»   » 'ನಾವ್ ಹೋಗಲ್ಲ ಸ್ವಾಮಿ': 'ಬಿಗ್ ಬಾಸ್' ಮನೆಯ ರೂಲ್ಸ್ ಇರುವುದೇ ಹೀಗೆ.!

'ನಾವ್ ಹೋಗಲ್ಲ ಸ್ವಾಮಿ': 'ಬಿಗ್ ಬಾಸ್' ಮನೆಯ ರೂಲ್ಸ್ ಇರುವುದೇ ಹೀಗೆ.!

Posted by:
Subscribe to Filmibeat Kannada

'ಬಿಗ್ ಬಾಸ್' ಕಾರ್ಯಕ್ರಮದ ರೂಲ್ಸ್ ಇರುವುದು ಹಾಗೇ. Infact, ಅಗ್ರೀಮೆಂಟ್ ಆಗುವುದೇ ಸಾಲು ಸಾಲು ಕಂಡೀಷನ್ಸ್ ಮೇಲೆ. ಆ ಕಂಡೀಷನ್ ಗಳ ಪೈಕಿ ಬಹು ಮುಖ್ಯವಾದವು ಇವು -

> 'ಬಿಗ್' ಮನೆ ಒಳಗೆ ಹೋಗುವ ಮುನ್ನ ಪಬ್ಲಿಸಿಟಿ ಪಡೆಯುವಂತಿಲ್ಲ.
> 'ಬಿಗ್' ಮನೆ ಒಳಗಿನ ಸೀಕ್ರೆಟ್ಸ್ ಬಯಲು ಮಾಡುವಂತಿಲ್ಲ.
> 'ಬಿಗ್' ಮನೆಯಲ್ಲಿ ಇರಲು ಪಡೆಯುವ ಸಂಭಾವನೆ ಕೂಡ ಬಹಿರಂಗಗೊಳಿಸುವಂತಿಲ್ಲ.

ಇವೆಲ್ಲಾ ಕಂಡೀಷನ್ ಗಳಿಗೂ ಒಪ್ಪಿ, ಅಗ್ರೀಮೆಂಟ್ ಕಾಪಿಗೆ ಸಹಿ ಹಾಕಿದ ಮೇಲೆಯೇ 'ಬಿಗ್' ಮನೆಗೆ ಸ್ಪರ್ಧಿಗಳ ಎಂಟ್ರಿ.

ಮೊದಲೇ ರಿವೀಲ್ ಮಾಡ್ಬಿಟ್ರೆ, ನೋಡೋರು ಯಾರು?

ಮೊದಲೇ ರಿವೀಲ್ ಮಾಡ್ಬಿಟ್ರೆ, ನೋಡೋರು ಯಾರು?

ಅಷ್ಟಕ್ಕೂ, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ 'ಇವರೆಲ್ಲಾ' ಸ್ಪರ್ಧಿಸುತ್ತಾರೆ ಅಂತ ಚಾನೆಲ್ ನವರು ಮೊದಲೇ ಪ್ರಕಟ ಮಾಡಿಬಿಟ್ರೆ, ಕಾರ್ಯಕ್ರಮದ ಮೊದಲ ಎಪಿಸೋಡ್ ನ ಯಾರ್ ನೋಡ್ತಾರೆ ಹೇಳಿ.? ಟಿ.ಆರ್.ಪಿ ಮುಖ್ಯ ಸ್ವಾಮಿ.! [ಓಹೋ....'ಬಿಗ್ ಬಾಸ್ ಕನ್ನಡ-4' ನಲ್ಲಿ 'ಇವರೆಲ್ಲಾ' ಇರ್ತಾರಂತೆ ಸ್ವಾಮಿ.!]

ಪ್ರೋಗ್ರಾಂ ಮಾಡಿ ಏನು ಪ್ರಯೋಜನ?

ಪ್ರೋಗ್ರಾಂ ಮಾಡಿ ಏನು ಪ್ರಯೋಜನ?

