twitter
For Quick Alerts
ALLOW NOTIFICATIONS
For Daily Alerts

ಪೆಟ್ರೋಲ್ ಬಂಕ್, ಟೈರ್ ತಳ್ಳುವ ಕೆಲಸ ಮಾಡಿದ್ದೇನೆ

By Rajendra

Next »

« Previous

ಲಯ ಕೋಕಿಲ ಅವರು ತಮ್ಮ ಬಗ್ಗೆ ಹೇಳಿಕೊಳ್ಳುತ್ತಾ, ನಮ್ಮ ಇಡೀ ಕುಟುಂಬವೇ ಸಂಗೀತ ಕ್ಷೇತ್ರದಲ್ಲಿತ್ತು. ನಮ್ಮ ತಂದೆಗೆ ಅದು ಬಿಟ್ಟರೆ ಬೇರೆ ಏನೂ ಗೊತ್ತಿರಲಿಲ್ಲ. ಆ ಸಂದರ್ಭದಲ್ಲಿ ಎಲ್ಲಾ ಜವಾಬ್ದಾರಿಯೂ ನನ್ನ ಮೇಲೆ ಬಿತ್ತು. ಆಗ ನನ್ನ ಪುಟ್ಟ ತಮ್ಮ ಸಾಧು. ತುಂಬಾ ಕಷ್ಟದ ದಿನಗಳು. ಮೂರು ದಿನಗಳ ಅನ್ನವನ್ನು ಬೇಯಿಸಿ ತಿನ್ನುವಂತಹ ಪರಿಸ್ಥಿತಿ.

ಆಗ ಪೆಟ್ರೋಲ್ ಬಂಕ್, ಟೈರ್ ತಳ್ಳುವ ಕೆಲಸಗಳನ್ನು ಮಾಡಿದ್ದೇನೆ. ಆಗ ಒಂದು ಆರ್ಕೆಸ್ಟ್ರಾದಲ್ಲಿ ಚಾನ್ಸ್ ಸಿಕ್ತು. ಸಿ ಅಶ್ವತ್ಥ್ ಹಾಗೂ ಮೈಸೂರು ಅನಂತಸ್ವಾಮಿ ಅವರ ಜೊತೆ ಸಾಕಷ್ಟು ಕೆಲಸ ಮಾಡಿದ್ದೇನೆ. ಶಂಕರ್ ನಾಗ್ ಸಾರ್ ಅವರು ನಮ್ಮಂತಹವರಿಗೆಂದೇ ಸಂಕೇತ್ ಸ್ಟುಡಿಯೋ ಕಟ್ಟಿದರು.

Laya Kokila miserable story
ಆಗ 'ಮಾಲ್ಗುಡಿ ಡೇಸ್'ನಲ್ಲಿ ಕೆಲಸ ಮಾಡಿದೆ. ಮೊದಲು ನಾನು ರೀರೆಕಾರ್ಡಿಂಗ್ ಮಾಡಿದ್ದು ಶಂಕರ್ ನಾಗ್ ಅವರ 'ಒಂದು ಮುತ್ತಿನ ಕಥೆ' ಚಿತ್ರಕ್ಕೆ. ಆಗ ನಮಗೆಲ್ಲಾ ತುಂಬಾ ಬೆಂಬಲ ನೀಡಿದ್ದು ಹಂಸಲೇಖ ಅವರು. ನೂರ ಎಂಬತ್ತೈದು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ನನ್ನ ಇಡೀ ಕಥೆ ಹೇಳಲು ಮೂರು ದಿನ ಬೇಕು. ಮುಂದೆ ಹೇಳುತ್ತೇನೆ ಎಂದು ಅಲ್ಪ ವಿರಾಮ ಇಟ್ಟರು.

ಬಿಗ್ ಬಾಸ್ ನೀಡಿರುವ "ನಾನೇ ಬೆಸ್ಟ್" ಟಾಸ್ಕ್ ಗಾಗಿ ಎಲ್ಲರೂ ತಮ್ಮ ಯಶೋಗಾಥೆಯನ್ನು ಹೇಳಿಕೊಂಡರು. ಶಕೀಲಾ ಅವರು ಮಾತನಾಡುತ್ತಾ, ನಾನು ಸಿನಿಮಾಗೆ ಅಡಿಯಿಟ್ಟದ್ದು ತುಂಬಾ ಕಷ್ಟದಲ್ಲಿದ್ದ ಕಾರಣಕ್ಕೆ. ನಮ್ಮ ತಂದೆತಾಯಿಗೆ ನಾವು ಏಳು ಜನ ಮಕ್ಕಳು. ಮಕ್ಕಳನ್ನೆಲಾ ಪೋಷಿಸುವ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿತ್ತು. ನನ್ನ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಅವರಿಗಾಗಿ ದುಡಿಯಬೇಕಾಗಿತ್ತು.

