»   » ಬಿಗ್ ಬಾಸ್ ಫಿನಾಲೆ ವಾರ ತಲುಪಿದ ಸೃಜನ್ ಲೋಕೇಶ್

ಬಿಗ್ ಬಾಸ್ ಫಿನಾಲೆ ವಾರ ತಲುಪಿದ ಸೃಜನ್ ಲೋಕೇಶ್

Written by: ಉದಯರವಿ
Subscribe to Filmibeat Kannada

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೊಸ ಕ್ಯಾಪ್ಟನ್ ಗಾಗಿ ಕಠಿಣ ಸ್ಪರ್ಧೆ ನೀಡಲಾಗಿತ್ತು. ಇದಕ್ಕಾಗಿ ವಿದ್ಯುತ್ ತಂತಿಗಳನ್ನು ಬೇಧಿಸುವ ಕಾರ್ಯವನ್ನು ಮಾಡಬೇಕಾಯಿತು. ವಿದ್ಯುತ್ ತಂತಿಗಳನ್ನು ನೋಡುತ್ತಿದ್ದಂತೆ ಗುರುಪ್ರಸಾದ್ ಕ್ಯಾಪ್ಟನ್ ಪಟ್ಟದಿಂದ ಹಿಂದೆ ಸರಿದರು.

ಅಯ್ಯೋ ಕರೆಂಟ್ ಜೊತೆ ಸರಸ ಬೇಡ ಎಂದೋ ಏನೋ ಅವರು ವಿದ್ಯುತ್ ತಂತಿಗಳ ಸಹವಾಸವೇ ಬೇಡ ಎಂದು ಸೈಲೆಂಟ್ ಆದರು. ಇದಕ್ಕೂ ಮುನ್ನ ಮನೆಯಲ್ಲಿ ಅಕುಲ್ ಮತ್ತು ಗುರುಪ್ರಸಾದ್ ನಡುವೆ ಸ್ವಾರಸ್ಯಕರ ಚರ್ಚೆಯೊಂದು ನಡೆಯಿತು.

ಸೃಜನ್, ಶ್ವೇತಾ, ಅನುಪಮಾ ಇವರೆಲ್ಲಾ ಮೊದಲಿಂದಲೂ ಗ್ರೂಪ್ ಮಾಡಿಕೊಂಡು ಬಂದಿದ್ದಾರೆ. ನಾನು ಮತ್ತು ನೀನು ಮಾತ್ರ ಸ್ವತಂತ್ರವಾಗಿ ಇಲ್ಲಿಯವರೆಗೂ ಬಂದಿದ್ದೇವೆ. ಇವರು ಗ್ರೂಪ್ ಮಾಡಿಕೊಂಡು ಇಲ್ಲಿವರೆಗೂ ಬಂದಿದ್ದಾರೆ ಎಂದು ಗುರುಪ್ರಸಾದ್ ಮಾತನಾಡಿದರು. ಎಂಬತ್ತೊಂದನೇ ದಿನ ಮನೆಯಲ್ಲಿ ಏನೆಲ್ಲಾ ರಾಜಕೀಯ, ಏನೆಲ್ಲಾ ತಂತ್ರ ಪ್ರತಿತಂತ್ರಗಳು ನಡೆದವು ಎಂಬುದರ ಮೇಲೆ ಒಮ್ಮೆ ಕಣ್ಣಾಕೋಣ ಬನ್ನಿ.

