»   » ಇದ್ದದ್ದು ಇಲ್ಲದ್ಹಂಗೆ, ಇಲ್ದದ್ದು ಕಂಡ್ಹಂಗೆ ಅಯ್ಯಪ್ಪಗೆ ಟಾಂಗ್ ಕೊಟ್ಟ ಶ್ರುತಿ

ಇದ್ದದ್ದು ಇಲ್ಲದ್ಹಂಗೆ, ಇಲ್ದದ್ದು ಕಂಡ್ಹಂಗೆ ಅಯ್ಯಪ್ಪಗೆ ಟಾಂಗ್ ಕೊಟ್ಟ ಶ್ರುತಿ

Posted by:
Subscribe to Filmibeat Kannada

ಇಷ್ಟು ದಿನ ಕಂಡರೂ ಕಾಣದಂತೆ, ನೋಡಿದರೂ ನೋಡದಂತೆ, ಯಾರ ತಂಟೆಗೂ ಹೋಗದೆ, ಅನವಶ್ಯಕ ಕಾಮೆಂಟ್ ಮಾಡದೆ 'ಬಿಗ್ ಬಾಸ್' ಮನೆಯಲ್ಲಿ ಸುಮ್ಮನ್ನೆ ಇರುತ್ತಿದ್ದ ನಟಿ ಶ್ರುತಿ 'ಕೊರವಂಜಿ' ವೇಷ ತೊಟ್ಟಿದ್ದೇ ತಡ ಕ್ರಿಕೆಟರ್ ಅಯ್ಯಪ್ಪ ರವರ ಲವ್ವಿ ಡವ್ವಿ ಬಗ್ಗೆ ಟಾಂಗ್ ಕೊಡುವುದಕ್ಕೆ ಶುರು ಮಾಡಿದರು.

ಅಯ್ಯಪ್ಪ-ಪೂಜಾ ಗಾಂಧಿ-ಗೌತಮಿ ನಡುವಿನ 'ಡವ್' ಕಹಾನಿ ಬಗ್ಗೆ ನಟಿ ಶ್ರುತಿ ಸಖತ್ತಾಗಿ ಕಾಮೆಂಟ್ ಮಾಡಿದರು.

ಲೆಫ್ಟು, ರೈಟು, ಗ್ರೌಂಡು, ಗಲ್ಲಿ ಅಂತ ಹೇಳ್ಕೊಂಡು ನಟಿ ಶ್ರುತಿ, ಅಯ್ಯಪ್ಪಗೆ ಟಾಂಗ್ ಕೊಟ್ಟ ಶೈಲಿ ಮೆಚ್ಚಲೇಬೇಕು. ['ಜೋಡಿ ನಂ.1' ಆದ ಅಯ್ಯಪ್ಪ-ಪೂಜಾ; ಕಿಟ್ಟಿಗೆ ಕಿರಿಕಿರಿ, ಗೌತಮಿಗೆ ಪಿರಿಪಿರಿ!]

ಅಯ್ಯಪ್ಪ, ಪೂಜಾ ಗಾಂಧಿ ಹಾಗೂ 'ಕೊರವಂಜಿ' ನಟಿ ಶ್ರುತಿ ನಡುವೆ ನಡೆದ ಸಂಭಾಷಣೆ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

ಕಣಿ ಹೇಳುವುದಕ್ಕೆ ಬಂದ ನಟಿ ಶ್ರುತಿ

ಕಣಿ ಹೇಳುವುದಕ್ಕೆ ಬಂದ ನಟಿ ಶ್ರುತಿ

'ಬಿಗ್ ಬಾಸ್' ನೀಡಿದ Luxury Budget ಟಾಸ್ಕ್ ಅನ್ವಯ ''ಇದ್ದಿದ್ದು ಇಲ್ಲದ್ಹಂಗೆ, ಇಲ್ದದ್ದು ಕಂಡ್ಹಂಗೆ ಹೇಳ್ತೀನವ್ವಾ...ಕಣಿ ಹೇಳ್ತೀನವ್ವಾ ಕಣಿ....'' ಅಂತ 'ಕೊರವಂಜಿ' ಅವತಾರ ತಾಳಿದ್ರು ನಟಿ ಶ್ರುತಿ.

