»   » ನಟಿ ಮಾಳವಿಕಾ ಮತ್ತು ಮೋಹನ್ ಗೆ 'ಬಿಗ್ ಬಾಸ್' ಗೆಲ್ಲುವ ಕನಸು ನುಚ್ಚುನೂರು

ನಟಿ ಮಾಳವಿಕಾ ಮತ್ತು ಮೋಹನ್ ಗೆ 'ಬಿಗ್ ಬಾಸ್' ಗೆಲ್ಲುವ ಕನಸು ನುಚ್ಚುನೂರು

Posted by:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಗೆಲ್ಲುವ ರೇಸ್ ನಿಂದ ನಟಿ ಮಾಳವಿಕಾ ಅವಿನಾಶ್ ಮತ್ತು ಮೋಹನ್ ಹೊರಬಿದ್ದಿದ್ದಾರೆ. 'ಬಿಗ್ ಬಾಸ್' ಟ್ರೋಫಿ ಗೆಲ್ಲುವ ತವಕದಲ್ಲಿದ್ದ ಮೋಹನ್ ಕನಸು ನುಚ್ಚುನೂರಾಗಿದೆ. ತಮ್ಮ ಹುಟ್ಟುಹಬ್ಬದ ದಿನವೇ 'ದೊಡ್ಮನೆ'ಯಿಂದ ಮಾಳವಿಕಾ ಔಟ್ ಆಗಿದ್ದಾರೆ.

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಾಗ ಪ್ರಭಲ ಸ್ಪರ್ಧಿಗಳಾಗಿ ಗುರುತಿಸಿಕೊಂಡಿದ್ದ ಮಾಳವಿಕಾ ಅವಿನಾಶ್ ಮತ್ತು ಮೋಹನ್ ರವರಿಗೆ ಫಿನಾಲೆ ಹಂತದಲ್ಲಿ ವೀಕ್ಷಕರಿಂದ ಕಡಿಮೆ ಎಸ್.ಎಂ.ಎಸ್ ಲಭಿಸಿದೆ. ಹೀಗಾಗಿ ಇಬ್ಬರಿಗೂ ಗೇಟ್ ಪಾಸ್ ನೀಡಲಾಗಿದೆ.

bigg-boss-kannada-4-malavika-avinash-and-mohan-eliminated

ಐದನೇ ಸ್ಥಾನದಲ್ಲಿ ಮೋಹನ್ ನಿರ್ಗಮಿಸಿದರೆ, ನಾಲ್ಕನೇ ಸ್ಥಾನದಲ್ಲಿ ಮಾಳವಿಕಾ ಹೊರ ನಡೆದರು. ಸದ್ಯ ಟಾಪ್ 3 ಪಟ್ಟಕ್ಕೇರಿದ್ದಾರೆ ಕೀರ್ತಿ, ಪ್ರಥಮ್ ಮತ್ತು ರೇಖಾ.

'ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆ ಶೂಟಿಂಗ್ ನಾಳೆ ನಡೆಯಲಿದೆ. ಹೀಗಾಗಿ ಯಾರು ಈ ಸೀಸನ್ ನ ವಿನ್ನರ್ ಆಗುತ್ತಾರೆ ಎಂಬುದು ನಾಳೆ (ಜನವರಿ 29, ಭಾನುವಾರ) ಜಗಜ್ಜಾಹೀರಾಗಲಿದೆ.

English summary
Bigg Boss Kannada 4: Kannada Actress Malavika Avinash and Mohan are eliminated from BBK4 Reality show.
Please Wait while comments are loading...

Kannada Photos

Go to : More Photos