»   » ಹುಚ್ಚ ವೆಂಕಟ್ ಗೆ 'ನನ್ ಮಗಂದ್' ಅಂದ ನಟಿ ಶ್ರುತಿ.!

ಹುಚ್ಚ ವೆಂಕಟ್ ಗೆ 'ನನ್ ಮಗಂದ್' ಅಂದ ನಟಿ ಶ್ರುತಿ.!

Posted by:
Subscribe to Filmibeat Kannada

ಹುಚ್ಚ ವೆಂಕಟ್ ಡೈಲಾಗ್ ಯಾರಿಗ್ ಗೊತ್ತಿಲ್ಲ ಹೇಳಿ. 'ಬಿಗ್ ಬಾಸ್' ಮನೆಯಲ್ಲಿ ಪ್ರತಿದಿನ 'ಕಾವೇರಿ' ಜಪ ಮಾಡುವ ಹುಚ್ಚ ವೆಂಕಟ್ ರನ್ನ ನೀವು ಅನುಕರಣೆ ಮಾಡಿರ್ತೀರಾ.

ಮಜಾ ಅಂದ್ರೆ, 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಹುಚ್ಚ ವೆಂಕಟ್ ಪಕ್ಕದಲ್ಲೇ ಕೂತು ಅವರ ಫೇಮಸ್ 'ಕಾವೇರಿ...ಮಳೆ...ಕಣ್ಣೀರು' ಡೈಲಾಗ್ ನ ಶ್ರುತಿ ಅನುಕರಣೆ ಮಾಡಿ ತೋರಿಸಿದರು. [ಬಿಗ್ ಬಾಸ್-3 ಕಾರ್ಯಕ್ರಮದ ಎಲ್ಲಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ]

'ಶ್ರುತಿ ಸಂಕಟ್' ಸೀನ್ ನೋಡಿ, 'ಬಿಗ್ ಬಾಸ್' ಮನೆ ಸದಸ್ಯರು ಬಿದ್ದು ಬಿದ್ದು ನಕ್ಕಿದರು. 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ 9ನೇ ದಿನ ಏನೇನೆಲ್ಲಾ ಆಯ್ತು ಅನ್ನೋದನ್ನ ವಿವರವಾಗಿ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....

ಹುಚ್ಚ ವೆಂಕಟ್ ಅನುಕರಣೆ ಮಾಡಿದ ಶ್ರುತಿ

ಹುಚ್ಚ ವೆಂಕಟ್ ಅನುಕರಣೆ ಮಾಡಿದ ಶ್ರುತಿ

''ನಾವ್ ಬದುಕಬೇಕು ಕಾವೇರಿ. ಮಳೆ ನಿಲ್ಲುತ್ತಾ, ನಮ್ ಕಣ್ಣೀರ್ ನಿಲ್ಲುತ್ತಾ'' ಅನ್ನೋ ಡೈಲಾಗ್ ನ ಭಾವನಾತ್ಮಕವಾಗಿ ನಟಿ ಶ್ರುತಿ ಹುಚ್ಚ ವೆಂಕಟ್ ರನ್ನ ಅನುಕರಣೆ ಮಾಡಿದರು.

ಹುಚ್ಚ ವೆಂಕಟ್ ಗೆ 'ನನ್ ಮಗಂದ್' ಅಂದ್ರು.!

ಹುಚ್ಚ ವೆಂಕಟ್ ಗೆ 'ನನ್ ಮಗಂದ್' ಅಂದ್ರು.!

ಮೊದಲನೇ ಟೇಕ್ ಓಕೆ ಆಗ್ಲಿಲ್ಲ. ಹೀಗೇ ಮಾಡ್ಬೇಕ್ ಅಂತ ಹುಚ್ಚ ವೆಂಕಟ್ ಸೀನ್ ಎಕ್ಸ್ ಪ್ಲೇನ್ ಮಾಡಿದ್ಮೇಲೆ ಡೈಲಾಗ್ ನ ಹೇಳಿ 'ನನ್ ಮಗಂದ್ ಓಕೆನಾ' ಅಂತ ಶ್ರುತಿ ಹೇಳಿದ್ದು ಎಲ್ಲರಿಗೂ ನಗುಬರುವಂತಿತ್ತು.

ಪೂಜಾ ಗಾಂಧಿ ಅಡುಗೆ ಚೆನ್ನಾಗಿಲ್ಲ

ಪೂಜಾ ಗಾಂಧಿ ಅಡುಗೆ ಚೆನ್ನಾಗಿಲ್ಲ

''ಪೂಜಾ ಗಾಂಧಿ ನಾರ್ತ್ ಇಂಡಿಯಾ ಸ್ಟೈಲ್ ನಲ್ಲಿ ಅಡುಗೆ ಮಾಡ್ತಾರೆ. ಉಪ್ಪು-ಖಾರ ಏನಿರಲ್ಲ. ನಮಗೆ ತಿನ್ನೋಕ್ಕಾಗಲ್ಲ. ಅವರನ್ನ ಅಡುಗೆ ಟೀಮ್ ನಲ್ಲಿ ಹಾಕಿದ್ದು ಯಾರು?'' ಅಂತ ನಟ ಚಂದನ್ ಬಾತ್ ರೂಮ್ ನಲ್ಲಿ ಗೊಣಗುತ್ತಿದ್ದರು.

