»   » ದೀಪಾವಳಿ ಹಬ್ಬದಲ್ಲಿ ಬಿಗ್ ಬಾಸ್ ಮನೆ ಬಿಟ್ಟು ಬಂದ ಚೈತ್ರಾ

ದೀಪಾವಳಿ ಹಬ್ಬದಲ್ಲಿ ಬಿಗ್ ಬಾಸ್ ಮನೆ ಬಿಟ್ಟು ಬಂದ ಚೈತ್ರಾ

ಬಿಗ್ ಬಾಸ್ ಮನೆಯಿಂದ ಮೂರನೇ ವಾರ, ಸಿಂಗರ್ ಚೈತ್ರಾ ಹೊರಬಂದಿದ್ದಾರೆ. ಈ ವಾರ ಅರ್ಧ ಬಿಗ್ ಬಾಸ್ ಸ್ವರ್ಧಿಗಳು ನಾಮಿನೇಟ್ ಆಗಿದ್ದರು. ಕೊನೆಯದಾಗಿ ಚೈತ್ರಾ ಔಟ್ ಆಗಿದ್ದಾರೆ.

Written by: Bharath kumar
Subscribe to Filmibeat Kannada

ಈ ವಾರ ಬಿಗ್ ಬಾಸ್ ಮನೆಯಿಂದ ಚೈತ್ರಾ ಹೊರಬಿದ್ದಿದ್ದಾರೆ. ಈ ವಾರದ ಎಲಿಮಿನೇಷನ್ ತುಂಬಾ ವಿಶೇಷತೆಯಾಗಿತ್ತು. ಯಾಕಂದ್ರೆ, ಮನೆಯಲಿದ್ದ ಅರ್ಧದಷ್ಟು ಸದಸ್ಯರು ನಾಮಿನೇಟ್ ಆಗಿದ್ದರು. ಯಾರು ಹೊರಗೆ ಬರ್ತಾರೆ ಎಂಬ ಕುತೂಹಲ ಪ್ರತಿವಾರಕ್ಕಿಂತ ಈ ವಾರ ಸ್ವಲ್ಪ ಹೆಚ್ಚಾಗಿತ್ತು.

ಆದ್ರೆ, ಎಲ್ಲ ಕುತೂಹಲಗಳಿಗೆ ಬ್ರೇಕ್ ಹಾಕಿದ ಸುದೀಪ್, ಚೈತ್ರಾ ಅವರನ್ನ ಮನೆಯಿಂದ ಹೊರಗೆ ಬರುವಂತೆ ಸೂಚಿಸಿದರು. ಉಳಿದಂತೆ ಚೈತ್ರಾ ಜೊತೆ, ಮೋಹನ್, ಕಿರಿಕ್ ಕೀರ್ತಿ, ಪ್ರಥಮ್, ಮಾಳವಿಕಾ, ಸಂಜನಾ, ಓಂ ಪ್ರಕಾಶ್, ಹಾಗೂ ಈ ವಾರದ ಕ್ಯಾಪ್ಟನ್ ಕಾವ್ಯ ಕೂಡ ನೇರವಾಗಿ ನಾಮಿನೇಟ್ ಆಗಿದ್ದರು.['ಬಿಗ್ ಬಾಸ್ ಕನ್ನಡ-4': ಅರ್ಧಕರ್ಧ ಮನೆ ಸದಸ್ಯರು ಈ ವಾರ ಡೇಂಜರ್ ಝೋನಲ್ಲಿ.!]

ಹಾಗಾದ್ರೆ, ಈ ವಾರ 'ಕಿಚ್ಚನ ಜೊತೆ ವಾರದ ಕಥೆ' ಹೇಗಿತ್ತು? ಏನೆಲ್ಲಾ ಘಟನೆಗಳು ಈ ವಾರ ಸುದೀಪ್ ಮುಂದೆ ನಡೆದ್ವು ಅಂತ ನೋಡೋಣ ಬನ್ನಿ. ಮುಂದೆ ಓದಿ....

