twitter
    For Quick Alerts
    ALLOW NOTIFICATIONS  
    For Daily Alerts

    19ನೇ ದಿನ ಬಿಗ್ ಬಾಸ್ ಮನೆಯಲ್ಲಿ ಏನೇಲ್ಲಾ ನಡೀತು ಗೊತ್ತಾ?

    By Suneetha
    |

    ಆಳು-ಅರಸ ಟಾಸ್ಕ್ ಮೂಲಕ ಭರ್ಜರಿಯಾಗಿ ಕಿತ್ತಾಡಿಕೊಂಡು, ಬಿಗ್ ಫೈಟ್ ಮಾಡಿಕೊಂಡ ಹುಚ್ಚ ವೆಂಕಟ್ ಹಾಗೂ ರೆಹಮಾನ್ ಅವರ ಜಗಳಕ್ಕೆ ಟಾಸ್ಕ್ ಮುಗಿದ ನಂತರ ಪೂರ್ಣ ವಿರಾಮ ಬಿತ್ತು.

    ಈ ನಡುವೆ ಎಲ್ಲರೂ ಸೇರಿ ಹಬ್ಬ ಆಚರಿಸಿಕೊಂಡು ಸಂಭ್ರಮದಿಂದ ಕುಣಿದು ಕುಪ್ಪಳಿಸಿದ್ದು, ಆಯ್ತು. ಅಲ್ಲದೇ ಎಲ್ಲಾ ಕೋಪ-ತಾಪ ಮರೆತು ಚಂದನ್ ಅವರು ಹುಚ್ಚ ವೆಂಕಟ್ ಜೊತೆ ಹಾಡುಗಳ ಮೂಲಕ ಹುಚ್ಚಾಟ ನಡೆಸಿದರು. ಜೊತೆಗೆ 2003ರಲ್ಲಿ ಹುಚ್ಚ ವೆಂಕಟ್ ಸೇನೆ ಪ್ರಾರಂಭ ಆಯ್ತು, ಸುಮಾರು 12 ವರ್ಷ ಆಗ್ತಾ ಬಂತು, ಒಂದೊಂದು ರಾಜ್ಯದಲ್ಲಿ ಸುಮಾರು 15ಜನ ನನ್ನ ಅಭಿಮಾನಿಗಳು ನನ್ನ ಸೇನೆಯನ್ನು ನೋಡಿಕೊಳ್ಳುತ್ತಾರೆ ಎಂದು ಹುಚ್ಚ ವೆಂಕಟ್‌ ಅವರು ಚಂದನ್ ಜೊತೆ ತಮ್ಮ ವಾನರ ಸೇನೆಯ ಬಗ್ಗೆ ಕೆಲ ಹೊತ್ತು ಕೊಚ್ಚಿಕೊಂಡರು.[ತಲೆ ಮೇಲೆ 'ಎಕ್ಕಡ' ಹೊತ್ತು ಶಿಕ್ಷೆ ಅನುಭವಿಸಿದ ಹುಚ್ಚ ವೆಂಕಟ್!]

    ಬಿಗ್ ಪನಿಶ್ ಮೆಂಟ್ ಗೆ ಬೆಂಡಾಗಿದ್ದ ಹುಚ್ಚ ವೆಂಕಟ್ ಎಲ್ಲವನ್ನೂ ಮರೆತು ಚಂದನ್ ಜೊತೆ ಸೇರಿಕೊಂಡು ತಾನೇ ಅಡುಗೆ ಮಾಡಿಕೊಂಡು ತಿಂದರು. ಚಂದನ್ ತಿನ್ನಿಸಲು ಪ್ರಯತ್ನಪಟ್ಟಾಗ ನಿರಾಕರಿಸಿದರು. ಆವಾಗ ಚಂದನ್ ಹೋಗ್ಲಿ ನನಗೆ ತಿನ್ಸಿ ಎಂದಾಗ 'ನಾನು ನನ್ನ ಹೆಂಡ್ತಿಯರಿಗೆ ಬಿಟ್ಟು ಯಾರಿಗೂ ತಿನ್ನಿಸಲ್ಲ, ನೀನೇ ತಿನ್ಕೋ' ಎಂದು ಹುಚ್ಚ ವೆಂಕಟ್ ನುಡಿದರು.

