»   » 'ಬಿಗ್ ಬಾಸ್' ಮನೆಯಲ್ಲಿ 'ಇವರೆಲ್ಲಾ' ಮಾಡ್ತಿರೋದು ಏನು?

'ಬಿಗ್ ಬಾಸ್' ಮನೆಯಲ್ಲಿ 'ಇವರೆಲ್ಲಾ' ಮಾಡ್ತಿರೋದು ಏನು?

Posted by:
Subscribe to Filmibeat Kannada

ಕನ್ನಡ ಕಿರುತೆರೆ ಪ್ರಿಯರು ಕಾತರದಿಂದ ಕಾಯುತ್ತಿದ್ದ 'ಬಿಗ್ ಬಾಸ್-3' ಕಾರ್ಯಕ್ರಮ ಶುರುವಾಗಿದೆ. ದಿನಕ್ಕೊಂದು ಗದ್ದಲ-ಗಲಾಟೆ ನಡೆಯುತ್ತಿದೆ. ಆ ಎಲ್ಲಾ ಗದ್ದಲ-ಗಲಾಟೆಯಲ್ಲಿನ ಮೇನ್ ಅಟ್ರ್ಯಾಕ್ಷನ್ 'ನಿಮ್ಮೆಲ್ಲರ ಅಚ್ಚುಮೆಚ್ಚಿನ' ಹುಚ್ಚ ವೆಂಕಟ್.

'ಹುಚ್ಚ ವೆಂಕಟ್' ಚಿತ್ರವನ್ನ ಎಷ್ಟು ಜನ ನೋಡಿದ್ದಾರೋ ಗೊತ್ತಿಲ್ಲ. ಆದ್ರೆ, ಬಹುತೇಕ ಜನರು 'ಬಿಗ್ ಬಾಸ್' ನೋಡುತ್ತಿರುವುದಕ್ಕೆ ಕಾರಣ ಒನ್ ಅಂಡ್ ಓನ್ಲಿ ಹುಚ್ಚ ವೆಂಕಟ್. [ಮಾಸ್ಟರ್ ಆನಂದ್ ಗೆ ಬಾಯಿಗೆ ಬಂದಂತೆ ಬೈದ ಹುಚ್ಚ ವೆಂಕಟ್!]

ಹುಚ್ಚ ವೆಂಕಟ್ ರವರ ಹುಚ್ಚಾಟಗಳನ್ನ ನೋಡಿ ಎಂಜಾಯ್ ಮಾಡೋಕಂತ್ಲೇ ಅನೇಕರು ಟಿವಿ ಮುಂದೆ ಪ್ರತಿದಿನ ರಾತ್ರಿ 9 ಗಂಟೆಗೆ ಹಾಜರಾಗ್ತಾರೆ. ಹಾಗಾದ್ರೆ, ಬಾಕಿ ಉಳಿದ ಸ್ಪರ್ಧಿಗಳು ಏನ್ಮಾಡ್ತಿದ್ದಾರೆ. ಅವರೆಲ್ಲಾ ಯಾಕೆ ಗುರುತಿಸಿಕೊಳ್ಳುತ್ತಿಲ್ಲ?

ಶ್ರುತಿ, ಚಂದನ್ ಸೇರಿದಂತೆ ಅನೇಕ ಸ್ಪರ್ಧಿಗಳಿಗೆ ಅವರದ್ದೇ ಆದ ಅಭಿಮಾನಿ ಬಳಗ ಇದೆ. ಹೀಗಿದ್ದರೂ, ಅವರೆಲ್ಲಾ ರಿಯಾಲಿಟಿ ಶೋನಲ್ಲಿ ಸಪ್ಪೆ ಆಗಿದ್ದಾರೆ. ಮುಂದೆ ಓದಿ.....

ಮಂಕಾಗಿದ್ದಾರೆ ಶ್ರುತಿ.!

ಮಂಕಾಗಿದ್ದಾರೆ ಶ್ರುತಿ.!

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ನಟಿ ಶ್ರುತಿ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಯಾಕೋ ಮಂಕಾಗಿದ್ದಾರೆ. 'ಬಿಗ್ ಬಾಸ್' ನೀಡುತ್ತಿರುವ ಟಾಸ್ಕ್ ಗಳನ್ನ ಹೊರತುಪಡಿಸಿ, ನಟಿ ಶ್ರುತಿ ಏನನ್ನೂ ಮಾಡುತ್ತಿಲ್ಲ. ಕ್ಯಾಪ್ಟನ್ ಆಗಿದ್ದರೂ, ವಿವಾದಕ್ಕೆ ಗುರಿಯಾಗದೆ ಸೈಲೆಂಟ್ ಆಗಿದ್ದಾರೆ.