ಮನೆಯಲ್ಲಿ ಎಲ್ಲರೂ ಸೈಲೆಂಟ್ ಪಾರ್ಟಿಗಳೇ

ಮನೆಯಲ್ಲಿ ಎಲ್ಲರೂ ಸೈಲೆಂಟ್ ಪಾರ್ಟಿಗಳೇ

ಮನೆಯಲ್ಲಿ ಎಲ್ಲರೂ ಸೈಲೆಂಟ್ ಪಾರ್ಟಿಗಳೇ. ಅವರನ್ನು ಟ್ರಿಗರ್ ಮಾಡಬೇಕಾದರೆ ಮೀಟಿ ಮೀಟಿ ಎತ್ತಬೇಕು. ನಾನು ಅವವರೊಂದಿಗೆ ಏನೋ ಕ್ಯಾತೆ ತೆಗೀತೀನಿ. ಆದರೆ ಮಧ್ಯೆ ನೀನು ಬರಬಾರದು. ನಾನು ಆ ರೀತಿ ಟ್ರಿಗರ್ ಆದಾಗ ನೀನೇ ಅರ್ಥ ಮಾಡಿಕೊಂಡು ದೂರ ಹೋಗಿಬಿಡು ಎಂದರು ಅಕುಲ್ ಗೆ ಗುರುಪ್ರಸಾದ್ ಸೂಚನೆ ಕೊಟ್ಟರು.

ಇಲ್ಲಿ ನಾನು ಊಟ ಮಾಡಲು ಬಂದಿಲ್ಲ

ಇಲ್ಲಿ ನಾನು ಊಟ ಮಾಡಲು ಬಂದಿಲ್ಲ

ಅದರಂತೆ ಅವರು ಸ್ವಲ್ಪ ಸಮಯಕ್ಕೆ ಅಕುಲ್ ಜೊತೆ ಜಗಳ ತೆಗೆದರು. ಮುಚ್ಚಿಕೊಂಡು ನೀನು ಕೆಲಸ ಮಾಡು. ಇಲ್ಲಿ ನಾನು ಊಟ ಮಾಡಲು ಬಂದಿಲ್ಲ. ಲಗ್ಜುರಿ ಬಜೆಟ್ ಕಟ್ಟಿಕೊಂಡು ನನಗೇನು ಆಗಬೇಕಿಲ್ಲ ಎಂದು ಈ ಬಾರಿಯ ಲಗ್ಜುರಿ ಬಜೆಟ್ ಟಾಸ್ಕ್ ಬಗ್ಗೆ ಅಕುಲ್ ಜೊತೆ ಜಗಳ ಕಾದರು. ಆದರೆ ಅದು ಅಷ್ಟಾಗಿ ವರ್ಕ್ ಔಟ್ ಆಗಲಿಲ್ಲ.

ಮತ್ತೆ ಬಿಗ್ ಬಾಸ್ ಸಹವಾಸ ಬೇಡಪ್ಪ ಎಂದರು

ಮತ್ತೆ ಬಿಗ್ ಬಾಸ್ ಸಹವಾಸ ಬೇಡಪ್ಪ ಎಂದರು

ಮನೆಯ ಇನ್ನೊಂದು ಕಡೆ ಸೃಜನ್ ಮಾತನಾಡುತ್ತಾ, "ಪ್ರೈಸ್ ಮನಿ ಇಪ್ಪತ್ತು ಕೋಟಿ ಅಂದ್ರೆ ಮತ್ತೆ ಆಡಲ್ಲವಲ್ಲಾ" ಎಂದರು. ಅಯ್ಯೋ ಸಾಕಪ್ಪಾ ಸಾಕಾಗಿ ಹೋಗಿದೆ ಎಂದು ನಿಟ್ಟುಸಿರುಬಿಟ್ಟರು ದೀಪಿಕಾ ಕಾಮಯ್ಯ.

ಹೊಸ ಕ್ಯಾಪ್ಟನ್ ಗಾಗಿ ವಿಶೇಷ ಸ್ಪರ್ಧೆ

ಹೊಸ ಕ್ಯಾಪ್ಟನ್ ಗಾಗಿ ವಿಶೇಷ ಸ್ಪರ್ಧೆ

ಮನೆಯಲ್ಲಿ ಶ್ವೇತಾ ಅವರ ಕ್ಯಾಪ್ಟನ್ ಅವಧಿ ಎಂಬತ್ತೆರಡನೇ ದಿನಕ್ಕೆ ಮುಕ್ತಾಯವಾಯಿತು. ಕ್ಯಾಪ್ಟನ್ ಪಟ್ಟ ಪಡೆಯುವುದು ಹೆಮ್ಮೆಯ ಸಂಗತಿಯಾಗಿದೆ. ಕಟ್ಟಕಡೆಯ ಕ್ಯಾಪ್ಟನ್ ಪಟ್ಟಕ್ಕಾಗಿ ವಿಶೇಷ ಸ್ಪರ್ಧೆಯನ್ನು ಇಡಲಾಗಿದೆ ಎಂದು ಬಿಗ್ ಬಾಸ್ ಘೋಷಿಸಿದರು.