    ಇನ್ನು ಆಳು-ಅರಸ ಟಾಸ್ಕ್ ಮುಗಿದ ನಂತರ ಕ್ಯಾಪ್ಟನ್ ಆನಂದ್ ಅವರು ಬಿಗ್ ಬಾಸ್ ಅನುಮತಿ ಮೇರೆಗೆ ಸೀಕ್ರೇಟ್ ಗೇಮ್ ಶುರು ಮಾಡಿದರು. ಸೀಕ್ರೆಟ್ ಟಾಸ್ಕ್ 12 ಘಂಟೆವರೆಗೆ ಇರುತ್ತದೆ, ಇದರಲ್ಲಿ ಸೋತವರು ಅಥವಾ ಗೊತ್ತಿಲ್ಲದಂತೆ ಈ ಟಾಸ್ಕ್ ಗೆ ಒಳಗಾದ 6 ಜನರು ಡೈರೆಕ್ಟ್ ನಾಮಿನೇಟ್ ಆಗ್ತಾರೆ, ಅನ್ನೋ ಟಾಸ್ಕ್ ನೀಡಲಾಗಿತ್ತು.[ನಾನು ಯಾವತ್ತಿದ್ರೂ ರಾಜನೇ, ಎಂದ ಹುಚ್ಚ ವೆಂಕಟ್!]

    ಈ ನಡುವೆ ಸೀಕ್ರಟ್ ಟಾಸ್ಕ್ ಬಗ್ಗೆ ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ಭಾವನ ಕಿಟ್ಟಿ ಅವರು ತಮ್ಮ ಮಗಳನ್ನು ನೆನೆದು ಕಣ್ಣೀರು ಹಾಕಿದರು.

    ಮನೆ ಮಂದಿ ಆಳು-ಅರಸ ಎಂಬ ಟಾಸ್ಕ್ ಅನ್ನು ಭಾಗಶ ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ಬಿಗ್ ಬಾಸ್ ಲಕ್ಸುರಿ ಬಜೆಟ್ ಜೊತೆಗೆ ಅಂಕಗಳನ್ನು ನೀಡಿದರು. ಮುಂದೆ ಓದಿ..

    'ನಿನ್ನ ನೋವನ್ನು ನೀನೇ ನುಂಗು' ಎಂದ ವೆಂಕಟಣ್ಣ

    'ನಿನ್ನ ನೋವನ್ನು ನೀನೇ ನುಂಗು' ಎಂದ ವೆಂಕಟಣ್ಣ

    ಮನೆಯಲ್ಲಾದ ಕೆಲವಾರು ಘಟನೆಗಳಿಂದ ಸೋತಿದ್ದ ಹುಚ್ಚ ವೆಂಕಟ್ ಅವರು ಮನೆಯಲ್ಲಿ ಒಬ್ಬರೇ ಹಾಡು ಹಾಡಲು ಶುರು ಹಚ್ಚಿಕೊಂಡಿದ್ದರು. ಸೋಲು ಉಂಟು, ಗೆಲುವು ಉಂಟು, ಆದರೂ ನಗಬೇಕಿಲ್ಲಿ, ಬಾಳ ಪಯಣದಲ್ಲಿ, ನಿನ್ನ ನೋವನ್ನು ನೀನೇ ನುಂಗು, ಎಂದು ಹಾಡುವ ಮೂಲಕ ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಂಡರು.

    ಮನೆಯವರಿಗೆ ಸಿಕ್ಕ ಅಂಕ ಎಷ್ಟು?

    ಮನೆಯವರಿಗೆ ಸಿಕ್ಕ ಅಂಕ ಎಷ್ಟು?

