»   » ಬಿಗ್ ಬಾಸ್ ಮನೆಯಲ್ಲಿ ದೀಪಿಕಾಗೆ ಸಗಣಿ ಸ್ನಾನ

ಬಿಗ್ ಬಾಸ್ ಮನೆಯಲ್ಲಿ ದೀಪಿಕಾಗೆ ಸಗಣಿ ಸ್ನಾನ

Written by: ಉದಯರವಿ
Subscribe to Filmibeat Kannada

ಬಿಗ್ ಬಾಸ್ ಕೊಟ್ಟ ಲಗ್ಜುರಿ ಬಜೆಟ್ ಟಾಸ್ಕ್ 'ಎಸ್ ಬಿಗ್ ಬಾಸ್' ಮನೆಯ ಸದಸ್ಯರನ್ನು ಹೈರಾಣಾಗಿಸಿದೆ. ಬಿಗ್ ಬಾಸ್ ಹೇಳಿದ್ದಕ್ಕೆಲ್ಲಾ ಎಸ್ ಬಿಗ್ ಬಾಸ್ ಎಂದು ಎಲ್ಲಾ ಕೆಲಸಗಳಲ್ಲಿ ಅವರು ಭಾಗಿಯಾಗುತ್ತಾ ಹೋದಂತೆ ಕಡೆಗೆ ಮನೆಯಲ್ಲಿ ಕುಡಿಯುವ ನೀರು ಇಲ್ಲದಂತಾಗಿದೆ.

ಎಲ್ಲಾ ರೇಷನನ್ನು ಬಿಗ್ ಬಾಸ್ ಗೆ ಕೊಡಲು ಇಚ್ಛಿಸುತ್ತೀರಾ? ಎಂದು ಸೃಜನ್ ಅವರನ್ನು ಕೇಳಿದ್ದಕ್ಕೆ ಎಸ್ ಬಿಗ್ ಬಾಸ್ ಎಂದು ಅವರು ಎಲ್ಲಾ ಸರಕು ಸರಂಜಾಮನ್ನು ಸ್ಟೋರ್ ರೂಮಿನಲ್ಲಿಟ್ಟರು. ಅಲ್ಲಿಗೆ ಮನೆಯಲ್ಲಿ ಒಂದು ತುತ್ತು ಅನ್ನಕ್ಕೂ ಅಕ್ಕಿ ಇಲ್ಲದ ಪರಿಸ್ಥಿತಿ ಉದ್ಭವಿಸಿದೆ.

ಬೇಗ ತಿಂಡಿಯನ್ನಾದರೂ ಮುಗಿಸೋಣ ಎಂದು ತಟ್ಟೆಗೆ ಬಡಿಸಿಕೊಂಡು ಒಂದೆರಡು ತುತ್ತು ತಿಂದಿದ್ದರು, ಅಷ್ಟರಲ್ಲೇ ಮನೆಯಲ್ಲಿ ಮಾಡಿದ್ದ ಅಡುಗೆಯನ್ನೂ ಬಿಗ್ ಬಾಸ್ ಗೆ ನೀಡಲು ಇಚ್ಛಿಸುತ್ತೀರಾ ಎಂದಾಗ ಅವರು ಎಸ್ ಬಾಸ್ ಎಂದು ಅದನ್ನೂ ಕೊಟ್ಟು ಕೈ ತೊಳೆದುಕೊಂಡರು. ಇದು ಎಂಬತ್ತಾರನೇ ದಿನ ನಡೆದ ರೋಚಕ ಬೆಳವಣಿಗೆಗಳು.

