»   » ಅನಿತಾ ಭಟ್ 'ಎಲಿಮಿನೇಷನ್' ಮೊದ್ಲೆ ಲೀಕ್ ಆಗಿತ್ತೇಕೆ?

ಅನಿತಾ ಭಟ್ 'ಎಲಿಮಿನೇಷನ್' ಮೊದ್ಲೆ ಲೀಕ್ ಆಗಿತ್ತೇಕೆ?

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ದಿನಗಳು ಕಳೆಯುತ್ತಿದ್ದಂತೆ ಎಲ್ಲರೂ ಒಬ್ಬರಿಗೊಬ್ಬರು ನಿಧಾನಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಹಲವಾರು ಸ್ವಾರಸ್ಯಕರ ಸಂಗತಿಗಳು ಪ್ರೇಕ್ಷಕರಿಗೆ ಕಾಣಲು ಸಿಕ್ಕರೂ ಈ ಹಿಂದಿನ ಬಿಗ್ ಬಾಸ್ ನಲ್ಲಿದ್ದ ಪಂಚ್ ಎಲ್ಲೋ ಮಿಸ್ ಆಗುತ್ತಿದೆ ಎಂದು ಆಡಿಯನ್ಸ್ ಥಿಂಕ್ ಮಾಡುತ್ತಿದ್ದಾರೆ. ಸ್ಸಾರಿ ಕನ್ನಡ ವಾಕ್ಯಗಳ ಮಧ್ಯೆ ಹೆಚ್ಚೆಚ್ಚು ಆಂಗ್ಲ ಪದಗಳು ಬಳಕೆ ಆಗಲು ಕಾರಣ ಬಿಗ್ ಬಾಸ್ ಸೀಸನ್ 2 ನಿರೂಪಕ ಹಾಗೂ ಸ್ಪರ್ಧಿಗಳ ಪ್ರಭಾವ ಎನ್ನಬಹುದು.

ಆದಿ, ಸೃಜನ್, ಶಕೀಲಾ, ಲಯ, ಅನಿತಾ ತಮ್ಮ ತಮ್ಮ ಕಥೆಗಳನ್ನು ಹೇಳಿಕೊಂಡ ನಂತರ ಶ್ವೇತಾ ಜ್ಞಾನೋದಯವಾದಂತೆ ಅಡಿದ್ದಾರೆ. ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಎಲ್ಲರೊಟ್ಟಿಗೆ ಮಾತನಾಡುವುದಕ್ಕೆ 'ಕಿಚ್ಚಿನ ಕಥೆ ಕಿಚ್ಚನ ಜತೆ' ಎಂದು ಹೆಸರಿಸಲಾಗಿದೆ. ಅಫ್ ಕೋರ್ಸ್ ಈ ಶೋಗಾಗೇ ವಾರದಿಂದ ಅಭಿಮಾನಿಗಳು ಕಾದಿದ್ದರು ಎಂದರೆ ಅದರಲ್ಲಿ ತಪ್ಪೇನಿಲ್ಲ.

ಆದಿ ಲೋಕೇಶ್ ಕಡೆಗೂ ಬಿಚ್ಚಿಟ್ಟರು ಕಣ್ಣೀರ ಕಥೆ , ಹಲವು ಸಲ ಆತ್ಮಹತ್ಯೆಗೆ ಯತ್ನಿಸಿದ್ದ ಅಕುಲ್ ಬಾಲಾಜಿ, ಪೆಟ್ರೋಲ್ ಬಂಕ್, ಟೈರ್ ತಳ್ಳುವ ಕೆಲಸ ಮಾಡಿದ್ದೇನೆ ಎಂದ ಲಯ, ಅಪ್ಪನ ನೆನೆಯುತ್ತಾ ಸೃಜನ್ ಕಣ್ಣಾಲಿ ತುಂಬಿ ಬಂದಿದ್ದು ಎಲ್ಲವನ್ನು ಓದಿರುತ್ತೀರಿ.