ವರ್ಣರಂಜಿತ ಕಾರ್ಯಕ್ರಮದ ಮೂಲಕ ಸರ್ಧಿಗಳು ಒಬ್ಬೊಬ್ಬರಾಗಿ 'ಬಿಗ್ ಬಾಸ್' ಮನೆ ಗೃಹ ಪ್ರವೇಶ ಮಾಡ್ತಾರೆ. ಒನ್ ಬೈ ಒನ್ ಎಂಟ್ರಿ ಆಗ್ತಿದ್ರೆ, ವೀಕ್ಷಕರಿಗೆ ಹೇಗೆ ಕುತೂಹಲ ಹೆಚ್ಚಾಗುತ್ತೋ, ಹಾಗೇ ಸ್ಪರ್ಧಿಗಳಿಗೂ 'ಕಾಂಪಿಟೇಷನ್' ಅರಿವಾಗಬೇಕು. ಅದನ್ನ ಮೂಲೆ ಮೂಲೆಯಲ್ಲೂ ಇರುವ ಕ್ಯಾಮರಾ ಕಣ್ಣುಗಳು ಸೆರೆ ಹಿಡಿದರೆ ಮಾತ್ರ ರೇಟಿಂಗ್ ಏರುವುದು.! ['ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳ ಲಿಸ್ಟ್ ನಲ್ಲಿ 'ಇವರ' ಹೆಸರಿದ್ಯಂತೆ.!]

ಗೇಮ್ ಪ್ಲಾನ್ ಮಾಡಿಕೊಳ್ತಾರಲ್ಲಾ..

ಗೇಮ್ ಪ್ಲಾನ್ ಮಾಡಿಕೊಳ್ತಾರಲ್ಲಾ..

'ಬಿಗ್ ಬಾಸ್' ಸ್ಪರ್ಧಿಗಳ ಲಿಸ್ಟ್ ಮೊದಲೇ ಔಟ್ ಆಗ್ಬಿಟ್ರೆ, 'ಗೇಮ್ ಪ್ಲಾನ್' ಮಾಡುವ ಬಗ್ಗೆ ಸ್ಪರ್ಧಿಗಳಿಗೆ ಹೇಳಿಕೊಡಬೇಕಾಗಿಲ್ಲ. ಇದೇ ಕಾರಣಕ್ಕೆ 'ಬಿಗ್' ಮನೆ ಒಳಗೆ ಹೋಗುವ ಮುನ್ನ ಎಲ್ಲವೂ 'ಗುಪ್ತ್ ಗುಪ್ತ್' ಆಗಿರುತ್ತೆ. [ಬಿಗ್ ಬಾಸ್ ಕನ್ನಡ 4: ನಟಿ ಸುಧಾರಾಣಿ ಕೊಟ್ಟ ಕ್ಲಾರಿಫಿಕೇಷನ್ ಏನು?]

ಕಾರ್ಯಕ್ರಮ ನಡೆಯುವಾಗಲೂ ಕಣ್ಣಿಗೆ ಬಟ್ಟೆ ಕಟ್ಟಿರ್ತಾರೆ.!

ಕಾರ್ಯಕ್ರಮ ನಡೆಯುವಾಗಲೂ ಕಣ್ಣಿಗೆ ಬಟ್ಟೆ ಕಟ್ಟಿರ್ತಾರೆ.!

'ಬಿಗ್ ಬಾಸ್' ಮೊದಲ ಎಪಿಸೋಡ್ ಶೂಟಿಂಗ್ ನಡೆಯುವಾಗ, ಪ್ರತಿಯೊಬ್ಬ ಸ್ಪರ್ಧಿಗೂ ಒಂದೊಂದು ಕ್ಯಾರಾವ್ಯಾನ್ ಮೀಸಲಾಗಿರುತ್ತದೆ. ಕ್ಯಾರಾವ್ಯಾನ್ ಬಿಟ್ಟು ಅವರು ಕೆಳಗೆ ಇಳಿಯುವಂತಿಲ್ಲ. ವೇದಿಕೆ ಮೇಲೆ ಬರುವವರೆಗೂ ಅವರ ಕಣ್ಣಿಗೆ ಬಟ್ಟೆ ಕಟ್ಟಲಾಗಿರುತ್ತದೆ. ಇದೆಲ್ಲಾ ಮಾಡೋದು 'ಕಾಂಪಿಟೇಷನ್' ಸ್ಪಿರಿಟ್ ಉಳಿಸಿಕೊಳ್ಳಲು. [ಕೋಮಲ್ ಕುರಿತ ಅಂತೆ-ಕಂತೆ ಪುರಾಣಕ್ಕೆ ಪೂರ್ಣ ವಿರಾಮವಿಟ್ಟ ಜಗ್ಗೇಶ್]

ಇಷ್ಟೆಲ್ಲಾ ಇರುವಾಗ ಈಗ ಯಾರೂ ಬಾಯ್ಬಿಡಲ್ಲ ಸ್ವಾಮಿ.!