ಪೂಜಾ ಗಾಂಧಿಗೆ ಮೊದಲ ಟಾಂಗ್!

ಪೂಜಾ ಗಾಂಧಿಗೆ ಮೊದಲ ಟಾಂಗ್!

ಪೂಜಾ ಗಾಂಧಿ - ''ಭವಿಷ್ಯ ನನಗೆ ಹೇಳಿ''

ಶ್ರುತಿ - ''ನಿನಗೆ ಆಮೇಲೆ ಹೇಳ್ತೀನಿ...ನಿನ್ನ ಭವಿಷ್ಯ ಇಲ್ಲಿ ಎಲ್ಲರಿಗೂ ಗೊತ್ತಾಗೈತಿ''

ತಗಲಾಕೊಂಡ ಅಯ್ಯಪ್ಪ

ತಗಲಾಕೊಂಡ ಅಯ್ಯಪ್ಪ

''ಇವರ ಮುಖದಾಗ ಒಂದು ಏನಿಲ್ಲಾ ಅಂದ್ರೂ ಇನ್ನೂರು ಮುನ್ನೂರು ಕಥೆ ಐತೆ. ಎಲ್ಲಾ ನಿರ್ಮಾಪಕರಿಗೂ ಹೇಳ್ಬಹುದು. ನಮಗೆ ಅದೂ ಒಂದು ಬಿಜಿನೆಸ್ ಆಗ್ತೈತಿ ನೋಡ್ರಿ. ಅವರ ಕಥೆ ನಾವು ತಗೊಂಡ್ರೆ ಎಂಥೆಂತ ಹಿಟ್ ಸಿನಿಮಾ ಆಗ್ತಾವ್ ನೋಡ್ರಿ'' - ಶ್ರುತಿ

ಅಯ್ಯಪ್ಪ ಅಭ್ಯಾಸ....

ಅಯ್ಯಪ್ಪ ಅಭ್ಯಾಸ....

ಅಯ್ಯಪ್ಪ - ''ನನಗೆ ಇದು ಅಭ್ಯಾಸ ಇಲ್ಲ''

ಶ್ರುತಿ - ''ಅಭ್ಯಾಸ ಇಲ್ಲ ಅಂದ್ರೆ ಮಾಡ್ಕೋ ರೀ, ಒಂದೊಂದು ಸರಿ ಒಂದೊಂದು ಅಭ್ಯಾಸ ಒಳ್ಳೆಯದ್ದು ಮಾಡ್ತದೆ ರೀ. ನಿಮಗೆ ಏನೇನ್ ಅಭ್ಯಾಸ ಇಲ್ಲ ಅಂತ್ಹೇಳ್ರೀ...ಎಲ್ಲಾ ಅಭ್ಯಾಸ ಐತ್ರೀ ನಿಮಗೆ''

ಕಟ್ಟೆ ಭವಿಷ್ಯ!

ಕಟ್ಟೆ ಭವಿಷ್ಯ!

ಶ್ರುತಿ - ''ಕಣ್ಮುಚ್ಚಿ ಕಣ್ತೆರೆಯೋದ್ರೊಳಗ ಅರ್ಧ ಭವಿಷ್ಯ ಕಂಡೈತಿ ನನಗಾ. ನೀವು ಯಾವ ಜಾಗದಾಗ ಕೂತಿದ್ರೋ ಆ ಜಾಗದಿಂದ ನಿಮ್ಮ ಭವಿಷ್ಯ ಟ್ರ್ಯಾಕ್ ಬದಲಾಗೈತಿ. ಹೌದೋ..ಇಲ್ಲೋ...?''

ಅಯ್ಯಪ್ಪ - ''ಹಾಗೇನಿಲ್ಲ''

ಶ್ರುತಿ - ಸುಳ್ಳು ಹೇಳಂಗಿಲ್ಲಪ್ಪಾ...ನೂರೈವತ್ತು ಕಣ್ಣು ನೋಡೈತಿ ನಿನ್ನ ಈ ಕಟ್ಟೆ ವಿಚಾರನಾ. ಜ್ಞಾಪಕ ಬಂದಿಲ್ಲೇನು? ಪಾಪಾ...ಜೀವನದಾಗ ಎಷ್ಟು ಕಟ್ಟೆ ಐತೋ..ಏನೋ..!''