ಬಿಗ್ ಬಾಸ್ ಮನೆಯಿಂದ ಅನಿತಾ ಭಟ್ ಔಟ್ ಆಗಿದ್ದೇಕೆ?, ಎಲಿಮಿನೇಷನ್ ವಿಷಯ ಮುಂಚಿತವಾಗಿ ಲೀಕ್ ಆದರೆ ಸುವರ್ಣಗೆ ಆದ ನಷ್ಟವೇನು? ಮುಂದೆ ಓದಿ... ಕಿಚ್ಚಿನ ಕಥೆ ಕಿಚ್ಚನ ಜತೆ ಎಪಿಸೋಡ್ ಕಥೆ ವಿವರ ಇಲ್ಲಿದೆ ತಪ್ಪದೇ ಓದಿ

ಪ್ರೇಕ್ಷಕರ ಒಲವು ಅನಿತಾ ಕಡೆಗಿರಲಿಲ್ಲವಂತೆ
  

ಪ್ರೇಕ್ಷಕರ ಒಲವು ಅನಿತಾ ಕಡೆಗಿರಲಿಲ್ಲವಂತೆ

ವಾರಾಂತ್ಯದಲ್ಲಿ ಮನೆಯಿಂದ ಹೊರಬಿದ್ದ ಅನಿತಾ ಭಟ್ ಅವರು ಮನೆಯಿಂದ ಹೊರಕ್ಕೆ ಹೋಗುವ ಮುನ್ನ ಪ್ರೇಕ್ಷಕರ ಮನದಿಂದ ಹೊರಬಿದ್ದಿದ್ದರು ಹೀಗಾಗಿ ಮೊದಲ ಎಲಿಮಿನೇಟೆಡ್ ಕ್ಯಾಂಡಿಡೇಟು ಎನಿಸಿಕೊಂಡಿದ್ದಾರೆ.

'ಚಿಟಿಕೆ ಹೊಡೆದರೆ ಸಾಕು ಹುಡುಗರು ಸಾಲು ಸಾಲು ನನ್ಮುಂದೆ ನಿಲ್ಲುತ್ತಾರೆ' ಎಂದು ಸ್ವಲ್ಪ ಓವರ್ ಕಾನ್ಫಿಡೆಂಟ್ ಆಗಿ ಡೈಲಾಗ್ ಹೊಡೆದ ಅನಿತಾ ಟಿ.ಆರ್ ಅವರಿಗೆ ಬಿಗ್ ಬಾಸ್ ಮನೆಯವರ ಮುಂದೆ ಚಿಟಿಕೆ, ಚಪ್ಪಾಳೆ ಹೊಡೆಯುವ ಅವಕಾಶವೇ ಸಿಗಲಿಲ್ಲ.

ಎಂದಿನಂತೆ ಪ್ರೇಕ್ಷಕರ ಒಲವು ನಿಮ್ಮ ಕಡೆ ಇರಲಿಲ್ಲ ನಿಮ್ಮ ಹೆಸರಿಗೆ ಎಸ್ಸೆಂಎಂಸ್ ಸಿಕ್ಕಿಲ್ಲ ಎಂಬ ಡೈಲಾಗ್ ಹೊಡೆದು ಕಿಚ್ಚ ಅನಿತಾ ಅವರನ್ನು ಮನೆಯಿಂದ ಹೊರಕ್ಕೆ ಕರೆಸಿಕೊಂಡಿದ್ದಾರೆ. ಎಷ್ಟು ಎಸ್ಸೆಂಎಸ್ ಬಂತು ಎಂದು ಎಂಬ ಪ್ರಶ್ನೆಗೆ ಕಳೆದ ಸೀಸನ್ ನಿಂದಲೂ ಉತ್ತರ ಸಿಗುತ್ತಿಲ್ಲ. ಬಹುಶಃ ಉತ್ತರ ಸಿಗುವುದೂ ಇಲ್ಲ.