ಇಷ್ಟೆಲ್ಲಾ ಇರುವಾಗ ಈಗ ಯಾರೂ ಬಾಯ್ಬಿಡಲ್ಲ ಸ್ವಾಮಿ.!

ಇಷ್ಟೆಲ್ಲಾ ನಿಯಮಗಳು ಇರುವಾಗ ಈಗ 'ನೀವು ಬಿಗ್ ಬಾಸ್ ಗೆ ಹೋಗ್ತಿದ್ದೀರಂತೆ' ಅಂತ ಯಾರನ್ನೇ ಕೇಳಿದರೂ ಅವರು ಹೇಳೋದು ಇಷ್ಟೆ ''ಇಲ್ಲ, ಐ ಆಮ್ ನಾಟ್ ಇಂಟ್ರೆಸ್ಟೆಡ್'' ಅಥವಾ ''ಇನ್ನೂ ಆಫರ್ ಬಂದಿಲ್ಲ. ನೋಡೋಣ'' ಅಂತ. [ಎಲ್ಲಾ ಊಹಾಪೋಹಗಳ ಬಗ್ಗೆ ನಟಿ ತಾರಾ ಕೊಟ್ಟ ಸ್ಪಷ್ಟನೆ ಏನು?]

ಹಲವಾರು ಲಿಸ್ಟ್ ಗಳು ಓಡಾಡುತ್ತವೆ.!

ಹಲವಾರು ಲಿಸ್ಟ್ ಗಳು ಓಡಾಡುತ್ತವೆ.!

'ಬಿಗ್ ಬಾಸ್' ರಿಯಾಲಿಟಿ ಶೋ ಶುರು ಆಗುವ ಮುನ್ನ ಹಲವಾರು ಪಟ್ಟಿಗಳು ಓಡಾಡುತ್ತವೆ. ಅದೆಲ್ಲ ಮೂಲಗಳಿಂದ ಲೀಕ್ ಆಗಿರುವುದು ನಿಜ. ಆದ್ರೆ, ಇದೂ ಕೂಡ ಹೈಪ್ ಮಾಡುವ strategy ಅಷ್ಟೆ ಎಂಬುದು ಅಷ್ಟೇ ಸತ್ಯ.

ವೀಕ್ಷಕರ ಇಚ್ಛೆ ಕೂಡ ಗೊತ್ತಾಗುತ್ತೆ

ವೀಕ್ಷಕರ ಇಚ್ಛೆ ಕೂಡ ಗೊತ್ತಾಗುತ್ತೆ

ಕೆಲವು ತಾರೆಯರ ಹೆಸರುಗಳನ್ನ ಹರಿಬಿಟ್ಟರೆ, ವೀಕ್ಷಕರ ಪ್ರತಿಕ್ರಿಯೆ ಹೇಗೆ ಲಭ್ಯವಾಗುತ್ತದೆ ಎಂಬುದರ ಮೇಲೆ ವಾಹಿನಿಯವರು 'ಬೆಸ್ಟ್ ಚಾಯ್ಸ್' ಮಾಡ್ತಾರೆ.

ವೀಕ್ಷಕರ ಒತ್ತಾಯಕ್ಕೂ ಚಾನ್ಸ್ ಇದೆ.!

ವೀಕ್ಷಕರ ಒತ್ತಾಯಕ್ಕೂ ಚಾನ್ಸ್ ಇದೆ.!

ಕಳೆದ ಬಾರಿ ಹೀಗೆ ಆಗಿದ್ದು. 'ಬಿಗ್ ಬಾಸ್' ಸ್ಪರ್ಧಿಗಳು ಅಂತ ಬಂದಾಗೆಲ್ಲಾ 'ಹುಚ್ಚ ವೆಂಕಟ್' ಹೆಸರು ಖಾಯಂ ಆಗಿರ್ತಿತ್ತು. ಎಲ್ಲರೂ ಹುಚ್ಚ ವೆಂಕಟ್ ಗೆ ಜೈ ಎನ್ನುತ್ತಿದ್ದರಿಂದ 'ವೀಕ್ಷಕರ ಒತ್ತಾಯದ ಮೇರೆಗೆ' ಅವರನ್ನ 'ಬಿಗ್ ಬಾಸ್' ಮನೆಗೆ ಕರೆತರಲಾಗಿತ್ತು.

