»   » ಹುಚ್ಚ ವೆಂಕಟ್ ಗೆ ಆವಾಝ್ ಹಾಕಿದ ರೆಹಮಾನ್ ಹೊರಗಟ್ಟಿ.!

ಹುಚ್ಚ ವೆಂಕಟ್ ಗೆ ಆವಾಝ್ ಹಾಕಿದ ರೆಹಮಾನ್ ಹೊರಗಟ್ಟಿ.!

Posted by:
Subscribe to Filmibeat Kannada

ಹೀಗಂತ 'ಬಿಗ್ ಬಾಸ್-3' ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಪಟ್ಟು ಹಿಡಿದಿದ್ದಾರೆ. ಮೊಟ್ಟ ಮೊದಲ ಬಾರಿಗೆ ನಾಮಿನೇಟ್ ಆಗಿರುವ ರೆಹಮಾನ್ ಗೆ ಯಾರು ವೋಟ್ ಮಾಡ್ಬೇಡಿ ಅಂತ ಹೇಳುವವರೇ ಹೆಚ್ಚು ಮಂದಿ.

ರೆಹಮಾನ್ ಬದಲು ಹಳ್ಳಿಯಿಂದ ಪೇಟೆಗೆ ಬಂದು ಎರಡೆರಡು ರಿಯಾಲಿಟಿ ಶೋ ಗೆದ್ದಿರುವ ಸುನಾಮಿ ಕಿಟ್ಟಿಯನ್ನ ಸಪೋರ್ಟ್ ಮಾಡಿ. 'ಬಿಗ್ ಬಾಸ್' ಮನೆಯಲ್ಲಿ ಯಾವುದೇ ಸ್ಟ್ರಾಟೆಜಿ ಮಾಡದೆ ಆಟವಾಡುತ್ತಿರುವ ಕಿಟ್ಟಿಗೆ ವೋಟ್ ಹಾಕಿ ಅಂತ 'ಕಲರ್ಸ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲೇ ವೀಕ್ಷಕರು ಕಾಮೆಂಟ್ ಮಾಡ್ತಿದ್ದಾರೆ. [ರೆಹಮಾನ್ ಗೆ ಯಾಕೆ ಹುಚ್ಚ ವೆಂಕಟ್ ಮೇಲೆ ಅಷ್ಟು ಕೋಪ?]

ರೆಹಮಾನ್ ಮತ್ತು ನೇಹಾ ಗೌಡ ವಿರುದ್ಧ ಸಿಡಿದೆದ್ದಿರುವ 'ಬಿಗ್ ಬಾಸ್-3' ವೀಕ್ಷಕರ ಅಭಿಪ್ರಾಯವನ್ನ ನಿಮ್ಮ ಮುಂದೆ ಇಡ್ತಿದ್ದೀವಿ....ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

 ರೆಹಮಾನ್ ಗೆ ವೋಟ್ ಮಾಡ್ಬೇಡಿ....

ರೆಹಮಾನ್ ಗೆ ವೋಟ್ ಮಾಡ್ಬೇಡಿ....

''ರೆಹಮಾನ್ ಗೆ ಯಾರೂ ವೋಟ್ ಮಾಡ್ಬೇಡಿ. ರೆಹಮಾನ್ ಮತ್ತು ನೇಹಾ ಇಬ್ಬರೂ ಹೊರಗೆ ಹೋಗಬೇಕು. ಕಿಟ್ಟಿ ಮತ್ತು ಪೂಜಾ ಗಾಂಧಿಯನ್ನ ಸೇವ್ ಮಾಡಿ'' ಅಂತ ಹೇಳುವ ಕಾಮೆಂಟ್ ಗಳೇ ಹೆಚ್ಚಾಗಿವೆ. [ಟಿವಿ9 ರೆಹಮಾನ್ ಮತ್ತು ನೇಹಾ ಗೌಡ ಕುರಿತ ಅಸಲಿ ವಿವಾದವೇನು?]

ಸಾಲು ಸಾಲು ಕಾಮೆಂಟ್ ಗಳು.!

ಸಾಲು ಸಾಲು ಕಾಮೆಂಟ್ ಗಳು.!

ಟಿವಿ9 ಕನ್ನಡ ಸುದ್ದಿ ವಾಹಿನಿಯ ಸ್ಟಾರ್ ಆಂಕರ್ ರೆಹಮಾನ್ ರವರಿಗೆ ಫ್ಯಾನ್ ಫಾಲೋವಿಂಗ್ ಹೆಚ್ಚಿದೆ ಅಂತಲೇ ಊಹಿಸಲಾಗಿತ್ತು. ಆದ್ರೆ, ಫೇಸ್ ಬುಕ್ ನಲ್ಲಿ ರೆಹಮಾನ್ ವಿರುದ್ಧ ದನಿಯೆತ್ತುವವರೇ ಹೆಚ್ಚು ಮಂದಿ. [ಹುಚ್ಚ ವೆಂಕಟ್ ಗೆ 'ರಪ್' ಅಂತ ಬಾರಿಸ್ತಿದ್ರಂತೆ ರೆಹಮಾನ್.!]

ರೆಹಮಾನ್ ಹೊರಗೆ ಹೋದರೆ...?

ರೆಹಮಾನ್ ಹೊರಗೆ ಹೋದರೆ...?

