»   » ಪ್ರಥಮ್, ಮಾಳವಿಕಾ ಎಲಿಮಿನೇಷನ್ ನಾಟಕಕ್ಕೆ 'ಬಿಗ್' ಟ್ವಿಸ್ಟ್!

ಪ್ರಥಮ್, ಮಾಳವಿಕಾ ಎಲಿಮಿನೇಷನ್ ನಾಟಕಕ್ಕೆ 'ಬಿಗ್' ಟ್ವಿಸ್ಟ್!

Posted by:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4'......ವೀಕ್ಷಕರು ಈ ಬಾರಿ ನಿರೀಕ್ಷೆ ಮಾಡಿದ್ದಕ್ಕಿಂತ ನಿರೀಕ್ಷೆ ಮಾಡದಂತಹ ಟ್ವಿಸ್ಟ್ ಗಳೇ ಹೆಚ್ಚು ಸಿಕ್ಕಿವೆ. ಸ್ವರ್ಧಿಗಳು ಯಾವುದೇ ಲೆಕ್ಕಾಚಾರ ಮಾಡಿದರೂ, ಅವರಿಗೆ ಶಾಕ್ ನೀಡುವಂತಹ ನಿರ್ಣಯಗಳು 'ಬಿಗ್ ಬಾಸ್' ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಹದಿಮೂರನೇ ವಾರದ ಎಲಿಮಿನೇಷನ್ ಪ್ರಕ್ರಿಯೆ.[ಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾಪಲ್ಟಾ: 'ಬಾಂಬ್' ಸಿಡಿಸಿದ ಸುದೀಪ್.! ]

ನಿರೀಕ್ಷೆಯಂತೆ 13ನೇ ವಾರ ಡಬಲ್ ಎಲಿಮಿನೇಷನ್ ಆಗಿತ್ತು. ನಟಿ ಮಾಳವಿಕಾ ಹಾಗೂ ಪ್ರಥಮ್ 'ಬಿಗ್ ಬಾಸ್' ಮನೆಯಿಂದ ಹೊರಬಂದರು. 'ವಾರದ ಕಥೆ ಕಿಚ್ಚನ ಜೊತೆ' ಪಂಚಾಯಿತಿಯಲ್ಲಿ ಸ್ವತಃ ಸುದೀಪ್ ಅವರೇ ಈ ಇಬ್ಬರನ್ನ ಮನೆಯಿಂದ ವಾಪಸ್ ಬರಮಾಡಿಕೊಂಡರು. ಆದ್ರೆ, ಅಮೇಲೆ ಆಗಿದ್ದೇಲ್ಲ ಸೂಪರ್ ಡ್ರಾಮಾ.

ಪ್ರಥಮ್ ಮತ್ತು ಮಾಳವಿಕಾ ಔಟ್!

ಪ್ರಥಮ್ ಮತ್ತು ಮಾಳವಿಕಾ ಔಟ್!

13ನೇ ವಾರ ಮಾಳವಿಕಾ ಹಾಗೂ ಪ್ರಥಮ್ 'ಬಿಗ್ ಬಾಸ್' ಮನೆಯಿಂದ ಎಲಿಮಿನೇಷನ್ ಆದರು. ಸ್ವತಃ ಸುದೀಪ್ ಅವರೇ ''ಕಿಚ್ಚನ ಜೊತೆ ವಾರದ ಕಥೆ''ಯಲ್ಲಿ ಇಬ್ಬರನ್ನ ಮನೆಯಿಂದ ಹೊರಗೆ ಕರೆದರು. ಸುದೀಪ್ ಸೂಚನೆ ಮೆರೆಗೆ ಪ್ರಥಮ್ ಹಾಗೂ ಮಾಳವಿಕಾ ಇಬ್ಬರು ತಮ್ಮ ಲಗ್ಗೇಜ್ ಸಮೇತ ಹೊರ ಬಂದರು.[ದೊಡ್ಮನೆಯಿಂದ ಹೊರಬಂದ ಮಾಳವಿಕಾ, ಪ್ರಥಮ್: 'ಬಿಗ್' ಟ್ವಿಸ್ಟ್ ನಿರೀಕ್ಷಿಸಿ]

ವೇದಿಕೆಗೆ ಬರಲೇ ಇಲ್ಲ!

ವೇದಿಕೆಗೆ ಬರಲೇ ಇಲ್ಲ!

ಎಲಿಮಿನೇಟ್ ಆದವರು ನಿರೀಕ್ಷೆಯಂತೆ ''ಸೂಪರ್ ಸಂಡೇ ವಿತ್ ಸುದೀಪ'' ಕಾರ್ಯಕ್ರಮದಲ್ಲಿ ಭಾನುವಾರ ವೇದಿಕೆಗೆ ಬರಬೇಕಿತ್ತು. ಆದ್ರೆ, ಪ್ರಥಮ್ ಮಾಳವಿಕಾ ಇಬ್ಬರು ವೇದಿಕೆಗೆ ಬರಲೇ ಇಲ್ಲ.