ಹಲವರಿಗೆ 'ಬಿಗ್ ಬಾಸ್' ಕರೆ ಹೋಗುತ್ತೆ.!

ಹಲವರಿಗೆ 'ಬಿಗ್ ಬಾಸ್' ಕರೆ ಹೋಗುತ್ತೆ.!

ಟಿ.ಆರ್.ಪಿ ಆಧಾರದ ಮೇಲೆ ತಾರೆಯರಿಗೆ/ಕಲಾವಿದರಿಗೆ 'ಬಿಗ್ ಬಾಸ್' ಕರೆ ಹೋಗುತ್ತೆ. ಹಾಗೆ ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂಬ ಗ್ಯಾರೆಂಟಿ ಇಲ್ಲ. ಇವರ ನಿಯಮಗಳಿಗೆ ಅವರೂ ಒಪ್ಪಿಕೊಳ್ಳಬೇಕು. ಅವರ ಕಂಡೀಷನ್ ಗಳಿಗೆ ಇವರೂ ತಲೆ ಬಾಗಬೇಕು. ಪರಸ್ಪರ ಎಲ್ಲವೂ ಓಕೆ ಆದರೆ 'ಸ್ಪರ್ಧಿ' ಫಿಕ್ಸ್.

ಈಗಲೂ ಆಗುತ್ತಿರುವುದು ಹೀಗೆ.!

ಈಗಲೂ ಆಗುತ್ತಿರುವುದು ಹೀಗೆ.!

ಅಕ್ಟೋಬರ್ ನಲ್ಲಿ 'ಬಿಗ್ ಬಾಸ್ ಕನ್ನಡ-4' ಶುರು ಆಗುತ್ತೆ. ಈಗಾಗಲೇ ಸ್ಪರ್ಧಿಗಳ 'ಮೊದಲ ಪಟ್ಟಿ' ಲೀಕ್ ಆಗಿದೆ. ಕನ್ ಫರ್ಮ್ ಮಾಡಿಕೊಳ್ಳೋಣ ಅಂತ ನಾವು ಯಾರಿಗೇ ಫೋನ್ ಮಾಡಿದರೂ, ಅವರು ಹೇಳೋದು ಮತ್ತದೇ ಸೇಮ್ ಡೈಲಾಗ್ ''ಇಷ್ಟ ಇಲ್ಲ. ಐ ಆಮ್ ವೆರಿ ಬಿಜಿ. 'ಬಿಗ್ ಬಾಸ್'ಗೆಲ್ಲಾ ಟೈಮ್ ಇಲ್ಲ. ಐ ಆಮ್ ನಾಟ್ ಇಂಟ್ರೆಸ್ಟೆಡ್'' ಅಂತಲೇ. ಏನ್ ಮಾಡೋದು ಸ್ವಾಮಿ 'ಬಿಗ್ ಬಾಸ್' ರೂಲ್ಸ್ ಇರೋದೇ ಹೀಗೆ.!

ತಾರಾ, ಸುಧಾರಾಣಿ, ಕೋಮಲ್ 'ಹೋಗಲ್ಲ' ಎಂದಿದ್ದಾರೆ

ತಾರಾ, ಸುಧಾರಾಣಿ, ಕೋಮಲ್ 'ಹೋಗಲ್ಲ' ಎಂದಿದ್ದಾರೆ

'ಬಿಗ್ ಬಾಸ್ ಕನ್ನಡ 4' ನಲ್ಲಿ ನಟಿ ತಾರಾ, ಸುಧಾರಾಣಿ, ಕೋಮಲ್ ಸ್ಪರ್ಧಿಸುತ್ತಾರೆ ಅಂತ ಈ ಹಿಂದೆ ಸುದ್ದಿ ಆಗಿತ್ತು. ಈಗ ಅವರೆಲ್ಲಾ ನಿರಾಕರಿಸಿದ್ದಾರೆ.

English summary
According to the Bigg Boss show format, None of Contestants will accept that they are participating in Bigg Boss Kannada 4 reality show as of now.
Please Wait while comments are loading...

Kannada Photos

Go to : More Photos