''ರೆಹಮಾನ್ ಹೊರಗೆ ಹೋದರೆ ಶೋ ಚೆನ್ನಾಗಿರುತ್ತೆ'' ಅಂತ ಕೆಲವರು ಕಾಮೆಂಟ್ ಮಾಡಿದ್ದಾರೆ. [ಬಿಗ್ ಬಾಸ್ ಮನೆಯಲ್ಲಿ ವೆಂಕಟ್ ದಬ್ಬಾಳಿಕೆ, ಕಣ್ಣೀರಿಟ್ಟ ರೆಹಮಾನ್!]

 ನೇಹಾ ಹೊರಗೆ ಹೋಗಲಿ

ನೇಹಾ ಹೊರಗೆ ಹೋಗಲಿ

''ನೇಹಾ ಓವರ್ ಆಕ್ಟಿಂಗ್ ಮಾಡ್ತಿದ್ದಾರೆ. ಹೀಗಾಗಿ ಅವರನ್ನ ಹೊರಗೆ ಕಳುಹಿಸಿ'' ಅನ್ನುವವರೂ ಇದ್ದಾರೆ. [ಥ್ಯಾಂಕ್ಸ್ ಟು ಹುಚ್ಚ ವೆಂಕಟ್ ; ನೇಹಾ ಗೌಡ ಸೇಫ್.!]

ವೀಕ್ಷಕರಿಗೆ ಕಾಡುತ್ತಿರುವ ಡೌಟ್

ವೀಕ್ಷಕರಿಗೆ ಕಾಡುತ್ತಿರುವ ಡೌಟ್

ಫ್ಯಾನ್ ಫಾಲೋವಿಂಗ್ ಇಲ್ಲದೆ ಇರುವ ನೇಹಾ ಗೌಡ ಕಳೆದ ವಾರ ಹೇಗೆ ಸೇಫ್ ಆದರು ಅಂತ ಕೆಲ ವೀಕ್ಷಕರಿಗೆ ಅನುಮಾನ ಕಾಡುತ್ತಿದೆ.

 ನೇಹಾ-ರೆಹಮಾನ್ ಬಗ್ಗೆ ಕಾಮೆಂಟ್ಸ್!

ನೇಹಾ-ರೆಹಮಾನ್ ಬಗ್ಗೆ ಕಾಮೆಂಟ್ಸ್!

'ಬಿಗ್ ಬಾಸ್' ಮನೆಯಲ್ಲಿ ಎದ್ದಿರುವ ಗಾಸಿಪ್ ನ ಇಟ್ಕೊಂಡು ಕೆಲವರು ಕಾಮೆಂಟ್ ಕೂಡ ಮಾಡಿದ್ದಾರೆ.

ಕಿಟ್ಟಿಗೆ ಸಪೋರ್ಟ್ ಮಾಡಿ....

ಕಿಟ್ಟಿಗೆ ಸಪೋರ್ಟ್ ಮಾಡಿ....

ಹಳ್ಳಿಯಲ್ಲಿ ಹುಟ್ಟಿ ಬೆಳೆದ ಕಿಟ್ಟಿಗೆ ಸಪೋರ್ಟ್ ಮಾಡಿ ಅಂತ ಕೆಲವರು ಕಾಮೆಂಟ್ ಮಾಡಿದ್ದಾರೆ.

ಕಿಟ್ಟಿ ಪರ ಅಭಿಯಾನ....

ಕಿಟ್ಟಿ ಪರ ಅಭಿಯಾನ....

ಸುನಾಮಿ ಕಿಟ್ಟಿಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ.

ರೆಹಮಾನ್ ಬದಲು ಕಿಟ್ಟಿಗೆ ವೋಟ್ ಮಾಡಿ....

ರೆಹಮಾನ್ ಬದಲು ಕಿಟ್ಟಿಗೆ ವೋಟ್ ಮಾಡಿ....

ರೆಹಮಾನ್ ಬದಲು ಕಿಟ್ಟಿಗೆ ವೋಟ್ ಮಾಡಿ ಸೇವ್ ಮಾಡಿ ಅಂತಿದ್ದಾರೆ 'ಬಿಗ್ ಬಾಸ್' ಪ್ರಿಯರು. ಇದಕ್ಕೆ ನೀವು ಏನ್ ಹೇಳ್ತೀರಾ..??

ನಿಮ್ಮ ಅಭಿಪ್ರಾಯವನ್ನ ನಮಗೂ ತಿಳಿಸಿ...

ನಿಮ್ಮ ಅಭಿಪ್ರಾಯವನ್ನ ನಮಗೂ ತಿಳಿಸಿ...

ರೆಹಮಾನ್, ಸುನಾಮಿ ಕಿಟ್ಟಿ, ನೇಹಾ ಮತ್ತು ಪೂಜಾ ಗಾಂಧಿ...ಈ ನಾಲ್ವರಲ್ಲಿ ನಿಮ್ಮ ಸಪೋರ್ಟ್ ಯಾರಿಗೆ ಅಂತ ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ...

English summary
Viewers of Bigg Boss Kannada 3 have taken their Facebook Account to express their support for Tsunami Kitty. Viewers want TV9 Anchor Rehman to get eliminated this week.
Please Wait while comments are loading...

Kannada Photos

Go to : More Photos