ಶೋನಲ್ಲಿ ಮಾಧುರಿ ಇಟಗಿ ಇದ್ದಾರಾ?

ಶೋನಲ್ಲಿ ಮಾಧುರಿ ಇಟಗಿ ಇದ್ದಾರಾ?

ಈ ಪ್ರಶ್ನೆ ಮೂಡುವುದಕ್ಕೆ ಕಾರಣ ಮಾಧುರಿ ಇಟಗಿ ಯವರ ನಡವಳಿಕೆ. ಮಿಸ್ ಕರ್ನಾಟಕ ಕಿರೀಟ ತೊಟ್ಟ ಈ ಬೆಡಗಿ ಶೋ ನಲ್ಲಿ ಇದ್ದಾರಾ ಅನ್ನುವ ಅನುಮಾನ ಮೂಡ ತೊಡಗಿದೆ. ದಿನ ಪೂರ್ತಿ ನಡೆಯುವ ಘಟನೆಗಳ ಹೈಲೈಟ್ಸ್ ನ ಒಂದು ಗಂಟೆಯಲ್ಲಿ ತೋರಿಸಲಾಗುತ್ತೆ. ಅದರಲ್ಲಿ ಮಾಧುರಿ ಇಟಗಿ ಮುಖ ಒಂದೋ ಎರಡೋ ಬಾರಿ ಕ್ಯಾಮರಾ ಮುಂದೆ ಬಂದರೆ ಹೆಚ್ಚು.

ಡಲ್ ಆದ ಚಂದನ್

ಡಲ್ ಆದ ಚಂದನ್

ಹರೆಯದ ಹುಡುಗೀರ ಡ್ರೀಮ್ ಬಾಯ್ ಆಗಿರುವ ಚಂದನ್ ಕೂಡ ಅಷ್ಟು ಶೈನ್ ಆಗುತ್ತಿಲ್ಲ. ಗುಂಪಲ್ಲಿ ಗೋವಿಂದ ಅನ್ನುವ ಹಾಗೆ ಇದ್ದಾರೆ ಅಷ್ಟೆ.

ನೇಹಾ ಗೌಡ ಕಾಣ್ತಾನೇ ಇಲ್ಲ.!

ನೇಹಾ ಗೌಡ ಕಾಣ್ತಾನೇ ಇಲ್ಲ.!

'ನಾನು ಹೆಚ್ಚು ಮಾತನಾಡುತ್ತೇನೆ' ಅಂತ ಬೇಜಾನ್ ಬಿಲ್ಡಪ್ ತೆಗೆದುಕೊಂಡು 'ಬಿಗ್ ಬಾಸ್' ಮನೆಗೆ ಕಾಲಿಟ್ಟ ಗಗನಸಖಿ ನೇಹಾ ಗೌಡ ಕಿರುತೆರೆ ಪರದೆ ಮೇಲೆ ಇದುವರೆಗೂ ಕಂಡಿದ್ದು ಒಂದು ಅಥವಾ ಎರಡು ಬಾರಿ.!!!

ಕಣ್ಣೀರಲ್ಲಿ ಕೈತೊಳೆಯುತ್ತಿರುವ ಪೂಜಾ ಗಾಂಧಿ

ಕಣ್ಣೀರಲ್ಲಿ ಕೈತೊಳೆಯುತ್ತಿರುವ ಪೂಜಾ ಗಾಂಧಿ

ತೆರೆ ಮೇಲೆ ಪೂಜಾ ಗಾಂಧಿ ಎಷ್ಟು ಬಾರಿ ಕಣ್ಣೀರು ಹಾಕಿದ್ದಾರೋ ಗೊತ್ತಿಲ್ಲ. ಆದ್ರೆ, 'ಬಿಗ್ ಬಾಸ್' ಮನೆಯಲ್ಲಿ ಪ್ರತಿ ದಿನ ಅಳುತ್ತಿದ್ದಾರೆ..! ಇದು ಅವರ Strategy ನಾ..?? ['ಬಿಗ್ ಬಾಸ್' ಮನೆಯಲ್ಲಿ ಪೂಜಾ ಗಾಂಧಿ ಕಣ್ಣೀರಧಾರೆ]

 ಸುನಾಮಿ ಅಲ್ಲ ಸೈಲೆಂಟ್ ಕಿಟ್ಟಿ.!

ಸುನಾಮಿ ಅಲ್ಲ ಸೈಲೆಂಟ್ ಕಿಟ್ಟಿ.!

