»   » ಕಳ್ಳ ಚಂದನ್ - ಪೊಲೀಸ್ ರೆಹಮಾನ್ ನಡುವೆ 'ಬಿಗ್' ಕಿರಿಕ್

ಕಳ್ಳ ಚಂದನ್ - ಪೊಲೀಸ್ ರೆಹಮಾನ್ ನಡುವೆ 'ಬಿಗ್' ಕಿರಿಕ್

Posted by:
Subscribe to Filmibeat Kannada

''ಬಿಗ್ ಬಾಸ್' ಮನೆ ಎಲ್ಲಾ ಸದಸ್ಯರ ಜೊತೆ ರೆಹಮಾನ್ ಬೆರೆಯುವುದಿಲ್ಲ. ಯಾವಾಗಲೂ ತಂಗಿ ನೇಹ ಜೊತೆ ಮಾತುಕತೆ ಮಾಡುವ ರೆಹಮಾನ್ ಸಪ್ಪೆ'' ಹೀಗೆನ್ನುವ ಆರೋಪ ರೆಹಮಾನ್ ಮೇಲಿದೆ.

ಆದ್ರೆ, ಟಾಸ್ಕ್ ವಿಚಾರಕ್ಕೆ ಬಂದ್ರೆ ಮಾತ್ರ ರೆಹಮಾನ್ ಅಬ್ಬರಿಸಿ ಬೊಬ್ಬಿರಿಯುತ್ತಾರೆ. ಇದು 'ಆಳು-ಅರಸ' ಟಾಸ್ಕ್ ನಲ್ಲೂ ನೀವು ಗಮನಿಸಿದ್ದೀರಾ. ಅರಸನಾಗಿದ್ದ ರೆಹಮಾನ್, ಹುಚ್ಚ ವೆಂಕಟ್ ಮೇಲೆ ಹೌಹಾರಿದ್ದರು. ['ಬಿಗ್ ಬಾಸ್-3' ಕಾರ್ಯಕ್ರಮದ ಎಲ್ಲಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ಈಗ ನಟ ಚಂದನ್ ಮೇಲೆ ರೆಹಮಾನ್ ರೌದ್ರಾವತಾರ ಮೆರೆದಿದ್ದಾರೆ. 'ಬಿಗ್ ಬಾಸ್' ನೀಡಿರುವ 'ಕಳ್ಳ-ಪೊಲೀಸ್' ಟಾಸ್ಕ್ ನಲ್ಲಿ ಕಾನ್ಸ್ ಟೇಬಲ್ ಆಗಿರುವ ರೆಹಮಾನ್ ಮತ್ತು ಕಳ್ಳ ಚಂದನ್ ನಡುವೆ ನಡೆದ 'ಬಿಗ್' ಕಿರಿಕ್ ಬಗ್ಗೆ ಹೇಳ್ತೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

'ಬಿಗ್ ಬಾಸ್' ನೀಡಿದ ಟಾಸ್ಕ್ ಏನು?

'ಬಿಗ್ ಬಾಸ್' ನೀಡಿದ ಟಾಸ್ಕ್ ಏನು?

''ಜನಸಾಮಾನ್ಯರಿಂದ ನಿರ್ಮಿತವಾದ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಸಲುವಾಗಿ ಕಾನೂನನ್ನು ನಿರ್ಮಿಸಲಾಗಿದೆ ಮತ್ತು ಅದನ್ನು ಕಾಪಾಡುವ ಜವಾಬ್ದಾರಿ ಪೊಲೀಸರಿಗೆ ವಹಿಸಲಾಗಿದೆ. ಆದ್ರೆ ಕೆಲವರು ಬದುಕುವ ಅನಿವಾರ್ಯತೆಗೆ ಅಥವಾ ದುರಾಸೆಗೆ ಈ ಕಾನೂನನ್ನು ಮುರಿಯುತ್ತಿದ್ದಾರೆ. ಮನೆ ಸದಸ್ಯರಿಗೆ ಈ ಸಮಾಜದ ಎರಡು ಮುಖ ಪರಿಚಯವಾಗಲಿ'' ಎಂದು 'ಬಿಗ್ ಬಾಸ್' ಈ ವಾರ 'ಕಳ್ಳ-ಪೊಲೀಸ್' ಟಾಸ್ಕ್ ನೀಡಿದ್ದಾರೆ. [ಸುದೀಪ್ ಮೇಲೆ ಆರೋಪ; ನೇಹ-ರೆಹಮಾನ್ ಬಗ್ಗೆ ಕಿಚ್ಚನ ಕಿಚ್ಚು!]

