»   » ಅಂದು ಸುನಾಮಿ ಕಿಟ್ಟಿ, ಇಂದು ಪ್ರಥಮ್: 'ಬಿಗ್ ಬಾಸ್' ಮನೆಯಲ್ಲಿ ದಾಖಲೆ.!

ಅಂದು ಸುನಾಮಿ ಕಿಟ್ಟಿ, ಇಂದು ಪ್ರಥಮ್: 'ಬಿಗ್ ಬಾಸ್' ಮನೆಯಲ್ಲಿ ದಾಖಲೆ.!

Posted by:
Subscribe to Filmibeat Kannada

ಸುನಾಮಿ ಕಿಟ್ಟಿ ಹಾಗೂ ಪ್ರಥಮ್....ಈ ಇಬ್ಬರ ಮಧ್ಯೆ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಕೆಲ ಸಾಮ್ಯತೆಗಳಿವೆ.

ಆಗ 'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮದ ಮೊದಲ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದು ಸುನಾಮಿ ಕಿಟ್ಟಿ. ಈಗ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಪ್ರಥಮ ಸ್ಪರ್ಧಿಯಾಗಿ ಗೃಹ ಪ್ರವೇಶ ಮಾಡಿರುವುದು 'ಒಳ್ಳೆ ಹುಡುಗ' ಪ್ರಥಮ್. ['ಬಿಗ್ ಬಾಸ್' ಮನೆಯಲ್ಲಿ ಸುನಾಮಿ ಕಿಟ್ಟಿ ಹೊಸ ರೆಕಾರ್ಡ್!]

ಹಳ್ಳಿಯಿಂದ ಪೇಟೆಗೆ ಬಂದು ಸಿನಿ ರಂಗದಲ್ಲಿ ಸಾಧನೆ ಮಾಡಲು ಹೊರಟ್ಟಿದ್ದ ಸುನಾಮಿ ಕಿಟ್ಟಿ 'ಬಿಗ್ ಬಾಸ್' ಮನೆಯಲ್ಲಿ ಮೊಟ್ಟಮೊದಲ ಬಾರಿಗೆ ಸತತ ಆರು ಬಾರಿ ನಾಮಿನೇಟ್ ಆಗಿ ರೆಕಾರ್ಡ್ ಕ್ರಿಯೇಟ್ ಮಾಡಿದ್ದು ನಿಮಗೆ ನೆನಪಿದ್ಯಾ.? ಸುನಾಮಿ ಕಿಟ್ಟಿ ಬಿಟ್ಟರೆ ಈ 'ಕು'ಖ್ಯಾತ ರೆಕಾರ್ಡ್ ಗೆ ಪಾತ್ರರಾಗಿರುವವರು ಒನ್ ಅಂಡ್ ಒನ್ಲಿ 'ಒಳ್ಳೆ ಹುಡುಗ' ಪ್ರಥಮ್.!

ಸತತ ಆರು ಬಾರಿ ನಾಮಿನೇಟ್.!

ಸತತ ಆರು ಬಾರಿ ನಾಮಿನೇಟ್.!

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಸತತ ಆರು ಬಾರಿ ನಾಮಿನೇಟ್ ಆಗಿರುವ ಏಕೈಕ ವ್ಯಕ್ತಿ ಪ್ರಥಮ್.

ಆರನೇ ಬಾರಿಯೂ ಸೇಫ್

ಆರನೇ ಬಾರಿಯೂ ಸೇಫ್

ವೀಕ್ಷಕರಿಂದ ಕಡಿಮೆ ಎಸ್.ಎಂ.ಎಸ್ ಪಡೆದು ನಟಿ ಕಾರುಣ್ಯ ರಾಮ್ ಔಟ್ ಆದ ಕಾರಣ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಆರನೇ ವಾರವೂ ಪ್ರಥಮ್ ಸೇಫ್ ಆಗಿದ್ದಾರೆ.

ಏಳನೇ ಬಾರಿ ನಾಮಿನೇಟ್ ಆದರೆ...

ಏಳನೇ ಬಾರಿ ನಾಮಿನೇಟ್ ಆದರೆ...

ಕಿರಿಕ್ ಗಳಿಂದಲೇ ಹೆಸರಾಗಿರುವ ಪ್ರಥಮ್ ಏಳನೇ ವಾರವೂ ನಾಮಿನೇಟ್ ಆದರೆ 'ಬಿಗ್ ಬಾಸ್ ಕನ್ನಡ-4' ಇತಿಹಾಸದಲ್ಲಿ ಗದ್ದಲದ ಜೊತೆ ಹೊಸ ಇತಿಹಾಸ ಸೃಷ್ಟಿಯಾಗುವುದು ಖಂಡಿತ.

ಏಳು ಬಾರಿ ಬಚಾವ್ ಆಗಿದ್ದ ಕಿಟ್ಟಿ.!

ಏಳು ಬಾರಿ ಬಚಾವ್ ಆಗಿದ್ದ ಕಿಟ್ಟಿ.!

'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮದಲ್ಲಿ ಏಳು ಬಾರಿ ಎಲಿಮಿನೇಷನ್ ನಿಂದ ಸುನಾಮಿ ಕಿಟ್ಟಿ ಬಚಾವ್ ಆಗಿದ್ದರು.

ಏಳನೇ ವಾರ ಪ್ರಥಮ್ ಕಥೆ ಏನಾಗುತ್ತೋ.?

ಏಳನೇ ವಾರ ಪ್ರಥಮ್ ಕಥೆ ಏನಾಗುತ್ತೋ.?

ಏಳನೇ ವಾರ ಪ್ರಥಮ್ ಸೇಫ್ ಆಗುವುದು, ಬಿಡುವುದು ಸದ್ಯ 'ಬಿಗ್ ಬಾಸ್' ಸ್ಪರ್ಧಿಗಳ ಕೈಯಲ್ಲಿದೆ. ಪ್ರಥಮ್ ಗೆ ಸ್ಪರ್ಧಿಗಳ ಬೆಂಬಲ ಸಿಗಲಿಲ್ಲ ಅಂದ್ರೆ, ಅವರನ್ನ ವೀಕ್ಷಕರ ಎಸ್.ಎಂ.ಎಸ್ ಕಾಪಾಡಬೇಕು.

English summary
BBK4, Week 6: Kannada Actress Karunya Ram is eliminated and Kannada Director Pratham is safe once again.
Please Wait while comments are loading...

Kannada Photos

Go to : More Photos