    ಆಳು-ಅರಸ ಟಾಸ್ಕ್ ಮಾಡಿದ್ದಕ್ಕೆ, 2500 ಅಂಕಗಳನ್ನು ಬಿಗ್ ಬಾಸ್ ಮನೆಯವರಿಗೆ ನೀಡಿದರು.ಅದರಲ್ಲೂ ಕೆಲವರು ಟಾಸ್ಕ್ ಸರಿಯಾಗಿ ಮಾಡದ್ದಕ್ಕೆ, ಹಾಗೂ ಕೆಲವರು ರೂಲ್ಸ್ ಬ್ರೇಕ್ ಮಾಡಿದ ಪರಿಣಾಮ 1000 ಸಾವಿರ ಅಂಕಗಳನ್ನು ಹಿಂಪಡೆಯಲಾಯಿತು.

    ಕೃತಿಕಾ-ಅಯ್ಯಪ್ಪ ಅವರಿಗೆ ಸ್ಪೆಷಲ್ ಗಿಫ್ಟ್

    ಕೃತಿಕಾ-ಅಯ್ಯಪ್ಪ ಅವರಿಗೆ ಸ್ಪೆಷಲ್ ಗಿಫ್ಟ್

    ಆಳು-ಅರಸ ಟಾಸ್ಕ್ ನಲ್ಲಿ ಅಯ್ಯಪ್ಪ ಹಾಗೂ ಕೃತಿಕಾ ಆಳುಗಳಾಗಿ ಉತ್ತಮವಾಗಿ ಟಾಸ್ಕ್ ನಿರ್ವಹಿಸಿದ್ದಕ್ಕಾಗಿ ಅವರಿಬ್ಬರಿಗೆ, ಈ ವಾರದ ಲಕ್ಸುರಿ ಬಜೆಟ್ ನಲ್ಲಿ ಉಳಿಕೆಯಾದ 1500 ಬಜೆಟ್ ನಲ್ಲಿ ತಲಾ 300ರಂತೆ ಹಂಚಲಾಯಿತು. ಈ ಬಜೆಟ್ ನಲ್ಲಿ ಅವರಿಬ್ಬರೂ ಏನೂ ಬೇಕಾದರೂ ಕೊಂಡುಕೊಳ್ಳಬಹುದು. ಆದರೆ ಬೇರೆಯವರಿಗೆ ನೀಡುವಂತಿರಲಿಲ್ಲ.

    ಸೀಕ್ರೆಟ್ ಟಾಸ್ಕ್

    ಸೀಕ್ರೆಟ್ ಟಾಸ್ಕ್

    ಕ್ಯಾಪ್ಟನ್ ಆಗಿದ್ದ ಮಾಸ್ಟರ್ ಆನಂದ್ ಅವರಿಗೆ ಬಿಗ್ ಬಾಸ್ ಸೀಕ್ರೆಟ್ ಟಾಸ್ಕ್ ಮಾಡುವ ಅಧಿಕಾರವನ್ನು ನೀಡಿದ್ದರು. ಅದರಂತೆ ಆನಂದ್ ಮಾಡಿದ್ದಕ್ಕಾಗಿ, ಬಿಗ್ ಬಾಸ್ ಈ ವಾರದ ಲಕ್ಸುರಿ ಬಜೆಟ್ ನಲ್ಲಿ ಮನೆಯವರೆಲ್ಲರಿಗೂ ಎಕ್ಸಟ್ರಾ 500 ನೀಡಿದರು. ಆದರೆ ಆನಂದ್ ಅವರು ಸೀಕ್ರೆಟ್ ಟಾಸ್ಕ್ ಅನ್ನು ಮನೆಯವರೆಲ್ಲರೊಂದಿಗೆ ಹಂಚಿಕೊಂಡ ಪರಿಣಾಮ ಅದನ್ನು ವಾಪಸ್ ಪಡೆಯಲಾಯಿತು.

    English summary
    Bigg Boss Kannada 3: 19th Day Higlights and Controversies. As the days passed, now contestants know about each others behavior, taste, and perspectives. Bigg Boss is the reality show which makes a person know himself/herself better.
    Saturday, November 14, 2015, 13:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X