ಪ್ರಾಸ ಬದ್ಧವಾದ ಡೈಲಾಗ್ಸ್ ಹೊಡೆದು 'ಬಿಗ್ ಬಾಸ್' ಮನೆಗೆ ಬಂದ ಸುನಾಮಿ ಕಿಟ್ಟಿ, ಮನೆಯಲ್ಲಿ ಡೈಲಾಗ್ ಹೊಡೆಯುವುದು ಇರಲಿ. ಮಾತನಾಡುವುದನ್ನೇ ಕಮ್ಮಿ ಮಾಡಿದ್ದಾರೆ. [ವೆಂಕಟ್ ಬಾಸ್ ಗೆ ಸುಸು ಮಾಡ್ಕೊಂಡ್ರಿ ಎಂದ ಕಿಟ್ಟಿ ಹೊರಗಟ್ಟಿ]

ರವಿ ಮುರೂರು

ರವಿ ಮುರೂರು

ಗಾಯಕ ರವಿ ಮುರೂರು 'ಬಿಗ್ ಬಾಸ್' ಮನೆಯಲ್ಲಿ ಗಾನ ಸುಧೆ ಹರಿಸುತ್ತಿಲ್ಲ. ಅವರು ಮಾತನಾಡುವುದೂ ಇಲ್ಲ.!

ಅಲ್ಲಲ್ಲಿ ಗುರುತಿಸಿಕೊಳ್ಳುವ ನೇತ್ರ, ರೆಹಮಾನ್.!

ಅಲ್ಲಲ್ಲಿ ಗುರುತಿಸಿಕೊಳ್ಳುವ ನೇತ್ರ, ರೆಹಮಾನ್.!

ಆಗೊಮ್ಮೆ ಈಗೊಮ್ಮೆ ಆರ್.ಜೆ.ನೇತ್ರ, ಭಾವನಾ ಬೆಳಗೆರೆ ಮತ್ತು ರೆಹಮಾನ್ ಮಾತನಾಡಿ ಗುರುತಿಸಿಕೊಳ್ಳುತ್ತಾರೆ ಅನ್ನೋದು ಬಿಟ್ಟರೆ, ಅವರಿಂದ ಮನರಂಜನೆ ಏನೂ ಇಲ್ಲ.!

ಕ್ಯಾಮರಾ ಜೊತೆ ಕೃತಿಕಾ

ಕ್ಯಾಮರಾ ಜೊತೆ ಕೃತಿಕಾ

ಮನೆ ಸದಸ್ಯರಿಗಿಂತ ನಟಿ ಕೃತಿಕಾ ಕ್ಯಾಮರಾ ಜೊತೆಗೆ ಹೆಚ್ಚು ಮಾತುಕತೆ ನಡೆಸುತ್ತಾರೆ. ['ಬಿಗ್ ಬಾಸ್' ಮನೆಯಲ್ಲಿ ಪಶ್ಚಾತ್ತಾಪ ಪಟ್ಟ ಕೃತಿಕಾ, ಪೂಜಾ ಗಾಂಧಿ ]

ಅಯ್ಯಪ್ಪ-ಜಯಶ್ರೀ ಪ್ಲಾನಿಂಗ್

ಅಯ್ಯಪ್ಪ-ಜಯಶ್ರೀ ಪ್ಲಾನಿಂಗ್

ಹುಚ್ಚ ವೆಂಕಟ್ ಗೆ ಮೊದಲು ಅಣ್ಣ ಅಂತ ಕರೆದು, ನಂತರ ರೋಸ್ ಕೊಟ್ಟ ಮಾಡೆಲ್ ಕಮ್ ಡ್ಯಾನ್ಸರ್ ಜಯಶ್ರೀ ಕ್ಯಾತೆ ತೆಗೆದು 'ಬಿಗ್ ಬಾಸ್' ನೀಡಿರುವ ಚಾನ್ಸ್ ಉಪಯೋಗಿಸಿಕೊಳ್ತಿದ್ದಾರೆ. ಗಾಯಕ ರವಿ ಮುರೂರು ಜೊತೆ ಸುಖಾಸುಮ್ಮನೆ ಕಿರಿಕ್ ಮಾಡಿಕೊಂಡ ಜಯಶ್ರೀ, ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಗುಂಪುಗಾರಿಕೆ ಬಗ್ಗೆ ಮಾತನಾಡುವ ಕ್ರಿಕೆಟರ್ ಅಯ್ಯಪ್ಪ, ಶೋನಲ್ಲಿ ಮುಂದೆ ಹೋಗುವುದು ಹೇಗೆ ಅಂತ ಈಗಲೇ ಪ್ಲಾನ್ ಮಾಡಿದ್ದಾರೆ. ['ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಹೊಸ ಲವ್ ಸ್ಟೋರಿ.!]

