»   » ಸೀಕ್ರೆಟ್ ರೂಮ್ ನಲ್ಲಿ ಪೂಜಾ ಗಾಂಧಿ ; ವೀಕ್ಷಕರ ಅಭಿಪ್ರಾಯವೇನು?

ಸೀಕ್ರೆಟ್ ರೂಮ್ ನಲ್ಲಿ ಪೂಜಾ ಗಾಂಧಿ ; ವೀಕ್ಷಕರ ಅಭಿಪ್ರಾಯವೇನು?

Posted by:
Subscribe to Filmibeat Kannada

ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದೇ ಸದ್ದು. ''ಪೂಜಾ ಗಾಂಧಿ ಈಸ್ ಬ್ಯಾಕ್. 'ಬಿಗ್ ಬಾಸ್' ಮನೆಯಿಂದ ಪೂಜಾ ಗಾಂಧಿ ಔಟ್ ಆಗಿಲ್ಲ. 'ಬಿಗ್ ಬಾಸ್' ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ. ವಿ ಲವ್ ಯೂ 'ಬಿಗ್ ಬಾಸ್''.

ಹೌದು, 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಐದನೇ ವಾರ 'ಮಳೆ ಹುಡುಗಿ' ಪೂಜಾ ಗಾಂಧಿ ಔಟ್ ಆಗ್ತಾರೆ ಅಂತ ಯಾರೂ ಊಹಿಸಿರಲಿಲ್ಲ. ಗಗನಸಖಿ ನೇಹ ಗೌಡ ಹೊರ ಹೋಗ್ಬಹುದು ಅಂತ ಎಲ್ಲರೂ ಲೆಕ್ಕಾಚಾರ ಹಾಕಿದ್ರು.

ಆದ್ರೆ, ಎಲ್ಲರ ಲೆಕ್ಕಾಚಾರ ಬುಡಮೇಲಾಗಿಸಿ 'ಬಿಗ್ ಬಾಸ್' ಪೂಜಾ ಗಾಂಧಿಗೆ ಗೇಟ್ ಪಾಸ್ ನೀಡಿದರು. 'ಮುಂಗಾರು ಮಳೆ' ಬೆಡಗಿಯನ್ನ ಔಟ್ ಮಾಡಿ ನೇಹ-ರೆಹಮಾನ್ ನ ಶೋನಲ್ಲಿ ಉಳಿಸಿಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಯ್ತು.

ಇದರ ಬೆನ್ನಲ್ಲೇ 'ಬಿಗ್ ಬಾಸ್' ನೀಡಿದ ಸೀಕ್ರೆಟ್ ರೂಮ್ ಟ್ವಿಸ್ಟ್ ವೀಕ್ಷಕರಿಗೆ ಸಖತ್ ಇಷ್ಟವಾಗಿದೆ. ಎಲ್ಲರ ಡಬಲ್ ಗೇಮ್ ನೋಡುವ ಅವಕಾಶ ಪೂಜಾ ಗಾಂಧಿಗೆ ಸಿಕ್ಕಿರುವುದಕ್ಕೆ ವೀಕ್ಷಕರು 'ಬಿಗ್ ಬಾಸ್'ಗೆ ಥ್ಯಾಂಕ್ಸ್ ಹೇಳಿದ್ದಾರೆ. ['ಬಿಗ್ ಬಾಸ್' ಟ್ವಿಸ್ಟ್ ; ಸೀಕ್ರೆಟ್ ರೂಮ್ ನಲ್ಲಿ ನಟಿ ಪೂಜಾ ಗಾಂಧಿ.!]

ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ 'ಪೂಜಾ ಗಾಂಧಿ ಸೀಕ್ರೆಟ್ ರೂಮ್' ಬಗ್ಗೆ ವ್ಯಕ್ತವಾಗಿರುವ ಅಭಿಪ್ರಾಯ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಥ್ಯಾಂಕ್ಸ್ 'ಬಿಗ್ ಬಾಸ್'

ಥ್ಯಾಂಕ್ಸ್ 'ಬಿಗ್ ಬಾಸ್'

'ಬಿಗ್ ಬಾಸ್' ನೀಡಿದ ಟ್ವಿಸ್ಟ್ ನಿಂದಾಗಿ ವೀಕ್ಷಕರಿಗೆ ಎಷ್ಟು ಖುಷಿಯಾಗಿದೆ ಅನ್ನೋದಕ್ಕೆ ಇದೇ ಸಾಕ್ಷಿ. [ಕಣ್ಣೀರು ಹಾಕಿಕೊಂಡು ಮನೆಯಿಂದ ಹೊರ ನಡೆದ ಮಳೆ ಹುಡುಗಿ]

ಖುಷಿಯಲ್ಲಿ ವೀಕ್ಷಕರು.!

ಖುಷಿಯಲ್ಲಿ ವೀಕ್ಷಕರು.!

'ಬಿಗ್ ಬಾಸ್' ನೀಡಿದ ಈ ಟ್ವಿಸ್ಟ್ ನಿಂದ ವೀಕ್ಷಕರು ತಮ್ಮ ಸಂತಸವನ್ನ ಹಂಚಿಕೊಂಡಿರುವುದು ಹೀಗೆ... [ನಟಿ ಶ್ರುತಿ ಬಗ್ಗೆ 'ಮಳೆ ಹುಡುಗಿ' ಪೂಜಾ ಗಾಂಧಿ ಹೇಳಿದ್ದೇನು?]

ರೆಹಮಾನ್ ಹೋಗ್ಬೇಕಿತ್ತು.!

ರೆಹಮಾನ್ ಹೋಗ್ಬೇಕಿತ್ತು.!

'ಬಿಗ್ ಬಾಸ್' ಮನೆಯಲ್ಲಿರುವುದಕ್ಕೆ ಪೂಜಾ ಗಾಂಧಿ ಅರ್ಹರು. ರೆಹಮಾನ್ ಔಟ್ ಆಗ್ಬೇಕಿತ್ತು ಅನ್ನೋದು ಕೆಲವರ ಅಭಿಪ್ರಾಯ.

ಡಬಲ್ ಧಮಾಕಾ.!

ಡಬಲ್ ಧಮಾಕಾ.!

ಒಂದ್ಕಡೆ ಅನಂತ್ ನಾಗ್ ಸಂದರ್ಶನ ಇನ್ನೊಂದ್ಕಡೆ ಪೂಜಾ ಗಾಂಧಿ ರೀ ಎಂಟ್ರಿ. ಡಬಲ್ ಧಮಾಕಾ ಆಫರ್ ಗೆ ವೀಕ್ಷಕರು ಫುಲ್ ಖುಷ್.

ಪೂಜಾ ಗಾಂಧಿಗೆ ತಪ್ಪು ಅರಿವಾಗಬೇಕು.!

ಪೂಜಾ ಗಾಂಧಿಗೆ ತಪ್ಪು ಅರಿವಾಗಬೇಕು.!

ವೈಯುಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಯಾರನ್ನೂ ನಂಬಬಾರದು ಅನ್ನೋದು ಪೂಜಾ ಗಾಂಧಿಗೆ ಮನದಟ್ಟಾಗಬೇಕು. ಹೀಗಾಗಿ ಸೀಕ್ರೆಟ್ ರೂಮ್ ಗೆ ಕಳುಹಿಸಿದ್ದು ಉತ್ತಮ ನಿರ್ಧಾರ ಅಂತ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಅಯ್ಯಪ್ಪ ವಿಡಿಯೋ ತೋರಿಸ್ಬೇಕಿತ್ತು.!

ಅಯ್ಯಪ್ಪ ವಿಡಿಯೋ ತೋರಿಸ್ಬೇಕಿತ್ತು.!