 ತಿನ್ನುತ್ತಿದ್ದ ದೋಸೆಯನ್ನೂ ಕಿತ್ತುಕೊಂಡ ಬಿಗ್ ಬಾಸ್

ತಿನ್ನುತ್ತಿದ್ದ ದೋಸೆಯನ್ನೂ ಕಿತ್ತುಕೊಂಡ ಬಿಗ್ ಬಾಸ್

ಅನುಪಮಾ ಭಟ್ ಹಾಗೂ ದೀಪಿಕಾ ಕಾಮಯ್ಯ ತಿನ್ನುತ್ತಿದ್ದ ದೋಸೆಯನ್ನೂ ಕಿತ್ತುಕೊಂಡ ಬಿಗ್ ಬಾಸ್. ಎಲ್ಲವನ್ನೂ ಸ್ಟೋರ್ ರೂಮಿನಲ್ಲಿಟ್ಟು ಬಾಗಿಲು ಮುಚ್ಚಲಾಯಿತು. ಬಳಿಕ ಮನೆಯಲ್ಲಿರುವ ಎಲ್ಲಾ ನೀರನ್ನು ಬಂದ್ ಮಾಡಲು ಇಚ್ಛಿಸುತ್ತೀರಾ ಎಂದರು. ಆಗ ಅವರು ಸ್ವಲ್ಪ ಯೋಚನೆಗೆ ಬಿದ್ದರು.

ಮನೆಗೆ ನೀರು ಬಂದ್ ಮಾಡಿದ ಬಿಗ್ ಬಾಸ್

ಮನೆಗೆ ನೀರು ಬಂದ್ ಮಾಡಿದ ಬಿಗ್ ಬಾಸ್

ನೀರಿಲ್ಲ ಎಂದಾಗ ಮೊದಲು ಬೆಚ್ಚಿಬಿದ್ದದ್ದು ಶ್ವೇತಾ ಚೆಂಗಪ್ಪ. ಚಿನ್ನ ನನ್ನ ಗತಿ ಎಂದರು. ಇತರೆ ಸದಸ್ಯರ ಒಪ್ಪಿಗೆ ಪಡೆದರು ಎಸ್ ಬಿಗ್ ಬಾಸ್ ಎಂದರು ಸೃಜನ್. ಲಗ್ಜುರಿ ಬಜೆಟ್ ಗಾಗಿ ಮನೆಯ ಸದಸ್ಯರಿಗೆ ಬಿಗ್ ಬಾಸ್ ನಾನಾ ಸಂಕಷ್ಟಗಳನ್ನು ಕೊಟ್ಟರು. ಲಗ್ಜುರಿ ಬಜೆಟ್ ಕೊಡಲು ಮನೆಯ ಸೌಕರ್ಯಗಳನ್ನು ಕಿತ್ತುಕೊಂಡರು.

ಬಿಗ್ ಬಾಸ್ ಕೊಟ್ಟ ಇನ್ನೊಂದು ಶಾಕ್

ಬಿಗ್ ಬಾಸ್ ಕೊಟ್ಟ ಇನ್ನೊಂದು ಶಾಕ್

ಮನೆಯ ಸದಸ್ಯರ ಎಲ್ಲಾ ಬಟ್ಟೆಗಳನ್ನು ಕಿತ್ತುಕೊಂಡರು. ನನಗೆ ಪ್ರಾಬ್ಲಂ ಬೇರೆ ಇದೆ ಸುಮ್ಮನಿರು ಎಂದರು ಶ್ವೇತಾ ಚೆಂಗಪ್ಪ. ನೀರ್ ಕಟ್, ರೇಷನ್ ಕಟ್ ಮಾಡಿದ್ದೀರಿ, ಮುಂದೇನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಸಖತ್ ಬೋರ್ ಆಗುತ್ತಿದೆ ಎಂದರು ಸೃಜನ್. ಆಗ ಬಿಗ್ ಬಾಸ್ ಇನ್ನೊಂದು ಶಾಕ್ ಕೊಟ್ಟರು.