ಯಾರ್ಯಾರು ಕಳ್ಳರು?

ಯಾರ್ಯಾರು ಕಳ್ಳರು?

ಮಾಸ್ಟರ್ ಆನಂದ್, ನಟಿ ಶ್ರುತಿ ಮತ್ತು ಚಂದನ್ ಟಾಸ್ಕ್ ನಲ್ಲಿ ಕಳ್ಳರಾಗಿದ್ದಾರೆ. ['ಅಣ್ಣ-ತಂಗಿ' ಖ್ಯಾತಿಯ ರೆಹಮಾನ್ ಕಿವಿ ಹಿಂಡಿದ ಮಿತ್ರ]

ಪೊಲೀಸರು ಯಾರು?

ಪೊಲೀಸರು ಯಾರು?

ರೆಹಮಾನ್, ಅಯ್ಯಪ್ಪ ಮತ್ತು ಗೌತಮಿ ಪೊಲೀಸ್ ಪಾತ್ರ ನಿರ್ವಹಿಸುತ್ತಿದ್ದಾರೆ.

ಜನಸಾಮಾನ್ಯರು ಯಾರ್ಯಾರು?

ಜನಸಾಮಾನ್ಯರು ಯಾರ್ಯಾರು?

ಕಳ್ಳ-ಪೊಲೀಸ್ ಆಟದಲ್ಲಿ ಪೊಲೀಸರ ವಿಚಾರಣೆ ದಾರಿ ತಪ್ಪಿಸುವ ಕೆಲಸ ಮಿತ್ರ, ಕೃತಿಕಾ, ಭಾವನಾ, ಪೂಜಾ ಗಾಂಧಿ, ಕಿಟ್ಟಿ ಮತ್ತು ನೇತ್ರರದ್ದು.

ಸಿಕ್ಕಿಬಿದ್ದ ಚಂದನ್!

ಸಿಕ್ಕಿಬಿದ್ದ ಚಂದನ್!

ನಟಿ ಶ್ರುತಿ, ಮಾಸ್ಟರ್ ಆನಂದ್ ಮತ್ತು ಚಂದನ್ 'ಬಿಗ್ ಬಾಸ್' ಮನೆ ಸದಸ್ಯರ ಬಟ್ಟೆ ಮತ್ತು ಅಡುಗೆ ಸಾಮಾಗ್ರಿಗಳನ್ನ ಕದಿಯುತ್ತಿರುವುದು ಜನಸಾಮಾನ್ಯರಿಗೆ ಗೊತ್ತಾಯ್ತು. ಹಾಗೇ ಪೊಲೀಸ್ ಸ್ಟೇಷನ್ ಕೀ ಕದ್ದಿದ್ದಕ್ಕೆ ರೆಹಮಾನ್, ಚಂದನ್ ರನ್ನ ಹಿಡಿದರು.

ಅಬ್ಬರಿಸಿದ ರೆಹಮಾನ್!

ಅಬ್ಬರಿಸಿದ ರೆಹಮಾನ್!

