»   » ಪ್ರಥಮ್ 'ಮನುಷ್ಯತ್ವ'ದ ಬಗ್ಗೆ ಪ್ರಶ್ನೆ: 'ಕಿರಿಕ್' ಕೀರ್ತಿಗೆ ಮುಖಭಂಗ.!

ಪ್ರಥಮ್ 'ಮನುಷ್ಯತ್ವ'ದ ಬಗ್ಗೆ ಪ್ರಶ್ನೆ: 'ಕಿರಿಕ್' ಕೀರ್ತಿಗೆ ಮುಖಭಂಗ.!

Posted by:
Subscribe to Filmibeat Kannada

ನ್ಯೂಸ್ ಆಂಕರ್ ಶೀತಲ್ ಶೆಟ್ಟಿಗೆ ''Split Personality'' ಎಂದು, ನಂತರ 'ನಾನು ಹಾಗೆ ಹೇಳಿಲ್ಲ.. ನನ್ನ ಮಗನ ಮೇಲೆ ಆಣೆ, ತಿನ್ನುವ ಅನ್ನದ ಮೇಲಾಣೆ' ಅಂತೆಲ್ಲಾ ಆಣೆ-ಪ್ರಮಾಣ ಮಾಡಿ ಕಡೆಗೆ ವಾಸ್ತವ ಅರಿತ ಮೇಲೆ ಮುಖಭಂಗ ಅನುಭವಿಸಿದ್ದ 'ಕಿರಿಕ್' ಕೀರ್ತಿ, ಮೊನ್ನೆಯ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲೂ ಅಂಥದ್ದೇ ಸನ್ನಿವೇಶ ಎದುರಿಸಿದರು.

'ಕಾಲರ್ ಆಫ್ ದಿ ವೀಕ್' ಕೇಳಿದ ಪ್ರಶ್ನೆಗೆ ಸಮರ್ಥನೆ ನೀಡಲು ಹೋಗಿ 'ಕಿರಿಕ್' ಕೀರ್ತಿ ಮುಜುಗರಕ್ಕೀಡಾದರು. ಮುಂದೆ ಓದಿರಿ....

'ಕಿರಿಕ್' ಕೀರ್ತಿಗೆ ಪ್ರಶ್ನೆ ಕೇಳಿದ ಕಾಲರ್

'ಕಿರಿಕ್' ಕೀರ್ತಿಗೆ ಪ್ರಶ್ನೆ ಕೇಳಿದ ಕಾಲರ್

ಕುಂದಾಪುರದಿಂದ ಫೋನ್ ಮಾಡಿದ್ದ ಪ್ರಶಾಂತ್ ಶೆಟ್ಟಿ ಎಂಬುವರು 'ಕಿರಿಕ್' ಕೀರ್ತಿ ರವರಿಗೆ ಪ್ರಶ್ನೆ ಕೇಳಿದರು. [ಖುಷಿಯಲ್ಲಿ ಮಸ್ತಿ ಮಾಡ್ತಿದ್ದೋರಿಗೆ ಶಾಕ್ ಸಿಕ್ಕಾಗ ಮಾತೇ ಬರ್ಲಿಲ್ಲ.!]

ಪ್ರಶ್ನೆ ಏನು.?

ಪ್ರಶ್ನೆ ಏನು.?

