»   » 'ಬಿಗ್ ಬಾಸ್-3' ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವರೇ?

'ಬಿಗ್ ಬಾಸ್-3' ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವರೇ?

Posted by:
Subscribe to Filmibeat Kannada

ನೋಡನೋಡುತ್ತಿದ್ದಂತೆ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಐದು ವಾರಗಳು ಕಳೆದೇ ಹೋಗಿವೆ.

ರ್ಯಾಂಬೋ ಖ್ಯಾತಿಯ ನಟಿ ಮಾಧುರಿ ಇಟಗಿ, ಕಥಕ್ ಡ್ಯಾನ್ಸರ್ ಕಮ್ ಮಾಡೆಲ್ ಜಯಶ್ರೀ ರಾಮಯ್ಯ, ಗಾಯಕ ರವಿ ಮುರೂರು, ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಮನೆಯಿಂದ ಗೇಟ್ ಪಾಸ್ ಪಡೆದದ್ದು ಆಗಿದೆ.

'ಮಳೆ ಹುಡುಗಿ' ಪೂಜಾ ಗಾಂಧಿ ಸೀಕ್ರೆಟ್ ರೂಮ್ ಮೂಲಕ 'ಬಿಗ್ ಬಾಸ್' ಮನೆಗೆ ರೀ ಎಂಟ್ರಿ ಕೊಡಲಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ 'ಬಿಗ್ ಬಾಸ್-3' ಕಾರ್ಯಕ್ರಮದ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಗಳ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ['ಬಿಗ್ ಬಾಸ್' ಮನೆಯಿಂದ ಈ ವಾರ ಗೇಟ್ ಪಾಸ್ ಯಾರಿಗೆ?]

ವರದಿಗಳ ಪ್ರಕಾರ, ಇವರಿಬ್ಬರು 'ಬಿಗ್ ಬಾಸ್' ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆಯಲಿದ್ದಾರೆ. ಯಾರ್ಯಾರು ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ಕಾಮಿಡಿಯನ್ ಮಿತ್ರ

'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಜಾಣೇಶನಾಗಿ, ಅನೇಕ ಸಿನಿಮಾಗಳಲ್ಲಿ ಕಾಮಿಡಿ ಪಾತ್ರಧಾರಿಯಾಗಿ ಮಿಂಚಿರುವ ಮಿತ್ರ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರಂತೆ. {Image courtesy - Actormithra.com}

ಗೌತಮಿ ಗೌಡ

'ಚಿ.ಸೌ.ಸಾವಿತ್ರಿ' ಧಾರಾವಾಹಿ ಖ್ಯಾತಿಯ ಗೌತಮಿ ಗೌಡ 'ಬಿಗ್ ಬಾಸ್' ಮನೆಗೆ ಬಲಗಾಲಿಟ್ಟು ಬರಲಿದ್ದಾರೆ ಅಂತ ಹೇಳಲಾಗುತ್ತಿದೆ.

ರವಿಚಂದ್ರನ್ ಕಥೆ ಏನಾಯ್ತು?

ಕೆಲವೇ ದಿನಗಳ ಹಿಂದೆ ಕ್ರೇಜಿ ಸ್ಟಾರ್ ರವಿಚಂದ್ರನ್ 'ಬಿಗ್ ಬಾಸ್' ಮನೆಗೆ ಹೋಗ್ತಾರೆ ಅಂತ ಸುದ್ದಿ ಆಗಿತ್ತು. ಅದು ನಿಜವೋ, ಸುಳ್ಳೋ ಇನ್ನೂ ಕನ್ಫರ್ಮ್ ಆಗಿಲ್ಲ.

ರಮ್ಯಾ ಹೋಗಲ್ಲ.!

'ಬಿಗ್ ಬಾಸ್' ಮನೆಗೆ ಹೋಗಲ್ಲ ಅಂತ ನಟಿ ಕಮ್ ರಾಜಕಾರಣಿ ರಮ್ಯಾ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿ ಯಾವಾಗ?

ಸೀಕ್ರೆಟ್ ರೂಮ್ ನಲ್ಲಿ ನಟಿ ಪೂಜಾ ಗಾಂಧಿ ವಾಸ ಮುಗಿದ ಬಳಿಕ, ಪೂಜಾ ಗಾಂಧಿ ಜೊತೆಗೆ ಗೌತಮಿ ಗೌಡ ಮತ್ತು ಮಿತ್ರ ವೈಲ್ಡ್ ಕಾರ್ಡ್ ಎಂಟ್ರಿ ನೀಡಲಿದ್ದಾರಂತೆ.

ಗಾಸಿಪ್ಪೋ...ನಿಜವೋ...!

ಸದ್ಯ ಗಾಂಧಿನಗರದ ಗಲ್ಲಿಗಳಲ್ಲಿ ಹಬ್ಬಿರುವ ಸುದ್ದಿ ಇದು. ಇದರಲ್ಲಿ ಸತ್ಯಾಂಶ ಎಷ್ಟಿದೆ ಅನ್ನೋದನ್ನ ಕಲರ್ಸ್ ಕನ್ನಡ ವಾಹಿನಿಯವರೇ ಸ್ಪಷ್ಟಪಡಿಸಬೇಕು.

English summary
According to the reports, Comedian Mithra and Actress Gowthami Gowda are expected to enter Bigg Boss Kannada 3 in wild card entry.
Please Wait while comments are loading...

Kannada Photos

Go to : More Photos