'ಬಾಂಬ್' ಸಿಡಿಸಿದ ಸುದೀಪ್

'ಬಾಂಬ್' ಸಿಡಿಸಿದ ಸುದೀಪ್

ಭಾನುವಾರದ ವೇದಿಕೆಗೆ ಪ್ರಥಮ್ ಮತ್ತು ಮಾಳವಿಕಾ ಬರಲಿಲ್ಲ. ಅದಕ್ಕೆ ಕಿಚ್ಚ ಸುದೀಪ್ ಅವರು ಕೊಟ್ಟ ಉತ್ತರ.'' ಪ್ರಥಮ್ ಹಾಗೂ ಮಾಳವಿಕಾ ಅವರು ಮನೆಯಿಂದ ಹೊರ ಬಂದಿದ್ದಾರೆ. ಆದ್ರೆ, ಆಟದಿಂದ ಹೊರಬಂದಿಲ್ಲ'' ಎಂಬ ಹೊಸ ಬಾಂಬ್ ಸಿಡಿಸಿದರು.['ದೊಡ್ಮನೆ'ಯಲ್ಲಿ ಪ್ರಥಮ್, ಮಾಳವಿಕಾ 'ಗುಂಪಿಗೆ' ಸೇರದ ಪದ! ಯಾಕೆ?]

ಮತ್ತೆ ಎಲ್ಲಿ ಹೋದ್ರು!

ಮತ್ತೆ ಎಲ್ಲಿ ಹೋದ್ರು!

'ಬಿಗ್ ಬಾಸ್' ಮನೆಯಿಂದ 13ನೇ ವಾರ ಎಲಿಮಿನೆಟ್ ಆದ ಪ್ರಥಮ್ ಮತ್ತು ಮಾಳವಿಕಾ, 'ಬಿಗ್ ಬಾಸ್' ಮನೆಯ ಗ್ಯಾರೇಜ್ ಗೆ ಹೋಗಿದ್ದಾರೆ. ಅಂದ್ರೆ, ಸೀಕ್ರೆಟ್ ರೂಂ ಪ್ರವೇಶಿಸಿದ್ದಾರೆ.

ಪ್ರಥಮ್-ಮಾಳವಿಕಾ ಸೇಫ್!

ಪ್ರಥಮ್-ಮಾಳವಿಕಾ ಸೇಫ್!

ಹೀಗಾಗಿ 'ಬಿಗ್' ಮನೆಯಿಂದ ಎಲಿಮಿನೇಟ್ ಆದ ಪ್ರಥಮ್-ಮಾಳವಿಕಾ ನಿಜವಾಗಲೂ ಎಲಿಮಿನೇಟ್ ಆಗಿಲ್ಲ. ಬದಲಾಗಿ ಸೀಕ್ರೆಟ್ ರೂಂ ಪ್ರವೇಶಿಸಿದ್ದಾರೆ. ಈ ಮೂಲಕ ಇಬ್ಬರು ಕೂಡ ಸೇಫ್ ಆಗಿದ್ದು, ಆಟದಲ್ಲಿ ಮುಂದುವರೆದಿದ್ದಾರೆ.

'ಸೀಕ್ರೆಟ್ ರೂಂ'ಗೆ ಹೋಗಿದ್ದ 'ಶಾಲಿನಿ-ಶೀತಲ್'

'ಸೀಕ್ರೆಟ್ ರೂಂ'ಗೆ ಹೋಗಿದ್ದ 'ಶಾಲಿನಿ-ಶೀತಲ್'

'ಬಿಗ್ ಬಾಸ್ ಕನ್ನಡ-4' ಆವೃತ್ತಿಯಲ್ಲಿ ಇದು ಎರಡನೇ ಬಾರಿ ಸೀಕ್ರೆಟ್ ರೂಂಗೆ ಕಳುಹಿಸಲಾಗಿದೆ. ಈ ಮೊದಲು ಶೀತಲ್ ಶೆಟ್ಟಿ ಹಾಗೂ ಶಾಲಿನಿ ಇಬ್ಬರು ಡಬಲ್ ಎಲಿಮಿನೇಷನ್ ಆಗಿ, ಸೀಕ್ರೆಟ್ ರೂಂಗೆ ಎಂಟ್ರಿ ಕೊಟ್ಟಿದ್ದರು. ತದ ನಂತರ ಒಂದು ವಾರದ ಬಳಿಕ 'ಬಿಗ್ ಬಾಸ್' ಮನೆಗೆ ಕಮ್ ಬ್ಯಾಕ್ ಮಾಡಿದ್ದರು. ಈಗ ಮತ್ತೆ ಪ್ರಥಮ್ ಹಾಗೂ ಮಾಳವಿಕಾ ಅವರಿಗೆ ಎರಡನೇ ಅವಕಾಶ ಸಿಕ್ಕಿದೆ.[ಸೀಕ್ರೆಟ್ ರೂಮ್ ಗೆ ಶೀತಲ್ ಶೆಟ್ಟಿ, ಶಾಲಿನಿ: ಮುಂದಿದೆ 'ಮಾರಿ ಹಬ್ಬ' ]

ಎರಡು ವಾರ 'ಬಿಗ್ ಬಾಸ್' ಎಕ್ಸ್ ಟೆಂಡ್!

ಎರಡು ವಾರ 'ಬಿಗ್ ಬಾಸ್' ಎಕ್ಸ್ ಟೆಂಡ್!

'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಎರಡು ವಾರಗಳ ಕಾಲ ಎಕ್ಸ್ ಟೆಂಡ್ ಆಗಿದೆ.! ಹೀಗಾಗಿ, ಒಂದು ವಾರದ ಬಳಿಕ ಮತ್ತೆ ಪ್ರಥಮ್ ಹಾಗೂ ಮಾಳವಿಕಾ ಮನೆಗೆ ರೀ-ಎಂಟ್ರಿ ಕೊಡಲಿದ್ದಾರೆ.

English summary
Bigg Boss Kannada 4, Week 13 : Actress Malavika and Pratham gets second chance to stay in Bigg boss house. At present both are in Secret Room of Bigg Boss house. Earlier This week, both were eliminated from Bigg Boss Kannada 4 reality show.
Please Wait while comments are loading...

Kannada Photos

Go to : More Photos