ಬದುಕು ಜಟಕಾ ಬಂಡಿ ಟಾಸ್ಕ್

ಬದುಕು ಜಟಕಾ ಬಂಡಿ ಟಾಸ್ಕ್

ಜೀವನಾವಶ್ಯಕ ವಸ್ತುಗಳಿಗೆ ಪರಿಶ್ರಮ ಪಡಬೇಕು ಅನ್ನುವ ಸಲುವಾಗಿ 'ಬಿಗ್ ಬಾಸ್', ಮನೆ ಸದಸ್ಯರಿಗೆ 'ಬದುಕು ಜಟಕಾ ಬಂಡಿ' ಟಾಸ್ಕ್ ನೀಡಿದರು. ಅದರಲ್ಲಿ ಬಂಡಿ ಮೇಲೆ ನೀರಿನ ಕ್ಯಾನ್ ಗಳನ್ನ ಇಟ್ಕೊಂಡು ಪ್ರತಿ ಟೀಮ್ 99 ರೌಂಡ್ ಹಾಕ್ಬೇಕಿತ್ತು.

ಇಮ್ಯೂನ್ ಆದ ಅಯ್ಯಪ್ಪ

ಇಮ್ಯೂನ್ ಆದ ಅಯ್ಯಪ್ಪ

ಆತುರದಲ್ಲಿ ಟಾಸ್ಕ್ ಮಾಡಿ, ಎರಡು ಬಾರಿ 99 ರೌಂಡ್ ಹಾಕಿ ಪೆಟ್ಟು ಮಾಡಿಕೊಂಡಿದ್ದಕ್ಕೆ ಎಲ್ಲರ ಒಮ್ಮತದ ಮೇರೆಗೆ ಮುಂದಿನ ಟಾಸ್ಕ್ ನಿಂದ ಕ್ರಿಕೆಟರ್ ಅಯ್ಯಪ್ಪ ಇಮ್ಯೂನ್ ಆದರು.

ಪೂಜಾ ಗಾಂಧಿಗೆ ಹುಚ್ಚ ವೆಂಕಟ್ ಹೇಳಿದ್ದೇನು?

ಪೂಜಾ ಗಾಂಧಿಗೆ ಹುಚ್ಚ ವೆಂಕಟ್ ಹೇಳಿದ್ದೇನು?

ತಮ್ಮ ಅಡುಗೆ ಹೇಗಿದೆ ಅಂತ ಹುಚ್ಚ ವೆಂಕಟ್ ರನ್ನ ಪೂಜಾ ಗಾಂಧಿ ಬಂದು ಕೇಳಿದಾಗ, ''ನಾನು ಓಪನ್ ಆಗಿ ಹೇಳ್ತಿದ್ದೀನಿ. ಬೇರೆಯವರ ತರಹ ಬಾತ್ ರೂಮ್ ನಲ್ಲಿ ಮಾತಾಡಲ್ಲ. ಅಡುಗೆಯಲ್ಲಿ ಉಪ್ಪು-ಖಾರ ಕಮ್ಮಿ. ಅದನ್ನ ಸ್ವಲ್ಪ ಇಂಪ್ರೂವ್ ಮಾಡಿಕೊಳ್ಳಿ'' ಅಂತ ಹುಚ್ಚ ವೆಂಕಟ್ ಹೇಳಿದರು.

ಫಿಟ್ಟಿಂಗ್ ಇಟ್ರಂತೆ ಹುಚ್ಚ ವೆಂಕಟ್

ಫಿಟ್ಟಿಂಗ್ ಇಟ್ರಂತೆ ಹುಚ್ಚ ವೆಂಕಟ್

ಬಾತ್ ರೂಮ್ ನಲ್ಲಿ ತಮ್ಮ ಅಡುಗೆ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಕ್ಕೆ ಪೂಜಾ ಗಾಂಧಿ ಬೇಸರಗೊಂಡು ನಟ ಚಂದನ್ ಬಳಿ ಹೇಳಿಕೊಂಡಾಗ, ''ಆ ತರ ಯಾರೂ ಹೇಳಿಲ್ಲ. ನಿಮ್ಮ ಅಡುಗೆ ಚೆನ್ನಾಗಿದೆ. ಹುಚ್ಚ ವೆಂಕಟ್ ಫಿಟ್ಟಿಂಗ್ ಇಡೋಕೆ ಶುರು ಮಾಡಿದ್ದಾರೆ'' ಅಂತ ಹೇಳಿದರು.

ರೆಹಮಾನ್-ಅಯ್ಯಪ್ಪಗೆ ಚಿಕನ್ ಭಾಗ್ಯ

ರೆಹಮಾನ್-ಅಯ್ಯಪ್ಪಗೆ ಚಿಕನ್ ಭಾಗ್ಯ

'ಬದುಕು ಜಟಕಾ ಬಂಡಿ' ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಸಲುವಾಗಿ ರೆಹಮಾನ್ ಮತ್ತು ಅಯ್ಯಪ್ಪಗೆ 'ಬಿಗ್ ಬಾಸ್' ಚಿಕನ್ ತಿನ್ನುವ ಅವಕಾಶ ನೀಡಿದರು.

English summary
Kannada Actress Shruthi has imitated Huccha Venkat in Bigg Boss house. Read the article to know what all happened on Day 9 in Bigg Boss Kannada 3.
Please Wait while comments are loading...

Kannada Photos

Go to : More Photos