»   » 'ಬಿಗ್ ಬಾಸ್' ಮನೆಯಿಂದ ಕ್ರಿಕೆಟರ್ ದೊಡ್ಡ ಗಣೇಶ್ ಔಟ್.?

'ಬಿಗ್ ಬಾಸ್' ಮನೆಯಿಂದ ಕ್ರಿಕೆಟರ್ ದೊಡ್ಡ ಗಣೇಶ್ ಔಟ್.?

Posted by:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮಕ್ಕೆ ಕಾಲಿಟ್ಟ ಮೊದಲ ವಾರವೇ 'ಗಾಸಿಪ್ ಗ್ಯಾಂಗ್' ಕೃಪಾಕಟಾಕ್ಷದಿಂದ 'ವಿವಾದ'ದಲ್ಲಿ ಸಿಲುಕಿದ ಕ್ರಿಕೆಟರ್ ದೊಡ್ಡ ಗಣೇಶ್ ಇದೀಗ 'ಬಿಗ್ ಬಾಸ್' ಮನೆಯಿಂದ ಔಟ್ ಆಗಿದ್ದಾರಂತೆ.!

ಕಲರ್ಸ್ ಕನ್ನಡ ವಾಹಿನಿ ಮೂಲಗಳಿಂದ ಲೀಕ್ ಆಗಿರುವ ಸುದ್ದಿ ಪ್ರಕಾರ, ಈ ವಾರ 'ದೊಡ್ಮನೆ'ಯಿಂದ ದೊಡ್ಡ ಗಣೇಶ್ ನಿರ್ಗಮಿಸಿದ್ದಾರೆ.

ಕಾರ್ಯಕ್ರಮದ ರೆಕಾರ್ಡಿಂಗ್ ಮುಕ್ತಾಯ

ಕಾರ್ಯಕ್ರಮದ ರೆಕಾರ್ಡಿಂಗ್ ಮುಕ್ತಾಯ

ಕೆಲವೇ ನಿಮಿಷಗಳ ಹಿಂದೆಯಷ್ಟೆ 'ವಾರದ ಕಥೇ ಕಿಚ್ಚನ ಜೊತೆ' ಕಾರ್ಯಕ್ರಮದ ಶೂಟಿಂಗ್ ಮುಗಿಯಿತು. ಅದರಲ್ಲಿ ವಾರದ ಕಿಚ್ಚಿನ ಕಥೆಯನ್ನಿಟ್ಟುಕೊಂಡು ಕಿಚ್ಚ ಸುದೀಪ್ ಪಂಚಾಯತಿ ಮಾಡಿದ ಬಳಿಕ ಭಾರತ ತಂಡದ ಮಾಜಿ ವೇಗಿ ದೊಡ್ಡ ಗಣೇಶ್ ರವರನ್ನ ಹೊರಗಡೆ ಕರೆದಿದ್ದಾರೆ ಎನ್ನಲಾಗಿದೆ.

ದೊಡ್ಡ ಗಣೇಶ್ ರನ್ನ ನಾಮಿನೇಟ್ ಮಾಡಿದವರು ಯಾರ್ಯಾರು?

ದೊಡ್ಡ ಗಣೇಶ್ ರನ್ನ ನಾಮಿನೇಟ್ ಮಾಡಿದವರು ಯಾರ್ಯಾರು?

ಕೀರ್ತಿ ಕುಮಾರ್, ಶೀತಲ್ ಶೆಟ್ಟಿ, ಸಂಜನಾ, ಪ್ರಥಮ್, ಮಾಳವಿಕಾ ಅವಿನಾಶ್ ಸೇರಿದಂತೆ ಒಟ್ಟು ಆರು ಮಂದಿ ದೊಡ್ಡ ಗಣೇಶ್ ವಿರುದ್ಧ ವೋಟ್ ಮಾಡಿದ್ದರಿಂದ, 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಕ್ರಿಕೆಟರ್ ದೊಡ್ಡ ಗಣೇಶ್ ನಾಮಿನೇಟ್ ಆಗಿದ್ದರು.

'ಶಾರ್ಟ್ ಟರ್ಮ್ ಮೆಮರಿ ಲಾಸ್' ರೋಗಿ ಆಗಿ ಅಭಿನಯ

'ಶಾರ್ಟ್ ಟರ್ಮ್ ಮೆಮರಿ ಲಾಸ್' ರೋಗಿ ಆಗಿ ಅಭಿನಯ

ಆಸ್ಪತ್ರೆಯಲ್ಲಿ ನಡೆಯುವ ಹಾಸ್ಯ ಸಂಗತಿಗಳನ್ನು ತಿಳಿಸುವ ಸಲುವಾಗಿ 'ಬಿಗ್ ಬಾಸ್' ಈ ವಾರ 'ಐ.ಸಿ.ಯು' (ಇನ್ಟೆನ್ಸಿವ್ ಕ್ರಿಯೇಟಿವ್ ಯುನಿಟ್) ಟಾಸ್ಕ್ ನೀಡಿದ್ದರು. ಅದರಲ್ಲಿ ಶಾರ್ಟ್ ಟರ್ಮ್ ಮೆಮರಿ ಲಾಸ್ ರೋಗಿಯ ಪಾತ್ರವನ್ನ ದೊಡ್ಡ ಗಣೇಶ್ ನಿರ್ವಹಿಸಿದ್ದರು.