ಅನಿತಾ ಭಟ್ ತನ್ನ ಕಥೆ ಹೇಳಲೂ ಇಲ್ಲ
  

ಅನಿತಾ ಭಟ್ ತನ್ನ ಕಥೆ ಹೇಳಲೂ ಇಲ್ಲ

ಕನ್ನಡದ 'ಶೆರ್ಲಿನ್ ಚೋಪ್ರಾ' ಅನಿತಾ ಭಟ್ ಮಾತಿನಲ್ಲೇ ಪಟಾಕಿ ಸಿಡಿಸುವ ಬೆಡಗಿ ಸೈಕೋ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯ.

ಉತ್ತಮ ನಟನಾ ಕೌಶಲ್ಯ ಹಾಗೂ ಪ್ರೇಕ್ಷಕರ ಕಣ್ಣಿಗೆ ತಂಪೆರವ ಚೆಲುವು ಹೊಂದಿರುವ ಸಿದ್ದಾಪುರದಲ್ಲಿ ಹುಟ್ಟಿರುವ ಶಿವಮೊಗ್ಗ ಮೂಲದ ಹವ್ಯಕರ ಹುಡುಗಿ ತನ್ನ ಬದುಕಿನ ದುರಂತದ ಬಗ್ಗೆ ಹೇಳಿಕೊಳ್ಳಲು ಸೂಕ್ತ ಸಮಯ ಸಿಗಲೇ ಇಲ್ಲ ಎಂಬ ಕೊರಗಿನಿಂದಲೇ ಹೊರನಡೆದಿದ್ದಾಳೆ.

ಸದ್ಯಕ್ಕೆ ಯೋಗರಾಜ್ ಭಟ್ ಅವರ ಪರಪಂಚ ಚಿತ್ರದಲ್ಲಿ ಅಭಿನಯಿಸುತ್ತಿದ್ದು. ದಾಸ್ವಾಳ ಹಾಗೂ ರಾಜ್ ಬಹದ್ದೂರ್ ಚಿತ್ರಗಳಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಗ್ಲಾಮರ್ ಬೊಂಬೆಯ ಗಾಢವಾದ ಕಣ್ಣೀರಿನ ಕಥೆ ಮುಂದಿನ ದಿನಗಳಲ್ಲಿ ಸುದ್ದಿವಾಹಿನಿಗಳಲ್ಲಿ ಸರಣಿಯಲ್ಲಿ ಪ್ರಸಾರವಾದರೂ ಅಚ್ಚರಿಯೇನಿಲ್ಲ.

ಬಿಗ್ ಬಾಸ್ 2 ಬಿಗ್ ಬೋರಿಂಗ್
  

ಬಿಗ್ ಬಾಸ್ 2 ಬಿಗ್ ಬೋರಿಂಗ್

ಬಿಗ್ ಬಾಸ್ 2 ಬಿಗ್ ಬೋರಿಂಗ್ ಎಂದು ಜನ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಉಗಿಯುತ್ತಿದ್ದಾರೆ. ಬಿಗ್ ಬಾಸ್ 1 ನಲ್ಲಿ ಅನುಶ್ರೀ, ನಿಕಿತಾ ಕಡೆಗೆ ಜಯಲಕ್ಷ್ಮಿ ಸಹ ಲೈವ್ಲೀ ಆಗಿದ್ದರು! ಅತ್ಯಂತ ಪ್ರತಿಭಾನ್ವಿತ ಅರುಣ್ ಕುಮಾರ್ ನನ್ನು ಪ್ರತಿ ದಿನಾ ನೋಡೋದೇ ಒಂದು ಖುಷಿಯ ಅನುಭವ ಆಗಿತ್ತು. ಈ ಸಲ ಯಾಕೋ ಎಲ್ಲರೂ ಹ್ಯಾಪ್ ಮೋರೆಯವರೇ!!