ಇದು ಕಟ್ಟಕಡೆಯ ಕ್ಯಾಪ್ಟನ್ ಸ್ಪರ್ಧೆ

ಇದು ಕಟ್ಟಕಡೆಯ ಕ್ಯಾಪ್ಟನ್ ಸ್ಪರ್ಧೆ

ಇದು ಕಟ್ಟಕಡೆಯ ಕ್ಯಾಪ್ಟನ್ ಸ್ಪರ್ಧೆಯಾಗಿದ್ದು, ಈ ಬಾರಿ ಕ್ಯಾಪ್ಟನ್ ಆಗುವವರು ಫಿನಾಲೆ ವಾರ ತಲುಪಲಿದ್ದಾರೆ. ಒಂದು ವಿಶೇಷ ಟಾಸ್ಕ್ ಮೂಲಕ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅದುವೇ ಚಕ್ರವ್ಯೂಹ. ಇದನ್ನು ಭೇಧಿಸಬೇಕು. ವಿದ್ಯುತ್ ತಂತಿಗಳಿಂದ ಹೆಣೆಯಲಾಗಿರುವ ಚಕ್ರವ್ಯೂಹವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಇನ್ನೊಂದು ಕೊನೆಯನ್ನು ಮುಟ್ಟಬೇಕು.

ಮಾನಸಿಕ ಸಾಮರ್ಥ್ಯಕ್ಕೆ ಸವಾಲು

ಮಾನಸಿಕ ಸಾಮರ್ಥ್ಯಕ್ಕೆ ಸವಾಲು

ಸ್ಪರ್ಧಿಗಳ ಕೈಯನ್ನು ಹಗ್ಗದಿಂದ ಕಟ್ಟಿರಲಾಗುತ್ತದೆ. ಮನೆಯಿಂದ ನೇರವಾಗಿ ಹೊರಹೋಗಲು ನಾಮಿನೇಟ್ ಆಗಿರುವ ಅನುಪಮಾ ಅವರು ಈ ಚಕ್ರವ್ಯೂಹ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಇದು ದೈಹಿಕ ಸಾಮರ್ಥ್ಯಕ್ಕಿಂತ ಮಾನಸಿಕ ಸಾಮರ್ಥ್ಯಕ್ಕೆ ಸವಾಲು ಒಡ್ಡುತ್ತದೆ ಎಂದು ಬಿಗ್ ಬಾಸ್ ಹೇಳಿದರು.

ಟಾಸ್ಕ್ ನಿಂದ ಹೊರಬಿದ್ದ ಗುರುಪ್ರಸಾದ್

ಟಾಸ್ಕ್ ನಿಂದ ಹೊರಬಿದ್ದ ಗುರುಪ್ರಸಾದ್

ಗುರುಪ್ರಸಾದ್ ನಾನು ಟಾಸ್ಕ್ ಮಾಡಲ್ಲ ಎಂದರು. ಈ ಬಾರಿ ಅವರು ಸ್ಪರ್ಧೆಯಿಂದ ಹೊರನಡೆದರು. ಮೊದಲ ಸ್ಪರ್ಧಿಯಾಗಿ ಅಕುಲ್ ಭಾಗವಹಿಸಿದರು.
ಎರಡನೆ ಸ್ಪರ್ಧಿ ದೀಪಿಕಾ, ಮೂರನೇ ಸ್ಪರ್ಧಿ ಶ್ವೇತಾ, ಕೊನೆಯ ಸ್ಪರ್ಧಿ ಸೃಜನ್.

