»   » 'ಲಾರ್ಡ್' ಪ್ರಥಮ್ ಸರ್ ಮಾಡಿರುವ ದಾಖಲೆ ಅಂತಿಂಥದ್ದಲ್ಲ.!

'ಲಾರ್ಡ್' ಪ್ರಥಮ್ ಸರ್ ಮಾಡಿರುವ ದಾಖಲೆ ಅಂತಿಂಥದ್ದಲ್ಲ.!

Posted by:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ಯದ್ವಾತದ್ವಾ ಫೇಮಸ್ ಆಗಿರುವ ಕ್ಯಾಂಡಿಡೇಟ್ 'ಲಾರ್ಡ್' ಪ್ರಥಮ್ ಸರ್.!

ನಾಲ್ಕು ತಿಂಗಳ ಹಿಂದೆ ಪ್ರಥಮ್ ಎನ್ನುವ ಕ್ಯಾರೆಕ್ಟರ್ ಕನ್ನಡ ವೀಕ್ಷಕರಿಗೆ ಗೊತ್ತಿರಲೇ ಇಲ್ಲ. ಈಗ ಕರ್ನಾಟಕದ ಯಾವುದೇ ಮೂಲೆಗೆ ಹೋಗಿ ಬನ್ನಿ... ಪ್ರಥಮ್ ಹೆಸರು ಎತ್ತಿದ ತಕ್ಷಣ 'ಇದು ನನ್ನ ಗೆಲುವಲ್ಲ... ಕನ್ನಡಿಗರ ಗೆಲುವು' ಅಂತಾರೆ ಕನ್ನಡಿಗರು. ಅಷ್ಟರಮಟ್ಟಿಗೆ ಕನ್ನಡಿಗರ ಮನೆ ಮನಕ್ಕೆ 'ಒಳ್ಳೆ ಹುಡುಗ' ಪ್ರಥಮ್ ಹತ್ತಿರವಾಗಿದ್ದಾರೆ.[ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಾಗಿನಿಂದಲೂ ನೇರ ನುಡಿ, ಕಿರಿಕ್, ಪ್ರತಿಭಟನೆಗಳಿಂದಲೇ ಗುರುತಿಸಿಕೊಂಡ ಪ್ರಥಮ್ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ನಿಜಕ್ಕೂ ದಾಖಲೆ ವೀರ.. ಇತಿಹಾಸ ಪುರುಷ.! ಮುಂದೆ ಓದಿ...

ದಾಖಲೆ ಶೂರ ಪ್ರಥಮ್

'ಬಿಗ್ ಬಾಸ್' ಕಾರ್ಯಕ್ರಮದ ಇತಿಹಾಸದಲ್ಲಿಯೇ ಕನ್ನಡ ನಿರ್ದೇಶಕ, ಒಳ್ಳೆ ಹುಡುಗ ಪ್ರಥಮ್ ಹೊಸ ದಾಖಲೆ ಬರೆದಿದ್ದಾರೆ.['ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!]

ದಾಖಲೆ ಏನು.?

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಬರೋಬ್ಬರಿ 14 ಬಾರಿ ನಾಮಿನೇಟ್ ಆಗಿ ಟ್ರೋಫಿ ಗೆದ್ದಿರುವ ಏಕೈಕ ಸ್ಪರ್ಧಿ ಪ್ರಥಮ್.!['ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!]

ಕನ್ನಡಿಗರ ಮನಗೆದ್ದ ಪ್ರಥಮ್

'ಬಿಗ್ ಬಾಸ್' ಮನೆಯಲ್ಲಿದ್ದವರಿಗೆ ಇಷ್ಟ ಆಗದೇ ಇದ್ದರೂ, ಕನ್ನಡಿಗರ ಮನ ಗೆಲ್ಲುವಲ್ಲಿ ಪ್ರಥಮ್ ಯಶಸ್ವಿ ಆಗಿದ್ದಾರೆ.

ಸುಲಭದ ಮಾತಲ್ಲ.!

ಸತತ 14 ಬಾರಿ ವೀಕ್ಷಕರ ಬೆಂಬಲ ಪಡೆಯುವುದು ಸುಲಭದ ಮಾತೇ ಅಲ್ಲ. ಮಾತು/ಮನರಂಜನೆಯನ್ನೇ ಅಸ್ತ್ರವಾಗಿ ಬಳಸಿಕೊಂಡು ಪ್ರಥಮ್ 'ಬಿಗ್ ಬಾಸ್' ಗೆಲುವಿನ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

English summary
Bigg Boss Kannada 4: 'Olle Huduga' sets a new Record.
Please Wait while comments are loading...

Kannada Photos

Go to : More Photos