''ಪ್ರಥಮ್ ಗೆ ಮನುಷ್ಯತ್ವ ಇಲ್ಲ, ಎಲ್ಲವನ್ನೂ ಆಟದ ದೃಷ್ಟಿಯಲ್ಲಿ ನೋಡುತ್ತಾನೆ ಅಂತ ಯಾವಾಗಲೂ ನೀವು ಹೇಳ್ತಿರ್ತೀರಾ. ಮೊನ್ನೆ 'ಮಸಿ-ಹಾರ' ಟಾಸ್ಕ್ ನಲ್ಲಿ ಎಲ್ಲರ ಬಗ್ಗೆ ಪ್ರಥಮ್ ಒಳ್ಳೆಯ ಮಾತುಗಳನ್ನಾಡಿದರು. ಅದಾದ ನಂತರ, ನೀವು ಕೂತ್ಕೊಂಡು ಪ್ರಥಮ್ ದು ಮೆಚ್ಯೂರ್ಡ್ ಮೂವ್ ಆಗಿತ್ತು, ಇಂಟೆಲಿಜೆಂಟ್ ಮೂವ್ ಆಗಿತ್ತು ಅಂತ ಮಾತನಾಡುತ್ತೀರಾ. ನೀವು ಅದನ್ನ ಗೇಮ್ ದೃಷ್ಟಿಯಲ್ಲೇ ನೋಡ್ತಿದ್ರಿ. ಇಲ್ಲಿ ನೀವು ಅವರ ಮಾನವೀಯತೆ, ಭಾವುಕತೆಯನ್ನ ಗುರುತಿಸಲಿಲ್ಲ. ಸೋ, ನನಗೆ ನೀವೇ ತುಂಬಾ ಆಟದ ದೃಷ್ಟಿಯಲ್ಲಿ ನೋಡ್ತಿದ್ದೀರಾ ಅನ್ಸುತ್ತೆ'' ಅಂತ ಕೀರ್ತಿಗೆ ಕಾಲರ್ ಪ್ರಶಾಂತ್ ಶೆಟ್ಟಿ ಕೇಳಿದರು.

ಕೀರ್ತಿ ಕೊಟ್ಟ ಸಮರ್ಥನೆ

ಕೀರ್ತಿ ಕೊಟ್ಟ ಸಮರ್ಥನೆ

''ನೀವೇ ಗಮನಿಸಿದ ಹಾಗೆ, ಪ್ರಥಮ್ ಅವರೇ ಹೇಳುವ ಹಾಗೆ, ಅವರಿಗೆ ಅವರೇ ಮಾನವೀಯತೆ ಇಲ್ಲ ಅಂತ ಹೇಳಿಕೊಳ್ಳುತ್ತಾರೆ. ಪ್ರಥಮ್ ಅದ್ಭುತವಾಗಿ ಆಡಿದ್ದಾರೆ ಅಂತ ನಾನು ಹೇಳಿದ್ದನ್ನ ನೀವು ತಪ್ಪಾಗಿ ಗ್ರಹಿಸಿರಬಹುದು. ಆದ್ರೆ ಮಾನವೀಯತೆ ಆಂಗಲ್ ನಲ್ಲಿ ನಾವು ಅವತ್ತು ಡಿಸ್ಕಷನ್ ಮಾಡಿಲ್ಲ'' ಎಂದರು ಕೀರ್ತಿ.

ಸುದೀಪ್ ಏನಂದರು.?

ಸುದೀಪ್ ಏನಂದರು.?

''ಮೆಚ್ಯೂರ್ಡ್... ಇಂಟೆಲಿಜೆಂಟ್ ಅಂತ ನೀವು ಹೇಳಿದಕ್ಕೆ ಈ ಪ್ರಶ್ನೆ ಬಂದಿದ್ದು. ಬರೀ ಮೆಚ್ಯೂರ್ಡ್ ಆಗಿತ್ತು ಅಂತ ನೀವು ಹೇಳಿದ್ರೆ, ಈ ಅನುಮಾನ ಬರ್ತಿರ್ಲಿಲ್ಲ. ಒಳ್ಳೆ ಇಂಟೆಲಿಜೆಂಟ್ ಆಗಿತ್ತು ಅಂದ್ರಿ....'' ಅಂತ ಕೀರ್ತಿಗೆ ಸುದೀಪ್ ಹೇಳಿದರು.[ಪಿರಿ ಪಿರಿ ಪ್ರಥಮ್ ಗೆ ಭೇಷ್ ಎಂದ ಕಿಚ್ಚ ಸುದೀಪ್.!]

