»   » 'ಬಿಗ್ ಬಾಸ್' ವೀಕ್ಷಕರ ಲೆಕ್ಕಾಚಾರ ಹೀಗೂ ಉಂಟೇ.!?

'ಬಿಗ್ ಬಾಸ್' ವೀಕ್ಷಕರ ಲೆಕ್ಕಾಚಾರ ಹೀಗೂ ಉಂಟೇ.!?

Posted by:
Subscribe to Filmibeat Kannada

'ಬಿಗ್ ಬಾಸ್' ಕಾರ್ಯಕ್ರಮವನ್ನು ಎಷ್ಟು ಜನ ನೋಡ್ತಾರೆ.? ನೋಡುವವರೆಲ್ಲರೂ ತಮ್ಮ ನೆಚ್ಚಿನ ಸ್ಪರ್ಧಿಗಳನ್ನ ಉಳಿಸಲು ವೋಟ್ ಮಾಡ್ತಾರಾ.? ಈ ಪ್ರಶ್ನೆಗೆ ನಮ್ಮ ಬಳಿ ಅಂತೂ ಉತ್ತರವಿಲ್ಲ. ಎಷ್ಟು ವೋಟ್ ಗಳು ಬಿದ್ದಿವೆ ಎಂಬುದನ್ನ ಕಲರ್ಸ್ ಕನ್ನಡ ವಾಹಿನಿಯವರೂ ಕೂಡ ಬಹಿರಂಗ ಪಡಿಸಲ್ಲ.! ಹೋಗಲಿ ಬಿಡಿ... ಅದಕ್ಕೆ ಕಾರಣ ಹುಡುಕುವ ಬದಲು, ಇಲ್ಲಿರುವ ಒಂದ್ ಸಣ್ಣ ಲೆಕ್ಕಾಚಾರದ ಕಡೆ ಗಮನ ಕೊಡಿ...

bigg-boss-kannada-4-viewers-calculation-on-votes

ಒಬ್ಬ ಮನುಷ್ಯ 'ಬಿಗ್ ಬಾಸ್' ನೋಡ್ತಾ ಇರ್ತಾನೆ...
ಅವನ ಫೇವರಿಟ್ ಸ್ಪರ್ಧಿನಾ ಅವನು ಸಪೋರ್ಟ್ ಮಾಡ್ತಿರ್ತಾನೆ...
ಪ್ರತಿ ವಾರ ಆ ಸ್ಪರ್ಧಿ ನಾಮಿನೇಟ್ ಆದಾಗಲೂ, ಅವನು ವೋಟ್ ಮಾಡ್ತಿರ್ತಾನೆ..

1 ವೋಟ್ = ₹3 Smile
ಬಿಗ್ ಬಾಸ್ = 14 ವಾರ
14 ವಾರ x 3₹ = 42₹ Smile

ಸರಿ, ಇದೇನು ದೊಡ್ಡ ಮೊತ್ತ ಅಲ್ಲ ಬಿಡಿ. ಅದ್ರೆ, ಅಭಿಮಾನ ಜಾಸ್ತಿ ಆಗಿ 2 ವೋಟ್ ಮಾಡಿದ್ರೆ?
42₹ x 2 = 84₹ Cool

ಇದೂ ದೊಡ್ಡದಲ್ಲ ಅಂದ್ಕೊಳ್ಳೋಣ.. ಬಟ್, ಇವನೊಬ್ಬನೇನಾ ವೋಟ್ ಮಾಡೋದು? ಆರು ಕೋಟಿ ಜನರಲ್ಲಿ ಕಮ್ಮಿ ಅಂದ್ರೂ ಇಪ್ಪತ್ತು ಲಕ್ಷ ಜನರು ವೋಟ್ ಮಾಡಲ್ವಾ??