ನನ್ನ ಮೊದಲ ಚಿತ್ರ 'ಪ್ಲೇ ಗರ್ಲ್'. ಸಿಲ್ಕ್ ಸ್ಮಿತಾ ಅವರಿಗೆ ಅಕ್ಕನಾಗಿ ಆ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಅದು ತಮಿಳು ಚಿತ್ರ. ಇಪ್ಪತ್ತು ಇಪ್ಪತ್ತಮೂರರ ಹರೆಯದಲ್ಲೆ ಮಲಯಾಳಂ ಚಿತ್ರರಂಗಕ್ಕೆ ಅಡಿಯಿಟ್ಟೆ. ನಿಜ ಹೇಳಬೇಕು ಎಂದರೆ ನನಗೆ ಒಂದೇ ಒಂದು ಅಕ್ಷರವೂ ಮಲಯಾಳಂ ಬರುತ್ತಿರಲಿಲ್ಲ.

ಎರಡು ಮೂರು ವರ್ಷದಲ್ಲಿ ಸಾಕಷ್ಟು ಹೆಸರು ಮಾಡಿದೆ. ನನ್ನ ಸಿನಿಮಾಗಳಿಂದ ನಿರ್ಮಾಪಕರು, ವಿತರಕರು ತುಂಬಾನೇ ದುಡ್ಡು ಮಾಡಿದರು. ಆ ನೆನಪಿಗಾಗಿ ತಮ್ಮ ಮನೆಗಳಿಗೂ ಶಕೀಲಾ ಪ್ಯಾಲೇಸ್, ಶಕೀಲಾ ಮಂಜಿಲ್ ಎಂದು ಹೆಸರಿಟ್ಟುಕೊಂಡಿದ್ದಾರೆ.

ಚಿತ್ರಮಂದಿರಗಳನ್ನು ಮುಚ್ಚಿ ಕಲ್ಯಾಣ ಮಂಟಪಳಾಗಿ ಬದಲಾಗಿಸುವಂತಹ ಪರಿಸ್ಥಿತಿ ಚಿತ್ರೋದ್ಯಮದಲ್ಲಿದ್ದಂತಹ ಕಾಲ. ಅಂತಹ ಸಂದರ್ಭದಲ್ಲಿ ನನ್ನ ಚಿತ್ರಗಳು ಹೊಸ ಬದಲಾವಣೆಗೆ ಕಾರಣವಾದವು. ಮುಚ್ಚುತ್ತಿದ್ದ ಥಿಯೇಟರ್ ಗಳು ಮತ್ತೆ ಜೀವ ಪಡೆದುಕೊಂಡವು.

ಎರಡು ವರ್ಷಗಳ ಕಾಲ ನನ್ನ ಡೇಟ್ಸ್ ಸಿಗುವುದು ಕಷ್ಟವಾಗಿತ್ತು. ಇದರ ಜೊತೆಗೆ ತಮ್ಮ ಚಿತ್ರಗಳಿಗೆ ಆಗ ಇದ್ದ ಬೆಲೆ, ತಮ್ಮ ಮಾರುಕಟ್ಟೆ ಬಗ್ಗೆ ಶಕೀಲಾ ಹೇಳಿಕೊಂಡರು. ಇದಕ್ಕೆಲ್ಲಾ ಆ ದೇವರೇ ಕಾರಣ ಎಂದೂ ಹೇಳಿದರು.

Next »

« Previous

English summary
Bigg Boss gives 'Who is the best' task to inmates on fifth day. According to their age, career graph Sahkeela herself occupied number 1 position. Srujan Lokesh, Shakeela, Akul Balaji, Laya Kokila and Anita Bhat disclosed some of interesting and tragic moments of life. Here is the day 5 highlights.
Saturday, July 5, 2014, 15:42
IIFA

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X