»   » ಬಿಗ್ ಬಾಸ್ ಮನೆಯಲ್ಲಿ ಕಲ್ಲು ಕರಗುವ ಸಮಯ

ಬಿಗ್ ಬಾಸ್ ಮನೆಯಲ್ಲಿ ಕಲ್ಲು ಕರಗುವ ಸಮಯ

Written by: ಉದಯರವಿ
Subscribe to Filmibeat Kannada

ಈ ಬಾರಿಯ ಎಪಿಸೋಡ್ ನಲ್ಲಿ ಬಿಗ್ ಬಾಸ್ ಭಾವನೆಗಳ ಜೊತೆ ಸಖತ್ ಆಟ ಆಡಿದರು. ಮನೆಯ ಸಂಬಂಧಿಕರನ್ನು ಮನೆಗೆ ಕರೆಸಿ ಅವರನ್ನು ಇನ್ನೇನು ಅಪ್ಪಿ ಮುದ್ದಾಡಬೇಕು ಎಂಬ ಸಮಯದಲ್ಲಿ ಸ್ಟ್ಯಾಚ್ಯೂ ಎನ್ನುತ್ತಿದ್ದರು. ಮನೆಯ ಸದಸ್ಯರು ಮಿಸುಕಾಡದೆ ಭಾವನೆಗಳನ್ನು ಅದುಮಿಟ್ಟಿಕೊಳ್ಳುವ ಪರಿಸ್ಥಿತಿ.

ಇದು ಭಾವನೆಗಳ ಜೊತೆಗಿನ ಗೇಮ್ ಎಂಬುದು ರುಜುವಾತಾಗಿದೆ. ಜೊತೆಗೆ ಮಹಿಳೆಯರ ಕಣ್ಣೀರೇ ಇಲ್ಲಿ ಬಂಡವಾಳ ಎಂಬುದೂ ಕಿರುತೆರೆ ವೀಕ್ಷಕರಿಗೆ ಮನದಟ್ಟಾಗಿದೆ. ಬಿಗ್ ಬಾಸ್ ಭಾವನೆಗಳ ಜೊತೆ ಜೂಟಾಟ ಆಡಿದರು. ಮನೆಯಲ್ಲಿ ಕಲ್ಲು ಕರಗುವ ಸಮಯ.

ಸ್ಟ್ಯಾಚ್ಯೂ ಎಂದರೆ ಕಲ್ಲಿನಂತೆ ಇರಬೇಕು. ಒಂದು ಸಲ ಏನಾಯಿತೆಂದರೆ ಗುರುಪ್ರಸಾದ್ ಪ್ಯಾಂಟ್ ಹಾಕಿಕೊಳ್ಳಬೇಕಾದರೆ ಸ್ಟ್ಯಾಚ್ಯೂ ಎಂದು ಬಿಗ್ ಬಾಸ್ ಮಜಾ ತೆಗೆದುಕೊಂಡರು. ಅವರು ಪ್ಯಾಂಟ್ ತೊಡುವಂತಿಲ್ಲ ಬಿಡುವಂತಿಲ್ಲ. ಬಗ್ಗಿಕೊಂಡೇ ಒಂದು ಕಾಲು ಮೇಲಕ್ಕೆ ಎತ್ತಿಕೊಂಡು ನಿಂತಿದ್ದರು.

ಚಿಕ್ಕಮಕ್ಕಳಂತೆ ಗೊಳೋ ಎಂದ ಶ್ವೇತಾ ಚೆಂಗಪ್ಪ

ಶ್ವೇತಾ ಚೆಂಗಪ್ಪ ಅವರ ತಾಯಿ ಶ್ರೀಮತಿ ತಾರಾ ದೇವಿ ಅವರು ಮನೆಗೆ ಬಂದಾಗ ಸ್ಟ್ಯಾಚ್ಯೂ ಎಂದರು. ಶ್ವೇತಾ ಚೆಂಗಪ್ಪ ಅಂತೂ ಚಿಕ್ಕಮಕ್ಕಳಂತೆ ಗೊಳೋ ಎಂದು ಅಳುತ್ತಿದ್ದರು. ಆಗ ಬಿಗ್ ಬಾಸ್ ಇನ್ನೊಂದು ಟ್ವಿಸ್ಟ್ ಕೊಟ್ಟರು. ತಾರಾ ದೇವಿ ಅವರೇ ಈಗ ಹೊರಡುವ ಸಮಯ ಬಂದಿದ್ದು ಕನ್ಫೆಷನ್ ರೂಮಿಗೆ ಬರಬೇಕೆಂದು ಆಶಿಸುತ್ತಾರೆ ಎಂದರು.