ವಾದ ಮಾಡಲು ಶುರು ಮಾಡಿದ ಕೀರ್ತಿ

ವಾದ ಮಾಡಲು ಶುರು ಮಾಡಿದ ಕೀರ್ತಿ

''ಇಲ್ಲ ಸರ್, ಆ ಆಂಗಲ್ ನಲ್ಲಿ ನಾನು ಮಾತನಾಡಿಲ್ಲ. ಐ ಆಮ್ ಡ್ಯಾಮ್ ಶೂರ್ ಅಬೌಟ್ ಇಟ್'' ಎಂದರು ಕೀರ್ತಿ ['ಬಿಗ್ ಬಾಸ್' ಮನೆಯಿಂದ ಹೊರಬರುವ ಮುನ್ನ 3 'ವರ' ಕೇಳಿದ ಪ್ರಥಮ್.!]

ಕಿಚ್ಚ ಬಿಟ್ಟ ಬಾಣ

ಕಿಚ್ಚ ಬಿಟ್ಟ ಬಾಣ

''ಆಣೆಗಳನ್ನ ಹಾಕಿದಾಗಲೇ ಸೋತಿದ್ದೀರಾ ತಾವು. ಸೋ, 'ಐ ಆಮ್ ಡ್ಯಾಮ್ ಶೂರ್' ಈಸ್ ಎ ವೆರಿ ಸ್ಮಾಲ್ ವರ್ಡ್. ಎಲ್ಲವನ್ನೂ ಆಸ್ ಇಟ್ ಈಸ್ ನಾನು ಹೇಳುತ್ತಾ ಹೋದರೆ, ಮನೆ ಇಷ್ಟು ದಿನ ಇರುವುದೇ ಇಲ್ಲ'' ಎಂದುಬಿಟ್ಟರು ಸುದೀಪ್.

ಪ್ರಥಮ್ ಪಿತ್ತ ನೆತ್ತಿಗೇರ್ತು

ಪ್ರಥಮ್ ಪಿತ್ತ ನೆತ್ತಿಗೇರ್ತು

''ಸಮರ್ಪಣೆ ಟಾಸ್ಕ್ ನಲ್ಲಿ ಯೋಚನೆ ಮಾಡದೇ ನನ್ನ ಬಟ್ಟೆ ಕೊಟ್ಟೆ. ಅದು ಮಾನವೀಯತೆ ಆಧಾರದ ಮೇಲೆ. ಮಾಳವಿಕಾ ಬೇಸರದಿಂದ ಕೂತಾಗ ಸಮಾಧಾನ ಮಾಡಿದ್ದೇನೆ. ಅದು ಆಟಕ್ಕಾಗಿ ಅಲ್ಲ. ಮಾನವೀಯತೆ ದೃಷ್ಟಿಯಿಂದ. ಮೋಹನ್ ಅವರನ್ನೂ ಸಮಾಧಾನ ಮಾಡಿದ್ದೇನೆ. ಭಾವುಕತೆ ಇಲ್ಲ ಅಂದ್ರೆ ಹೇಗೆ.? ಎಲ್ಲವನ್ನೂ ಆಟದ ದೃಷ್ಟಿಯಿಂದ ನೋಡಲು ಹೋದರೆ ಚೆನ್ನಾಗಿರಲ್ಲ'' ಅಂತ ಪ್ರಥಮ್ ಕೋಪಿಸಿಗೊಂಡರು.

ಕೀರ್ತಿಗೆ ಮುಖಭಂಗ

ಕೀರ್ತಿಗೆ ಮುಖಭಂಗ

ಹೇಳಿದ್ದೇ ಉಂಟು... ಅದರೂ ಅದನ್ನ ಒಪ್ಪಿಕೊಳ್ಳದೇ... ಸಮರ್ಥನೆ ನೀಡಲು ಹೋಗಿ... 'ಇಲ್ಲ' ಎಂದು ಕೀರ್ತಿ ಮುಖಭಂಗ ಅನುಭವಿಸಿದರು.

English summary
Bigg Boss Kannada 4: Week 13, Kirik Keerthi got embarrassed with the question of 'Caller of the Week'
Please Wait while comments are loading...

Kannada Photos

Go to : More Photos