ವಿಕೆಟ್ ಎತ್ತಿದ್ದೆಷ್ಟು?

ವಿಕೆಟ್ ಎತ್ತಿದ್ದೆಷ್ಟು?

ಶ್ರುತಿ - ''ಈ ರೇಖೆ ಹೇಳಾಕ್ಕತೈತಿ....ನೋಡಪ್ಪಾ ನೀ ಏನ್ ಕೆಲಸ ಮಾಡ್ತೀ?''

ಅಯ್ಯಪ್ಪ - ''ಚಂಡು ಎಸಿಯುವುದು''

ಶ್ರುತಿ - ''ಬೌಲರ್...ಹ್ಹಾ...ಹ್ಹಾ...ಚಂಡು ಎಸ್ದು ಎಷ್ಟು ವಿಕೆಟ್ ಎತ್ದೀ''

ಅಯ್ಯಪ್ಪ - 116

ಗ್ರೌಂಡ್ - ಗಲ್ಲಿ ವಿಷ್ಯ!

ಗ್ರೌಂಡ್ - ಗಲ್ಲಿ ವಿಷ್ಯ!

ಶ್ರುತಿ - ''ಆದ್ರಾ ನಿನ್ದೊಂದಾ ಸಮಸ್ಯೆ. ಆಟ ಆಡುವಾಗ ಗ್ರೌಂಡ್ ನಲ್ಲಿ ಮಾತ್ರ ಆಡಂಗಿಲ್ಲ ನೀನು. ಗಲ್ ಗಲ್ಲಿಯಲ್ಲೂ ಆಡ್ತೀಯಲ್ಲೋ ಮಾರಾಯಾ''

ಅಯ್ಯಪ್ಪ - ''ಗಲ್ಲಿ ಕ್ರಿಕೆಟ್ ತುಂಬಾ ಆಡಿದ್ದೀನಿ ನಾನು''

ಶ್ರುತಿ - ''ಹ್ಹಾ..ಹ್ಹಾ...ಅದೇ ಅದೇ...ಗ್ರೌಂಡ್ ನಲ್ಲಿ ಕಲ್ತಿದ್ ಆಟ ಗ್ರೌಂಡ್ನಾಗ್ ಮಾತ್ರ ಆಡ್ಬೇಕಪ್ಪಾ...ಗಲ್ಲಿಗಲ್ಲಿಯಲ್ಲೂ ಆಡ್ಬಾರ್ದು. ಆಗ ನಿಮ್ಮ ಭವಿಷ್ಯ ಬದಲಾಗ್ತೈತಿ. ಹಂಗ್ ಆದಾಗ್ ಮಾತ್ರ ನಿನ್ಗೊಂದು ಲಗ್ನ ಆಗ್ತೈತಿ. ಮಕ್ಕಳು ಮರಿ ಆಗ್ತವು. ಕ್ರಿಕೆಟ್ ಟೀಮ್ ಎಷ್ಟು ಜನ ಬೇಕೇಳು''

ಅಯ್ಯಪ್ಪ - ''11''

ಶ್ರುತಿ - ''ಆ ರೇಖೆ ಎಲ್ಲಾ ಕಾಣ್ತಾವ್. ಆದ್ರೆ ನೀನು ಗಲ್ಲಿಯಲ್ಲಿ ಆಡೋದು ಬಿಡಬೇಕು''

ಪೂಜಾ ಗಾಂಧಿಗೆ ಹಿತವಚನ!

ಪೂಜಾ ಗಾಂಧಿಗೆ ಹಿತವಚನ!

ಶ್ರುತಿ - ''ನಿನ್ದೊಂದೇ ಸಮಸ್ಯೆ. ಎಲ್ಲಾ ಛಲೋ ಐತಿ. ಗಾಡಿ ನಿಂದೇ. ಆದ್ರೆ ಬೇರೆಯವರ ಇಂಜಿನ್ ಹಾಕೊಂಡು ಗಾಡಿ ಓಡಿಸ್ತೀರಿ. ಗಾಡಿನೂ ನಿಂದೇ ಇರ್ಬೇಕು. ಇಂಜಿನ್ನೂ ನಿಂದೇ ಇರ್ಬೇಕು. ಆಗ ಮಾತ್ರ ಭವಿಷ್ಯ ಛಲೋ ಆಗ್ತೈತಿ''