ತಮ್ಮನ್ನ ರೆಹಮಾನ್ ಹಿಡಿದು, ಎಳೆದಾಡಿದ್ದು ಚಂದನ್ ಗೆ ಬೇಸರವಾಯ್ತು. 'ಕದ್ದಿರುವುದಕ್ಕೆ ಸಾಕ್ಷಿ ಇಲ್ಲ. ಪೊಲೀಸ್ ಸ್ಟೇಷನ್ ಗೆ ಬರಲ್ಲ' ಅಂತ ಚಂದನ್ ಹೇಳಿದಾಗ ರೆಹಮಾನ್ ಅಬ್ಬರಿಸುವುದಕ್ಕೆ ಶುರುಮಾಡಿದರು. [ಹುಚ್ಚ ವೆಂಕಟ್ ಗೆ ಆವಾಝ್ ಹಾಕಿದ ರೆಹಮಾನ್ ಹೊರಗಟ್ಟಿ.!]

ಧಿಕ್ಕಾರ ಕೂಗಿದ ಚಂದನ್

ಧಿಕ್ಕಾರ ಕೂಗಿದ ಚಂದನ್

''ಪೊಲೀಸ್ ಗೆ ಧಿಕ್ಕಾರ, ಪೊಲೀಸ್ ಮ್ಯಾನ್ ಹ್ಯಾಂಡಲ್ ಮಾಡುವ ಹಾಗಿಲ್ಲ. ವಿಚಾರಣೆ ಮಾಡ್ಬೇಕು. ಏನ್ ಸಾಕ್ಷಿ ಇದೆ ಅಂತ ನಾನು ಸ್ಟೇಷನ್ ಗೆ ಬರ್ಬೇಕು'' ಅಂತ ಚಂದನ್ ಧಿಕ್ಕಾರ ಕೂಗುವುದಕ್ಕೆ ಆರಂಭಿಸಿದರು.

ಗುಡುಗಿದ ಚಂದನ್

ಗುಡುಗಿದ ಚಂದನ್

ತಮ್ಮನ್ನ ಎಳೆದಾಡಿದ ಕಾರಣ 'ಮುಟ್ಟಿ ಮಾತಡ್ಬೇಡ' ಅಂತ ಚಂದನ್ ರೆಹಮಾನ್ ಗೆ ವಾರ್ನಿಂಗ್ ಕೊಟ್ಟರು.

ರೊಚ್ಚಿಗೆದ್ದ ರೆಹಮಾನ್

ರೊಚ್ಚಿಗೆದ್ದ ರೆಹಮಾನ್

''ಏಯ್..ನಾನು ಪೊಲೀಸ್. ನೀನು ಕಳ್ಳ'' ಅಂತ ರೆಹಮಾನ್ - ಚಂದನ್ ವಾಗ್ವಾದ ತಾರಕಕ್ಕೆ ಏರಿತು. [ನನ್ಮಗಂದ್, ಸೇವಕ ಆಗಲ್ಲ ಅಂದ ವೆಂಕಟ್‌ಗೆ ಫುಲ್ ಆವಾಜ್!]

ಗೌತಮಿಗೂ ವಾರ್ನಿಂಗ್

ಗೌತಮಿಗೂ ವಾರ್ನಿಂಗ್

ಪೊಲೀಸ್ ಸ್ಟೇಷನ್ ಗೆ ಬಂದಮೇಲೆ ಗೌತಮಿ ಹೊಡೆದದ್ದಕ್ಕೂ ''ಕೊಟ್ಟು ಮಾತನಾಡಿಸಬೇಡ'' ಅಂತ ಚಂದನ್ ಗರಂ ಆದರು.

ಏರುಧ್ವನಿ...ಏಕವಚನ...ಅಬ್ಬಬ್ಬಾ...

ಏರುಧ್ವನಿ...ಏಕವಚನ...ಅಬ್ಬಬ್ಬಾ...