ಯಾರು ಎಷ್ಟು ಸೆಕೆಂಡ್ ತೆಗೆದುಕೊಂಡರು

ಯಾರು ಎಷ್ಟು ಸೆಕೆಂಡ್ ತೆಗೆದುಕೊಂಡರು

ಶ್ವೇತಾ ಅವರು ಗುರಿಯನ್ನು 20 ಸೆಕೆಂಡ್ ಗಳಲ್ಲಿ ತಲುಪಿದರೆ, ಅಕುಲ್ ಅವರು 19 ಸೆಕೆಂಡ್ ಗಳಲ್ಲಿ, ದೀಪಿಕಾ 18 ಸೆಕೆಂಡ್ ಗಳಲ್ಲಿ ತಲುಪಿ ಕ್ರಮವಾಗಿ ನಾಲ್ಕು, ಮೂರು ಹಾಗೂ ಎರಡನೇ ಸ್ಥಾನ ಪಡೆದುಕೊಂಡರು.

ಬಿಗ್ ಬಾಸ್ ಫಿನಾಲೆ ವಾರ ತಲುಪಿದ ಸೃಜನ್ ಲೋಕೇಶ್

ಬಿಗ್ ಬಾಸ್ ಫಿನಾಲೆ ವಾರ ತಲುಪಿದ ಸೃಜನ್ ಲೋಕೇಶ್

ಮೊದಲ ಸ್ಥಾನ ಪಡೆದ ಸೃಜನ್ ಅವರು ಕೇವಲ 13 ಸೆಕೆಂಡ್ ಗಳಲ್ಲಿ ವ್ಯೂಹವನ್ನು ಬೇಧಿಸಿ ಈ ಬಾರಿಯ ಕ್ಯಾಪ್ಟನ್ ಆಗಿದ್ದಾರೆ. ಆದುದರಿಂದ ಈ ಸಾಲಿನ ಕಟ್ಟಕಡೆಯ ಕ್ಯಾಪ್ಟನ್ ಸೃಜನ್. ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಒಂದು ಏಕ ದಿನದ ಟಾಸ್ಕ್ ನೀಡಿದರು. "ಸೃಜನ್ ಗೆ ಮಜಾ" ಎಂಬುದು ಟಾಸ್ಕ್ ಹೆಸರು.

ಕಥೆ ಹೇಳಿ ರಂಜಿಸಿದ ಗುರುಪ್ರಸಾದ್

ಕಥೆ ಹೇಳಿ ರಂಜಿಸಿದ ಗುರುಪ್ರಸಾದ್

ಮನೆಯ ಸದಸ್ಯರು ಹಾಸ್ಯ ಪ್ರದರ್ಶನ ನೀಡಬೇಕು. ಇದೊಂದು ಸ್ಟ್ಯಾಂಡಪ್ ಕಾಮಿಡಿಯಾಗಿದ್ದು ಎಲ್ಲರೂ ಸೃಜನ್ ಅವರಿಗೆ ಮಜಾ ಕೊಟ್ಟರು. ಗುರುಪ್ರಸಾದ್ ಅವರಂತೂ ನಿರ್ಮಾಪಕರೊಬ್ಬರಿಗೆ ನಿರ್ದೇಶಕ ಕಥೆ ಹೇಳುವ ಬಗೆಯಲ್ಲಿ ರಂಜಿಸಿದರು.