ಶ್ವೇತಾ ಅವರಿಗೆ ಇನ್ನೊಂದು ಹಿಂಸೆ

ಶ್ವೇತಾ ಅವರಿಗೆ ಇನ್ನೊಂದು ಹಿಂಸೆ

ಶ್ವೇತಾ ಅವರನ್ನು ಕನ್ಫೆಷನ್ ರೂಮಿಗೆ ಕರೆದು ಅವರ ಮುಂದೆ ಆಮ್ಲೆಟ್ ಹಾಗೂ ಮೊಟ್ಟೆ ಮಿಶ್ರಿತ ಹಾಲನ್ನು ಇಡಲಾಗಿತ್ತು. ಒಂದು ಕಚ್ಚು (ಬೈಟ್ ಕನ್ನಡ ರೂಪಾಂತರ) ಆಮ್ಲೆಟ್ ತಿನ್ನುತ್ತೀರಾ ಎಂದರು. ಈ ಹೊತ್ತು ನಾನು ಮೊಟ್ಟೆ ತಿನ್ನದೇ ಇರುವಂತಹ ದಿನ, ಆದರೆ ಈ ಹೊತ್ತು ತಿನ್ನುತ್ತ್ತಿದ್ದೇನೆ ಎಂದು ಏನೇನೋ ಹೇಳಿ ಗಬಗಬನೆ ತಿಂದರು. ಆಗ ಬಿಗ್ ಬಾಸ್, ಒಂದು ಕಚ್ಚು ತಿನ್ನಲು ಹೇಳಿದ್ದು ನೀವು ತಿನ್ನುತ್ತಲೇ ಇದ್ದೀರಾ ಎಂದು ಎಚ್ಚರಿಸಿದರು.

ಒಂದು ಸ್ಫೂನ್ ಉಪ್ಪಿನ ಜೊತೆ ಆಮ್ಲೆಟ್ ಪೀಸ್

ಒಂದು ಸ್ಫೂನ್ ಉಪ್ಪಿನ ಜೊತೆ ಆಮ್ಲೆಟ್ ಪೀಸ್

ಆಮ್ಲೆಟ್ ನ ಒಂದು ಬೈಟ್ ಮೇಲೆ ಒಂದು ಸ್ಫೂನ್ ಉಪ್ಪು ಹಾಕಿಕೊಂಡು ತಿನ್ನಲು ಹೇಳಿದರು ಅದಕ್ಕೂ ಎಸ್ ಬಿಗ್ ಬಾಸ್ ಎಂದು ತಿಂದರು. ಮತ್ತೆ ಉಪ್ಪು ಹಾಕಿಕೊಂಡು ತಿನ್ನಲು ಹೇಳಿದರು. ಮೊಟ್ಟೆ ಮಿಶ್ರಿತ ಹಾಲಿನ ಎರಡು ಸಿಪ್ ಕುಡಿಯಲು ಹೇಳಿದರು. ಎಸ್ ಎಂದು ಕುಡಿದ ಶ್ವೇತಾ ಅವರು ಕಷ್ಟಪಟ್ಟು ಕುಡಿದರು.

ಮೊಟ್ಟೆ ಮಿಶ್ರಿತ ಹಾಲಿನಿಂದ ಗಂಟಲು ಸ್ವಚ್ಛಗೊಳಿಸಿಕೊಂಡರು

ಮೊಟ್ಟೆ ಮಿಶ್ರಿತ ಹಾಲಿನಿಂದ ಗಂಟಲು ಸ್ವಚ್ಛಗೊಳಿಸಿಕೊಂಡರು

ಮೊಟ್ಟೆ ಮಿಶ್ರಿತ ಹಾಲಿನಿಂದ ಗಂಟಲನ್ನು ಸ್ವಚ್ಛಗೊಳಿಸಲು ಇಚ್ಛಿಸುತ್ತೀರಾ ಎಂದಾಗ ಒಲ್ಲದ ಮನಸ್ಸಿನಿಂದ ಅವರು ಎಸ್ ಬಿಗ್ ಬಾಸ್ ಎಂದು ಹೇಳಿ ಹಾಗೆಯೇ ಮಾಡಿದರು. ಕೂಡಲೆ ವಾಂತಿಯನ್ನೂ ಮಾಡಿಕೊಂಡರು.

ಸಗಣಿಯಲ್ಲಿ ಸ್ನಾನ ಮಾಡಿದ ದೀಪಿಕಾ ಕಾಮಯ್ಯ

ಸಗಣಿಯಲ್ಲಿ ಸ್ನಾನ ಮಾಡಿದ ದೀಪಿಕಾ ಕಾಮಯ್ಯ

ಇನ್ನೊಂದು ಕಡೆ ಬಕೆಟ್ ನಲ್ಲಿರುವುದನ್ನು ಅಕುಲ್ ನಿಮ್ಮ ತಲೆಯ ಮೇಲೆ ಸುರಿಯಲಿ ಎಂದು ಇಚ್ಛಿಸುತ್ತಿದ್ದೀರಾ? ಎಂದರು. ದೀಪಿಕಾ ಕಾಮಯ್ಯ ಎಸ್ ಬಿಗ್ ಬಾಸ್ ಎಂದರು. ಮೊದಲು ನೀರು ಬಳಿಕ ಮಣ್ಣಿನ ರಾಡಿ ಬಳಿಕ ಸಗಣಿಯನ್ನು ತಲೆಯ ಮೇಲೆ ಸುರಿಯಲಾಯಿತು.