ಅಳುವಿನಲ್ಲೇ ಕಥೆ ಮುಗಿಸಿದರು

ಶ್ವೇತಾ ಚೆಂಗಪ್ಪ ಅವರಂತೂ ಅಂಗನವಾಡಿ ಮಕ್ಕಳಂತೆ ಅತ್ತುಬಿಟ್ಟರು. ಒಂದಷ್ಟು ಕಣ್ಣೀರಿಡುವಂತೆ ಮಾಡಿದ ಬಿಗ್ ಬಾಸ್ ಬಳಿಕ ತಾರಾದೇವಿ ಅವರನ್ನು ಕಳುಹಿಸಿದರು. ಆದರೆ ಶ್ವೇತಾ ಚೆಂಗಪ್ಪ ಅವರು ತಮ್ಮ ತಾಯಿಯ ಜೊತೆಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಅಳುವಿನಲ್ಲೇ ಕಥೆ ಮುಗಿಸಿದರು.

ಅನುಪಮಾಗೆ ಬಿಗ್ ಬಾಸ್ ಅಭಿನಂದನೆ

ಫೈನಲ್ ಗೆ ಯಾರು ಬಂದರೂ ನನಗೆ ಖುಷಿನೆ ಎಂದರು. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿ ತಾರಾದೇವಿ ಅವರು ಅಲ್ಲಿಂದ ಹೊರನಡೆದರು. ಈ ನಡುವೆ ಅನುಪಮಾ ಅವರಿಗೆ ನೀಡಿದ್ದ ರಹಸ್ಯ ಕಾರ್ಯ ಮುಕ್ತಾಯವಾಯಿತು. ಚೆನ್ನಾಗಿ ಅಭಿನಯಿಸಿದ ಅನುಪಮಾ ಅವರನ್ನು ಅಭಿನಂದಿಸಿದರು ಬಿಗ್ ಬಾಸ್.

ಆಟದ ಮಜಾಕ್ಕೆ ಕಲ್ಲು ಹಾಕಿದಿರಿ ಎಂದ ಗುರು

ಬಳಿಕ ಟಾಸ್ಕ್ ಗಳ ಬಗ್ಗೆ ಮಾತನಾಡಿದ ಗುರುಪ್ರಸಾದ್, ನಾನು ಮೊದಲೇ ಹೇಳಿದೆ ಆದರೆ ಯಾರೂ ನನಗೆ ಸಪೋರ್ಟ್ ಮಾಡಲಿಲ್ಲ. ಆಟವನ್ನು ಆಟದ ತರಹ ಆಡೋಣ ಎಂದು. ನನ್ನ ಮಾತು ಯಾರೂ ಕೇಳಲಿಲ್ಲ. ಆಟದ ಮಜಾಕ್ಕೆ ಕಲ್ಲು ಹಾಕಿದಿರಿ ಎಂದು ಬಡಬಡಿಸಿದರು.

ಗುರುಪ್ರಸಾದ್ ಮಾತಿಗೆ ಯಾರೂ ಮಣೆ ಹಾಕಲಿಲ್ಲ

ಆದರೆ ಗುರುಪ್ರಸಾದ್ ಮಾತಿಗೆ ಯಾರೂ ಮಣೆ ಹಾಕಲಿಲ್ಲ. ನಾವು ಇಲ್ಲಿ ಆಟ ಆಡಲು ಬಂದಿಲ್ಲ. ಇದು ಆಟವೂ ಅಲ್ಲ ಎಂದು ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಆದರೆ ಗುರುಪ್ರಸಾದ್ ಅವರ ಮಾತನ್ನು ಒಪ್ಪಲಿಲ್ಲ. "ನನ್ನ ಪ್ರಾಣ ಹೋದರೂ ಯಾರೂ ರಿಯಾಕ್ಟ್ ಮಾಡಬೇಡಿ ನಿಮ್ಮ ತಾಕತ್ತು ತೋರಿಸಿ"ಎಂದು ಸವಾಲು ಎಸೆದರು.

