»   » 'ಬಿಗ್ ಬಾಸ್': ಈ ವಾರ ನಿರೀಕ್ಷೆ ಮಾಡದೇ ಇರೋದನ್ನ ನಿರೀಕ್ಷಿಸಿ.!

'ಬಿಗ್ ಬಾಸ್': ಈ ವಾರ ನಿರೀಕ್ಷೆ ಮಾಡದೇ ಇರೋದನ್ನ ನಿರೀಕ್ಷಿಸಿ.!

Posted by:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ 68 ದಿನಗಳು ಕಳೆದು ಹೋದರೂ, ಇಲ್ಲಿಯವರೆಗೂ ಹೇಳಿಕೊಳ್ಳುವಂತಹ ಟ್ವಿಸ್ಟ್ ಸಿಕ್ಕಿಲ್ಲ. 'ಬಿಗ್ ಬಾಸ್' ಮನೆಯಿಂದ 'ಘಟಾನುಘಟಿ' ಅಂತ ಹೇಳಿಕೊಳ್ಳುವವರ್ಯಾರೂ ಹೊರಬಿದ್ದಿಲ್ಲ. 'ಸೆನ್ಸೇಷನಲ್' ಸ್ಪರ್ಧಿಗಳಿಗೆ ವೈಲ್ಡ್ ಕಾರ್ಡ್ ಸಿಗಲಿಲ್ಲ. ಸಪ್ಪೆ ಆಗಿ ಸಾಗುತ್ತಿರುವ 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಈ ವಾರ ಎಲ್ಲರ ನಿರೀಕ್ಷೆ ಮೀರಿ ಏನೋ ನಡೆಯಲಿದ್ಯಂತೆ.!

ಹೀಗಂತ ನಾವು ಹೇಳ್ತಿಲ್ಲ ಸ್ವಾಮಿ, ಸ್ವತಃ ಸುದೀಪ್ ಅವರೇ 'ನಿರೀಕ್ಷೆ ಮಾಡದೇ ಇರುವಂಥದ್ದನ್ನ ಈ ವಾರ ನಿರೀಕ್ಷಿಸಿ' ಅಂತ ಹೇಳಿ 'ಬಿಗ್ ಬಾಸ್' ಸ್ಪರ್ಧಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

ಗ್ರ್ಯಾಂಡ್ ಫಿನಾಲೆಗೆ ನಾಲ್ಕು ವಾರಗಳು ಬಾಕಿ.!

ಗ್ರ್ಯಾಂಡ್ ಫಿನಾಲೆಗೆ ನಾಲ್ಕು ವಾರಗಳು ಬಾಕಿ.!

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಕೇವಲ ನಾಲ್ಕು ವಾರಗಳು ಮಾತ್ರ ಬಾಕಿ ಇದೆ. ಹೀಗಿರುವಾಗಲೇ ಎಲ್ಲ ಸ್ಪರ್ಧಿಗಳಿಗೆ ಸುದೀಪ್ ಒಂದು ಕಿವಿ ಮಾತು ಹೇಳಿದರು.

ಸುದೀಪ್ ಏನಂದರು.?

ಸುದೀಪ್ ಏನಂದರು.?

''ಇವತ್ತಿಂದ ಕೇವಲ ನಾಲ್ಕನೇ ಶನಿವಾರಕ್ಕೆ ನಾವು ಫಿನಾಲೆಯಲ್ಲಿ ಇರುತ್ತೇವೆ. ಹೀಗಾಗಿ ಫೋಕಸ್ ಕಳೆದುಕೊಳ್ಳಬೇಡಿ. ನಿಮ್ಮತನ ಮರೆಯಬೇಡಿ'' - ಕಿಚ್ಚ ಸುದೀಪ್.

ನಿರೀಕ್ಷೆ ಕಳೆದುಕೊಳ್ಳಬೇಡಿ

ನಿರೀಕ್ಷೆ ಕಳೆದುಕೊಳ್ಳಬೇಡಿ

''ನೀವೆಲ್ಲ ಇಲ್ಲಿಯವರೆಗೂ ಒಳಗೆ ಇದ್ದೀರಾ ಅಂದ್ರೆ ಜನರಿಗೆ ನಿಮ್ಮ ಮೇಲೆ ಏನಾದರೂ ನಿರೀಕ್ಷೆ ಇದ್ದೇ ಇರುತ್ತೆ. ಆ ನಿರೀಕ್ಷೆಯನ್ನ ಕಳೆದುಕೊಳ್ಳಬೇಡಿ'' - ಕಿಚ್ಚ ಸುದೀಪ್

ಈ ವಾರ ಏನಾಗುತ್ತೆ.?

ಈ ವಾರ ಏನಾಗುತ್ತೆ.?

''ಈ ವಾರ ನಿರೀಕ್ಷೆ ಮಾಡದೇ ಇರುವಂಥದ್ದನ್ನ ನಿರೀಕ್ಷೆ ಮಾಡಿ'' ಅಂತ ಸುದೀಪ್ ಹೇಳುತ್ತಿದ್ದಂತೆ ಎಲ್ಲ ಸ್ಪರ್ಧಿಗಳ ಮುಖದಲ್ಲಿ ಮಿಶ್ರ ಭಾವನೆ ವ್ಯಕ್ತವಾಯ್ತು.

ಅದೆಂಥ ಟ್ವಿಸ್ಟ್ ಇರಬಹುದು.!

ಅದೆಂಥ ಟ್ವಿಸ್ಟ್ ಇರಬಹುದು.!

'ನಿರೀಕ್ಷೆ ಮಾಡದೇ ಇರುವಂಥದ್ದನ್ನ ನಿರೀಕ್ಷೆ ಮಾಡಿ' ಅಂತ ಸುದೀಪ್ ಹೇಳಿದ್ಮೇಲೆ ಸಹಜವಾಗಿ ವೀಕ್ಷಕರ ಎಕ್ಸ್ ಪೆಕ್ಟೇಷನ್ ಕೂಡ ಹೆಚ್ಚಾಗಿದೆ. ಅದಕ್ಕೆ 'ಬಿಗ್ ಬಾಸ್' ಬಕೆಟ್ ಗಟ್ಟಲೆ ತಣ್ಣೀರು ಎರಚಲಿಲ್ಲ ಅಂದ್ರೆ ಸಾಕು.

English summary
Bigg Boss Kannada 4, Week 10 : Kiccha Sudeep hints 'Expect the Unexpected this week' for the contestants.
Please Wait while comments are loading...

Kannada Photos

Go to : More Photos