ದೀಪಿಕಾ ಪರಿಸ್ಥಿತಿ ಯಾರಿಗೂ ಬೇಡ ಎಂಬತ್ತಿತ್ತು

ದೀಪಿಕಾ ಪರಿಸ್ಥಿತಿ ಯಾರಿಗೂ ಬೇಡ ಎಂಬತ್ತಿತ್ತು

ಒಟ್ಟಾರೆ ದೀಪಿಕಾ ಕಾಮಯ್ಯ ಪರಿಸ್ಥಿತಿ ಯಾರಿಗೂ ಬೇಡ ಎಂಬಂತಿತ್ತು. ಇದೇ ವಿಚಾರವಾಗಿ ಅಕುಲ್ ಮತ್ತು ದೀಪಿಕಾ ನಡುವೆ ಸಣ್ಣ ಜಗಳವೂ ನಡೆಯಿತು. ಸಗಣಿ ಹಾಕಿಸಿಕೊಳ್ಳುವುದು ಧಂ ಇರಬೇಕು ಎಂದು ದೀಪಿಕಾ ಹೇಳಿದ್ದಕ್ಕೆ ಇಬ್ಬರ ನಡುವೆ ಜಗಳ ಶುರುವಾಯಿತು.

ಅಕುಲ್, ದೀಪಿಕಾ ನಡುವೆ ಜಗಳ

ಅಕುಲ್, ದೀಪಿಕಾ ನಡುವೆ ಜಗಳ

ದೀಪಿಕಾ ಕಾಮಯ್ಯ ಹಾಗೂ ಅಕುಲ್ ನಡುವೆ ತಮಾಷೆಗೆ ಶುರುವಾದ ಜಗಳ ಕೊನೆಗೆ ಸೀರಿಯಸ್ ರೂಪ ಪಡೆದುಕೊಳ್ತು. ಎತ್ತರದ ಧ್ವನಿಯಲ್ಲಿ ಮಾತನಾಡಿದ ದೀಪಿಕಾ ಅವರನ್ನು ಇದು ನಿಮ್ಮ ಮನೆಯಲ್ಲ. ಸ್ವಲ್ಪ ನಾಲಿಗೆ ಬಿಗಿ ಹಿಡಿದು ಮಾತನಾಡಿ ಎಂದು ಅಕುಲ್ ಹೇಳಿದರು. ದೀಪಿಕಾ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು.

ನೋವು, ಹಸಿವು, ಸಂಕಟಗಳನ್ನು ಮರೆತರು

ನೋವು, ಹಸಿವು, ಸಂಕಟಗಳನ್ನು ಮರೆತರು

ಕಡೆಗೆ ಮನೆಯ ಸದಸ್ಯರಿಗೆ ಬಿಗ್ ಬಾಸ್ ಕೊಟ್ಟಿದ್ದು ಕುಡಿಯುವ ನೀರನ್ನು ಮಾತ್ರ. ನೋವು, ಹಸಿವು, ಸಂಕಟಗಳನ್ನು ಮರೆತು ನಗುನಗುತ್ತಾ ಟಾಸ್ಕ್ ನಲ್ಲಿ ಎಲ್ಲರೂ ಭಾಗವಹಿಸಿದ್ದಾರೆ. ಆದರೆ ಮುಂದೇನಾಗುತ್ತದೋ ಎಂಬ ಆತಂಕದಲ್ಲೇ ದಿನಗಳನ್ನು ಎಣಿಸುವ ಪರಿಸ್ಥಿತಿ ಸದಸ್ಯರದ್ದು.

English summary
Bigg Boss Kannada 2 day 87 highlights. Deepika was asked to stand in the garden. There were three buckets in front of her. The first one has water, second had muddy sludge and the third one had cow dung sludge. One by one all three were poured on her by Akul.
Please Wait while comments are loading...

Kannada Photos

Go to : More Photos