ಚಂದನ್ ವಿಡಿಯೋ ಬದಲು ಅಯ್ಯಪ್ಪ ವಿಡಿಯೋ ತೋರಿಸಿದ್ದರೆ, ಪೂಜಾ ಗಾಂಧಿ ಜೀವನ ಚೆನ್ನಾಗಿರುತ್ತಿತ್ತು ಅನ್ನುವವರೂ ಇದ್ದಾರೆ.

ಚಂದನ್ ಪರ ವೀಕ್ಷಕರು.!

ಚಂದನ್ ಪರ ವೀಕ್ಷಕರು.!

ಪೂಜಾ ಗಾಂಧಿ ಬಗ್ಗೆ ಅಯ್ಯಪ್ಪ ಮಾತಾಡಿದ್ದನ್ನ ಬಿಟ್ಟು ಚಂದನ್ ಹೇಳಿದ್ದನ್ನ ಮಾತ್ರ 'ಬಿಗ್ ಬಾಸ್' ತೋರಿಸಿದ ಕಾರಣ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಚಂದನ್ ಒಳ್ಳೆಯವರು.!

ಚಂದನ್ ಒಳ್ಳೆಯವರು.!

ತಮ್ಮ ಅಡುಗೆ ಬಗ್ಗೆ ಚಂದನ್ ಮಾತನಾಡಿದ ವಿಡಿಯೋ ನೋಡಿ ಪೂಜಾ ಗಾಂಧಿಗೆ ಬೇಸರವಾಯ್ತು. ಅದೇ ರೀತಿ ಅಯ್ಯಪ್ಪ ವಿಡಿಯೋ ಹಾಕ್ಬೇಕಿತ್ತು. ಚಂದನ್ ಇಮೇಜ್ ಮಾತ್ರ ಡ್ಯಾಮೇಜ್ ಮಾಡಿದ್ದು ಸರಿಯಲ್ಲ ಅನ್ನೋದು ಚಂದನ್ ಫ್ಯಾನ್ಸ್ ವಾದ.

ಸತ್ಯದರ್ಶನ ಈಗ.!

ಸತ್ಯದರ್ಶನ ಈಗ.!

ಅಯ್ಯಪ್ಪ ಬಗ್ಗೆ 'ಬಿಗ್ ಬಾಸ್' ವಿಡಿಯೋ ಪ್ಲೇ ಮಾಡಿಲ್ಲ ಓಕೆ. ಆದ್ರೆ, ಸೀಕ್ರೆಟ್ ರೂಮ್ ನಲ್ಲಿ ಪೂಜಾ ಗಾಂಧಿ ಇದ್ದಾರೆ. ಪೂಜಾ ಬಗ್ಗೆ ಅಯ್ಯಪ್ಪ ಏನೇ ಮಾತನಾಡಿದ್ರೂ ಗೊತ್ತಾಗುತ್ತೆ. ಈಗಲಾದರೂ ಪೂಜಾ ಗಾಂಧಿಗೆ ಸತ್ಯದರ್ಶನವಾದರೆ ಸಾಕು.

ಇಂದಿನ ಎಪಿಸೋಡ್ ನಲ್ಲಿ ಪೂಜಾ ಕಣ್ಣೀರು.!

ಇಂದಿನ ಎಪಿಸೋಡ್ ನಲ್ಲಿ ಪೂಜಾ ಕಣ್ಣೀರು.!

ಸೀಕ್ರೆಟ್ ರೂಮ್ ನಲ್ಲಿರುವ ಪೂಜಾ ಗಾಂಧಿ ಎಲ್ಲರ ನಿಜ ಬಣ್ಣವನ್ನ ನೋಡಿ ಕಣ್ಣೀರಿಟ್ಟಿದ್ದಾರೆ. ಇವತ್ತಿನ ಸಂಚಿಕೆ ಮಿಸ್ ಮಾಡ್ಬೇಡಿ....

English summary
Bigg Boss Kannada 3 Viewers are happy over the decision of Pooja Gandhi being sent to secret room. Check out the viewers reaction here.
Please Wait while comments are loading...

Kannada Photos

Go to : More Photos