ಸೃಜನ್ ಬಿಟ್ಟರೆ ಬೇರೆ ಯಾರೂ ಮನೆಯಲ್ಲಿ ಫ್ರೆಶ್ ಆಗಿಲ್ಲ. ಯಾರೋ ಮನೆಯೊಳಗೆ ದೂಡಿದಂತೆ ಅಡುತ್ತಿದ್ದಾರೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

 

ಅನಿತಾ ಭಟ್ ಎಲಿಮಿನೇಷನ್ ಮೊದ್ಲೆ ಲೀಕ್
  

ಅನಿತಾ ಭಟ್ ಎಲಿಮಿನೇಷನ್ ಮೊದ್ಲೆ ಲೀಕ್

ಅನಿತಾ ಭಟ್ ಎಲಿಮಿನೇಟ್ ಆಗಿರುವ ವಿಷಯ ಮೂರನೇ ಎಪಿಸೋಡು ಪ್ರಸಾರದ ನಂತರವೇ ಲೀಕ್ ಆಗಿತ್ತು. ಈ ಬಗ್ಗೆ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದರು. ಆದರೆ, ಈ ಬಗ್ಗೆ ಸುವರ್ಣ ವಾಹಿನಿ ಹೆಚ್ಚಿನ ಗಮನ ಹರಿಸಿರಲಿಲ್ಲ. ಪ್ರತಿ ಎಪಿಸೋಡಿನ ಗುಟ್ಟು ಇದೇ ರೀತಿ ರಟ್ಟಾದರೆ ಜನಪ್ರಿಯ ರಿಯಾಲಿಟಿ ಶೋ ಗತಿ ಏನು ಎಂಬ ಚಿಂತೆ ಸುವರ್ಣ ವಾಹಿನಿಯನ್ನು ಕಾಡುತ್ತಿದೆ.

  

ಹಾಗಾದರೆ ಇದೆಲ್ಲವೂ ಪೂರ್ವ ನಿರ್ಧಾರಿತವೇ

ಹಾಗಾದರೆ ಇದೆಲ್ಲವೂ ಪೂರ್ವ ನಿರ್ಧಾರಿತವೇ.. ಈ ವಾರ ಇವರು ಮುಂದಿನ ವಾರ ಇವರು ಎಂದು ಮೊದಲೇ ನಿರ್ಣಯವಾಗಿದೆಯೇ ಎಂಬ ಹಳೆ ಪ್ರಶ್ನೆ ಮತ್ತೆ ಎದ್ದಿದೆ. ಯಾವುದೂ ಪೂರ್ವ ನಿರ್ಧರಿತವಲ್ಲ ಎಂದು ಕಿಚ್ಚ ಸುದೀಪ್ ಮತ್ತದೇ ಹಳೆ ಡೈಲಾಗ್ ಮುಂದಿನ ಎಪಿಸೋಡ್ ನಲ್ಲಿ ರಿಪೀಟ್ ಮಾಡಿದರೂ ಅಚ್ಚರಿಪಡಬೇಕಾಗಿಲ್ಲ.

ಕನ್ನಡ ಕಲಿಕೆ ಆರಂಭಿಸಿ ಉಳಿದ ಶಕೀಲಾ
  

ಕನ್ನಡ ಕಲಿಕೆ ಆರಂಭಿಸಿ ಉಳಿದ ಶಕೀಲಾ

ಮನೆಯ ಪ್ರಮುಖ ಆಕರ್ಷಣೆ ಶಕೀಲಾ ತಮ್ಮ ವೃತ್ತಿಬದುಕಿನಲ್ಲಿ ಸಾಕಷ್ಟು ನೋವುಂಡ ತಾರೆ ಶಕೀಲಾ.ಬಿಗ್ ಬಾಸ್ ಮನೆಯಲ್ಲಿ ಕನ್ನಡ ಕಲಿಕೆ ಆರಂಭಿಸಿದ್ದು ಬಿಗ್ ಬಾಸ್ ಸೇರಿದಂತೆ ಪ್ರೇಕ್ಷಕರಿಗೂ ತುಂಬಾ ಹಿಡಿಸಿದೆ. ಈ ಕಾರಣಕ್ಕೋ ಏನೋ ಶಕೀಲಾ ಚೇಚಿ ಬಚಾವ್ ಆಗಿದ್ದಾರೆ. ಶಕೀಲಾ ತಮ್ಮ ಆತ್ಮಕಥೆಯನ್ನು ಇನ್ನೂ ಬಚ್ಚಿಡಬೇಕಿದೆ. ಅಲ್ಲಿ ತನಕ ಸೇಫ್ ಆಗಿರುವುದಂತೂ ನಿಶ್ಚಿತ.