ಮನೆಗೆ ಎಂಟ್ರಿ ಕೊಟ್ಟ ಅನುರಾಧಾ ಭಟ್

ಇದೇ ಸಂದರ್ಭದಲ್ಲಿ ಅನುಪಮಾ ಭಟ್ ಅವರ ಅಕ್ಕ ಅನುರಾಧಾ ಭಟ್ ಅವರು ಮನೆಗೆ ಎಂಟ್ರಿ ಕೊಟ್ಟರು. ಅಪ್ಪ ಅಮ್ಮ ಎಲ್ಲಾ ಚೆನ್ನಾಗಿದ್ದಾರೆ. ತುಂಬಾ ಮಿಸ್ ಮಾಡ್ತಿದ್ದೀವಿ ನಿಮ್ಮನ್ನು ಎಂದರು. ಆದರೆ ಬಿಗ್ ಬಾಸ್ ಎಲ್ಲರನ್ನೂ ಸ್ಟ್ಯಾಚ್ಯೂ ಮಾಡಿದ್ದರು. ಮನೆಯವರು ಬಂದಾಗ ಎಲ್ಲರದ್ದೂ ಕಣ್ಣೀರ ಕಥೆಯೇ ಆಗಿತ್ತು.

ಕುಂತಲ್ಲಿ ಕೂರಂಗಿಲ್ಲ ನಿಂತಲ್ಲಿ ನಿಲ್ಲಂಗಿಲ್ಲ

ಅನುರಾಧಾ ಭಟ್ ಮಾತನಾಡುತ್ತಾ, ಅಳಬಾರದು,ಯಾವಾಗಲು ನಗುವುದೇ ನೋಡಬೇಕು ನಾನು ಎಂದರು. ಅವರು ಇನ್ನೇನು ಬಾಗಿಲ ತನಕ ಹೋಗಿದ್ದರು. ಆಗ ಒಂದು ಹಾಡು ಎಂದು ಎಲ್ಲರೂ ಕಿರುಚಿದರು. "ಕುಂತಲ್ಲಿ ಕೂರಂಗಿಲ್ಲ ನಿಂತಲ್ಲಿ ನಿಲ್ಲಂಗಿಲ್ಲ" ಎಂದು ಎರಡು ಪದ ಹೇಳಿ ಅವರು ಮನೆಯ ಮುಖ್ಯದ್ವಾರದಿಂದ ಹೊರನಡೆದರು.

ಅಕುಲ್ ಬಾಲಾಜಿಗೆ ಎಮೋಷನ್ ಟಚ್

ಅಕುಲ್ ಬಾಲಾಜಿ ಅವರ ಪತ್ನಿ ಬಂದಾಗ ಬಹುತೇಕ ಅಳುವೇ ಉತ್ತರವಾಗಿತ್ತು. ಮನೆಯಲ್ಲಿ ಬಿಗ್ ಬಾಸ್ ಎಮೋಷನಲ್ ಟಚ್ ಕೊಟ್ಟರು. ಜ್ಯೋತಿ ಅಕುಲ್ ಹಾಗೂ ಅವರ ಪುತ್ರ ಕ್ರಿಷ್ ಮನೆಗೆ ಆಗಮಿಸಿದರು. ಆಗಲೂ ಸ್ಟ್ಯಾಚ್ಯೂ ರಿಲೀಸ್ ಆಟ ಮುಂದುವರೆದಿತ್ತು.

ಫಿನಾಲೆಗೆ ಹತ್ತಿರವಾಗುತ್ತಿರುವ ಬಿಗ್ ಬಾಸ್

ಕೊನೆಗೆ ಲಗ್ಜುರಿ ಬಜೆಟ್ ಟಾಸ್ಕ್ "ನಿಲ್ಲು ಅಲ್ಲೇ ನಿಲ್ಲು" ಮುಕ್ತಾಯವಾಯಿತು. ದಿನ ಕಳೆದಂತೆ ಫಿನಾಲೆಗೆ ಹತ್ತಿರವಾಗುತ್ತಿದೆ. ಇದೇ ಸಂದರ್ಭದಲ್ಲಿ ಮನೆಯ ಸದಸ್ಯರ ಜೊತೆ ಬಿಗ್ ಬಾಸ್ ಸಖತ್ ಆಟ ಆಡಿ ರಂಜಿಸಿದ್ದಾರೆ. ಈ ವಾರ ಮನೆಯಿಂದ ಯಾರೆಲ್ಲಾ ಹೊರಡುತ್ತಾರೆ ಎಂಬುದು ಮನೆಯ ಸದಸ್ಯರನ್ನು ಕಾಡುತ್ತಿದೆ.

English summary
When the participants were motionless, Shwetha's mother came inside the house. Shwetha was in tears, but did not move. Bigg Boss ordered Shwetha's mother to come inside the confession room. Bigg Boss Kannada 2 day 80 highlights.
Please Wait while comments are loading...

Kannada Photos

Go to : More Photos