»   » ಬಿಗ್ ಮನೆಯಲ್ಲಿ ಅಣ್ಣ-ತಂಗಿ ಸಂಬಂಧಕ್ಕೆ, ತೆರೆ ಎಳೆದ ರೆಹಮಾನ್

ಬಿಗ್ ಮನೆಯಲ್ಲಿ ಅಣ್ಣ-ತಂಗಿ ಸಂಬಂಧಕ್ಕೆ, ತೆರೆ ಎಳೆದ ರೆಹಮಾನ್

Posted by:
Subscribe to Filmibeat Kannada

ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಈ ಬಾರಿ ವೀಕ್ಷಕರ ಮತ್ತು ಮನೆಯಲ್ಲಿದ್ದ ಎಲ್ಲಾ ಸದಸ್ಯರ ಅನುಮಾನಗಳಿಗೆ ರೆಹಮಾನ್ ಅವರು ಶಾಶ್ವತವಾಗಿ ತೆರೆ ಎಳೆದಿರುವ ಪ್ರಸಂಗ ನಡೆದಿದೆ.

ಅಂದಹಾಗೆ ಬಿಗ್ ಬಾಸ್ ಮನೆಯಲ್ಲಿ ಅಣ್ಣ ತಂಗಿ ಎಂದು ಹೇಳಿಸಿಕೊಳ್ಳುತ್ತಿರುವ ಟಿವಿ9 ರೆಹಮಾನ್ ಮತ್ತು ಗಗನಸಖಿ ನೇಹಾ ಅವರ ಸಂಬಂಧದ ಬಗ್ಗೆ ಮನೆಯ ಸದಸ್ಯರು ಅಭಿಪ್ರಾಯವನ್ನು ಬಿಚ್ಚಿಟ್ಟರು.[ಕಣ್ಣೀರು ಹಾಕಿಕೊಂಡು ಮನೆಯಿಂದ ಹೊರ ನಡೆದ ಮಳೆ ಹುಡುಗಿ]

Bigg Boss Kannada 3: Caller Questioned about Neha and Rehaman relationship

ಬೆಂಗಳೂರಿನ ರಾಜಾಜಿನಗರದ ದೀಪ ಅನ್ನೋರು ಕರೆ ಮಾಡಿ ಟಿವಿ9 ರೆಹಮಾನ್ ಹಾಗೂ ಗಗನಸಖಿ ನೇಹಾ ಅವರ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಲ್ಲದೆ ಅವರ ಮನಸ್ಸಿನಲ್ಲಿ ಮೂಡಿದ್ದ ಹಲವಾರು ಪ್ರಶ್ನೆಗಳನ್ನು ರೆಹಮಾನ್ ಮುಂದೆ ಬಿಚ್ಚಿಟ್ಟಿದ್ದಾರೆ.

ಅವರಿಬ್ಬರ ಅಣ್ಣ-ತಂಗಿ ಸಂಬಂಧ ಯಾಕೋ ಮಿತಿ ಮೀರುತ್ತಿರುವ ಬಗ್ಗೆ ಹೇಳಿದ್ದು, ಇದಕ್ಕೆ ಪ್ರತಿಯಾಗಿ ಮನೆಯ ಎಲ್ಲಾ ಸದಸ್ಯರು ಕೂಡ ಕರೆ ಮಾಡಿದ ದೀಪಾ ಅವರ ಪ್ರಶ್ನೆಯನ್ನು ಒಪ್ಪಿಕೊಂಡಿದ್ದು, ಆಗಿತ್ತು.[ಆನಂದ್ ಗೆ ತುಂಟಾಟ, ರೆಹಮಾನ್ ಗೆ ಪ್ರಾಣಸಂಕಟ..!]

Bigg Boss Kannada 3: Caller Questioned about Neha and Rehaman relationship

ಈ ಪ್ರಶ್ನೆಗೆ ಪ್ರತಿಯಾಗಿ ಉತ್ತರಿಸಿದ ಟಿವಿ9 ರೆಹಮಾನ್ ನಾನು ಈವರೆಗೂ ನನ್ನ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ನಾನು ಬಿಗ್ ಬಾಸ್ ಮನೆಗೆ ಬಂದಾಗ ಮನೆಯ ಸದಸ್ಯರಲ್ಲಿ ನೇಹಾ ಅದಕ್ಕೆ ಅರ್ಹಳು ಎಂದು ಅನಿಸಿತು.

ನಮ್ಮಿಬ್ಬರ ಮೈಂಡ್ ಸೆಟ್ ಒಂದೇ ರೀತಿ ಇದೆ ಹಾಗಾಗಿ ನಾನು ನನ್ನ ಫೀಲಿಂಗ್ಸ್ ಅನ್ನು ನೇಹಾ ಅವರ ಜೊತೆ ಶೇರ್ ಮಾಡಿಕೊಂಡೇ ಹಾಗೆ ನಾವು ಸ್ವಲ್ಪ ಕ್ಲೋಸ್ ಆದ್ವಿ ಬಿಟ್ಟರೆ ಬೇರೆ ಏನು ಇಲ್ಲ ಎಂದು ರೆಹಮಾನ್ ಅವರು ಬಿಗ್ ಬಾಸ್ ಮನೆ ಸದಸ್ಯರ ಹಾಗೂ ವೀಕ್ಷಕರ ಎಲ್ಲಾ ಅನುಮಾನಗಳಿಗೆ ತೆರೆ ಎಳೆದು ಬಿಟ್ಟರು.

English summary
Bigg Boss Kannada 3 Week 5: Caller Questioned about Neha and Rehaman relationship in Bigg house.
Please Wait while comments are loading...

Kannada Photos

Go to : More Photos