'ನಮ್ ಕಾನ್ಸ್ ಟೇಬಲ್ ಮೇಲೆ ಇಷ್ಟೊಂದು ಆವಾಝ್ ಹಾಕ್ತೀಯಾ' ಅಂತ ಗೌತಮಿ ಕೇಳಿದ್ದಕ್ಕೆ, 'ಕಾನ್ಸ್ ಟೇಬಲ್ ಗೆ ಅಷ್ಟೊಂದು ಗಾಂಚಲಿ' ಅಂತ ಚಂದನ್ ಹೇಳಿದ್ದೇ ತಡ ಮತ್ತೆ ಕಿರಿಕ್ ಶುರುವಾಯ್ತು. ಪರಸ್ಪರ ಏರುಧ್ವನಿಯಲ್ಲಿ, ಅವಾಚ್ಯ ಶಬ್ಧಗಳನ್ನ ಬಳಸಿ ರೆಹಮಾನ್-ಚಂದನ್ ಕಿತ್ತಾಡಿಕೊಂಡರು.

ಪಿತ್ತ ನೆತ್ತಿಗೇರಿಸಿಕೊಂಡ ಮಿತ್ರ

ಪಿತ್ತ ನೆತ್ತಿಗೇರಿಸಿಕೊಂಡ ಮಿತ್ರ

ರೆಹಮಾನ್ ಅಬ್ಬರ ಕಂಡ ಮಿತ್ರ ಪಿತ್ತ ನೆತ್ತಿಗೇರ್ತು. ಅದಾಗಲೇ ಅವರನ್ನ ಕಾರಣವಿಲ್ಲದೇ ಪೊಲೀಸ್ ಸ್ಟೇಷನ್ ನಲ್ಲಿ ಕೂರ್ಸಿದ್ದರು. ಅನ್ಯಾಯ ನಡೆಯುತ್ತಿದೆ ಅಂತ, ''ನಾಲಿಗೆ ಬಿಗಿ ಹಿಡಿದು ಮಾತನಾಡಿ. ನನ್ನ ಕಳ್ಳ ಅಂತ ಹೇಗೆ ಪ್ರೂವ್ ಮಾಡ್ತೀರಾ. ಪೊಲೀಸ್ ಆದ್ಮೇಲೆ ಊತ್ಕೊಂಡು ಬಂದ್ಬುಡ್ತಾ ನಿಮಗೆ. ನಂದು 500 ರೂಪಾಯಿ ಕೊಡಿ.'' ಅಂತ ರೆಹಮಾನ್ ಮೇಲೆ ಕಿಡಿಕಾರಿದರು.

ವರಸೆ ಬದಲಿಸಿದ ಚಂದನ್

ವರಸೆ ಬದಲಿಸಿದ ಚಂದನ್

ಟಾಸ್ಕ್ ನಲ್ಲಿ ಚಾಲಾಕಿಯಾದ ಚಂದನ್ ತಾವು ಅಂಡರ್ ಕವರ್ ಏಜೆಂಟ್ ಅಂತ ಹೇಳ್ಕೊಂಡು ಅದೇ ರೆಹಮಾನ್ ಮತ್ತು ಗೌತಮಿ ಜೊತೆ ಒಪ್ಪಂದ ಮಾಡಿಕೊಂಡು ಬಿಟ್ಟರು.

OLX ನಲ್ಲಿ ಮಾರಿಬಿಡಿ

OLX ನಲ್ಲಿ ಮಾರಿಬಿಡಿ

ಕಳ್ಳತನ ಮಾಡಿ ಸಿಕ್ಕಿಬಿದ್ದು, ಕಂಬಿ ಹಿಂದೆ ನಿಂತು ಇಷ್ಟೆಲ್ಲಾ ರಾದ್ಧಾಂತ ಕಂಡ ಮಾಸ್ಟರ್ ಆನಂದ್, ''OLX ನಲ್ಲಿ ಪೊಲೀಸ್ ಸ್ಟೇಷನ್ ಮಾರಿಬಿಡಿ'' ಅಂತ್ಹೇಳಿ ಕಚಗುಳಿ ಇಟ್ಟರು.

English summary
Kannada Actor Chandan and Rahman had an heated argument in 'Kalla-Police' Task given by Bigg Boss. Read the article to know what all happened on Day 44 in Bigg Boss Kannada 3.
Please Wait while comments are loading...

Kannada Photos

Go to : More Photos