ್ಮ ತಂದೆ. ಇಂಟರೆಸ್ಟಿಂಗ್ ವಿಚಾರ ಅಂದ್ರೆ ಈ ಮಾತು ನಮ್ಮ ತಂದೆಯವರು ಹೇಳಿದಾಗ ಅವರು ಎರಡನೇ ಮದುವೆಯಾಗಿದ್ರು ಎಂದು ಹೇಳಿದರು ಗುರು. ಇದಿಷ್ಟನ್ನು ಬಿಟ್ಟು ಇನ್ನೇನು ಹೇಳಲಿಲ್ಲ ಗುರು. ಇಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಅವರು ಬಾಯ್ಬಿಟ್ಟ ಖಾಸಗಿ ವಿಚಾರ ಎಂದರೆ ಇದೊಂದೇ.

    ನಿಂಬೆ ಚಮಚ ಆಟದಲ್ಲಿ ಗೆದ್ದ ಅಕುಲ್ ಬಾಲಾಜಿ

    ನಿಂಬೆ ಚಮಚ ಆಟದಲ್ಲಿ ಗೆದ್ದ ಅಕುಲ್ ಬಾಲಾಜಿ

    ಶಾಲೆಯ ವಾರ್ಷಿಕೋತ್ಸವದ ಭಾಗವಾಗಿ ಶೂ ರೇಸ್, ಗೋಣಿಚೀಲದ ಓಟ, ನಿಂಬೆ ಚಮಚದಂತಹ ಆಟಗಳನ್ನೂ ಆಡಿಸಲಾಯಿತು. ಗೋಣಿಚೀಲದ ಓಟದಲ್ಲಿ ಸೃಜನ್, ಶೂ ರೇಸ್ ನಲ್ಲಿ ದೀಪಿಕಾ, ನಿಂಬೆ ಚಮಚ, ಕಪ್ಪೆ ಜಿಗಿತದಲ್ಲಿ ಅಕುಲ್ ಗೆದ್ದರು. ಗುರುಪ್ರಸಾದ್ ಆಟಗಳಲ್ಲಿ ಭಾಗಿಯಾದರೂ ಯಾವುದರಲ್ಲೂ ಗೆಲ್ಲಲಿಲ್ಲ. ಮಂಡಿ ನೋವು ಎಂದು ಕಪ್ಪೆ ಜಿಗಿತವನ್ನು ಮಾಡಲಿಲ್ಲ.

    ಬೇಡರ ಕಣ್ಣಪ್ಪನಾದ ಗುರುಪ್ರಸಾದ್

    ಬೇಡರ ಕಣ್ಣಪ್ಪನಾದ ಗುರುಪ್ರಸಾದ್

    ಕಲಾ ಕೌಶಲವನ್ನು ಹೊರತರುವ ಕಾರ್ಯಕ್ರಮ ನಡೆಯಬೇಕು ಎಂದು ಬಿಗ್ ಬಾಸ್ ಹೇಳಿದ್ದಕ್ಕೆ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನಲ್ಲಿ ಬೇಡರ್ ಕಣ್ಣಪ್ಪ ಪಾತ್ರವನ್ನು ಗುರುಪ್ರಸಾದ್ ಮಾಡಿದರು. ಈ ಹಿಂದೆ ಶಿವನಿಗೆ ಕಣ್ಣಿರಲಿಲ್ಲ. ನನ್ನ ಕಣ್ಣನ್ನು ಶಿವನಿಗೆ ಕೊಟ್ಟೆ. ಈ ಕಥೆಯನ್ನು ಮೊದಲು ಮಾಡಿದ್ದು ಡಾ.ರಾಜ್ ಕುಮಾರ್, ಅವರು ಸಾಯುವ ಮುನ್ನ ಕಣ್ಣನ್ನು ದಾನ ಮಾಡಿದರು. ನಾವೂ ನೀವೂ ಎಲ್ಲರೂ ನೇತ್ರದಾನ ಮಾಡೋಣ ಎಂದು ಅವರು ಬೇಡರ ಕಣ್ಣಪ್ಪನಾಗಿ ಹೇಳಿದರು.

    ದೀಪಿಕಾ ಮತ್ತು ಸೃಜನ್ ಜುಗಲ್ ಬಂಧಿ

    ದೀಪಿಕಾ ಮತ್ತು ಸೃಜನ್ ಜುಗಲ್ ಬಂಧಿ

    ದೀಪಿಕಾ ಮತ್ತು ಸೃಜನ್ ಅವರು ಸುಂದರಿ ಸುಂದರಿ ನನ್ನ ಸುಂದರ ಮೊಗವನ್ನು ನೋಡುವೆಯಾ...ಬಂತು ಬಂತು ನಂಗು ಬಂತು ತುಂಬಾ ತುಂಬಾ ಆಸೆ ಬಂತು ಎಂಬ ಗೀತೆಗೆ ಹೆಜ್ಜೆಹಾಕಿ ಮನರಂಜನೆ ನೀಡಿದರು. ಒಟ್ಟಾರೆ ಟಾಸ್ಕ್ ಗಳನ್ನು ಚೆನ್ನಾಗಿ ನಿಭಾಯಿಸಿದರೂ ಎಲ್ಲರಿಗೂ ಗುರುಪ್ರಸಾದ್ ಮೇಲೆಯೇ ಜಿದ್ದಿರುವುದು ಗೊತ್ತಾಗುತ್ತಿದೆ.

    English summary
    The second part for the "Tarle nan maklu" luxury budget task continued on day 73 in the Bigg Boss Kannada 2 house. Guruprasad did the role of Bedara Kanappa which was first portrayed on screen by Late Dr. Rajkumar.
    Friday, September 12, 2014, 14:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X