ಬಿಗ್ ಬಾಸ್ ಮನೆಯಲ್ಲಿ 'ದೀಪಾವಳಿ' ಹಬ್ಬ

ಬಿಗ್ ಬಾಸ್ ಮನೆಯಲ್ಲಿ 'ದೀಪಾವಳಿ' ಹಬ್ಬ

ಈ ವಾರದ ಎಲಿಮೀನೆಷನ್ ತುಂಬಾ ವಿಶೇಷವಾಗಲು ಕಾರಣ ದೀಪಾವಳಿ ಹಬ್ಬ. ವಾರದ ಜೊತೆ ಕಿಚ್ಚನ ಕಥೆ ಶುರುವಾಗಿದ್ದು, ದೀಪಾವಳಿ ಹಬ್ಬದ ಶುಭಾಶಯಗಳ ಜೊತೆ. ಮನೆಯ ಎಲ್ಲಾ ಸದ್ಯಸರಿಗೆ ಶುಭಕೋರಿದ ಸುದೀಪ್ ಗೆ, ಎಲ್ಲರೂ ವಿಶ್ ಮಾಡಿದ್ರು.

ಕ್ಯಾಪ್ಟನ್ ಕಾವ್ಯಗೆ ಮಾರ್ಕ್ಸ್

ಕ್ಯಾಪ್ಟನ್ ಕಾವ್ಯಗೆ ಮಾರ್ಕ್ಸ್

ಈ ವಾರ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿ ಕಾರ್ಯಹಿಸಿದ ಕಾವ್ಯ ನಾಯಕತ್ವದ ಬಗ್ಗೆ ಸದಸ್ಯರು ಅಭಿಪ್ರಾಯಗಳನ್ನ ಹಂಚಿಕೊಂಡರು. ಅವರ ಕ್ಯಾಪ್ಟನ್ಸಿ ಮಾಡಿದ ರೀತಿಯನ್ನ ಗಮನಿಸಿ ಅಂಕಗಳನ್ನ ಕೂಡ ಕೊಟ್ಟರು.

‘ಕಾಲರ್ ಆಫ್ ದಿ ವೀಕ್’

‘ಕಾಲರ್ ಆಫ್ ದಿ ವೀಕ್’

ಈ ವಾರದ ‘ಕಾಲರ್ ಆಫ್ ದಿ ವೀಕ್'ನಲ್ಲಿ ಮಾತನಾಡಿದ ಸ್ಪರ್ಶ ಎಂಬುವರು, ಶಾಲಿನಿ ಅವರಿಗೆ ಪ್ರಶ್ನೆ ಮಾಡಿದ್ರು. '' ಹಸನ್ಮುಖಿಯಾಗಿದ್ದ ನೀವು, ಮನೆಯಲ್ಲಿ ಪ್ರಥಮ್ ಸ್ಟ್ರಾಂಗ್ ಕಂಟೆಸ್ಟೆಂಟ್ ಎಂಬ ಕಾರಣಕ್ಕೆ ಜಗಳವನ್ನೇ ಮುಂದಿಟ್ಟುಕೊಂಡು ಸಾರಿ ಕೇಳಲು ಬಂದಾಗಲು ಸ್ಪಂದಿಸಿಲ್ಲ ಎಂದು ಆರೋಪಿಸಿದರು''. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಲಿನಿ, ದೊಡ್ಡ ಮಟ್ಟದ ಗಾಯವಾದಾಗ ಎಮೋಷನಲ್ ನಲ್ಲಿ ನನ್ನ ವರ್ತನೆ ಬದಲಾಗಿರಬಹುದು. ಆದರೆ, ಯಾರ ಬಗ್ಗೆಯೂ ಅಸಮಾಧಾನವಿಲ್ಲ. ಪ್ರಥಮ್ ಸ್ಟ್ರಾಂಗ್ ಕಂಟೆಸ್ಟೆಂಟ್, ಆತನಂತೆಯೇ ನಾನು. ನನಗಿಂತಲೂ ಸ್ಟ್ರಾಂಗ್ ಕಂಟೆಸ್ಟೆಂಟ್ ಮನೆಯಲ್ಲಿದ್ದಾರೆ'' ಎಂದು ಸಮರ್ಥಿಸಿಕೊಂಡರು.

