»   » 'ಬಿಗ್ ಬಾಸ್' ಫಿನಾಲೆಗೂ ಮುನ್ನ ಎಡವಿ ಬಿದ್ದ 'ಡ್ರಾಮಾ ಕ್ವೀನ್' ಶಾಲಿನಿ.!

'ಬಿಗ್ ಬಾಸ್' ಫಿನಾಲೆಗೂ ಮುನ್ನ ಎಡವಿ ಬಿದ್ದ 'ಡ್ರಾಮಾ ಕ್ವೀನ್' ಶಾಲಿನಿ.!

Posted by:
Subscribe to Filmibeat Kannada

ಎರಡೇ ವಾರಗಳ ಹಿಂದೆ... ಕ್ಯಾಪ್ಟನ್ ಆದಾಗ 'ಫಿನಾಲೆ ವಾರ' ಸಲೀಸಾಗಿ ತಲುಪಿದೆ ಅಂತ ನಟಿ ಶಾಲಿನಿ ಫುಲ್ ಖುಷಿಯಾಗಿದ್ದರು. ಆದ್ರೆ, ಅದೇ ವಾರ 'ಇನ್ನೆರಡು ವಾರ ಬಿಗ್ ಬಾಸ್ ಕಾರ್ಯಕ್ರಮ ಎಕ್ಸ್ ಟೆಂಡ್ ಆಗಿದೆ' ಅಂತ ಸುದೀಪ್ ಬಾಂಬ್ ಸಿಡಿಸಿದ್ಮೇಲೆ ಆಟಕ್ಕೆ ಹೊಸ ತಿರುವು ಸಿಕ್ತು. ಆ ತಿರುವಿನ ಪರಿಣಾಮ 'ಗ್ರ್ಯಾಂಡ್ ಫಿನಾಲೆ' ತಲುಪದೇ ನಟಿ ಶಾಲಿನಿ ಔಟ್ ಆಗಿದ್ದಾರೆ.

ಹೌದು, 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ 'ಪಾಪಾ ಪಾಂಡು' ಧಾರಾವಾಹಿ ಖ್ಯಾತಿಯ ನಟಿ ಶಾಲಿನಿ ಹೊರಬಿದ್ದಿದ್ದಾರೆ.

ಮಿಡ್ ವೀಕ್ ಎಲಿಮಿನೇಷನ್.!

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಕೊನೆಯ ವಾರ ನಡೆದ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ನಟಿ ಶಾಲಿನಿಗೆ ಗೇಟ್ ಪಾಸ್ ಸಿಕ್ಕಿದೆ.['ಬಿಗ್ ಬಾಸ್ ಕನ್ನಡ-4': ಫಿನಾಲೆ ಮುನ್ನ ಹೊರಬರುವ ಸ್ಪರ್ಧಿ ಯಾರು.?]

ವೀಕ್ಷಕರಿಂದ ಕಡಿಮೆ ಎಸ್.ಎಂ.ಎಸ್

ನಟಿ ಶಾಲಿನಿಯವರಿಗೆ ವೀಕ್ಷಕರ ಬೆಂಬಲ ಕಡಿಮೆ ಸಿಕ್ಕಿದ್ರಿಂದ ಔಟ್ ಮಾಡಲಾಗಿದೆ. [ವೀಕ್ಷಕರ ತಲೆಮೇಲೆ ಹೊಡೆದು, ಶಟಪ್ ಅಂತೀನಿ' ಅಂತ ಶಾಲಿನಿ ಹೇಳಿದ್ಯಾಕೆ?]

ಕಣ್ಣೀರಿಟ್ಟು ಮನೆಯಿಂದ ಹೊರನಡೆದ ಶಾಲಿನಿ.!

'ಔಟ್' ಅಂತ ಗೊತ್ತಾಗ್ತಿದ್ದಂತೆ ನಟಿ ಶಾಲಿನಿ ಬೇಸರಗೊಂಡರು. ಬಟ್ಟೆ ಪ್ಯಾಕ್ ಮಾಡಿಕೊಳ್ಳುವಾಗ ಕಣ್ಣೀರು ಸುರಿಸಿದರು. 'ದೊಡ್ಮನೆ'ಯಿಂದ ಹೊರ ಕಾಲಿಡುವಾಗ ಶಾಲಿನಿ ಹೃದಯ ಭಾರವಾಗಿತ್ತು.

ಭಾವುಕರಾದ ರೇಖಾ, ಕೀರ್ತಿ ಮತ್ತು ಮೋಹನ್

ನಟಿ ಶಾಲಿನಿ ಹೊರ ಹೋದ ಕಾರಣ ನಟ ಮೋಹನ್, ಕೀರ್ತಿ ಮತ್ತು ರೇಖಾ ಕೂಡ ಭಾವುಕರಾದರು.

ಶಾಲಿನಿ ವಿ ಲವ್ ಯು

'ದೊಡ್ಮನೆ'ಯಿಂದ ಹೊರಹೋದ ಶಾಲಿನಿಗೆ ಸ್ಪರ್ಧಿಗಳು ನೀಡಿದ ಸಂದೇಶ ಇದು.

ಫಿನಾಲೆ ತಲುಪಿದ ಐವರು.!

'ಒಳ್ಳೆ ಹುಡುಗ' ಪ್ರಥಮ್, ನಟಿ ರೇಖಾ, ಮಾಳವಿಕಾ ಅವಿನಾಶ್, ಮೋಹನ್ ಮತ್ತು ಕೀರ್ತಿ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಫೈನಲಿಸ್ಟ್ ಆಗಿದ್ದಾರೆ.

ಗೆಲ್ಲುವವರು ಯಾರು.?

'ಒಳ್ಳೆ ಹುಡುಗ' ಪ್ರಥಮ್, ನಟಿ ರೇಖಾ, ಮಾಳವಿಕಾ ಅವಿನಾಶ್, ಮೋಹನ್ ಮತ್ತು ಕೀರ್ತಿ ಪೈಕಿ ನಿಮ್ಮ ಪ್ರಕಾರ ಯಾರು ಗೆಲ್ಲಬೇಕು.? ನಿಮ್ಮ ಆಯ್ಕೆ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ...

English summary
Bigg Boss Kannada 4, Week 16 : Kannada Actress Shalini is eliminated from Bigg Boss Kannada 4 reality show.
Please Wait while comments are loading...

Kannada Photos

Go to : More Photos