ಮನರಂಜನೆಯ 'ಮಾಸ್ಟರ್' ಆನಂದ್

ಮನರಂಜನೆಯ 'ಮಾಸ್ಟರ್' ಆನಂದ್

ಸದಭಿರುಚಿಯ ಮನರಂಜನೆ ನೀಡುತ್ತಿರುವ 'ಬಿಗ್ ಬಾಸ್' ಮನೆಯ ಏಕೈಕ ಸ್ಪರ್ಧಿ ಅಂದ್ರೆ ಅದು ಮಾಸ್ಟರ್ ಆನಂದ್.

ಹುಚ್ಚ ವೆಂಕಟ್ ಒಬ್ಬರೇ ಸೆನ್ಸೇಷನ್.!

ಹುಚ್ಚ ವೆಂಕಟ್ ಒಬ್ಬರೇ ಸೆನ್ಸೇಷನ್.!

'ಬಿಗ್ ಬಾಸ್' ಮನೆಯಲ್ಲಿ ಇದ್ದೂ ಇಲ್ಲದಂತೆ ಇರುವ ಸ್ಪರ್ಧಿಗಳ ಮಧ್ಯೆ ಎದ್ದು ನಿಲ್ಲುವುದು ಹುಚ್ಚ ವೆಂಕಟ್ ಮಾತ್ರ. ತಮ್ಮ ಹುಚ್ಚಾಟದಿಂದಲೇ ಕು'ಖ್ಯಾತಿ' ಗಳಿಸುತ್ತಿರುವ ಹುಚ್ಚ ವೆಂಕಟ್ ಇಲ್ಲದೇ ಹೋಗಿದ್ದರೆ, ಶೋ ಬೋರಾಗುವುದು ಖಚಿತ ಅನ್ನೋದು ಅನೇಕರ ಅಭಿಪ್ರಾಯ. [ಧ್ಯಾನದಲ್ಲೂ ನಿಮ್ 'ಎಕ್ಕಡ' ಮಾತ್ ಬೇಕಿತ್ತಾ ಹುಚ್ಚ ವೆಂಕಟ್?]

ಮನರಂಜನೆ ಎಲ್ಲಿ ಸ್ವಾಮಿ.?

ಮನರಂಜನೆ ಎಲ್ಲಿ ಸ್ವಾಮಿ.?

ಎಲ್ಲರೂ ರಿಯಾಲಿಟಿ ಶೋ ನೋಡುವುದು ಮನರಂಜನೆಗಾಗಿ. ಶೋನ ಪ್ರಮುಖ ಉದ್ದೇಶ ಕೂಡ ಅದೇ. ಸ್ಪರ್ಧಿಗಳು ತಮ್ಮತಮ್ಮಲ್ಲಿ ಏನೇ ಬದಲಾವಣೆಗಳನ್ನ ಮಾಡಿಕೊಳ್ಳಲಿ. ಆದ್ರೆ, ವೀಕ್ಷಕರಿಗೆ ಬೇಕಾಗಿರುವುದು ಎಂಟರ್ಟೈನ್ಮೆಂಟ್. ಅದು ಇಲ್ಲ ಅಂದ್ರೆ, ಚಾನೆಲ್ ಬದಲಾಗುತ್ತೆ. 'ಬಿಗ್ ಬಾಸ್' ಮನೆಯಲ್ಲಿ ಮನರಂಜನೆ ವಿಷಯಕ್ಕೆ ಬಂದ್ರೆ, ಅದಕ್ಕಂತ ಸಿದ್ಧವಾಗಿರುವ ಟೀಮ್ ಮಾಸ್ಟರ್ ಆನಂದ್, ಪೂಜಾ ಗಾಂಧಿ, ಅಯ್ಯಪ್ಪ ಬೆವರು ಹರಿಸುತ್ತಿದ್ದಾರೆ. ಹುಚ್ಚ ವೆಂಕಟ್ ಗೆ ಅವರ ಹುಚ್ಚಾಟ ಸಾಕು. ಅಷ್ಟು ಬಿಟ್ಟರೆ ಬಾಕಿ ಸ್ಪರ್ಧಿಗಳು ಏನ್ಮಾಡ್ತಿದ್ದಾರೆ ಅಂತ 'ಬಿಗ್ ಬಾಸ್' ದುರ್ಬೀನ್ ಹಾಕಿ ನೋಡಿ ಹೇಳ್ಬೇಕು. ಇಲ್ಲಾ ಅಂತಹ ಟಾಸ್ಕ್ ಕೊಡ್ಬೇಕು..!

English summary
Except Huccha Venkat, Master Anand and very few to name, The contestants of Bigg Boss Kannada 3 are not entertaining at all. Most of them are not at all seen on small screen.
Please Wait while comments are loading...

Kannada Photos

Go to : More Photos