ತಾಯಿ ತಂಗಿಯರ ರೌಡಿಸಂ ಪ್ರೇಮಕಥೆ

ತಾಯಿ ತಂಗಿಯರ ರೌಡಿಸಂ ಪ್ರೇಮಕಥೆ

ಚಿತ್ರದ ಟೈಟಲ್ 'ಗಂಗಮ್ಮ'. ಅದರ ಸಬ್ ಟೈಟಲ್ "ತಾಯಿ ತಂಗಿಯರ ರೌಡಿಸಂ ಪ್ರೇಮಕಥೆ" ಎಂಬುದು. ಚಿತ್ರದ ಆರಂಭದಲ್ಲೇ ಮಗುವನ್ನು ಹೆತ್ತ ತಾಯಿ ಸತ್ತು ಹೋಗುತ್ತಾರೆ. ಅವನು ರೌಡಿ ಆಗಬೇಕು ಎಂದು ಬೆಂಗಳೂರಿಗೆ ಬರುತ್ತಾನೆ. ಬಸ್ ನಿಂದ ಇಳಿಯಬೇಕಾದರೆ ಅವನನ್ನು ಅಡಿಯಿಂದ ತೋರಿಸುತ್ತೇವೆ. ಎರಡೂ ಕಾಲಿಗೆ ಬೇರೆಬೇರೆ ಚಪ್ಪಲಿ.

ಬಲಮುರಿ ಪ್ರೊಡಕ್ಷನ್ಸ್ ನಿರ್ಮಾಣ

ಬಲಮುರಿ ಪ್ರೊಡಕ್ಷನ್ಸ್ ನಿರ್ಮಾಣ

ಮುಂದೇನಾಗುತ್ತದೆ ಎಂದರೆ ನಮ್ಮ ಹೀರೋ ಚೆನ್ನಾಗಿ ನಿದ್ದೆ ಮಾಡದ ಕಾರಣ ಬೇರೆಯವನ ಚಪ್ಪಲಿ ಹಾಕಿಕೊಂಡು ಬಂದಿರುತ್ತಾನೆ. ಹೀರೋನನ್ನು ಯಾರೋ ಹಿಂದಿನಿಂದ ತಳ್ಳುತ್ತಾರೆ. ಯಾರು ಎಂದು ನೋಡಿದರೆ ಚಪ್ಪಲಿ ಕಳೆದುಕೊಂಡವ. ಹೀರೋ ಅವನ ಬಲಗೈಯನು ಲಟಕ್ ಎಂದು ಮುರಿಯುತ್ತಾನೆ. ಆಗ ಬಲಮುರಿ ಪ್ರೊಡಕ್ಷನ್ಸ್ ಅಂತ ಹಾಕೋಣ ಸಾರ್.

ಕಥೆಯಲ್ಲಿ ಟ್ವಿಸ್ ಏನೆಂದರೆ ತಂಗಿ ಎಲ್ಲಿಂದ ಬಂದರು

ಕಥೆಯಲ್ಲಿ ಟ್ವಿಸ್ ಏನೆಂದರೆ ತಂಗಿ ಎಲ್ಲಿಂದ ಬಂದರು

ಮುಂದೆ ಅವನು ದೊಡ್ಡವನಾಗಿ ತಂಗಿ ಮದುವೆ ಮಾಡಬೇಕಾಗುತ್ತದೆ. ಮದುವೆಯಲ್ಲಿ ಐಟಂ ಸಾಂಗ್ ಬೇಕು ಎಂದು ಗೆಳೆಯರು ಗಲಾಟೆ ಮಾಡ್ತಾರೆ. ಆಗ "ಪಾನಾ ಪಾನಾ ಸೋಪಾನ, ಆನಾ ಆನಾ ಆಹ್ವಾನ, ಜಾನಾ ಜಾನಾ ಜೋಪಾನ, ಸೋನಾ ಸೋನಾ ಶೋಭಾನಾ" ಎಂಬ ಐಟಂ ಸಾಂಗ್. ಇದರಲ್ಲಿ ಟ್ವಿಸ್ಟ್ ಏನೆಂದರೆ ಆರಂಭದಲ್ಲೇ ಹೀರೋನ ಹೆತ್ತಿ ತಾಯಿ ಸತ್ತುಹೋಗುತ್ತಾರೆ. ಆದರೆ ತಂಗಿ ಎಲ್ಲಿಂದ ಬಂದರು ಎಂಬುದು... ಎಂದು ಹೇಳಿ ಎಲ್ಲರನ್ನೂ ನಗಿಸಿದರು.

English summary
The participants had to get past a maze of electrified wires. Based on the time taken, the winner and the next captain would be declared. Bigg Boss Kannada 2 day 81 highlights
Please Wait while comments are loading...

Kannada Photos

Go to : More Photos