ಡಲ್ ಆಗಿದ್ದ ದೊಡ್ಡ ಗಣೇಶ್

ಡಲ್ ಆಗಿದ್ದ ದೊಡ್ಡ ಗಣೇಶ್

ಮೊದಲ ವಾರ 'ಬಿಗ್ ಬಾಸ್' ಮನೆಯ 'ಗಾಸಿಪ್ ಗ್ಯಾಂಗ್' ಬಾಯಿಗೆ ಆಹಾರವಾಗಿದ್ದರಿಂದ, ಅಪ್ ಸೆಟ್ ಆದಂತೆ ಕಂಡು ಬಂದ ದೊಡ್ಡ ಗಣೇಶ್, 'ಐ.ಸಿ.ಯು' ಟಾಸ್ಕ್ ನಲ್ಲಿ ಮಂಕಾಗಿದ್ದರು.

ಶೀತಲ್ ಶೆಟ್ಟಿ ವಿರುದ್ದ ಸಿಟ್ಟು

ಶೀತಲ್ ಶೆಟ್ಟಿ ವಿರುದ್ದ ಸಿಟ್ಟು

ಸತ್ಯ ಏನು ಅಂತ ತಿಳಿಯದೆ, ಗಂಭೀರ ಆರೋಪ ಮಾಡಿ, ಅದನ್ನ 'ಸರಿ' ಅಂತ ಸಮರ್ಥಿಸಿಕೊಂಡ ಶೀತಲ್ ಶೆಟ್ಟಿ ವಿರುದ್ಧ ದೊಡ್ಡ ಗಣೇಶ್ ಸಿಡಿಮಿಡಿಗೊಂಡಿದ್ದರು.

ಸುದೀಪ್ ಕೂಡ ಬೆಂಡೆತ್ತಿದ್ದರು

ಸುದೀಪ್ ಕೂಡ ಬೆಂಡೆತ್ತಿದ್ದರು

''ಕ್ರಿಕೆಟರ್ ದೊಡ್ಡ ಗಣೇಶ್, ಕಿರುತೆರೆ ನಟಿ ಸಂಜನಾ ಹಿಂದೆ ಬಿದ್ದಿದ್ದಾರೆ'' ಅಂತ ಶೀತಲ್ ಶೆಟ್ಟಿ, ಕಾವ್ಯ ಶಾಸ್ತ್ರಿ ಹಾಗೂ ನಟಿ ರೇಖಾ ಮಾತನಾಡಿಕೊಂಡಿದ್ದರು. ವಾಸ್ತವ ಗೊತ್ತಿಲ್ಲದೇ 'ಗುಸು ಗುಸು' ಮಾತನಾಡಿದ್ದ ಈ ಮೂವರನ್ನ ಕಳೆದ ವಾರದ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಕೊಡ ಬೆಂಡೆತ್ತಿದ್ದರು.

ದೊಡ್ಡ ಗಣೇಶ್ ಕ್ಷಮೆ ಕೇಳಿದ್ದರು

ದೊಡ್ಡ ಗಣೇಶ್ ಕ್ಷಮೆ ಕೇಳಿದ್ದರು

ವಿನಾಕಾರಣ ಗಂಭೀರ ಆರೋಪ ಮಾಡಿದ್ದು ಮನಸ್ಸಿಗೆ ನೋವು ತಂದಿದ್ದರೂ, ವಾದ ಮಾಡಲು ಇಚ್ಛಿಸದ ದೊಡ್ಡ ಗಣೇಶ್ ಕಿಚ್ಚ ಸುದೀಪ್ ಎದುರು ಕ್ಷಮೆ ಕೇಳಿದರು.

ಈ ವಾರ ನಾಮಿನೇಟ್ ಆಗಿದ್ದವರು ಯಾರ್ಯಾರು?

ಈ ವಾರ ನಾಮಿನೇಟ್ ಆಗಿದ್ದವರು ಯಾರ್ಯಾರು?

ಶೀತಲ್ ಶೆಟ್ಟಿ, ಕಾವ್ಯ ಶಾಸ್ತ್ರಿ, ಸಂಜನಾ, ದೊಡ್ಡ ಗಣೇಶ್ ಮತ್ತು ಪ್ರಥಮ್ ಈ ವಾರ ನಾಮಿನೇಟ್ ಆಗಿದ್ದರು. ಇತರರಿಗಿಂತ ಅತಿ ಕಡಿಮೆ ಎಸ್.ಎಂ.ಎಸ್ ಪಡೆದ ಕಾರಣ ದೊಡ್ಡ ಗಣೇಶ್ ಔಟ್ ಆಗಿದ್ದಾರೆ ಅಂತ ಹೇಳಲಾಗಿದೆ. ಅಧಿಕೃತ ಘೋಷಣೆ ಇನ್ನೂ ಆಗಿಲ್ಲ.

English summary
Bigg Boss Kannada 4, Week 2 : According to Colors Kannada Sources, Former Indian Fast Bowler Dodda Ganesh is eliminated from Bigg Boss Kannada 4 this Week.
Please Wait while comments are loading...

Kannada Photos

Go to : More Photos