ಕಿತ್ತಾಟದ ಮೂಲಕ ಬಚಾವಾದ ರೋಹಿತ್ ಸಂತೋಷ್
  

ಕಿತ್ತಾಟದ ಮೂಲಕ ಬಚಾವಾದ ರೋಹಿತ್ ಸಂತೋಷ್

ರೇಡಿಯೋ ರಾಕ್ ಸ್ಟಾರ್ ಆರ್ ಜೆ ರೋಹಿತ್ ಮಾತಲ್ಲೇ ಎಲ್ಲರ ಟೈಮ್ ಪಾಸ್ ಮಾಡಿಸುವ ಬಿಗ್ ಎಫ್ ಎಂ 92.7 ಆರ್ ಜೆ ಎನಿಸಿಕೊಂಡರೂ ಮನೆಯಲ್ಲಿ ಆತನಿಗೆ ಇನ್ನೂ ಹೆಚ್ಚಿನ ಅವಕಾಶ, ಆದರ, ಆತಿಥ್ಯ ಸಿಕ್ಕಿಲ್ಲ.

ಸಂತೋಷ್ ಜತೆ ಕಿತ್ತಾಟ, ಅಕುಲ್ ಕೂಡಾ ಕಿಚಾಯಿಸುವುದು, ಶಕೀಲಾ ಜತೆ ಡಾರ್ಲಿಂಗ್ ಎಂದು ಕರೆದ ಪ್ರಸಂಗ ಮುಂತಾದವು ಆತನನ್ನು ಬಚಾವ್ ಮಾಡಿದೆ. ಇಲ್ಲದಿದ್ದರೆ ರೋಹಿತ್ ಮನೆಯಿಂದ ಹೊರ ಬೀಳುವ ಮೊದಲ ಅತಿಥಿಯಾಗಿರುತ್ತಿದ್ದರು.

ವಾರಾಂತ್ಯಕ್ಕೂ ಮುನ್ನ ಎಪಿಸೋಡುಗಳಲ್ಲಿ ಸಂತೋಷ್ ಮಾಡಿದ ಕೀಟಲೆಗಳು ಆತನನ್ನು ಉಳಿಸಿದೆ. ಮನೆಯಲ್ಲಿ ಸುಮ್ಮನೆ ಕುಳಿತರೆ ಪ್ರೇಕ್ಷಕನಿಗೆ ಬೋರ್ ಆಗುತ್ತದೆ. ಟಿಆರ್ ಪಿ ಕೂಡಾ ನಷ್ಟ ಹೀಗಾಗಿ ಚಟುವಟಿಕೆಯಿಂದ ಇದ್ದರೆ ಅರ್ಥಾತ್ ಕಿತ್ತಾಟವಾಡಿದರೆ ಅಂಥ ಸ್ಪರ್ಧಿ ಕೆಲ ವಾರ ಬಚಾವ್ ಆಗುವುದು ಬಿಗ್ ಬಾಸ್ ನ ಅಲಿಖಿತ ನಿಯಮ.

 

English summary
Bigg Boss Kannada season 2 Elimination Day : In the first week four members like Shakeela, Santhosh, RJ Rohith and Anita Bhat were nominated for elimination. Of the four contestants Anita Bhat has been eliminated.Interesting to know elimination news leaked much before the week end episode.
Please Wait while comments are loading...

Kannada Photos

Go to : More Photos