ಒಬ್ಬ ಒಂದು ವೋಟ್ ಮಾಡಿದ್ರೆ:
20,00,000 x 42 = 8,40,00,000 INRSurprised

ಒಬ್ಬ ಎರಡು ವೋಟ್ ಮಾಡಿದ್ರೆ:
20,00,000 x 84 = 16,80,00,000 INRSurprised

ಈ ವೋಟಿಂಗ್ ನಲ್ಲಿ ಬಂದ ಹಣ ಪೂರ್ತಿ ಸಿಗದಿದ್ರು, ಅದರ ಒಂದು ಭಾಗ ಅಂತೂ ಸಿಕ್ಕೇ ಸಿಗುತ್ತೆ (Advertisement ಮತ್ತೆ ಉಳಿದ Income ಬೇರೆ ವಿಚಾರ) ಅಲ್ಲವೇ? ಇದ್ರಲ್ಲೇ, ಒಂದ್ ಐವತ್ತು ಲಕ್ಷ ವಿನರ್ ಗೆ ಕೊಟ್ಟ್ ಕಳಿಸ್ತಾರೆ. ವೋಟ್ ಮಾಡಿದ ಎಲ್ಲರಿಗೂ ಧನ್ಯವಾದ ಅಂತ ಹೇಳಿ ವಿನ್ನರ್ ಮನೆಗೆ ಹೋಗ್ತಾನೆ. ಆಯ್ತು ಮುಗೀತು...! Money mouth

ಅಂದ್ಹಾಗೆ ಈ ಲೆಕ್ಕಾಚಾರ ಮಾಡಿರೋದು ನಾವಲ್ಲ. ಬದಲಾಗಿ 'ಬಿಗ್ ಬಾಸ್' ಕಾರ್ಯಕ್ರಮವನ್ನ ತಪ್ಪದೇ ನೋಡುವ ವೀಕ್ಷಕರೊಬ್ಬರು.

bigg-boss-kannada-4-viewers-calculation-on-votes

'ಕಲರ್ಸ್ ಕನ್ನಡ ಅಫೀಶಿಯಲ್ ಫೇಸ್ ಬುಕ್ ಪೇಜ್'ನಲ್ಲಿಯೇ ಈ ಲೆಕ್ಕಾಚಾರವನ್ನ ಸಂಜಯ್ ಮಹಾದೇವ್ ಎಂಬುವರು ಪೋಸ್ಟ್ ಮಾಡಿದ್ದಾರೆ.[ದುಡ್ಡಿಗಾಗಿ 'ಬಾಂಬ್' ಎಸೆಯುತ್ತಿರುವ 'ಬಿಗ್ ಬಾಸ್' ಸ್ಪರ್ಧಿಗಳು.!]

ಅಸಲಿಗೆ, 'ಬಿಗ್ ಬಾಸ್' ಕಾರ್ಯಕ್ರಮ 14 ವಾರ ನಡೆಯಲಿದೆ ಅಂದುಕೊಂಡು ಅವರು ಈ ಲೆಕ್ಕಾಚಾರ ಹಾಕಿರಬಹುದು. ಆದ್ರೆ, ಈ ಬಾರಿ 16 ವಾರಕ್ಕೆ ವಿಸ್ತರಣೆ ಆಗಿದೆ ಅಲ್ಲವೇ? ಅಂದ್ರೆ, ಆದಾಯ ಇನ್ನೂ ಜಾಸ್ತಿ ಇರಬಹುದೇನೋ.?! ನಮಗಂತೂ ಗೊತ್ತಿಲ್ಲ. ವೀಕ್ಷಕರ ಅಭಿಪ್ರಾಯವನ್ನ ಇದ್ದ ಹಾಗೆ ನಿಮ್ಮ ಮುಂದೆ ಇಟ್ಟಿದ್ದೀವಿ ಅಷ್ಟೇ.

English summary
Bigg Boss Kannada 4 Viewer has taken his Facebook page to estimate Colors Kannada Channel's Income based on Votes from BBK4 Viewers.
Please Wait while comments are loading...

Kannada Photos

Go to : More Photos