ರಿವಿಲ್ ಆಯ್ತು 'ವಾಂಗಿಬಾತ್' ಕಹಾನಿ

ರಿವಿಲ್ ಆಯ್ತು 'ವಾಂಗಿಬಾತ್' ಕಹಾನಿ

ಬಿಗ್ ಬಾಸ್ ಮನೆಯಲ್ಲಿ 'ವಾಂಗಿಬಾತ್' ಎಂಬ ವಿಷ್ಯ ಚರ್ಚೆಯಾಗುತ್ತಿತ್ತು. ಅದಕ್ಕೆ ಸುದೀಪ್ ಕ್ಲಾರಿಫೈ ಮಾಡಿದ್ರು. ಬಿಗ್ ಬಾಸ್ ಮನೆಯ ಸ್ವರ್ಧಿಗಳ ಪ್ರಕಾರ 'ವಾಂಗಿಬಾತ್' ಎಂದರೆ '' ಒಬ್ಬರು ಕಮಿಟ್ ಆಗಿರುವವರು, ಕಮಿಟ್ ಆಗದ ಇರುವವರು ಹತ್ರಾ ಕೂತ್ಕೊಂಡು, ಹಾಸ್ಯವಾಗಿ ಮಾತನಾಡುತ್ತಾ ಕಮಿಟ್ ಮೆಂಟ್ ಮಾಡುತ್ತಿದ್ದರೆ ಅದನ್ನ ವಾಂಗಿಬಾತ್'' ಎಂದು ಹೇಳಲಾಗುತ್ತೆ ಅಂತ ಸ್ವಷ್ಟಪಡಿಸಿದ್ದರು.

ಫಸ್ಟ್ ಸೇಫ್ ಆದವರು ಯಾರು?

ಫಸ್ಟ್ ಸೇಫ್ ಆದವರು ಯಾರು?

ಮೋಹನ್ ಅವರನ್ನ ಫಸ್ಟ್ ಸೇಫ್ ಎಂದು ಮೊದಲು ಸುದೀಪ್ ಡಿಕ್ಲೇರ್ ಮಾಡಿದ್ರು. ಅಮೇಲೆ ಓಂ ಪ್ರಕಾಶ್, ತದ ನಂತರ ಮಾಳವಿಕ ಸೇಫ್ ಆದರು. ನೆಕ್ಸ್ಟ್ ಪ್ರಥಮ್ ಹಾಗೂ ಕಿರಿಕ್ ಕೀರ್ತಿ ಮುಂದಿನ ವಾರಕ್ಕೆ ಟಿಕೆಟ್ ಪಡೆದರು. ಕೊನೆಯಲ್ಲಿ ಚೈತ್ರಾ ಹಾಗೂ ಸಂಜನಾ ಇಬ್ಬರಲ್ಲಿ ಯಾರು ಹೊರಹೋಗ್ತಾರೆ ಎನ್ನುವುದು ಕೂತುಹಲವಾಯಿತು.

'ಸಂಜನಾ' ಸೇಫ್ 'ಚೈತ್ರಾ' ಔಟ್

'ಸಂಜನಾ' ಸೇಫ್ 'ಚೈತ್ರಾ' ಔಟ್

ಹಿನ್ನೆಲೆ ಗಾಯಕಿ ಚೈತ್ರಾ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದರು. ಬಿಗ್ ಬಾಸ್ ಮನೆಯಲ್ಲಿ ಬಹುತೇಕ ಮಂದಿ ಸಂಜನಾರನ್ನ ಉಳಿಸಿಕೊಳ್ಳು ಇಷ್ಟಪಟ್ಟರು. ಆದೇ ತರ ಓಟಿಂಗ್ ಕೂಡ ಸಂಜನಾ ಪರವಾಗಿದ್ದರಿಂದ ಸಂಜನಾ ಸೇಫ್ ಆದರು.

English summary
BBK4, WEEK 3: Kannada singer chaithra is eliminated from Bigg Boss Kannada 4 reality show.
Please Wait while comments are loading...

Kannada Photos

Go to : More Photos