ಅಯ್ಯಪ್ಪ-ಗೌತಮಿ ಬಗ್ಗೆ ಪೂಜಾ ಬಳಿ ಶ್ರುತಿ ಕಾಮೆಂಟ್

ಅಯ್ಯಪ್ಪ-ಗೌತಮಿ ಬಗ್ಗೆ ಪೂಜಾ ಬಳಿ ಶ್ರುತಿ ಕಾಮೆಂಟ್

ಶ್ರುತಿ - ''ನಿನ್ನದ್ದು ಅಂತೇನು ನೀನು ತಿಳಿದಿದ್ದೀಯೋ, ಅದು ನಿನ್ನ ದಾರಿ ಬಿಟ್ಟು ಬೇರೆ ದಾರಿಗೆ ಹೊಂಟೈತಿ ನೋಡವ್ವಾ ನೋಡು. ರಿಪೋರ್ಟ್ ಮಾಡ್ಕೋ ರೀ, ಬಹಳ ಸೂಕ್ಷ್ಮ ವಿಚಾರ ನಡೀತಾ ಐತೆ ಮನೆಯ್ಯಾಗ''

ಇಬ್ಬರು ಹೆಂಡಿರ ಮುದ್ದಿನ ಪೊಲೀಸ್

ಇಬ್ಬರು ಹೆಂಡಿರ ಮುದ್ದಿನ ಪೊಲೀಸ್

ಶ್ರುತಿ - ''ದಾರಿ ತಪ್ಪಿದ ಮಗ. ಅವರಿಗೆ ನಾನಾ ತರಹದ ಟೈಟಲ್ ಐತೆ ರೀ. ಇಬ್ಬರು ಹೆಂಡಿರ ಮುದ್ದಿನ ಪೊಲೀಸ್''

ಪೂಜಾ ಗಾಂಧಿ - ''ಅದು ಬರೀ ಸ್ವಲ್ಪ ದಿನಕ್ಕೋಸ್ಕರ ದಾರಿ ಅಷ್ಟೆ''

ಅಯ್ಯಪ್ಪಗೆ ಶ್ರುತಿ ಕಿವಿಮಾತು

ಅಯ್ಯಪ್ಪಗೆ ಶ್ರುತಿ ಕಿವಿಮಾತು

ಶ್ರುತಿ - ''ದೊಡ್ಡಮನಿಯಾಗ ದೊಡ್ಡ ಸಾಹೇಬ್ರು ನಿನಗೊಂದು ಕೆಲಸ ಕೊಟ್ಯಾರಾ. ನೀನು ಮನೆಯಲ್ಲಿ ಎಲ್ಲರನ್ನ ನೋಡ್ಬೇಕು. ಅದು ಬಿಟ್ಟು ಯಾರೋ ಒಬ್ಬರು ಮೇಕಪ್ ಮಾಡಿಕೊಳ್ಳುತ್ತಿರುವಾಗ ಅವರ ಹಿಂದ್ಹಿಂದೆ ಹೋಗಿ ಲೆಫ್ಟು ರೈಟು ಅಂತ್ಹೇಳಿ. ನೀ ಲೆಫ್ಟಿಂದನೂ ನೋಡ್ತೀ, ರೈಟಿಂದನೂ ನೋಡ್ತೀ. ನೀನು ಲೆಫ್ಟಿಗೆ ಹೋಗ್ತ್ಯೋ, ರೈಟ್ಗೆ ಹೋಗ್ತ್ಯೋ ತೀರ್ಮಾನ ಮಾಡ್ಕೊಂಡ್ರೆ ನಿನ್ನ ಭವಿಷ್ಯ ಚೆನ್ನಾಗಿರ್ತೈತಿ. ಯಾವತ್ತೂ ಸ್ಟ್ರೇಯ್ಟ್ ಆಗಿರಪ್ಪಾ. ಹೋಗಯ್ಯಪ್ಪ''

English summary
After getting into the character of 'Koravanji' Kannada Actress Shruthi commented on Pooja Gandhi, Aiyappa and Gowthami Gowda. Read the article to know what all happened on Day 80 in Bigg Boss Kannada 3.
Please Wait while comments are loading...

Kannada Photos

Go to : More Photos